Subscriber Content
Add content here that will only be visible to your subscribers.

Add content here that will only be visible to your subscribers.


ಮಂಗಳೂರು: ಬಿಹಾರ ಮೂಲದ ಪ್ರೇಮ್‌ಜಿತ್ ಅಲಿಯಾಸ್ ಪಂಕಜ್ ಕುಮಾರ್ ಎಂಬ 14 ವರ್ಷದ ಬಾಲಕನು ಸೋಮವಾರ ಮಧ್ಯಾಹ್ನ 2.30 ರ ವೇಳೆಗೆ ಮನೆಯಲ್ಲಿ ಯಾರಿಗೂ ಹೇಳದೇ ಮನೆಬಿಟ್ಟು ಹೋದವನು ಮರಳಿ ಬಾರದೇ ಕಾಣೆಯಾಗಿದ್ದಾನೆ.
ಬಾಲಕನ ಗುರುತು ಚಹರೆಯು ಸುಮಾರು 5 ಅಡಿ 7 ಇಂಚು ಎತ್ತರವಿದ್ದು, ಗೋಧಿ ಮೈಬಣ್ಣ, ಕುತ್ತಿಗೆಯಲ್ಲಿ ಕೆಂಪು ಬಣ್ಣದ ದಾರ ಮತ್ತು ತಾಯತವಿದ್ದು, ಎಡಕೈನಲ್ಲಿ ಲೋಹದ ಖಡಗ ಧರಿಸಿರುತ್ತಾನೆ. ಬಲ ತೊಡೆಯಲ್ಲಿ ಹಳೆಯ ಶಸ್ತç ಚಿಕೆತ್ಸೆಯ ಗುರುತಿದೆ. ಕಪ್ಪು ಚೌಕುಳಿಗಳಿರುವ ಹಳದಿ ಬಣ್ಣದ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು ಹಿಂದಿ ಮತ್ತು ಭೋಜ್ ಪುರಿ ಭಾಷೆ ಮಾತಾಡುತ್ತಾನೆ. ಈ ಗುರುತನ್ನು ಹೋಲುವ ಬಾಲಕನ ಬಗ್ಗೆ ಮಾಹಿತಿ ದೊರೆತಲ್ಲಿ ಪಣಂಬೂರು ಪೊಲೀಸ್ ಠಾಣೆ 0824-2220530, 9480805355, 9480805331 ಅಥವಾ ಮಂಗಳೂರು ನಗರ ಕಂಟ್ರೋಲ್ ರೂಮ್ :08242220800 ಸಂಪರ್ಕಿಸುವಂತೆ ಪಣಂಬೂರು ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ADVRTISEMENT



Leave a Reply