Subscriber Content
Add content here that will only be visible to your subscribers.

Add content here that will only be visible to your subscribers.


ಮೂಡುಬಿದಿರೆ: ಇಲ್ಲಿನ ವಕೀಲರ ಸಂಘದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ. ನ್ಯಾಯಾಧೀಶ ಮಧುಕರ ಪಿ. ಭಾಗವತ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಭಾರತದ ಸಂವಿಧಾನದಲ್ಲಿ ನಮೂದಿಸಿದ ಜನರ ಮೂಲಭೂತ ಹಕ್ಕು ಮತ್ತು ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಚಲಾವಣೆಯಲ್ಲಿ ಇರುವ ಇತಿ ಮಿತಿಗಳ ಬಗ್ಗೆ ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಹರೀಶ್ ಪಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸಂವಿಧಾನದ ಆಶಯಗಳಿಗೆ ಪೂರಕವಾಗಿ ವಕೀಲರಾದ ನಾವೆಲ್ಲರೂ ಕರ್ತವ್ಯ ನಿರ್ವಹಿಸೋಣ ಎಂದರು. ಕಾರ್ಕಳದ ಹಿರಿಯ ನ್ಯಾಯವಾದಿ ಶ್ರೀ ಪಿ.ಸುಗಂಧ ಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಭಾರತದ ಸಂವಿಧಾನ ರಚನೆ ಮತ್ತು ಸಂವಿಧಾನ ತಿದ್ದುಪಡಿ ಬಗ್ಗೆ ಮಾಹಿತಿ ಹಂಚಿಕೊಂಡರು.
ವಕೀಲರ ಸಂಘದ ಸೀನಿಯರ್ ಕಮಿಟಿ ಡ್ಯಾರ್‌ಮ್ಯಾನ್ ಆದ ಎಂ. ಬಾಹುಬಲಿ ಪ್ರಸಾದ್ ಮತ್ತು ಹಿರಿಯ ನ್ಯಾಯಾವಾದಿ ಕೆ.ಆರ್.ಪಂಡಿತ್, ಸಿವಿಲ್ ಮತ್ತು ಜೆ.ಎಮ್.ಎಫ್.ಸಿ. ನ್ಯಾಯಾಧೀಶೆ ಕಾವೇರಮ್ಮ ಈ ಸಂದರ್ಭದಲ್ಲಿದ್ದರು.
ಸಂದೇಶ್ ಭಟ್ ಪ್ರಾರ್ಥಸಿ
ಕಾರ್ಯದರ್ಶಿ ಜಯಪ್ರಕಾಶ್ ಭಂಡಾರಿ ಸ್ವಾಗತಿಸಿದರು. ದೀಕ್ಷಾ ಕಾರ್ಯಕ್ರಮ ನಿರೂಪಿಸಿ, ಖಜಾಂಚಿ ಆನಂದ ಕೆ.ಎಸ್. ಧನ್ಯವಾದಗೈದರು.
ADVRTISEMENT


