Subscriber Content

Add content here that will only be visible to your subscribers.

ಮೂಡುಬಿದಿರೆ: ಕಾರು-ಸೈಕಲ್ ಅಪಘಾತ – ‘ಸೈಕಲ್’ ರಮೇಶ್ ಅಂಚನ್ ಮೃತ

ಮೂಡುಬಿದಿರೆ: ಪುತ್ತಿಗೆ ಗ್ರಾಪಂನ ಹಂಡೇಲಿನಲ್ಲಿ ಪಂಚಾಯಿತಿ ವ್ಯಾಪ್ತಿಯ ಪುತ್ತಿಗೆ ಪದವು ಹಂಡೇಲು ಮಸೀದಿ ಬಳಿ ಶುಕ್ರವಾರ ಸಾಯಂಕಾಲ ಕಾರು ಡಿಕ್ಕಿಯಾಗಿ ಸೈಕಲ್ ಸವಾರ, ಪಂಪ್ ಆಪರೇಟಿವ್ ರಮೇಶ್ ಅಂಚನ್(56) ಮೃತಪಟ್ಟಿದ್ದಾರೆ.

ಸಾಯಂಕಾಲ 6.30ರ ವೇಳೆ ರಮೇಶ್ ಅವರು ಸೈಕಲ್ ನಲ್ಲಿ ಹೋಗುತ್ತಿರುವಾಗ ಕಲ್ಲಮುಂಡ್ಕೂರು ಕಡೆಯಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ತಲೆ, ಕಾಲಿಗೆ ತೀವ್ರ ತರಹದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ರಮೇಶ್ ಅವರು ಹಲವು ವರ್ಷಗಳ ಹಿಂದೆ ಮೂಡುಬಿದಿರೆ ಮಾರುಕಟ್ಟೆ ಸಂತೆಯಲ್ಲಿ ತಿಂಡಿ ತಿನಿಸುಗಳನ್ನು ಮಾರುತ್ತಿದ್ದು, ಸ್ಥಳೀಯವಾಗಿ ‘ಚಕ್ಕುಲಿ ರಮೇಶಣ್ಣ’ ಎಂದು ಹೆಸರುವಾಸಿಯಾಗಿದ್ದರು.

ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVRTISEMENT