Subscriber Content
Add content here that will only be visible to your subscribers.

Add content here that will only be visible to your subscribers.


ಮೂಡುಬಿದಿರೆ : ಆಳ್ವಾಸ್ ಪಿಯು ಕಾಲೇಜಿನ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಗಳಲ್ಲಿ ಒಟ್ಟು 45 ವಿದ್ಯಾರ್ಥಿಗಳು ರಾಜ್ಯದ ಪ್ರಥಮ 10 ರ‍್ಯಾಂಕ್‌ಗಳಲ್ಲಿ ಸ್ಥಾನವನ್ನು ಪಡೆಯುವ ಮೂಲಕ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಸಾರ್ವತ್ರಿಕ ದಾಖಲೆಯನ್ನು ನಿರ್ಮಿಸಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ವಿಜ್ಞಾನ ವಿಭಾಗದಲ್ಲಿ ಸಂಸ್ಥೆಯ ಬಿಂದು ನವಲೆ, ರಾಜ ಯದು ವಂಶಿ ಯಾದವ್ ಹಾಗೂ ವಿಜೇತ್ ಜಿ ಗೌಡ 598 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ […]

ಮೂಡುಬಿದಿರೆ: ತಾಲೂಕಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಹಾಗೂ ಬೆಂಗಳೂರಿನ ಸಪ್ನ ಬುಕ್ ಹೌಸ್‌ನ ಸಹಯೋಗದಲ್ಲಿ ನಡೆದ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಕೇಂದ್ರ ಸಚಿವರಾದ ಡಾ ಎಂ ವೀರಪ್ಪ ಮೊಯಿಲಿಯವರ ‘’ವಿಶ್ವಸಂಸ್ಕೃತಿ ಮಹಾಯಾನ’’ – ಸಂಪುಟ-೨, ಗದ್ಯ ಮಹಾಕಾವ್ಯವನ್ನು ಮೈಸೂರು ವಿವಿಯ ನಿವೃತ್ತ ಆಂಗ್ಲ ಪ್ರಾಧ್ಯಪಕ ಹಾಗೂ ಖ್ಯಾತ ವಿಮರ್ಶಕ ಪ್ರೋ ನಾಗಣ್ಣ, ಅವರು ಭಾನುವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾಗಿರಿ ಆವರಣದ ಡಾ ವಿ.ಎಸ್ ಆಚಾರ್ಯ ಸಭಾಭವನದಲ್ಲಿ ಲೋಕಾರ್ಪಣೆಗೊಳಿಸಿದರು.ನಂತರ ಮಾತನಾಡಿದ ಅವರು, ಮೊಯಿಲಿಯವರ ಸಂಕಲ್ಪಕ್ಕೂ […]

ಮೂಡುಬಿದಿರೆ: ವಿದ್ಯಾರ್ಥಿಗಳು ಪಠ್ಯದಷ್ಟೇ ಆಸಕ್ತಿ ಪಠ್ಯೇತರ ಚಟುವಟಿಕೆಯಲ್ಲಿ ವಹಿಸಬೇಕು. ಅದರಲ್ಲೂ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಮಾತ್ರವಲ್ಲದೆ ಅವರ ಮಾನಸಿಕ ವಿಕಸನಕ್ಕೂ ಪೂರಕವಾಗಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಸ್ಕೌಟ್ಸ್ ಮತ್ತು ಗೈಡ್‌ನ ದ.ಕ.ಜಿಲ್ಲಾ ಮುಖ್ಯ ಆಯುಕ್ತ ಡಾ. ಎಂ. ಮೋಹನ್ ಆಳ್ವ ಹೇಳಿದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಸ್ಕೌಟ್ಸ್ ಮತ್ತು ಗೈಡ್ ವಿದ್ಯಾರ್ಥಿಗಳಿಗಾಗಿ ಸ್ವರಾಜ್ ಮೈದಾನದಲ್ಲಿ ಆಯೋಜಿಸಿದ್ದ […]

ಮೂಡುಬಿದಿರೆ: ಒಡಿಶಾದ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ) ಸಂಸ್ಥೆಯಲ್ಲಿ, ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿ ಸಹಭಾಗಿತ್ವದಲ್ಲಿ ಡಿ 26ರಿಂದ 30ರವರೆಗೆ ನಡೆದ 84ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಪುರುಷ ಹಾಗೂ ಮಹಿಳಾ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಮಂಗಳೂರು ವಿವಿ ತಂಡವು ರಾಷ್ಟ್ರೀಯ ಮಟ್ಟದಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಕೊಡುಗೆಯಿಂದ ಸತತ 8ನೇ ಬಾರಿಯು ಸಮಗ್ರ ಚಾಂಪಿಯನ್‌ಶಿಪ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ತಿಳಿಸಿದರು.ಅವರು ಮಂಗಳವಾರ ತಮ್ಮ […]

ಮೂಡುಬಿದಿರೆ: ‘ಆಧುನಿಕ ಜಗತ್ತಿನಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಅಗತ್ಯ’ ಎಂದು ಭಾರತ ಸರ್ಕಾರದ ಆಯುಷ್ ಸಚಿವಾಲಯದ ನಿರ್ದೇಶಕ ಡಾ. ರಾಘವೇಂದ್ರ ರಾವ್ ಹೇಳಿದರು.ಆಳ್ವಾಸ್ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಕರಿಗಾಗಿ ಮಂಗಳವಾರ ನಡೆದ ಆರು ದಿನಗಳ ರಾಷ್ಟ್ರೀಯ ಮಟ್ಟದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಕಳೆದ ಹಲವು ದಶಕಗಳಿಂದ ಅಸಾಂಕ್ರಾಮಿಕ ರೋಗಗಳು ಇಡೀ ಜಗತ್ತಿನಲ್ಲಿ ವ್ಯಾಪಕವಾಗಿ ಹರಡುತ್ತಿರುವುದು ಕಂಡು ಬಂದಿದೆ. ಈ ನಿಟ್ಟಿನಲ್ಲಿ ಯೋಗ ಮತ್ತು ಪ್ರಕೃತಿ […]

ಮೂಡುಬಿದಿರೆ: ಪ್ರಾಚೀನ ಮತ್ತು ಆಧುನಿಕ ವೈದ್ಯಕೀಯ ಪದ್ಧತಿಗಳಲ್ಲಿ ಹೃದಯಕ್ಕೆ ಕೇಂದ್ರ ಸ್ಥಾನವನ್ನು ನೀಡಲಾಗಿದೆ ಎಂದು ಆಳ್ವಾಸ್ ಫಾರ್ಮಾಸಿ ಕಾಲೇಜಿನ ಪ್ರಾಂಶುಪಾಲ ಡಾ. ಎಮ್. ಮಂಜುನಾಥ್ ಸೆಟ್ಟಿ ಹೇಳಿದರು.ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜುವತಿಯಿಂದ ಶನಿವಾರ ನಡೆದ ‘ಜ್ಞಾನಚಕ್ಷು-2024′- ‘ಈಸಿಜಿಯ ಮೂಲಭೂತ ಅಂಶಗಳು ಹಾಗೂ ಅದರ ವ್ಯಾಖ್ಯಾನಗಳು’ ವಿಷಯದ ರಾಷ್ಟ್ರ ಮಟ್ಟದ ಕಾರ‍್ಯಗಾರದಲ್ಲಿ ಮಾತನಾಡಿದರು.ಆಯುರ್ವೇದದಲ್ಲಿ ಹೃದಯವನ್ನು ಪ್ರಜ್ಞೆ ಮತ್ತು ಜೀವಿಯ ಪ್ರಮುಖ ಅಂಗವೆಂದು ಪರಿಗಣಿಸಲಾಗಿದೆ. ಆಯುರ್ವೇದ ತಜ್ಞರಿಗೆ ಹೃದಯದ ಬಗ್ಗೆ ಹೆಚ್ಚಿನ ಜ್ಞಾನಗಳಿಸಲು ಎಲೆಕ್ಟ್ರೋಕಾರ್ಡಿಯೋಗ್ರಫಿ ಅಥವಾ ಇಸಿಜಿ ಉಪಯುಕ್ತವಾಗಿದೆ. 1901ರಲ್ಲಿ […]

ಮೂಡುಬಿದಿರೆ: ಇದು ಗೂಗಲ್ ಮಾಹಿತಿ ಸುನಾಮಿಯ ಕಾಲ, ಆದರೆ, ಶಿಕ್ಷಕರ ಸ್ಥಾನ ತುಂಬಲು ಗೂಗಲ್ ಗೆ ಸಾಧ್ಯವಿಲ್ಲ. ವಿದ್ಯಾರ್ಥಿಗಳು ನಮ್ಮ ತರಗತಿಯಲ್ಲಿ ಏಕೆ ಕುಳಿತುಕೊಳ್ಳಬೇಕು ಎಂದು ಶಿಕ್ಷಕರು ತಮ್ಮಲ್ಲಿ ಪ್ರಶ್ನಿಸಿಕೊಳ್ಳಬೇಕು. ಆಗ ತರಗತಿಯ ಎಲ್ಲ ವಿದ್ಯಾರ್ಥಿಗಳು ಬುದ್ಧಿವಂತರಾಗುತ್ತಾರೆ ಎಂದು ರಾಜೀವ್ ಗಾಂಧಿ ಅರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ. ರಾಮಚಂದ್ರ ಸೆಟ್ಟಿ ಹೇಳಿದರು.ಆಳ್ವಾಸ್ ಪ್ರಕೃತಿಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಯೋಗ ಸಭಾಂಗಣದಲ್ಲಿ ಶಿಕ್ಷಕರಿಗಾಗಿ ನಡೆದ ಆರು ದಿನಗಳ ರಾಷ್ಟ್ರೀಯ ಮಟ್ಟದ […]

ಮೂಡುಬಿದಿರೆ: ಕನ್ನಡ ವಿಭಾಗ, ಆಳ್ವಾಸ್ ಕಾಲೇಜು ವಿದ್ಯಾಗಿರಿ, ಮೂಡುಬಿದಿರೆ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಆಳ್ವಾಸ್ ನ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ನಡೆದ ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ಕೆಲವು ಪ್ರಶ್ನೆಗಳು ಎಂಬ ವಿಚಾರ ಶಿಬಿರ-೨೦೨೪ ವನ್ನು ಬೆಂಗಳೂರು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ.ಡಾ.ವೂಡೇ ಪಿ.ಕೃಷ್ಣ ಅವರು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಗಾಂಧಿ ಎಂಬ ಮಹಾನ್ ಶಕ್ತಿ. ಭಾರತ ಬಿಟ್ಟು ಗಾಂಧಿ ಇಲ್ಲ. ಗಾಂಧಿ ಬಿಟ್ಟು ಭಾರತ ಇಲ್ಲ. ಭಾರತದ […]

ಮೂಡುಬಿದಿರೆ: ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ಅಸೋಸಿಯನ್ ಹಾಗೂ ತುಮಕೂರು ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆ ಇವುಗಳ ಜಂಟಿ ಆಶ್ರಯದಲ್ಲಿ ಮಧುಗಿರಿ ಸ್ಪೋಟ್ಸ್ ಕ್ಲಬ್ ಮಧುಗಿರಿಯಲ್ಲಿ ನಡೆದ ಕರ್ನಾಟಕ ರಾಜ್ಯಮಟ್ಟದ ಜ್ಯೂನಿಯರ ಬಾಲಕ ಹಾಗೂ ಬಾಲಕಿಯರ ಎರಡು ವಿಭಾಗದ ಪ್ರಥಮ ಪ್ರಶಸ್ತಿ ಹಾಗೂ ಬಾಲಕಿಯರ ದ್ವಿತೀಯ ಪ್ರಶಸ್ತಿಯನ್ನು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡರು. ಬಾಲಕರ ವಿಭಾಗದ ಫೈನಲ್ಸ್ ನಲ್ಲಿ ಆಳ್ವಾಸ್ ಬಾಲಕರ ತಂಡ ಬೆಂಗಳೂರಿನ ರಾಜೇಶ್ವರಿ ಯುತ್ ಕ್ಲಬ್ (ಆರ್‌ವೈಸಿ) ತಂಡವನ್ನು 35-31 ಹಾಗೂ 35-27 […]

ಮೂಡುಬಿದಿರೆ: ‘೩೦ ನೇ ಆಳ್ವಾಸ್ ವಿರಾಸತ್’ನಲ್ಲಿ ಉತ್ತರದ ಹಿಂದೂಸ್ತಾನಿ, ಪಶ್ಚಿಮದ ಗುಜರಾತಿ, ಪೂರ್ವದ ಕೋಲ್ಕತ್ತಾ ಸಂಗೀತದ ನಿನಾದ ಸವಿದ ಪ್ರೇಕ್ಷಕರಿಗೆ ಶನಿವಾರ ದಕ್ಷಿಣ ದ್ರಾವಿಡ ಸಾಹಿತ್ಯ-ಸಂಗೀತ ಲೋಕದ ಸಂಭ್ರಮ. ಕನ್ನಡ, ತಮಿಳು, ತೆಲುಗು, ಮಲೆಯಾಳ, ಸ್ವಲ್ಪ ಹಿಂದಿ ಮಿಶ್ರಣ ‘ವುಡ್’ಗಳ ಸಿನಿಮಾ ಹಾಡುಗಳ ಸಿಂಚನವು ಆಳ್ವಾಸ್ ವಿರಾಸತ್‌ನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಚೆನ್ನೈಯ ಸ್ಟೆಕೇಟೋ ಬ್ಯಾಂಡ್ ತಂಡವು ನಿರಂತರ ಅಬ್ಬರದಲ್ಲಿ ನಡೆಸಿಕೊಟ್ಟ ಸಂಗೀತ ರಸಸಂಜೆಯ ಆರಂಭದಲ್ಲಿ ವಯೋಲಿನ್ ನಲ್ಲಿ ಸಾಯಿ ರಕ್ಷಿತ್ ಅವರು […]