Subscriber Content

Add content here that will only be visible to your subscribers.

ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ನೂತನ ಸ್ಟೋರಿಸ್ ಬೈ ಕ್ಯಾಂಡಿಡ್ ಕ್ಲಬ್ ಆರ್ಟ್ ಆಫ್ ಫ್ರಂಜನ್ ಬ್ಯೂಟಿ ಆರಂಭ


ಮೂಡುಬಿದಿರೆ: ಇಲ್ಲಿನ ವಿದ್ಯಾಗಿರಿ ಬಳಿ ನೂತನವಾಗಿ ಆರಂಭಗೊಂಡ ಅಶೋಕ್ ಅಂಚನ್ ಮಾಲಕತ್ವದ ಸ್ಟೋರಿಸ್ ಬೈ ಕ್ಯಾಂಡಿಡ್ ಕ್ಲಬ್ ನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಅಶೋಕ್ ಅವರು ತಮ್ಮ ಊರಿನಲ್ಲಿಯೇ ಇದ್ದುಕೊಂಡು ಸ್ಟೋರಿಸ್ ಬೈ ಕ್ಯಾಂಡಿಡ್ ಕ್ಲಬ್ ಎಂಬ ನೂತನವಾದ ಸ್ಟುಡಿಯೋವನ್ನು ಪ್ರಾರಂಭಿಸಿರುವುದು ಖುಷಿಯ ವಿಚಾರ. ಫೋಟೋಗ್ರಾಫಿ ವೃತ್ತಿಯಲ್ಲಿ ಸಾಕಷ್ಟು ಅವಕಾಶಗಳಿದ್ದು, ಮೂಡುಬಿದಿರೆ ವ್ಯಾಪ್ತಿಯಲ್ಲಿ ವಿವಿಧ ವಿದ್ಯಾಸಂಸ್ಥೆಗಳು, ಹಾಗೂ ೫೦ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದು, ಬೇರೆ ಬೇರೆ ಕಾರ್ಯಕ್ರಮಗಳು ನಡೆಯುವ ಪ್ರದೇಶವಾಗಿದೆ. ಹಾಗಾಗಿ ಈ ಫೋಟೋಗ್ರಾಫಿ ವೃತ್ತಿಯಲ್ಲಿ ಬೆಳಗಲಿ, ಫೋಟೋಗ್ರಾಫಿಯು ಅವರಿಗೆ ಉತ್ತಮ ಹೆಸರು ತರಲಿ, ಗುರು-ಹಿರಿಯರ ಆರ್ಶೀರ್ವಾದ ಸದಾ ಇರಲೆಂದು ಶುಭ ಹಾರೈಸಿದರು.
ಬಿಜೆಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಸುದರ್ಶನ್ ಎಂ ಮಾತನಾಡಿ, ಜಿಲ್ಲೆಯಲ್ಲಿ ಫೋಟೋಗ್ರಾಫಿಯಲ್ಲಿ ಬೆಳೆಯುತ್ತಿರುವ ಯುವ ಪ್ರತಿಭೆ ಅಶೋಕ್ ಅವರ ಭವಿಷ್ಯ ಉಜ್ವಲವಾಗಲಿ, ಫೋಟೋಗ್ರಾಫಿಯಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಲೆಂದು ಹಾರೈಸಿದರು.
ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಅಶ್ವಥ್ ಪಣಪಿಲ, ಅಶೋಕ್ ಅವರ ಪೋಷಕರಾದ ಪುಷ್ಪಾ, ಗೋಪಾಲ ಹಾಗೂ ಮತ್ತಿತರ ಗಣ್ಯರು, ಸ್ನೇಹಿತರು, ಬಂಧುಗಳು ಈ ಸಂದರ್ಭದಲ್ಲಿದ್ದರು.

ADVRTISEMENT