Subscriber Content

Add content here that will only be visible to your subscribers.

ಮಳೆ ಹಾನಿ ಪ್ರದೇಶಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ

ಮೂಡುಬಿದಿರೆ ಬಡಗು ಬಸದಿ ಬಳಿಯ ರಸ್ತೆ ಅಂಚಿನ ಮಣ್ಣು ಕುಸಿತಕ್ಕೊಳಗಾಗಿ ಅಪಾಯಕಾರಿ ಸ್ಥಿತಿಯಲ್ಲಿರುವ ಸೇತುವೆ ಹಾಗೂ ವಿವಿಧ ರೀತಿಯ ಹಾನಿ ಪ್ರಮಾಣಗಳನ್ನು ಶಾಸಕರಾದ ಉಮಾನಾಥ ಎ. ಕೋಟ್ಯಾನ್ ಪರಿಶೀಲಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಅವರು ಪುರಸಭಾ ಮುಖ್ಯಾಧಿಕಾರಿ ಇಂದು ಎಂ. ಹಾಗೂ ವಿವಿಧ ಸಂಬಂಧಿತ ಇಂಜಿನಿಯರ್‌ಗಳೊಂದಿಗೆ ಚರ್ಚೆ ನಡೆಸಿ ಪರಿಹಾರ ರೂಪವನ್ನು ನೀಡುವಲ್ಲಿ ಸರಕಾರಕ್ಕೆ ಬೇಡಿಕೆ ಸಲ್ಲಿಸಲು ಸಮಾಲೋಚನೆ ನಡೆಸಿದರು.

ಬಿಜೆಪಿ ಮಂಡಲ ಕಾರ್ಯದರ್ಶಿ ರಂಜಿತ್ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ, ಉದ್ಯಮಿಗಳಾದ ಮಹೇಂದ್ರವರ್ಮ ಜೈನ್, ರೋನಿ, ಅಬುಲಾಲ, ನಗರ ಬಿಜೆಪಿ ಅಧ್ಯಕ್ಷರಾದ ಲಕ್ಷ್ಮಣ್ ಕೋಟ್ಯಾನ್, ಪುರಸಭಾ ಸದಸ್ಯೆ ಸೌಮ್ಯ ಸಂದೀಪ್ ಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿದ್ದರು.

ADVRTISEMENT

Leave a Reply

Your email address will not be published. Required fields are marked *