Subscriber Content
Add content here that will only be visible to your subscribers.

Add content here that will only be visible to your subscribers.


ಮೂಡುಬಿದಿರೆ: ಮಹಿಳೆಯರು ಟೈಲರಿಂಗ್ ತರಬೇತಿಯನ್ನು ಪಡೆದು, ಸ್ವಂತ ಉದ್ಯಮವನ್ನು ಆರಂಭಿಸಿ. ಇದೀಗ ಟೈಲರಿಂಗ್ ಉದ್ಯಮಕ್ಕೆ ಸಾಕಷ್ಟು ಬೇಡಿಕೆಯಿದ್ದು, ನಿಮಗೆ ನೀಡುವ ಹೊಲಿಗೆ ಯಂತ್ರದಿಂದ ನೀವುಗಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಒಳ್ಳೆಯ ಉದ್ಯಮ. ಹಾಗಾಗಿ ಟೈಲರಿಂಗ್‌ನಲ್ಲಿ ತರಬೇತಿಯನ್ನು ಪಡೆದು ಸ್ವ ಉದ್ಯಮ ಆರಂಭಿಸಿ ಎಂದು ಮೂಲ್ಕಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿದರು
ಅವರು ಮಂಗಳವಾರ ತಾಲೂಕು ಆಡಳಿತ ಸೌಧದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ನಡೆದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮದಲ್ಲಿ ಮೂಡುಬಿದಿರೆಯ ವ್ಯಾಪ್ತಿಯ ೩೬ ಅರ್ಹ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರವನ್ನು ವಿತರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಮಂಜುನಾಥ್ ಹಾಗೂ ಅರ್ಹ ಫಲಾನುಭವಿಗಳು ಉಪಸ್ಥಿತರಿದ್ದರು.
ADVRTISEMENT



Leave a Reply