Subscriber Content
Add content here that will only be visible to your subscribers.

Add content here that will only be visible to your subscribers.


ಶಿರ್ತಾಡಿಯಲ್ಲಿ ಸ್ಥಾಪಿಸಲ್ಪಟ್ಟಿರುವ ಮೂಡುಬಿದಿರೆ ತಾಲೂಕಿನ ಪ್ರಪ್ರಥಮ ಕಾನೂನು ಕಾಲೇಜು “ಭುವನಜ್ಯೋತಿ” ಕಾನೂನು ಮಹಾವಿದ್ಯಾಲಯವನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಹಾಗೂ ಆಂದ್ರಪ್ರದೇಶದ ರಾಜ್ಯಪಾಲರಾದ ಎಸ್.ಅಬ್ದುಲ್ ನಝೀರ್ ಅವರು ಇಂದು ಉದ್ಘಾಟಿಸಿದರು.
ಹೈಕೋರ್ಟ್ ನ್ಯಾಯಾಧೀಶರಾದ ಕೃಷ್ಣ ಎಸ್.ದೀಕ್ಷಿತ್, ಕರ್ನಾಟಕ ರಾಜ್ಯ ಕಾನೂನು ವಿ.ವಿ.ಯ ಉಪಕುಲಪತಿ ಡಾ.ಸಿ.ಬಸವರಾಜು, ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ವಿಶಾಲರಘು ಎಚ್.ಎಲ್ ಹಾಗೂ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ರವೀಂದ್ರ ಎಂ.ಜೋಶಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಭುನವಜ್ಯೋತಿ ಟ್ರಸ್ಟ್ ನ ಕಾರ್ಯದರ್ಶಿ ಆರ್.ಪ್ರಶಾಂತ್ ಡಿಸೋಜ ಸ್ವಾಗತಿಸಿದರು. ಪ್ರಾಂಶುಪಾಲರಾದ ಡಾ.ಪ್ರದೀಪ್ ಎಂ.ಡಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ಪ್ರಭು, ಸಂಚಾಲಕ ಪ್ರಶಾಂತ್ ಎನ್, ಖಜಾಂಚಿ ಲತಾ ಎ.ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ADVRTISEMENT



Leave a Reply