ಕೆಲ್ಲಪುತ್ತಿಗೆಯಲ್ಲಿ ದನದ ಸಾವು: ವಾಲ್ಪಾಡಿ, ಮಕ್ಕಿಯ ಯುವಕರ ಮಾನವೀಯತೆ ಮೆರೆದ ಕಾರ್ಯ

ಕೆಲ್ಲಪುತ್ತಿಗೆಯ ತೋಡಿನಲ್ಲಿ ಸತ್ತುಬಿದ್ದ ದನವನ್ನು ಮೇಲಕ್ಕೆತ್ತಿ ದಫನ ಮಾಡಲು ಸಹಕರಿಸಿದ ವಾಲ್ಪಾಡಿ, ಮಕ್ಕಿಯ ಯುವಕರು!
ಕೆಲ್ಲಪುತ್ತಿಗೆಯ ತೋಡೊಂದರಲ್ಲಿ ದನವೊಂದು ಸತ್ತುಬಿದ್ದು ದುರ್ನಾತ ಬೀರುತ್ತಿತ್ತು.ಮೇಯಲು ಬಿಟ್ಟಿದ್ದ ಆ ದನವು ಇತ್ತೀಚಿನ ಜೋರಾದ ಮಳೆಗೆ ತೋಡಿನಲ್ಲಿ ಕೊಚ್ಚಿಕೊಂಡು ಹೋಗಿ ಮೇಲಕ್ಕೆ ಬರಲಾಗದೆ ಅಲ್ಲೇ ಕೊನೆಯುಸಿರೆಳೆದಿತ್ತು.ಸತ್ತು ಕೆಲವು ದಿನಗಳಾಗಿದ್ದರಿಂದ ದುರ್ನಾತ ಎದ್ದು ಯಾರೂ ಅದರ ಬಳಿ ಹೋಗಿರಲಿಲ್ಲ.
ತೀರಾ ದುರ್ನಾತದಿಂದಾಗಿ ಯಾರು ಕೂಡಾ ಅದನ್ನು ಮೇಲಕ್ಕೆತ್ತಿ ದಫನ ಮಾಡಲು ಹೋಗಿರಲಿಲ್ಲ.ಸಂಬಂಧಪಟ್ಟ ಇಲಾಖೆಯವರು ಸ್ಥಳಕ್ಕೆ ಹೋಗಿ ” ಕೂಡಲೇ ವ್ಯವಸ್ಥೆ ಮಾಡಿ” ಎಂದು ಸೂಚಿಸಿದ್ದಲ್ಲದೆ ಅದನ್ನು ಮೇಲಕ್ಕೆತ್ತಿಸಿ ದಫನ ಮಾಡಿಸುವ ಕೆಲಸಕ್ಕೆ ಮುಂದಾಗಲಿಲ್ಲ.
ಈ ವಿಚಾರವನ್ನು ದನದ ಮನೆಯವರ ಸಂಬಂಧಿಕ ಜಗ್ಗು ಎಂಬವರು ವಾಲ್ಪಾಡಿ ,ಮಕ್ಕಿಯ ಕೆಲ ಯುವಕರಲ್ಲಿ ತಿಳಿಸಿದಾಗ ಕೂಡಲೇ ಕಾರ್ಯಪ್ರವೃತ್ತರಾದ ಬಿ.ಕೆ.ರಝಾಕ್, ಮನ್ಸೂರ್, ಮುನ್ನ,ಇಕ್ಬಾಲ್, ಶಬೀರ್, ಶರಿಫಾಕ ವಾಲ್ಪಾಡಿ ಮುಂತಾದವರು ಕೆಲ್ಲಪುತ್ತಿಗೆಯ ಆ ತೋಡಿಗಿಳಿದು ದುರ್ನಾತ ಬೀರುತ್ತಿದ್ದ ದನವನ್ನು ಮೇಲಕ್ಕೆತ್ತಿ ಅದೇ ಪರಿಸರದಲ್ಲಿ ದಫನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ಅವರಿಗೆ ಸ್ಥಳೀಯ ಯುವಕರು ಸಾಥ್ ನೀಡಿದ್ದು ಯುವಕರ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.ದನದ ಮನೆಯವರು ಯುವಕರ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ADVRTISEMENT

Leave a Reply

Your email address will not be published. Required fields are marked *