Subscriber Content
Add content here that will only be visible to your subscribers.

Add content here that will only be visible to your subscribers.


ಗುರುಕುಲ ಶಾಲೆಯಲ್ಲಿ ಕೃಷ್ಣವೇಷ ಸ್ಪರ್ಧೆ.
ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೃಷ್ಣವೇಷ ಸ್ಪರ್ಧೆ ನಡೆಯಿತು.
ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆಗೊಂಡ ಸ್ಪರ್ಧೆಯಲ್ಲಿ
0 – 2 / 2 – 5 /5 – 10 / ವರ್ಷದೊಳಗಿನ ಮಾಳ ಗ್ರಾಮದ ವ್ಯಾಪ್ತಿಯ ಸುಮಾರು 50 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತೀರ್ಪುಗಾರರಾಗಿ ಶ್ರೀ ಶ್ರೀರಂಗ ಜೋಶಿ, ಡಾ| ಸತ್ಯನಾರಾಯಣ ಭಟ್, ಶ್ರೀಮತಿ ರಮಿತಾ ಶೈಲೇಂದ್ರ ರಾವ್ ಕಾರ್ಕಳ. ಇವರು ಆಗಮಿಸಿದ್ದರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಶ್ರೀ ಗಜಾನನ ಮರಾಠೆ, ಮುಖ್ಯ ಅತಿಥಿಗಳಾಗಿ ಕಾರ್ಕಳದ ನಿವೃತ್ತ ಏರ್ ವೈಸ್ ಮಾರ್ಷಲ್ ಶ್ರೀ ರಮೇಶ್ ಕಾರ್ಣಿಕ್ , ಸಂಚಾಲಕರಾದ ಶ್ರೀ ಸುಧಾಕರ್ ಡೋಂಗ್ರೆ, ಹಾಗೂ ತೀರ್ಪುಗಾರರು ವೇದಿಕೆಯಲ್ಲಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಯುತ ರಮೇಶ್ ಕಾರ್ಣಿಕ್ ರವರು ಭಾರತೀಯ ಸಂಸ್ಕೃತಿ ಉಳಿಯಬೇಕಾದರೆ , ಇಂತಹ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಸಂಘಟಿಸಿ ಮಕ್ಕಳನ್ನು ಹುರಿದುಂಬಿಸಬೇಕು. ಉತ್ತಮ ಕಾರ್ಯಕ್ರಮ. ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ತದನಂತರ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
0 – 2 ವರ್ಷದೊಳಗಿನ ಮಕ್ಕಳು.
ಪ್ರಥಮ :- ರಿಯಾನ್ಶಿ ಸುಕೇಶ್ ಶೆಟ್ಟಿ
ದ್ವಿತೀಯ :- ಕೃತಿಕ್ ಆಚಾರ್ಯ
ತೃತೀಯ :- ಆವ್ಯುಕ್ತ್ ಹೆಗ್ಡೆ
2 – 5 ವರ್ಷದೊಳಗಿನ ಮಕ್ಕಳು.
ಪ್ರಥಮ :- ಕೃಷಾ
ದ್ವಿತೀಯ :- ಅಂಶುಲ್
ತೃತೀಯ :- ಸ್ಮ್ರತಿ ಎಸ್ ಸಾಲಿಯಾನ್
5 – 10 ವರ್ಷದೊಳಗಿನ ಮಕ್ಕಳು.
ಪ್ರಥಮ :- ಅಪೇಕ್ಷಾ ಕಾಮತ್
ದ್ವಿತೀಯ :- ಸಂಹಿತಾ ಮರಾಠೆ
ತೃತೀಯ :- ನವತೇಜ್
ಭಾಗವಹಿಸಿದ ಎಲ್ಲಾ ಮುದ್ದುಕೃಷ್ಣರಿಗೂ ಸಮಾಧಾನಕರ ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಉಸ್ತುವಾರಿಯನ್ನು ಸಹ ಶಿಕ್ಷಕಿ ಶ್ರೀಮತಿ ರಕ್ಷಿತಾ ರವರು ನಿರ್ವಹಿಸಿದರು , ಎಲ್ಲಾ ಶಿಕ್ಷಕರು , ಪೋಷಕರು , ಆಡಳಿತ ಮಂಡಳಿಯ ಸದಸ್ಯರಾದ ಶ್ರೀರಾಮ ಸೇರಿಗಾರ್ ಶ್ರೀ ನಾಗಭೂಷಣ ಮರಾಠೆ ಶ್ರೀ ರವೀಂದ್ರನಾಥ ಜೋಶಿ ಶ್ರೀಮತಿ ಗೀತಾ ಸೇರಿಗಾರ್ ಶ್ರೀಮತಿ ವಸಂತಿ ಶ್ರೀ ರಘುಪತಿ ಕಾಮತ್ ಶ್ರೀಮತಿ ತಾರಾ , ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಪೂರ್ಣಿಮಾ ಶೆಣೈ ವಂದನಾರ್ಪಣೆಗೈದರು.
ADVRTISEMENT



Leave a Reply