Subscriber Content

Add content here that will only be visible to your subscribers.

ಸಮೃದ್ಧ ಭಾರತದ ಕನಸು ನನಸಾಗಲಿ….ಜೈನ ಪದವಿಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ

ಜೈನ ಪದವಿಪೂರ್ವ ಕಾಲೇಜಿನಲ್ಲಿ 78ನೆಯ ಸ್ವಾತಂತ್ರ್ಯೋತ್ಸವವನ್ನು ಪ್ರಾಂಶುಪಾಲರಾದ ಡಾ. ಪ್ರಭಾತ್ ಬಲ್ನಾಡು ಇವರು ಧ್ವಜಾರೋಹಣ ಮಾಡುವುದರೊಂದಿಗೆ ಪ್ರಾರಂಭಿಸಲಾಯಿತು.
ಸಮೃದ್ಧ ಭಾರತದ ಕನಸು ನನಸಾಗಲಿ
ಆ ಮೂಲಕ ತ್ಯಾಗ ಬಲಿದಾನಗಳ ಹಿಂದಿನ ನಿರೀಕ್ಷೆಗಳು ಫಲ ನೀಡಲಿ ಎಂಬುದಾಗಿ ಸ್ವಾತಂತ್ರ್ಯೋತ್ಸವದ ಸಂದೇಶವನ್ನು ನೀಡಿದರು
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಶ್ರೀಮತಿ ಚೇತನ ರಾಜೇಂದ್ರ ಹೆಗಡೆಯವರು ಸ್ವಾತಂತ್ರ್ಯ ಪಡೆದು 77 ವರ್ಷಗಳು ಕಳೆದ ಈ ಸಂದರ್ಭದಲ್ಲಿ ನೈತಿಕ ಮೌಲ್ಯಗಳ ಅಧಪತನದತ್ತ ವಿದ್ಯಾರ್ಥಿಗಳ ಗಮನ ಸೆಳೆದರು ..ಭವ್ಯ ಭಾರತದ ಮುಂದಿನ ಪ್ರಜೆಗಳಾಗಿರುವ ವಿದ್ಯಾರ್ಥಿಗಳು ತಮ್ಮ ಅಂತ ಸತ್ವವನ್ನು ವೃದ್ಧಿಸಿಕೊಂಡು ಒಬ್ಬ ಉತ್ತಮ ಪ್ರಜೆಯಾಗುವುದು ..ಗುರು ಹಿರಿಯರಿಗೆ ಗೌರವವನ್ನು ನೀಡುವುದರ ಮೂಲಕವಾಗಿಯೇ ಸಾಧನೆಗೆ ಅಡಿಗಲ್ಲು ಹಾಕಬೇಕೆಂದು ಕರೆ ನೀಡಿದರು .
ಕಾಲೇಜಿನ ಪ್ರಾಂಶುಪಾಲರು ಅಧ್ಯಕ್ಷತೆ ವಹಿಸಿದ್ದರು

.ಭಾಷಣ ಚಿತ್ರಕಲೆ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು

ADVRTISEMENT

Leave a Reply

Your email address will not be published. Required fields are marked *