ಮೂಡಬಿದ್ರೆ: ಸೆಪ್ಟೆಂಬರ್ 24
ಸಮಸ್ತ ವಿದ್ಯಾಭ್ಯಾಸ ಮಂಡಳಿಯ ಅಧೀನದಲ್ಲಿರುವ ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ ಇದರ ವತಿಯಿಂದ ನೀಡಲ್ಪಡುವ ಮುಅಲ್ಲಿಂ ಮಂಝಿಲ್ ಮನೆಯ ಶಿಲಾನ್ಯಾಸ ಕಾರ್ಯವು ಸೆ. 25 (ಬುಧವಾರ) ಅಪರಾಹ್ನ ಗಂಟೆ 3.00ಕ್ಕೆ ಸರಿಯಾಗಿ ಮೂಡಬಿದ್ರೆಯ ಅಂಗರಕರ್ಯಯಲ್ಲಿ ನಡೆಯಲಿದೆ.
ಸಮಸ್ತ ಅಧ್ಯಕ್ಷರೂ, ಕರ್ನಾಟಕ, ಕೇರಳ ರಾಜ್ಯಗಳ ಹಲವಾರು ಮೊಹಲ್ಲಾದ ಸಂಯುಕ್ತ ಖಾಝಿಗಳೂ ಆದ ‘ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕ್ಕೋಯ ತಂಙಳ್’ ಶಿಲಾನ್ಯಾಸ ಕಾರ್ಯವನ್ನು ನೆರೆವೇರಿಸಲಿದ್ದಾರೆ.
ಸಮಸ್ತದ ವಿದ್ಯಾಭ್ಯಾಸ ಮಂಡಳಿಯ ವತಿಯಿಂದ ವರ್ಷಂಪ್ರತಿ ಆರ್ಥಿಕವಾಗಿ ಅತೀ ಹಿಂದುಳಿದ ಅಧ್ಯಾಪಕರನ್ನು ಗುರುತಿಸಿ ಅವರಿಗೆ ಮನೆಯನ್ನು ನಿರ್ಮಿಸಿ ಕೊಡುತ್ತಿದ್ದು, ಸದ್ರಿ ಈ ವರ್ಷದ ಯೋಜನೆಗೆ ಮೂಡುಬಿದ್ರೆ ರೇಂಜ್ ವ್ಯಾಪ್ತಿಯ ಅಂಗರಕರ್ಯ ಅಧ್ಯಾಪಕರೊವರ್ವರು ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಇದೇ ಯೋಜನೆಗೆ ಉಪ್ಪಿನಂಗಡಿ ಸಮೀಪದ ಅಧ್ಯಾಪಕರೊರ್ವರು ಆಯ್ಕೆಯಾಗಿದ್ದು ಆ ಮನೆಯ ಗೃಹಪ್ರವೇಶವು ಬುಧವಾರ ಸಯ್ಯಿದುಲ್ ಉಲಮಾರಿಂದಲೇ ನೆರವೇರಲಿದೆ. ಗೃಹ ಪದ್ಧತಿಯಲ್ಲದೇ ಇನ್ನಿತರ ಎಲ್ಲಾ ರೀತಿಯ ಕಲ್ಯಾಣ ಯೋಜನೆಗಳು ಸಮಸ್ತ ವಿದ್ಯಾಭ್ಯಾಸ ಮಂಡಳಿಯು ಕಲ್ಪಿಸಿದ್ದು, ಅರ್ಹ ಅಧ್ಯಾಪಕರು ಫಲಾನುಭವಿಗಳಾಗುತ್ತಿದ್ದಾರೆ.
ಅದಲ್ಲದೇ ಮೂಡುಬಿದ್ರೆಯ ಕಾಶಿಪಟ್ನ ಪೇರಂದಡ್ಕ ಮಸೀದಿಯಲ್ಲಿ ನಡೆಯಲಿರುವ ಎಸ್ಕೆ ಎಸ್ಎಸ್ಎಫ್ ವಿಖಾಯ ಗ್ರಾಂಡ್ ಸೆಲ್ಯೂಟ್ ಹಾಗೂ ಖಾಝಿ ಸನ್ಮಾನ ಕಾರ್ಯಕ್ರಮದಲ್ಲಿ ಸಯ್ಯಿದುಲ್ ಉಲಮಾ ಭಾಗವಹಿಸಿ ಹಿತವಚನ ನೀಡಲಿದ್ದಾರೆ.
ಪ್ರಕಟನೆಯಲ್ಲಿ ಮೂಡಬಿದ್ರೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಸಯ್ಯಿದ್ ಅಕ್ರಂ ಅಲಿ ತಂಙಳ್ ಅಂಗರಕರ್ಯ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ದಾರಿಮಿ, ಕೋಶಾಧಿಕಾರಿ ಅಬ್ಬುವಾಕ ಮೂಡುಬಿದ್ರೆ, ಐಟಿ ಕೋಡಿನೇಟರ್ ಸಫ್ವಾನ್ ಬಾಖವಿ ಮಾಪಾಲ್ ತಿಳಿಸಿದ್ದಾರೆ.















Leave a Reply