Subscriber Content
Add content here that will only be visible to your subscribers.

Add content here that will only be visible to your subscribers.


ಮೂಡುಬಿದಿರೆ: ನೆಲ್ಲಿಕಾರಿನ ಬೋರುಗುಡ್ಡೆ
ಎಂಬಲ್ಲಿ ಮನೆಯೊಂದರ ಹಟ್ಟಿಯಿಂದ ಜಾನುವಾರುಗಳನ್ನು ಕಳವು ಗೈಯಲು ಮುಂದಾಗಿದ್ದ ತಂಡವೊಂದನ್ನು ಮೂಡಬಿದ್ರಿ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ ಪಿ.ಜಿ ನೇತೃತ್ವದ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.
ಮೂಡುಬಿದಿರೆಯ ಗಂಟಾಲ್ ಕಟ್ಟೆ ಮಹಮ್ಮದ್ ಸಪ್ಟನ್, ಸಲೀಂ ಬಂಧಿತ ಆರೋಪಿಗಳು.
ನವಂಬರ್ 22ರ ನಸುಕಿನ ಜಾವ 2.15ರ ವೇಳೆಗೆ ಮೂಡುಬಿದಿರೆಯ ನೆಲ್ಲಿಕಾರಿನ ಬೋರುಗುಡ್ಡೆ ಎಂಬಲ್ಲಿ ಪಂಜ ಮನೆಯ ಹಟ್ಟಿಯ ಬಳೆ ಬಿಳಿ ಕಾರೊಂದು ನಿಲ್ಲಿಸಲಾಗಿತ್ತು. ಕಾರಿನ ಶಬ್ದ ಕೇಳಿ ಮನೆ ಮಂದಿ ಹೊರಬಂದಾಗ ಕಾರು ಚಾಲನೆಯ ಸ್ಥಿತಿಯಲ್ಲಿ ಕಂಡು ಬಂತು. ಆ ದೃಶ್ಯಾವಳಿ ಮನೆಮಂದಿ ಬೊಬ್ಬೆ ಹಾಕಿದಾಗ ಕಾರು ಅಲ್ಲಿಂದ ಹೊರಟುಹೋಗಿತ್ತು. ನೆರೆಕರೆಯವರು ಸೇರಿಕೊಂಡು ದುಷ್ಕರ್ಮಿಗಳು ಬಂದಿದ್ದ ಕಾರನ್ನು ಹಿಂಬಾಲಿಸಿ ಹೋದಾಗ ಆ ಕಾರಿನ ಚಾಲಕನ ನಿರ್ಲಕ್ಷ್ಯ ದಿಂದಾಗಿ ಮರವೊಂದಕ್ಕೆ ಡಿಕ್ಕಿ ಹೊಡೆದಿತ್ತು. ದುಷ್ಕರ್ಮಿಗಳು ಪರಾರಿಯಾಗಿದ್ದರು. ದುಷ್ಕರ್ಮಿಗಳು ಬಂದಿದ್ದ ಕಾರಿನ ನಂಬ್ರ KA- 20-Z-2879 ಆಗಿದ್ದು ಮಾಹಿತಿಯನ್ವಯ ಆರೋಪಿಗಳ ಪತ್ತೆ ಹಚ್ಚಲು ಪೊಲೀಸರಿಗೆ ಸಹಕಾರಿಯಾಗಿದೆ. ದನ ಕಳವುಗೈಯಲು ವಿಫಲಯತ್ನ ನಡೆಸಿರುವುದಾಗಿ ಆರೋಪಿಗಳು ತಪ್ರೊಪ್ಪಿಕೊಂಡಿದ್ದು, ಈ ಹಿಂದೆ ಇದೇ ದಂಧೆ ನಡೆಸಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ADVRTISEMENT


