ಕಾಪು:ರಾಯಲ್ ಗ್ಲೀನ್ ಕೋ ಆರ್ಡಿನೇಷನ್ ಇದರ ಪ್ರಾಯೋಜಕತ್ವದಲ್ಲಿ ಸೌಹಾರ್ದ ಮೂಡುಬಿದಿರೆ ಇದರ ಸಂಯೋಜನೆ ಯೊಂದಿಗೆ ಕಾಪುದ ಅಹಮದಿ ಮೊಹಲ್ಲಾದ ಪಕೀರ್ನಕಟ್ಟೆಯ ಜಾಮಿಯಾ ಮಸೀದಿಯಲ್ಲಿ ಉಚಿತ ಎಲ್ ಇಡಿ ಬಲ್ಬ್ ಜೋಡಿಸುವ ಸ್ವಉದ್ಯೋಗ ತರಬೇತಿ ಶಿಬಿರವು
ಗುರುವಾರ ನಡೆಯಿತು.
ಈ ಉಚಿತ ತರಬೇತಿಯಲ್ಲಿ 70ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ . ಎಲ್ಇಡಿ ಮತ್ತು ಎಸಿ ಡಿಸಿ ಬಲ್ಬ್ ಜೋಡಿಸುವ ತರಬೇತಿ ಪಡೆದರು
ಸ್ವಯಂಸೇವಾ ತಂಡದ ಮಹಮ್ಮದ್ ಶಾಕಿರ್, ಮಹಮ್ಮದ್ ಶಾಫಿ ಎಲ್ ಇಡಿ ಬಲ್ಬ್ ಜೋಡಣೆ ಯ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ರಾಯಲ್ ಗ್ಲೀಮ್ ಮಾಲಕ ಅಬ್ದುಲ್ ಹಮೀದ್ , ಮಹಮ್ಮದ್ ಹುಸೇನ್, ಸ್ವಯಂಸೇವಾ ತಂಡದ ನಾಜಿಯಾ ಖಾನಂ, ಕಾಪು ಪುರಸಭಾ ಸದಸ್ಯ ನೂರುದ್ದೀನ್ ಮತ್ತು ರಫೀಕ್ ಅಹ್ಮದ್ ರಸೂಲ್ ಉಪಸ್ಥಿತರಿದ್ದರು.

Leave a Reply