Subscriber Content
Add content here that will only be visible to your subscribers.

Add content here that will only be visible to your subscribers.


ಮೂಡುಬಿದಿರೆ :ವಿದ್ಯೆ ಸಾರ್ಥಕತೆಯ ಗುರಿಯನ್ನು ಹೊಂದಿರಬೇಕು. ಮನೆ ಮತ್ತು ಶಾಲೆಯ ವಾತಾವರಣ ಪೂರಕವಾಗಿದ್ದರೆ ಮಕ್ಕಳು ಸಮಾಜಕ್ಕೆ ಮತ್ತು ಊರಿಗೆ ಉತ್ತಮ ಹೆಸರು ತರಲು ಸಾಧ್ಯವಾಗುತ್ತದೆ ಎಂದು ವೈದಿಕ ಗುರುರಾಜ ಭಟ್ ಹೇಳಿದರು.
ಅವರು ಶನಿವಾರ ದ.ಕ. ಜಿ.ಪಂ.ಸ.ಹಿ. ಪ್ರಾಥಮಿಕ ಶಾಲೆ ನೀರ್ಕೆರೆ, ಪ್ರತಿಭಾ ಪುರಸ್ಕಾರ ಸಮಿತಿ, ಹಳೆವಿದ್ಯಾರ್ಥಿಗಳ ಸಂಘ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಕ್ಷರ ಮಾತೆ ಸಾವಿತ್ರಿ ಬಾಯಿ ಪುಲೆ’ ಹೆಸರಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಾಲಾ ಮುಖ್ಯಶಿಕ್ಷಕಿ ಯಮುನಾ ಕೆ. ಅವರ ಅಭಿನಂದನ, ಸಾಧಕರಿಗೆ ಸನ್ಮಾನ, ಗುರುವಂದನೆ ಹಾಗೂ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯಅತಿಥಿ, ದ.ಕ. ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಮಾತನಾಡಿ, ತಾನು ಜಿ.ಪಂ. ಸದಸ್ಯ, ಅಧ್ಯಕ್ಷನಾಗಿದ್ದ ಕಾಲದಿಂದಲೂ ಶಾಲೆಯ ಪ್ರಗತಿಯನ್ನು ಗಮನಿಸಿದ್ದೇನೆ, ಯಥಾಶಕ್ತಿ ಸಹಕಾರ ನೀಡಿದ್ದೇನೆ ಎಂದರು.
ಪ್ರತಿಭಾ ಪುರಸ್ಕಾರ ಸಮಿತಿ ಅಧ್ಯಕ್ಷ ಶಶಿಕಾಂತ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು.
ಕೆಪಿಸಿಸಿ ಪ್ರ. ಕಾರ್ಯದರ್ಶಿ ಮಿಥುನ್ ರೈ ಮಾತನಾಡಿ, ಸಮಾಜದ ಮುನ್ನಡೆಗೆ ಕಲಿಕೆ, ಕ್ರೀಡೆ, ಸಂಸ್ಕೃತಿ, ಕಲೆ, ಸಮಾಜಸೇವೆ ಎಲ್ಲವೂ ಬೇಕು; ಈ ಶಾಲೆಯಿಂದ ಸಮಾಜಕ್ಕೆ ಕೊಡುಗೆಯಾಗಬಲ್ಲವರು ಮೂಡಿಬರಲಿ ಎಂದು ಹಾರೈಸಿದರು. ನೀರ್ಕೆರೆ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡಿದ ಯಮುನಾ ಕೆ. ಅವರನ್ನು ಪತಿ, ಉದ್ಯಮಿ ಯೋಗೀಶ ಆಚಾರ್ಯ ಮೂಡುಬಿದಿರೆ ಅವರೊಂದಿಗೆ ನೀರ್ಕೆರೆಯ ಸಮಸ್ತ ನಾಗರಿಕರ ಪರವಾಗಿಶಿಕ್ಷಕ ರತ್ನ’ ಬಿರುದು ನೀಡಿ ಸಾಂಪ್ರದಾಯಿಕವಾಗಿ ಸನ್ಮಾನಿಸಲಾಯಿತು.
ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಶಾಂತ ಜೋಗಿ ಅಭಿನಂದನ ಭಾಷಣ ಮಾಡಿದರು. ಶಾಲೆಯ ಶಿಕ್ಷಕ ವೃಂದದವರು ಸಮ್ಮಾನಿಸಿದರು. ಹ.ವಿ.ಸಂ. ಕಾರ್ಯದರ್ಶಿ ಜನಾರ್ದನ, ಸಹಶಿಕ್ಷಕಿ ಯೋಗಿತಾ ಸಮ್ಮಾನ ಪತ್ರಗಳನ್ನು ವಾಚಿಸಿದರು.
ಪ್ರಾ.ಶಾಲೆ ಮತ್ತು ಪ್ರೌಢಶಾಲಾ ಶಿಕ್ಷಕರನ್ನು ಅಭಿವಂದಿಸುವ ಮೂಲಕ `ಗುರು ವಂದನೆ’ ಸಲ್ಲಿಸಲಾಯಿತು. ನೀರ್ಕೆರೆಯಿಂದ ಪ್ರಾಂತ್ಯ ಶಾಲೆಗೆ ವರ್ಗಾವಣೆಗೊಂಡಿರುವ ಸಹನಾ ಷಣ್ಮುಖ ಮಡ್ಗಾಂವ್‌ಕರ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಶಾಲೆಯಲ್ಲಿ ಓದಿ ಆಯುರ್ವೇದ ವೈದ್ಯೆಯಾಗಿ, ಎಂಡಿ ಪದವಿ ಅಭ್ಯಾಸ ಮಾಡುತ್ತಿರುವ ಡಾ. ಮಮತಾ ಇವರನ್ನು ಗೌರವಿಸಲಾಯಿತು. ಶಾಲೆಗೆ ಪೂರಕ ಸಹಕಾರ, ಕೊಡುಗೆ ನೀಡುತ್ತ ಬರುತ್ತಿರುವ ಗ್ರಾ.ಪಂ. ಅಧ್ಯಕ್ಷೆ ಶಾಲಿನಿ ಸಾಲಿಯಾನ್, ಭರತ್(ಡೆಸ್ಕ್), ರಾಜೇಶ್ (ಯೋಗ ತರಬೇತಿ), ರುಕ್ಷ್ಮಯ (ವಿದ್ಯಾರ್ಥಿ ವೇತನ), ಚಂದ್ರಹಾಸ (ಛಾಯಾಚಿತ್ರ), ಯೋಗೀಶ ಶೆಟ್ಟಿಗಾರ್ (ಆಮಂತ್ರಣ ಪತ್ರ), ಚಂದ್ರಶೇಖರ ಶೆಟ್ಟಿಗಾರ್ (ಪೀಠೋಪಕರಣ ದುರಸ್ತಿ), ಹರೀಶ್ ಕೆ. (ಶಾಮಿಯಾನ), ಆಶಾ ಕಾರ್ಯಕರ್ತೆಯರಾದ ಸವಿತಾ, ಸುಜಾತಾ, ಜಯಶ್ರೀ ಇವರನ್ನು ಗೌರವಿಸಲಾಯಿತು.
ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಪ್ರತಿಭಾ ಪುರಸ್ಕಾರ ಸಮಿತಿ ಗೌರವಾಧ್ಯಕ್ಷ ಅಜಿತ್‌ರಾಜ್ ಜೈನ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರೋಹಿಣಿ, ವಿದ್ಯಾರ್ಥಿ ನಾಯಕ ಗಗನ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ. ದೊರೆಸ್ವಾಮಿ, ಶಿಕ್ಷಕರ ಸಂಘಟನೆಗಳ ಅಧ್ಯಕ್ಷರಾದ ಡಾ. ರಾಮಕೃಷ್ಣ ಶಿರೂರು, ನಾಗೇಶ್ ಎಸ್., ಸಿಆರ್‌ಪಿ ದಿನಕರ, ಎಸ್‌ಡಿಎಂಸಿ ಉಪಾಧ್ಯಕ್ಷ ಚಂದ್ರಹಾಸ್ ಮೊದಲಾದವರು ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು, ಹಳೆವಿದ್ಯಾರ್ಥಿಗಳು, ಪೋಷಕರಿಗೆ ಬಹುಮಾನ ವಿತರಿಸಲಾಯಿತು.
ಮುಖ್ಯ ಶಿಕ್ಷಕಿ ಯಮುನಾ ಕೆ. ಸ್ವಾಗತಿಸಿದರು. ದೈ.ಶಿ.ಶಿಕ್ಷಕಿ ಹೆಲೆನ್ ಡಿಸೋಜಾ ವಾರ್ಷಿಕ ವರದಿ ವಾಚಿಸಿದರು. ಎಸ್‌ಡಿಎಂಸಿ ಅಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿಗಾರ್ ವಂದಿಸಿದರು. ಶಿಕ್ಷಕ ಮೋಹನ ಕೊಳವಳ್ಳಿ ವಂದಿಸಿದರು.
ADVRTISEMENT



Leave a Reply