ಭಜನೆಯ ವ್ಯಾಪ್ತಿಗೆ ಅಂತ್ಯವೆಂಬುವುದಿಲ್ಲ: ಮಾಣಿಲ‌ ಶ್ರೀ ಮೋಹನದಾಸ ಸ್ವಾಮೀಜಿ

ಮೂಡುಬಿದಿರೆ: ಯಾರೂ ಹರಿನಾಮ ಸಂಕೀರ್ತನೆಯನ್ನು ಭಕ್ತಿ, ಪ್ರೀತಿ, ಭಾವುಕತೆಯಿಂದ ಸಮರ್ಪಣಿಯನ್ನು ಮಾಡುತ್ತಾರೋ ಅವರಿಗೆ ಅರಿವಿಗೆ ಬರುತ್ತದೆ ಯಾವುದೂ ನಾ ಮಾಡುವುದಲ್ಲ. ಆಡಿಸುವವ ಮೇಲೊಬ್ಬನಿದ್ದಾನೆ ಎಂಬ ಸತ್ಯ ಅರಿಯುತ್ತಾನೆ. ಭಜನೆಯು ಎಷ್ಟು ಪ್ರಭಾವವನ್ನು ಹೊಂದಿದೆ ಎಂದು ತಿಳಿದಿದ್ದರೂ, ಅದನ್ನು ಅರಿತುಕೊಂಡಿರುವವರ ಸಂಖ್ಯೆ ತೀರಾ ಕಡಿಮೆ ಎಂದೆ ನಿಸುತ್ತದೆ. ಆದರೆ ಭಜನೆ ವ್ಯಾಪ್ತಿಗೆ  ಅಂತ್ಯವೆಂಬುದಿಲ್ಲ. ಭಜನೆಯ ಪ್ರಭಾವ ಪ್ರಬಲವಾಗಿದೆ. ಅದನ್ನು ಕರಾವಳಿ ಭಜನಾ ಸಂಸ್ಕಾರ ವೇದಿಕೆಯು ಭಜನೆಗೆ ಇರುವ ಆಯಾಯ ಕಟ್ಟುಪಾಡುಗಳನ್ನು ಪ್ರತಿಯೊಂದು ಮನೆ ಮನೆಗೂ ತಲುಪಿಸಬೇಕು ಸುಸಂಸ್ಕೃತವಾದ ಭಜನೆಯನ್ನು ಉತ್ತಮ ಹಾದಿಯಲ್ಲಿ ಕೊಂಡೊಯ್ಯಬೇಕೆಂಬ ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಕರಾವಳಿ ಭಜನಾ ಸಂಸ್ಕಾರ ವೇದಿಕೆಯನ್ನು ಪ್ರಾರಂಭಿಸಲಾಗಿದೆ ಎಂದು ಮಾಣಿಲ ಮೋಹನದಾಸ ಸ್ವಾಮೀಜಿ ನುಡಿದರು.
ಅವರು ಭಾನುವಾರ ಕದ್ರಿ ದೇವಸ್ಥಾನದ ಆವರಣದಲ್ಲಿ ನಡೆದ ಕರಾವಳಿ ಭಜನಾ ಸಂಸ್ಕಾರ ವೇದಿಕೆ ಕೇಂದ್ರ ಸಮಿತಿ ಮಂಗಳೂರು, ಇದರ ಉದ್ಘಾಟನಾ ಸಮಾರಂಭ ಹಾಗೂ ಪದಗ್ರಹಣ ಕಾರ್ಯಕ್ರಮವನ್ನು  ಉದ್ಘಾಟಿಸಿ ಆಶೀರ್ವಾಚಿಸಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿ, ದೇವರಿಗೆ ಅತ್ಯಂತ ಪ್ರಿಯವಾದ ವಿಚಾರವೆಂದರೆ ಭಜನೆ. ಭಜನೆಗೆ ಅದರದೆ ಆದ ವಿಶೇಷತೆಯಿದೆ. ಕರಾವಳಿ ಭಜನಾ ಸಂಸ್ಕಾರ ಸಂಘಟನೆಯಿಂದಾಗಿ ಸಾಂಸ್ಕೃತಿಕವಾಗಿ, ಸಂಸ್ಕಾರಯುತವಾಗಿ ಆಗಬೇಕಾದ ವಿಚಾರಗಳನ್ನು ಮುಂದಿಟ್ಟುಕೊಂಡು ಸಂಘಟನೆಯನ್ನು ಕಟ್ಟಿದ್ದೀರಿ. ಈ ಸಂಘಟನೆಯಿಂದ ಮುಂದೆ ಯುವಪೀಳಿಗೆಗೆ ಅರಿವು ಮೂಡಿಸುವ ಕೆಲಸ -ಕಾರ್ಯ ಆಗಬೇಕಿದೆ ಎಂದರು.
ನಂತರ ಕರಾವಳಿ ಭಜನಾ ಸಂಸ್ಕಾರ ವೇದಿಕೆ ಕೇಂದ್ರ ಸಮಿತಿ ಮಂಗಳೂರು ಇದರ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಪ್ರತಿಜ್ಞಾವಿಧಿಯನ್ನು  ಸಂಘಟನೆಯ  ಸಲಹೆಗಾರ ರಮೇಶ್ ಕಲ್ಮಾಡಿ ಬೋಧಿಸಿದರು.
ಉದ್ಯಮಿ ಚಂದ್ರಹಾಸ ಡಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕರಾವಳಿ ಭಜನಾ ಸಂಸ್ಕಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಶ್ರಿನಿವಾಸ ಎರ್ಲಪಾಡಿ ಸಂಘಟನೆಯ ಉದ್ದೇಶದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಸಕ ಭರತ್ ವೈ ಶೆಟ್ಟಿ,  ಕಾರ್ಪೋರೇಟರ್ ಮನೋಹರ್ ಶೆಟ್ಟಿ, ಖ್ಯಾತ ನಿರೂಪಕಿ ಆರ್.ಜೆ ನಯನಾ ಶೆಟ್ಟಿ, ಮಂಗಳೂರು ಖ್ಯಾತ ಲೆಕ್ಕ ಪರಿಶೋಧಕ ಸಿ.ಎ ಶಾಂತರಾಮ್, ವಕೀಲರಾದ ಉಮೇಶ್ ಶೆಟ್ಟಿ ಮೂಡುಶೆಡ್ಡೆ, ಜಗದೀಶ್ ಶೆಣವ, ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನ ಆದ್ಯಪಾಡಿಯ ಮೋಕ್ತೆಸರ ಮಂಜುನಾಥ ಭಂಡಾರಿ, ಸುಧಾಕರ ರಾವ್ ಪೇಜಾವರ, ಪುರುಷೋತ್ತಮ ಭಂಡಾರಿ ಅಡ್ಯಾರ್, ಗೋಕುಲ್ ದಾಸ್ ಕದ್ರಿ,  ಶ್ರೀಕಾಂತ್ ಶೆಟ್ಟಿ,  ಕರಾವಳಿ ಭಜನಾ ಸಂಸ್ಕಾರ ವೇದಿಕೆ ಮಂಗಳೂರು ಕೇಂದ್ರ ಸಮಿತಿಯ ಅಧ್ಯಕ್ಷ ಸಂತೋಷ್ ಶೆಟ್ಟಿ ಮೂಡುಶೆಡ್ಡೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರವ ಸಲಹೆಗಾರ ನರೇಶ್ ಕುಮಾರ್ ಸಸಿಹಿತ್ಲು, ಸ್ವಾಗತಿಸಿ, ಮನೋಜ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ADVRTISEMENT

Leave a Reply

Your email address will not be published. Required fields are marked *