ಆಳ್ವಾಸ್‌ನ ಐವರು ಹಿರಿಯ ವಿದ್ಯಾರ್ಥಿಗಳು ಪ್ಯಾರಿಸ್ ಅಂಗಳದಲ್ಲಿ ಭಾರತದ ಒಲಿಪಿಂಕ್ಸ್ ತಂಡವನ್ನು ಪ್ರತಿನಿಧಿಸಲಿರುವ ಕ್ರೀಡಾಪಟುಗಳು

ಮೂಡುಬಿದಿರೆ: ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಜುಲೈ ೨೬ರಿಂದ ಆರಂಭವಾಗಲಿರುವ ಒಲಿಂಪಿಕ್ಸ್ ಗೇಮ್ಸ್ಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ದತ್ತು ಶಿಕ್ಷಣ ಯೋಜನೆಯಲ್ಲಿ ಶಿಕ್ಷಣ ಮುಗಿಸಿರುವ ಐವರು ಹಿರಿಯ ವಿದ್ಯಾರ್ಥಿಗಳು ನಮ್ಮ ದೇಶವನ್ನೂ ಪ್ರತಿನಿಧಿಸಲಿದ್ದಾರೆ. ಇದರೊಂದಿಗೆ ಈ ವರೆಗೆ ಒಟ್ಟು ೧೧ ಕ್ರೀಡಾಪಟುಗಳು ವಿವಿಧ ಒಲಿಂಪಿಕ್ಸ್ ಗೇಮ್ಸ್ನಲ್ಲಿ ಭಾಗವಹಿಸಿದ ಕೀರ್ತಿ ಆಳ್ವಾಸ್ ಸಂಸ್ಥೆಗೆ ಸಲ್ಲುತ್ತದೆ. ಇದು ಕರ್ನಾಟಕ ರಾಜ್ಯದಿಂದ ಒಂದು ಸಂಸ್ಥೆಯಿಂದ ಅತೀ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ ಹಿರಿಮೆಗೆ ಆಳ್ವಾಸ್ ಪಾತ್ರವಾಗುತ್ತಿದೆ. ಈ ಬಾರಿಯ ಒಲಿಂಪಿಕ್ಸ್ ಗೇಮ್‌ನಲ್ಲಿ ೪೪೦೦ ರಿಲೇಯ ಭಾರತ ತಂಡದಲ್ಲಿ ಪೂವಮ್ಮ ರಾಜು, ಸಂತೋಷ್ ಕುಮಾರ್ ತಮಿಳರಸನ್, ಸುಭಾ ವೆಂಕಟೇಶನ್, ಮತ್ತು ಮಿಜೋ ಚಾಕೋ ಕುರಿಯನ್ ಭಾಗವಹಿಸಿದರೆ, ಪ್ರವೀಣ್‌ಸಿ ಟ್ರಿಪಲ್ ಜಂಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಏಕಲವ್ಯ ಸ್ಪೋರ್ಟ್ಸ್ ಕ್ಲಬ್‌ನ ಮೂಲಕ ಕ್ರೀಡೆಗೆ ಪ್ರೋತ್ಸಾಹ ೧೯೮೪ರಲ್ಲಿಏಕಲವ್ಯ ಸ್ಪೋರ್ಟ್ಸ ಕ್ಲಬ್ಸ್ಥಾಪಿಸಿದ ಡಾ ಮೋಹನ್ ಆಳ್ವರು, ಕ್ರೀಡಾ ಪ್ರತಿಭೆಗಳಿಗೆ ಉಚಿತ ಶಿಕ್ಷಣದ ಅವಕಾಶವನ್ನು ಹಲವು ದಶಕಗಳ ಹಿಂದೆ ಪ್ರಾರಂಭಿಸಿದ್ದರು. ನಂತರ ದಿನಗಳಲ್ಲಿ ಅಸಂಖ್ಯಾತ ಕ್ರೀಡಾ ಪ್ರತಿಭೆಗಳು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಯನ್ನು ಪಡೆಯುವಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಉಚಿತ ಕ್ರೀಡಾ ದತ್ತು ಶಿಕ್ಷಣ ನೀತಿ ಇನ್ನಷ್ಟು ಇಂಬು ನೀಡಿತು ಪೂವಮ್ಮ ರಾಜು (೪೪೦೦ ರಿಲೇ)
ಕರ್ನಾಟಕ ಮೂಲದ ಪೂವಮ್ಮ ರಾಜು ೨೦೧೬ರ ಒಲಿಂಪಿಕ್ಸ್ನಲ್ಲಿ ಭಾರತ ತಂಡದ ಸದಸ್ಯರಾಗಿದ್ದರು. ೨೦೧೪ ಮತ್ತು ೨೦೧೮ ರ ಏಷ್ಯನ್ ಗೇಮ್ಸ್ ಮತ್ತು ೨೦೧೩ ಮತ್ತು ೨೦೧೭ರ ಚಾಂಪಿಯನ್‌ಶಿಪ್‌ನಲ್ಲಿ ೪೦೦ ಮೀಟರ್ಸ್ ಓಟದಲ್ಲಿ ಚಿನ್ನದ ಪದಕ ವಿಜೇತರು. ಪೂವಮ್ಮ ರಾಜು ಆಳ್ವಾಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ೨೦೧೨ರ ಅಖಿಲ ಭಾರತ ವಿಶ್ವವಿದ್ಯಾಲಯದ ಅಥ್ಲೇಟಿಕ್ಸ್ ಕ್ರೀಡಾ ಕೂಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ ೪೦೦ ಮೀಟರ್ ಓಟದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ೪೪೦೦ ಮೀಟರ್ಸ್ ರಿಲೇಯಲ್ಲಿ ಭಾರತದ ಜೆರ್ಸಿ ಧರಿಸಲಿರುವ ಪೂವಮ್ಮ ಆಳ್ವಾಸ್ ಕಾಲೇಜಿನ ಹೆಮ್ಮೆಯ ಹಿರಿಯ ವಿದ್ಯಾರ್ಥಿನಿ. ಸಂತೋಷ್ ತಮಿಳರಸನ್ (೪೪೦೦ಮೀ ರಿಲೇ)
೨೦೧೭ರಲ್ಲಿ ಆಳ್ವಾಸ್ ಕಾಲೇಜಿನ ಪದವಿ ವಿದ್ಯಾರ್ಥಿಯಾಗಿದ್ದ ಸಂತೋಷ್ ತಮಿಳರಸನ್, ಗುಂಟೂರಿನಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ೪೦೦ ಮೀಟರ್ಸ್ ಹರ್ಡಲ್ಸ್ ಮತ್ತು ೪೦೦ ಮೀಟರ್ಸ್ ರಿಲೇಯಲ್ಲಿ ಮಂಗಳೂರು ವಿವಿಗೆ ಚಿನ್ನದ ಪದಕ ತಂದುಕೊಟ್ಟಿದ್ದರು. ೨೦೧೭ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ೪೦೦ ಹರ್ಡಲ್ಸ್ನಲ್ಲಿ ಭಾರತೀಯ ಜೆರ್ಸಿಯನ್ನು ಧರಿಸಿದ್ದರು. ಸಂತೋಷ್ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ೪೪೦೦ ಮೀಟರ್ಸ್ ರಿಲೇ ತಂಡದ ಸದಸ್ಯರಾಗಿದ್ದು, ಭಾರತದ ೪೪೦೦ ರಿಲೇ ತಂಡ ವಿಶ್ವ ರ‍್ಯಾಂಕಿಂಗ್‌ನಲ್ಲಿ ೬ ನೇ ಸ್ಥಾನದಲ್ಲಿದೆ.
ಸುಭಾ ವೆಂಕಟೇಶನ್ (೪೪೦೦ಮೀ ರಿಲೇ) ತಮಿಳುನಾಡಿನ ತಿರುಚಿರಾಪಳ್ಳಿ ಮೂಲದ ಸುಭಾ ವೆಂಕಟೇಶನ್ ೨೦೧೯ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ೪೪೦೦ ರಿಲೇಯಲ್ಲಿ ಭಾರತೀಯ ಜೆರ್ಸಿಯನ್ನು ಧರಿಸಿದ್ದರು. ೨೦೨೨ರ ಏಷ್ಯನ್ ಗೇಮ್ಸ್ನಲ್ಲಿ ೪೪೦೦ ಮೀಟರ್ಸ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ೨೦೧೭ರಲ್ಲಿ ಆಳ್ವಾಸ್ ಕಾಲೇಜಿನ ಪದವಿ ವಿದ್ಯಾರ್ಥಿನಿಯಾಗಿದ್ದ ಸುಭಾ ವೆಂಕಟೇಶನ್, ೨೦೧೯ ರಲ್ಲಿ ಗುಂಟೂರಿನಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ೪೦೦ಮೀ ಓಟ ಮತ್ತು ೪೪೦೦ಮೀ ರಿಲೇಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಚಿನ್ನದ ಪದಕ ತಂದು ಕೊಟ್ಟಿದ್ದರು. ೨೦೧೯ರಲ್ಲಿ ನಡೆದ ವರ್ಲ್ಡ್ ಯೂನಿವರ್ಸಿಟಿ ಮೀಟ್‌ನಲ್ಲೂ ಭಾರತ ತಂಡವನ್ನು ಪ್ರತಿನಿಧಿಸಿದ್ದರು.
ಮಿಜೋ ಚಾಕೋ ಕುರಿಯನ್ (೪೪೦೦ಮೀ ರಿಲೇ) ಕೇರಳ ಮೂಲದ ಮಿಜೋ ಚಾಕೋ ಕುರಿಯನ್, ೨೦೨೨ರ ಏಷ್ಯನ್ ಗೇಮ್ಸ್ನಲ್ಲಿ ೪೪೦೦ ರಿಲೇ ತಂಡದ ಸದಸ್ಯರಾಗಿದ್ದರು. ೨೦೧೬ರಲ್ಲಿ ಕೊಯಮತ್ತೂರಿನ ಆಳ್ವಾಸ್ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಯಾಗಿದ್ದ ಮಿಜೋ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ೮೦೦ಮೀ ಓಟ ಮತ್ತು ೪೦೦ಮೀ ಓಟದಲ್ಲಿ ಪದಕ ವಿಜೇತರಾಗಿದ್ದರು. ಪ್ರಸ್ತುತ ವಾಯುಪಡೆಯಲ್ಲಿ ಉದ್ಯೋಗಿಯಾಗಿದ್ದಾರೆ.
ಪ್ರವೀಣ್ ಚಿತ್ರವೇಲ್ (ಟ್ರಿಪಲ್ ಜಂಪ್)ತಮಿಳುನಾಡಿನವರಾದ ಪ್ರವೀಣ್ ಚಿತ್ರವೇಲ್ ಟ್ರಿಪಲ್ ಜಂಪ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ. ೨೦೧೮ ಯೂತ್ ಒಲಿಂಪಿಕ್ಸ್, ೨೦೨೨ ಕಾಮನ್‌ವೆಲ್ತ್ ಗೇಮ್ಸ್, ೨೦೨೨ರ ಏಷ್ಯನ್ ಗೇಮ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಪ್ರವೀಣ್, ತಮ್ಮ ವೃತ್ತಿಜೀವನದಲ್ಲಿ ಅತ್ಯುತ್ತಮ ದೂರವನ್ನು ತಲುಪುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದಾರೆ. ೨೦೧೭ರಲ್ಲಿ ಆಳ್ವಾಸ್ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಯಾಗಿದ್ದ ಅವರು, ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯದ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ಟ್ರಿಪಲ್ ಜಂಪ್‌ನಲ್ಲಿ ಚಿನ್ನದ ಪದಕಕ್ಕೆ ಭಾಜನರಾಗಿದ್ದರು ೨೦೧೯ರಲ್ಲಿ ನಡೆದ ವರ್ಲ್ಡ್ ಯೂನಿವರ್ಸಿಟಿ ಮೀಟ್‌ನಲ್ಲೂ ಭಾರತ ತಂಡವನ್ನು ಪ್ರತಿನಿಧಿಸಿದ್ದರು.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾಗವಹಿಸಲಿರುವ ಆಳ್ವಾಸ್‌ನ ಐವರು ಹಿರಿಯ ವಿದ್ಯಾರ್ಥಿಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಶುಭ ಹಾರೈಸಿದ್ದಾರೆ.

ADVRTISEMENT