ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಖಂಡಿಸಿ ಮೂಡುಬಿದಿರಾದ್ಯಾಂತ ಅಂಗಡಿಮುಂಗಟ್ಟು ಬಂದ್:ಮಾರ್ಗ ಮಧ್ಯ ಟೈರ್ ಸುಟ್ಟು ಆಕ್ರೋಶ

ಮೂಡುಬಿದಿರೆ: ಹಿಂದೂ ಕಾರ್ಯಕರ್ತ ಮಂಗಳೂರ್ ಬಜ್ಪೆ ಸುಹಾಸ್ ಶೆಟ್ಟಿ ಕೊಲೆ ಖಂಡಿಸಿ ನಡೆದ ಜಿಲ್ಲಾ ಬಂದ್ ಕರೆಗೆ ಸ್ಪಂದಿಸಿ ಗ್ರಾಮಾಂತರ ಪ್ರದೇಶಗಳಲ್ಲೂ ಅಂಗಡಿ ಬಂದ್ ನಡೆಸಿರುವುದಲ್ಲದೆ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲಾಗಿದೆ. ಕೊಲೆ ಹಿನ್ನೆಲೆಯಲ್ಲಿ ಮಾರ್ಗ ಮಧ್ಯ ಟೈರ್ ಸುಟ್ಟು ಆಕ್ರೋಶ ವ್ಯಕ್ತ ಪಡಿಸಲಾಗಿದೆ. ಮಾತ್ರವಲ್ಲದೇ ಹಿಂದೂ ಕಾರ್ಯಕರ್ತ ಬಜ್ಪೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬಂದ್ ಬಗ್ಗೆ ಹಿಂದೂ ಸಂಘಟನೆಗಳು ನೀಡಿದ ಕರೆಗೆ ಸ್ಪಂದಿಸಿ ಮೂಡುಬಿದಿರೆಯಲ್ಲೂ ವ್ಯಾಪಾರ ಮಳಿಗೆ, ಪೆಟ್ರೋಲ್ ಬಂಕ್, ಮೀನು ಮಾರುಕಟ್ಟೆ ಸಹಿತ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿದೆ. ದಿನನಿತ್ಯ ಓಡಾಡುತ್ತಿದ್ದ ವಾಹನಗಳು, ಜನರ ಜನಸಂದಣಿ ಇಲ್ಲದೇ ಬಿಕೋ ಎನ್ನುತ್ತಿದೆ.

ADVRTISEMENT