ಭೀಕರ ಮಣ್ಣು ಕುಸಿತ: ಎಡಪದವು ಕುಕ್ಕುದ ಅಣೆ ಬಳಿ ನಡೆದ ಘಟನೆ..!


ಎಡಪದವು:
ಮಂಗಳೂರು – ಸೋಲಾಪುರ ರಾಷ್ಟ್ರೀಯ ಹೆದ್ದಾರಿ NH169 ರಲ್ಲಿ ಭೀಕರ ಮಣ್ಣು ಕುಸಿತ ಸಂಭವಿಸಿದ್ದು, ಎಡಪದವು ಕುಕ್ಕುದ ಅಣೆ ಬಳಿಯ ಬಳ್ಲಾಲ್ ಕಾರ್ಖಾನೆ ಎದುರು ಸಂಪೂರ್ಣವಾಗಿ ಕುಸಿದಿರುವ ಘಟನೆ ಎಡಪದವಿನಲ್ಲಿ ಆತಂಕ ಮೂಡಿಸಿದೆ.
ಈ ಘಟನೆ ಸಂಭವಿಸಿದ ಸ್ಥಳದಲ್ಲಿ ರಸ್ತೆಯ ಎಡಭಾಗದ ಮಣ್ಣು ಕುಸಿದು ಹೋಗಿದ್ದು,ಅಪಾಯದ ಸಾಧ್ಯತೆ ತಪ್ಪಿದರೂ ವಾಹನ ಸಂಚಾರಕ್ಕೆ ಸ್ಥಳೀಯರು ಭಯಭೀತರಾಗಿದ್ದಾರೆ.
ಈ ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಮಣ್ಣು ಕುಸಿತಗಳು ಸಂಭವಿಸುವ ಸಾಧ್ಯತೆ ಇದೆ. ಸಾರ್ವಜನಿಕರು ಈ ಭಾಗದಲ್ಲಿ ಸಂಚರಿಸುವಾಗ ಎಚ್ಚರಿಕೆಯಿಂದ ಇರುವುದು ಬಹಳ ಅವಶ್ಯಕ….

ADVRTISEMENT