
ಮೂಡುಬಿದಿರೆ: ಹಟ್ಟಿಗೆ ಬೆಂಕಿ ತಗುಲಿ ಕಂಬಳದ ಕೋಣಗಳು ಸಾವನಪ್ಪಿದ ದುರ್ಘಟನೆ ಮೇ 30ರ ರಾತ್ರಿ ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದ ಬೇಲಾಡಿಯಲ್ಲಿ ಸಂಭವಿಸಿದೆ. 2022-23ನೇ ಕಂಬಳ ಸಾಲಿನಲ್ಲಿ ಕನಹಲಗೆಯಲ್ಲಿ ಚಾಂಪಿಯನ್ ಪಡೆದ ಬೇಲಾಡಿ ಬಾವ ಅಶೋಕ್ ಶೆಟ್ಟಿಯವರ ಅಪ್ಪು ಮತ್ತು ತೋನ್ಸೆ ಸಾವಿಗೀಡಾದ ಕೋಣಗಳು. ವಿದ್ಯುತ್ ಶಾರ್ಟ್ ಸರ್ಕೂಟ್‌ನಿಂದಾಗಿ ಬೆಂಕಿ ಹತ್ತಿಕೊಂಡಿದೆ ಎನ್ನಲಾಗುತ್ತಿದೆ.
ವಾಸ್ತು ತಜ್ಞ, ಚಂದ್ರಶೇಖರ ಸ್ವಾಮೀಜಿಯವರಿಗೆ ರಾಜ್ಯಮಟ್ಟದ ರಾಣಿ ಅಬ್ಬಕ್ಕ ಪ್ರಶಸ್ತಿ ಪ್ರದಾನ ಮೂಡುಬಿದಿರೆ: ಇಲ್ಲಿನ ಕೋಟಿ ಚೆನ್ನಯ ಜೋಡುಕೆರೆ ಕಂಬಳ ಸಮಿತಿಯ ವತಿಯಿಂದ ಕಡಲಕೆರೆ ನಿಸರ್ಗಧಾಮದಲ್ಲಿ ಶನಿವಾರ ನಡೆದ ೨೨ನೇ ವರ್ಷದ ಕೋಟಿ ಚೆನ್ನಯ ಜೋಡುಕೆರೆ ಕಂಬಳದ ಸಭಾ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದಿರುವ ಆಧ್ಯಾತ್ಮಿಕ ಗುರು ಅಂತರಾಷ್ಟ್ರೀಯ ವಾಸ್ತು ತಜ್ಞ, ವೈಜ್ಞಾನಿಕ ಜ್ಯೋತಿಷಿ ಚಂದ್ರಶೇಖರ್ ಸ್ವಾಮೀಜಿ, ಅವರಿಗೆ ಕಂಬಳ ಸಮಿತಿಯ ಅಧ್ಯಕ್ಷ ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾಧಿಕಾರಿ ಮುಲ್ಲೈ […]
ಮೂಡುಬಿದಿರೆ: ಇಲ್ಲಿನ ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ನೇತೃತ್ವದಲ್ಲಿ ಜ. 25ರಂದು ಕಡಲಕೆರೆ ನಿಸರ್ಗ ಧಾಮದಲ್ಲಿ ನಡೆಯುವ ಬೆದ್ರ ಕಂಬಳದ ಆಮಂತ್ರಣ ಪತ್ರಿಕೆಯನ್ನು ಪುತ್ತಿಗೆ ಮಹಾತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಶಾಸಕ ಉಮಾನಾಥ್ ಎ. ಕೋಟ್ಯಾನ್ ಬಿಡುಗಡೆ ಗೊಳಿಸಿದರು.ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ ಗುಣಪಾಲ ಕಡಂಬ, ದ ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ಪಿ ಸುಚರಿತ ಶೆಟ್ಟಿ, ಪುರಸಭೆ ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಬಿಜೆಪಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರಂಜಿತ್ […]
ಮೂಡುಬಿದಿರೆ: ಇಲ್ಲಿನ ಎ.ಫ್ರೆಂಡ್ಸ್ ಹಮ್ಮಿಕೊಂಡಿದ್ದ ‘ಶಿವದೂತೆ ಗುಳಿಗೆ’ ನಾಟಕದ ಸಂದರ್ಭದಲ್ಲಿ ಕಂಬಳ ಕ್ಷೇತ್ರದ ಸಾಧಕ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸತೀಶ್ಚಂದ್ರ ಸಾಲ್ಯಾನ್ ಪಾಣಿಲ, ಪೆರಾಡಿ ಸೊಸೈಟಿ ಬ್ಯಾಂಕ್ ಗೆ ಅವಿರೋಧವಾಗಿ ಆಯ್ಕೆಯಾದ ಜಯಶ್ರೀ ಹೊಟೇಲ್ ಮಾಲಕ ಸುರೇಶ್ ಅಂಚನ್ ಹಾಗೂ ಕಲಾಸಂಗಮ ತಂಡದ ಮುಖ್ಯಸ್ಥರಾದ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಕ್ಸಲೆಂಟ್ ಕಾಲೇಜಿನ ಮುಖ್ಯಸ್ಥರಾದ ಯುವರಾಜ ಜೈನ್,ಬಿಜೆಪಿ ಮುಖಂಡ ಸುದರ್ಶನ ಎಂ, ಕೆ.ಪಿ.ಜಗದೀಶ್ ಅಧಿಕಾರಿ, ಉದ್ಯಮಿಗಳಾದ ಕೆ.ಶ್ರೀಪತಿ ಭಟ್,ನಾರಾಯಣ ಪಿ.ಎಂ,ಅರುಣ್ ಪ್ರಕಾಶ್ ಶೆಟ್ಟಿ,ತೋಡಾರು ದಿವಾಕರ […]