Category: Karnataka

  • ಕರಾವಳಿ ಭಾಗಕ್ಕೆ ಮತ್ತೆ ರೆಡ್‌ ಅಲರ್ಟ್: ಭಾರೀ ಮಳೆಯ ಎಚ್ಚರಿಕೆ

    ಕರಾವಳಿ ಭಾಗಕ್ಕೆ ಮತ್ತೆ ರೆಡ್‌ ಅಲರ್ಟ್: ಭಾರೀ ಮಳೆಯ ಎಚ್ಚರಿಕೆ

    ಮಂಗಳೂರು: ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಕರಾವಳಿ ಭಾಗಕ್ಕೆ ಮತ್ತೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ ಮಳೆಯ ತೀವ್ರತೆಯಿಂದಾಗಿ ರಾಜ್ಯದ ಕರಾವಳಿ ಭಾಗಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಈಗಾಗಲೇ ನದಿಗಳು ತುಂಬಿ ಹರಿಯುತ್ತಿದ್ದು, ಕಡಲ ತೀರ ಪ್ರದೇಶಗಳಲ್ಲಿ ಪ್ರಬಲ ಅಲೆಗಳು ಸಂಚಲನ ಮೂಡಿಸುತ್ತಿವೆ. ಈ ಪರಸ್ಥಿತಿಯಲ್ಲಿ, ಭಾರೀ ಮಳೆಯ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮತ್ತೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ರೆಡ್‌ ಅಲರ್ಟ್‌ ಹಿನ್ನೆಲೆಯಲ್ಲಿ, ಈ ದಿನ ಮತ್ತು ನಾಳೆ, ಜಿಲ್ಲೆಯ ಎಲ್ಲಾ ಅಂಗನವಾಡಿ, […]

    Continue Reading

  • ಚಾಂಪಿಯನ್ ಸ್ಪರ್ಧೆಯಲ್ಲಿ ಮೂಡುಮಾರ್ನಾಡು ವಿದ್ಯಾರ್ಥಿ ಸುಮಂತ್ ಎಸ್. ಯಶಸ್ಸು

    ಚಾಂಪಿಯನ್ ಸ್ಪರ್ಧೆಯಲ್ಲಿ ಮೂಡುಮಾರ್ನಾಡು ವಿದ್ಯಾರ್ಥಿ ಸುಮಂತ್ ಎಸ್. ಯಶಸ್ಸು

    ಮೂಡುಬಿದಿರೆ: ಮೂಡುಮಾರ್ನಾಡು ಸರಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಸುಮಂತ್ ಎಸ್ ಅವರು ಆಂಧ್ರ ಪ್ರದೇಶದ ಗುಂಟೂರಿನ ಆಚಾರ್ಯ ನಾಗಾರ್ಜುನ ವಿವಿಯಲ್ಲಿ ನಡೆದ ದಕ್ಷಿಣ ಭಾರತ ವಲಯ ಚಾಂಪಿಯನ್ ಶಿಪ್‌ನಲ್ಲಿ 600 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈಗಾಗಲೇ ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದರು. ಬೆಂಗಳೂರಿನ ಹೆಚ್‌ಸಿಎಲ್ ಫೌಂಡೇಶನ್ ಈ ಕ್ರೀಡಾಕೂಟಗಳನ್ನು ಆಯೋಜಿಸಿತ್ತು. ಸುಮಂತ್ ಅವರು ಕೆಲ್ಲಪುತ್ತಿಗೆಯ ಶೇಖರ ಪೂಜಾರಿ ಮತ್ತು ಮೋಹಿನಿ ಅವರ ಪುತ್ರರಾಗಿದ್ದಾರೆ. ಸುಮಂತ್ […]

    Continue Reading

  • ಮಂಗಳೂರು: ನಿರ್ಮಾಣ ಹಂತದ ಕಟ್ಟಡದ ಮಣ್ಣು ಕುಸಿತದಿಂದ ಸಿಲುಕಿದ್ದ ಕಾರ್ಮಿಕನ ಮೃತದೇಹ ಹೊರತೆಗೆಯಲು ಏಳು ಗಂಟೆ ರಕ್ಷಣಾ ಕಾರ್ಯಾಚರಣೆ

    ಮಂಗಳೂರು: ನಿರ್ಮಾಣ ಹಂತದ ಕಟ್ಟಡದ ಮಣ್ಣು ಕುಸಿತದಿಂದ ಸಿಲುಕಿದ್ದ ಕಾರ್ಮಿಕನ ಮೃತದೇಹ ಹೊರತೆಗೆಯಲು ಏಳು ಗಂಟೆ ರಕ್ಷಣಾ ಕಾರ್ಯಾಚರಣೆ

    ಮಂಗಳೂರು: ನಿರ್ಮಾಣ ಹಂತದ ಕಟ್ಟಡದ ಮಣ್ಣು ಕುಸಿತದಿಂದ ಸಿಲುಕಿದ್ದ ಕಾರ್ಮಿಕನ ಮೃತದೇಹ ಹೊರತೆಗೆಯಲು ಏಳು ಗಂಟೆ ರಕ್ಷಣಾ ಕಾರ್ಯಾಚರಣೆ ಬಲ್ಮಠದ ಬಳಿ ನಿರ್ಮಾಣ ಹಂತದ ಕಟ್ಟಡದ ಮಣ್ಣು ಕುಸಿತದಿಂದ ಸಿಲುಕಿದ್ದ ಮತ್ತೋರ್ವ ಕಾರ್ಮಿಕನ ಮೃತದೇಹವನ್ನು, ಏಳು ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ, ರಕ್ಷಣಾ ತಂಡವು ಹೊರತೆಗೆದಿದೆ. ಉತ್ತರಪ್ರದೇಶ ಮೂಲದ ಕಟ್ಟಡ ಕಾರ್ಮಿಕ ಚಂದನ್ ಕುಮಾರ್ (30) ಅವರನ್ನು, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳದ ತಂಡಗಳು ಮಣ್ಣಿನಡಿ ಸಿಲುಕಿರುವುದು ಪತ್ತೆಹಚ್ಚಿ, ಹೊರತೆಗೆದಿದ್ದಾರೆ. ಆದರೆ ಆತನ ಮುಖದಲ್ಲಿ ಗಂಭೀರ […]

    Continue Reading

  • ಪ್ರಾದೇಶಿಕ ಚಲನ ಚಿತ್ರಗಳಿಗೆ ಸಬ್ಸಿಡಿ ಮತ್ತು ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಲು ಮುಖ್ಯಮಂತ್ರಿಗೆ ಮನವಿ

    ಪ್ರಾದೇಶಿಕ ಚಲನ ಚಿತ್ರಗಳಿಗೆ ಸಬ್ಸಿಡಿ ಮತ್ತು ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಲು ಮುಖ್ಯಮಂತ್ರಿಗೆ ಮನವಿ

    ಮಂಗಳೂರು: ಪ್ರಾದೇಶಿಕ ಚಲನ ಚಿತ್ರಗಳಿಗೆ ಸರಕಾರದಿಂದ ಸಬ್ಸಿಡಿ ನೀಡವಂತೆ ತುಳು ಚಲನ ಚಿತ್ರ ನಿರ್ಮಾಪಕರ ಸಂಘ (ರಿ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್ ಧನರಾಜ್ ಅವರು ಬೆಂಗಳೂರಿನಲ್ಲಿ ಮುಖ್ಯಂಮತ್ರಿಯವರಿಗೆ ಮನವಿ ನೀಡಿದ್ದಾರೆ.ಕರ್ನಾಟಕದಲ್ಲಿ ವರ್ಷಂಪ್ರತಿ ಸುಮಾರು 15 ರಿಂದ 20 ತುಳು ಸಿನಿಮಾಗಳು ತೆರೆ ಕಾಣುತ್ತಿದೆ. ಪ್ರಾದೇಶಿಕ ಭಾಷೆಗಳ ಅಭಿಮಾನದಿಂದ ನಿರ್ಮಾಪಕರು ಚಲನ ಚಿತ್ರ ನಿರ್ಮಿಸುತ್ತಾರೆ. ಯಾವು ಪರಭಾಷೆಗೆ ಕಡಿಮೆ ಇಲ್ಲದಂತೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಸಿನಿಮಾ ನಿರ್ಮಿಸುತ್ತಾರೆ. […]

    Continue Reading

  • ಚಾರಣಪಥಗಳ ಆನ್ ಲೈನ್ ಟಿಕೆಟ್ ಗೆ ಶೀಘ್ರ ಚಾಲನೆ: ಈಶ್ವರ ಖಂಡ್ರೆ

    ಚಾರಣಪಥಗಳ ಆನ್ ಲೈನ್ ಟಿಕೆಟ್ ಗೆ ಶೀಘ್ರ ಚಾಲನೆ: ಈಶ್ವರ ಖಂಡ್ರೆ

    ಮಂಗಳೂರು, ಜು.2: ಜುಲೈ 3ನೇ ವಾರದಲ್ಲಿ ರಾಜ್ಯದ ವಿವಿಧ ಚಾರಣ ಪಥಗಳಿಗೆ ಆನ್ ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.ಮಂಗಳೂರಿನ ಪಡೀಲ್ ನಲ್ಲಿರುವ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜನವರಿ 26ರಂದು ಕುಮಾರಪರ್ವತಕ್ಕೆ ಸಾವಿರಾರು ಚಾರಣಿಗರು ಒಂದೇ ದಿನ ಲಗ್ಗೆ ಇಟ್ಟು ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾದ ಚಾರಣಕ್ಕೆ ಈ ಆಗಸ್ಟ್ ನಿಂದ ಮರು ಚಾಲನೆ […]

    Continue Reading

  • ಕೇಮಾರು : ಜುಲೈ 28 ರಂದು ಜರಗಲಿರುವ  ಕೆಸರುಡೊಂಜಿ ದಿನಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

    ಕೇಮಾರು : ಜುಲೈ 28 ರಂದು ಜರಗಲಿರುವ ಕೆಸರುಡೊಂಜಿ ದಿನಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

    ಕೇಮಾರು : ಜುಲೈ 28ರಂದು ಜರಗಲಿರುವ ಕೆಸರುಡೊಂಜಿ ದಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ. ಯುವ ಉತ್ಸಾಹಿ ಬಳಗ (ರಿ.) ನೇತೃತ್ವದಲ್ಲಿ ಯುವಸಂಗಮ ಕಾಂತಾವರ (ರಿ.) ಇದರ ಸಹಭಾಗಿತ್ವದಲ್ಲಿ 28.7.2024ನೇ ಅದಿತ್ಯವಾರದಂದು ಕೇಮಾರು ಹಕ್ಕೇರಿ ಬಾಕಿಮಾರು ಗದ್ದೆಯಲ್ಲಿ ಜರಗುವಕೆಸರುಡೊಂಜಿ ದಿನ 2024 ಇದರ ಆಮಂತ್ರಣ ಪತ್ರಿಕೆಯನ್ನು ಜೂ 30ರಂದು ಶ್ರೀ ಕ್ಷೇತ್ರ ಕೇಮಾರುನಲ್ಲಿ ಶ್ರೀ ಸಾಂದಿಪನಿ ಸಾಧನಶ್ರಮದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ದಿವ್ಯಹಸ್ತದಿಂದ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಯುವ ಉತ್ಸಾಹಿ ಬಳಗ (ರಿ.) ಕೇಮಾರು […]

    Continue Reading

  • ಉಲಾಯಿ ಪಿದಾಯಿ ; ಮೂವರು ಉಲಾಯಿ !

    ಉಲಾಯಿ ಪಿದಾಯಿ ; ಮೂವರು ಉಲಾಯಿ !

    ಇರುವೈಲು ಕೋರೆಬಳಿ ಉಲಾಯಿ ಪಿದಾಯಿ ಆಟವಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ನೇತೃತ್ವದ ಪೊಲೀಸರ ತಂಡವು ಮೂವರನ್ನು ಬಂಧಿಸಿದ್ದಾರೆ. ಇತರ ಕೆಲವು ಮಂದಿ ಪರಾರಿಯಾಗಿದ್ದಾರೆ.ಅಕ್ಬರ್ ,ಗಣೇಶ್ ಹಾಗೂ ಅರುಣ್ ಎಂಬವರು ಬಂಧಿತರಾಗಿದ್ದು ಇತರ ಕೆಲವರು ಪರಾರಿಯಾಗಿದ್ದಾರೆ.ಆರೋಪಿಗಳಿಂದ ಮೂರು ಸಾವಿರ ನಗದು,ಏಳು ಮೊಬೈಲ್ ಹಾಗೂ ಒಂದು ಬೈಕನ್ನು ವಶಪಡಿಸಿಕೊಳ್ಳಲಾಗಿದೆ.ಪ್ರಕರಣ ದಾಖಲಾಗಿದೆ.

    Continue Reading

  • ಪ್ರಾಮಾಣಿಕ ದಕ್ಷ ಪೊಲೀಸ್‌ ಅಧಿಕಾರಿಗೆ ಪುಷ್ಪಾರ್ಚನೆಯ ಬೀಳ್ಕೊಡುಗೆ

    ಪ್ರಾಮಾಣಿಕ ದಕ್ಷ ಪೊಲೀಸ್‌ ಅಧಿಕಾರಿಗೆ ಪುಷ್ಪಾರ್ಚನೆಯ ಬೀಳ್ಕೊಡುಗೆ

    ಮೂಡಬಿದರೆ : ಪೊಲೀಸ್‌ ಅಧಿಕಾರಿಯಾದವರು ದಕ್ಷತೆ, ಪ್ರಮಾಣಿಕತೆಯಿಂದ ಕೆಲಸ ಮಾಡಿದ್ರೆ ಎಂತಹಾ ಗೌರವ ಸಿಗುತ್ತೆ ಅನ್ನೋದಕ್ಕೆ ಮೂಡಬಿದಿರೆಯ ಈ ಪೊಲೀಸ್‌ ಅಧಿಕಾರಿಯೇ ಸಾಕ್ಷಿ. ಪೊಲೀಸ್‌ ಅಧಿಕಾರಿಯಾಗಿ 39 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗಿದ್ದ ದಿವಾಕರ್‌ ರೈ ಅವರಿಗೆ ಸಹೋದ್ಯೋಗಿಗಳು ಪುಷ್ಪಾರ್ಚನೆಯ ಗೌರವ ಸಲ್ಲಿಸಿದ್ದಾರೆ. ದಿವಾಕರ ರೈ ಅವರು ಸೇವೆಯಿಂದ ಇಂದು ನಿವೃತ್ತರಾಗಿದ್ದರು. ಮೂಡಬಿದಿರೆಯ ಪೊಲೀಸ್‌ ಠಾಣೆಯಿಂದ ಅವರು ಸೇವೆಯನ್ನು ಮುಗಿಸಿ ಮನೆಗೆ ತೆರಳುವ ವೇಳೆಯಲ್ಲಿ ಅವರು ಠಾಣೆಯಿಂದ ಪೊಲೀಸ್‌ ಜೀಪ್‌ ಏರುವ ವರೆಗೂ ಮೂಡಬಿದಿರೆಯ […]

    Continue Reading

  • ಪ್ರಶಾಂತ್ ಅಡ್ಡರ್ ಎ.ಎಸ್.ಐ. ಆಗಿ ಪ್ರಮೋಷನ್

    ಪ್ರಶಾಂತ್ ಅಡ್ಡರ್ ಎ.ಎಸ್.ಐ. ಆಗಿ ಪ್ರಮೋಷನ್

    ಮೂಡುಬಿದಿರೆ: ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿರುವ ಪ್ರಶಾಂತ್ ಅಡ್ಡರ್ ಅವರು ಎ.ಎಸ್.ಐ ಆಗಿ ಪದೋನ್ನತಿ ಹೊಂದಿದ್ದಾರೆ. ಪುತ್ತೂರು, ಮೂಡುಬಿದಿರೆ, ಬಜ್ಪೆ, ಮಂಗಳೂರು ದಕ್ಷಿಣ (ಸಂಚಾರ) ಹೀಗೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿರುವ ಪ್ರಶಾಂತ್ ಅವರು ಮತ್ತೆ ಮೂಡುಬಿದಿರೆ ಠಾಣೆಗೆ ಹೆಡ್ ಕಾನ್ಸ್ಟೆಬಲ್ ಆಗಿ ಬಂದು, ಇದೀಗ ಮೂಡುಬಿದಿರೆ ಠಾಣೆಯಲ್ಲೇ ಎ.ಎಸ್.ಐ. ಆಗಿ ಪದೋನ್ನತಿ ಹೊಂದಿದ್ದಾರೆ. ಸುಮಾರು 28 ವರ್ಷಗಳ ಸೇವಾವಧಿಯಲ್ಲಿ, ತಮ್ಮ ನಿಷ್ಠೆಯ ಸೇವೆಯಿಂದಾಗಿ ಪ್ರಶಾಂತ್ ಅವರು ಸಾರ್ವಜನಿಕ ವಲಯದಿಂದ ಮೆಚ್ಚುಗೆ ಗಳಿಸಿದ್ದಾರೆ. […]

    Continue Reading

  • ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಪದೋನ್ನತಿ

    ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಪದೋನ್ನತಿ

    ಮೂಡುಬಿದಿರೆ: ಕಳೆದ 23 ವರ್ಷಗಳಿಂದ ಅಗ್ನಿಶಾಮಕ ದಳದಲ್ಲಿ ಚಾಲಕರಾಗಿದ್ದ ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಅಮನಬೆಟ್ಟುವಿನ ನಿವಾಸಿ ಚಂದ್ರಶೇಖರ ಅವರು ಶುಕ್ರವಾರ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಪದೋನ್ನತಿಯನ್ನು ಹೊಂದಿದ್ದಾರೆ. 2001ರಲ್ಲಿ ಅಗ್ನಿಶಾಮಕ ಇಲಾಖೆಯಲ್ಲಿ ಸೇವೆಯನ್ನು ಆರಂಭಿಸಿದ್ದ ಅವರು ಬೆಳ್ತಂಗಡಿ, ಮೂಡುಬಿದಿರೆ ಮತ್ತು ಕಾರ್ಕಳದಲ್ಲಿ ಸೇವೆಯನ್ನು ಸಲ್ಲಿಸಿದ್ದರು.ಇದೀಗ ಕಾರ್ಕಳದಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಅವರು ಕಾರ್ಕಳ ಅಗ್ನಿಶಾಮಕ ಠಾಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ.

    Continue Reading