



ಮೂಡುಬಿದಿರೆ: ಬಸ್ ಏಜೆಂಟ್ ಮತ್ತು ನಿರ್ವಾಹಕರಾಗಿದ್ದ ಗಣೇಶ್ (45) ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪೇಟೆಗೆ ಹೂ ಮತ್ತು ಪತ್ರಿಕೆಗಳನ್ನು ತಂದ ಅವರು ಮನೆಗೆ ಹಿಂದಿರುಗುತ್ತಿದ್ದಾಗ ಎದೆನೋವು ಕಾಣಿಸಿಕೊಂಡು, ತಕ್ಷಣ ಅವರನ್ನು ಜಿ.ವಿ.ಪೈ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ದುರದೃಷ್ಟವಶಾತ್, ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಈ ಹಿಂದೂ ಒಂದು ಬಾರಿ ಹೃದಯಾಘಾತದಿಂದ ಬಳಲಿದ ಗಣೇಶ್, ಅಂದಿನ ಚಿಕಿತ್ಸೆಯಿಂದ ಬೇರೆಯಾದರೂ, ಈ ಬಾರಿ ಅದೃಷ್ಟ ಅವನ ಕೈಚೆಲ್ಲಿತು. ಮೂಡುಬಿದಿರೆಯಲ್ಲಿ ಹಲವು ವರ್ಷಗಳಿಂದ ಬಸ್ ಸಿಬ್ಬಂದಿಯಾಗಿ, ಬೇರೆ ವಾಹನಗಳ ಚಾಲಕನಾಗಿ […]

ಮೂಡುಬಿದಿರೆ: ಮರುಳು ಮಾತುಗಳನ್ನಾಡಿ ಜನರನ್ನು ತಮ್ಮತ್ತ ಸೆಳೆದು ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ಲಕ್ಷಾಂತರ ರೂಪಾಯಿ ಮೋಸ ಮಾಡಿದ ಪಂಚವಟಿ ಮಲ್ಟಿ ಸ್ಟೇಟ್ ಕೋ-ಆಪರೇಟಿವ್ ಸೊಸೈಟಿಯ ವಿರುದ್ಧ ಸಿಐಡಿ ಘಟಕದಲ್ಲಿ ತನಿಖೆ ನಡೆಯುತ್ತಿದ್ದು, ವಂಚನೆಗೆ ಒಳಗಾದವರು ತನಿಖಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸಿಐಡಿ ಘಟಕವು ಪ್ರಕಟಣೆ ನೀಡಿದೆ. ಹೆಚ್ಚಿನ ಲಾಭಾಂಶ ನೀಡುವುದಾಗಿ ಸಾರ್ವಜನಿಕರಿಂದ ಠೇವಣಿ ರೂಪದಲ್ಲಿ ಹಣ ಸಂಗ್ರಹಿಸಿ ಮೆಚ್ಯೂರಿಟಿ ಆದ ನಂತರವೂ ಸಹ ಹಲವಾರು ಬಾರಿ ಸೊಸೈಟಿಗೆ ಹೋಗಿ ಕೇಳಿದರೂ ದುಡ್ಡು ವಾಪಾಸ್ ಕೊಡದ ಬಗ್ಗೆ […]

ದಕ್ಷಿಣ ಕನ್ನಡದಲ್ಲಿ ಕುಂಭದ್ರೋಣ ಮಳೆಜಿಲ್ಲಾದ್ಯಂತ ರೆಡ್ ಅಲರ್ಟ್ ಘೋಷಣೆತುಂಬಿ ಹರಿದ ನದಿಗಳು…ತಗ್ಗು ಪ್ರದೇಶದಲ್ಲಿ ಜಲಾವೃತಮುಂಜಾಗ್ರತಾ ಕ್ರಮವಾಗಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

ಬೆಂಗಳೂರು, 21 ಜೂನ್ 2024: ರಾಜ್ಯದ ಜನತೆ ಈಗಾಗಲೇ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿದ್ದಾಗ, ಕರ್ನಾಟಕ ಸರ್ಕಾರದಿಂದ ಮತ್ತೊಂದು ಹೊಡೆತ ಬಿದ್ದಿದೆ. ಮೊನ್ನೆ ಮಾತ್ರ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಸೆಸ್ ದರವನ್ನು ಹೆಚ್ಚಿಸಿದ್ದ ರಾಜ್ಯ ಸರ್ಕಾರ ಇದೀಗ ಹಾಲಿನ ದರವನ್ನು ಕೂಡ ಹೆಚ್ಚಿಸಿ ಆದೇಶ ಹೊರಡಿಸಿದೆ. ಕರ್ನಾಟಕ ದೂಧ ಉತ್ಪಾದಕರ ಒಕ್ಕೂಟ (ಕೆಎಂಎಫ್) ಪ್ರತಿ ಲೀಟರ್ ಹಾಲಿನ ದರವನ್ನು 2.10 ರೂಗೆ ಹೆಚ್ಚಿಸುವ ಆದೇಶ ಹೊರಡಿಸಿದೆ

ಬೆಂಗಳೂರು : ‘ವೆಜ್, ಚಿಕನ್, ಫಿಶ್ ಸೇರಿ ಇತರೆ ಕಬಾಬ್‍ನ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸಬಾರದು’ ಎಂದು ಆರೋಗ್ಯ ಇಲಾಖೆಯು ಸೋಮವಾರ ಆದೇಶ ಹೊರಡಿಸಿದೆ. ಉಲ್ಲಂಘನೆಯ ಪ್ರಕರಣಗಳು ಕಂಡುಬಂದಲ್ಲಿ ಕಬಾಬ್ ತಯಾರಿಸುವವರ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮ 59ರಡಿ 7 ವರ್ಷಗಳಿಂದ ಜೀವಾವಧಿ ಅವಧಿಯ ವರೆಗೆ ಜೈಲು ಶಿಕ್ಷೆಯನ್ನು ಮತ್ತು 10 ಲಕ್ಷ ರೂ.ಗಳ ವರೆಗೆ ದಂಡವನ್ನು ವಿಧಿಸಲಾಗುತ್ತದೆ. ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಕಬಾಬ್‍ನ ಗುಣಮಟ್ಟ ಕೃತಕ ಬಣ್ಣ ಬೆರಸುವಿಕೆಯಿಂದಾಗಿ ಕಳಪೆಯಿಂದ […]

ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ನಡೆದ ದಕ್ಷಿಣ ಭಾರತ ವಲಯ ಮಟ್ಟದ ಚಾಂಪಿಯನ್ಶಿಪ್ -2024 ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ನಮ್ಮ ಮೂಲ್ಕಿ – ಮೂಡುಬಿದಿರೆ ಕ್ಷೇತ್ರದ ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರುವಿನ ಖೋ-ಖೋ ತಂಡ ದ್ವಿತೀಯ ಸ್ಥಾನ ಪಡೆದು ಮಹತ್ವದ ಸಾಧನೆ ಮಾಡಿದಾರೆ ಅವರ ಈ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳು. ಕರ್ನಾಟಕವನ್ನು ಗೌರವದಿಂದ ಪ್ರತಿನಿಧಿಸಿದ ಈ ಯುವ ಕ್ರೀಡಾಪಟುಗಳು ತಮ್ಮ ಶ್ರಮ, ಸಮರ್ಪಣೆ ಮತ್ತು ಕ್ರೀಡಾ ಮನೋಭಾವದಿಂದ ಮಾತ್ರವಲ್ಲದೆ, ರಾಜ್ಯದ ಕ್ರೀಡಾ ಸಾಮರ್ಥ್ಯವನ್ನು ಮೆರೆಯುವಲ್ಲಿ ಸಫಲರಾಗಿದ್ದಾರೆ.