
ಬೆಂಗಳೂರು : ‘ವೆಜ್, ಚಿಕನ್, ಫಿಶ್ ಸೇರಿ ಇತರೆ ಕಬಾಬ್‍ನ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸಬಾರದು’ ಎಂದು ಆರೋಗ್ಯ ಇಲಾಖೆಯು ಸೋಮವಾರ ಆದೇಶ ಹೊರಡಿಸಿದೆ. ಉಲ್ಲಂಘನೆಯ ಪ್ರಕರಣಗಳು ಕಂಡುಬಂದಲ್ಲಿ ಕಬಾಬ್ ತಯಾರಿಸುವವರ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮ 59ರಡಿ 7 ವರ್ಷಗಳಿಂದ ಜೀವಾವಧಿ ಅವಧಿಯ ವರೆಗೆ ಜೈಲು ಶಿಕ್ಷೆಯನ್ನು ಮತ್ತು 10 ಲಕ್ಷ ರೂ.ಗಳ ವರೆಗೆ ದಂಡವನ್ನು ವಿಧಿಸಲಾಗುತ್ತದೆ. ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಕಬಾಬ್‍ನ ಗುಣಮಟ್ಟ ಕೃತಕ ಬಣ್ಣ ಬೆರಸುವಿಕೆಯಿಂದಾಗಿ ಕಳಪೆಯಿಂದ […]
ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ನಡೆದ ದಕ್ಷಿಣ ಭಾರತ ವಲಯ ಮಟ್ಟದ ಚಾಂಪಿಯನ್ಶಿಪ್ -2024 ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ನಮ್ಮ ಮೂಲ್ಕಿ – ಮೂಡುಬಿದಿರೆ ಕ್ಷೇತ್ರದ ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರುವಿನ ಖೋ-ಖೋ ತಂಡ ದ್ವಿತೀಯ ಸ್ಥಾನ ಪಡೆದು ಮಹತ್ವದ ಸಾಧನೆ ಮಾಡಿದಾರೆ ಅವರ ಈ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳು. ಕರ್ನಾಟಕವನ್ನು ಗೌರವದಿಂದ ಪ್ರತಿನಿಧಿಸಿದ ಈ ಯುವ ಕ್ರೀಡಾಪಟುಗಳು ತಮ್ಮ ಶ್ರಮ, ಸಮರ್ಪಣೆ ಮತ್ತು ಕ್ರೀಡಾ ಮನೋಭಾವದಿಂದ ಮಾತ್ರವಲ್ಲದೆ, ರಾಜ್ಯದ ಕ್ರೀಡಾ ಸಾಮರ್ಥ್ಯವನ್ನು ಮೆರೆಯುವಲ್ಲಿ ಸಫಲರಾಗಿದ್ದಾರೆ.
ಮಂಗಳೂರು: ಪಿ.ಎನ್.ಆರ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ತಯಾರಾದ ಪುಷ್ಪರಾಜ್ ರೈ ಮಲಾರಬೀಡು ನಿರ್ದೇಶನದ “ಆರಾಟ” ಕನ್ನಡ ಸಿನಿಮಾ ಭಾರತ್ ಸಿನಿಮಾಸ್ ನಲ್ಲಿ ಬಿಡುಗಡೆಗೊಂಡಿತು.ಶಾಸಕ ರಾಜೇಶ್ ನಾಯ್ಕ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಆರಾಟ ಕನ್ನಡ ಸಿನಿಮಾ ನಮ್ಮ ಸಂಸ್ಕೃತಿಯನ್ನು, ನಮ್ಮ ಪರಂರೆಯನ್ನು ಬಿಂಬಿಸುವ ಸಿನಿಮಾ ಆಗಿದೆ. ಸಿನಿಮಾವನ್ನು ಎಲ್ಲರೂ ವೀಕ್ಷಿಸಿ ಪ್ರೋತ್ಸಾಹಿಸ ಬೇಕೆಂದರು.ಮುಖ್ಯ ಅತಿಥಿ ಕಟೀಲು ಯಕ್ಷಗಾನ ಮೇಳದ ಮುಖ್ಯಸ್ಥ ದೇವಿಪ್ರಸಾದ್ ಶೆಟ್ಟಿ ಶುಭಹಾರೈಸಿದರು.ಸಮಾರಂಭದಲ್ಲಿ ಶಿವಪ್ರಸಾದ್ ಕಂಡೆಲ್ ಕಾರ್, ಶಿವಪ್ರಸಾದ್ಆಳ್ವ, ವಿಜಯಕುಮಾರ್ ಕೊಡಿಯಾಲ್ ಬೈಲ್, ಪ್ರಕಾಶ್ ಪಾಂಡೇಶ್ವರ್, ರವಿ […]
ಮೂಡುಬಿದಿರೆ: ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಅತಿಥ್ಯದಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ರಾಜ್ಯಮಟ್ಟ) ಕಬಡ್ಡಿ ಪಂದ್ಯಾಟದಲ್ಲಿ ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ಮಹಿಳಾ ವಿಭಾಗದಲ್ಲಿ ಉಜಿರೆಯ ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಚಾಂಪಿಯನ್ ಪಟ್ಟವನ್ನು ಗಳಿಸಿವೆ. ಆಳ್ವಾಸ್ ಕಾಲೇಜಿನ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ) ಅಂಕಣದಲ್ಲಿ ನಡೆದ ಪುರುಷರ ಫೈನಲ್‌ನಲ್ಲಿ ಮಂಗಳೂರಿನ ಎ.ಜೆ. ಇನ್ಸ್ಟಿಟ್ಯೂಟ್ […]
ಮಂಗಳೂರು: “ಪಿ.ಎನ್.ಆರ್. ಪ್ರೊಡಕ್ಷನ್ ಬ್ಯಾನರ್ ನಲ್ಲಿ ತಯಾರಾದ “ಆರಾಟ” ಕನ್ನಡ ಸಿನಿಮಾ ಜೂನ್ 21ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ” ಎಂದು ಚಿತ್ರದ ನಿರ್ದೇಶಕ ಪುಷ್ಪರಾಜ್ ರೈ ಮಲಾರಬೀಡು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.“ಮಂಗಳೂರಿನಲ್ಲಿ ಭಾರತ್ ಸಿನಿಮಾಸ್, ಪಿ.ವಿ.ಆರ್, ಸಿನಿಪೊಲಿಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್ , ಕುಂದಾಪುರದಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಭಾರತ್ ಸಿನಿಮಾಸ್, ಸುರತ್ಕಲ್ ಸಿನಿಗ್ಯಾಲಕ್ಸಿ, ಕಾಸರಗೋಡು ಸಿನಿಕೃಷ್ಣ ಮುಂತಾದ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣಲಿದ್ದು ಚಿತ್ರದ ಟೀಸರ್, […]
ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಜಪ್ಪುರವರುಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ಬದ್ರುದ್ದೀನ್ ಕದಂಬಾರ್ ಎನ್ನುವವರು ಕಾಸರಗೋಡುಜಿಲ್ಲೆಯ ಮಂಜೇಶ್ವರದಲ್ಲಿ ಹೆಂಡತಿ, ಮಕ್ಕಳ ಜೊತೆ ವಾಸವಾಗಿದ್ದು ಮದುವೆ ಮಾರಂಭಗಳಿಗೆ ಜ್ಯೂಸ್ತಯಾರಿಸಿ ಕೊಡುವ ಕೆಲಸ ಮಾಡಿಕೊಂಡಿರುತ್ತಾರೆ. ಇವರು ಈ ಹಿಂದೆ ಸುಮಾg 25 ವರ್ಷಗಳ ಕಾಲಸೌದಿ ಅರೇಬಿಯ ದೇಶದಲ್ಲಿ ಕೆಲಸ ಮಾಡಿದ್ದರಿಂದ ಅಲ್ಲಿನ ಬಹುತೇಕ ಪ್ರದೇಶಗಳ ಪರಿಚಯವಿದ್ದುಅರೇಬಿಕ್ ಭಾಷೆ ಬಲ್ಲವರಾಗಿರುತ್ತಾರೆ. ಸುಮಾರು ಒಂದು ವರ್ಷದ ಹಿಂದೆ ಇವರ ಪರಿಚಯದಅತ್ತಾವರದ ನಿವಾಸಿ ಅಜ್ಯಾದ್ ಟ್ರಾವೆಲ್ಸ್‌ನ ಮಾಲಕರಾದ ಇಕ್ಬಾಲ್‌ರವರು ಇವರಿಗೆ […]