
ನಡ್ಯೋಡಿದ ನಂದಲ ತುಳು ಭಕ್ತಿ ಸುಗಿಪು ಅತೀ ಶೀಘ್ರದಲ್ಲಿ ನಿಮ್ಮಎಮ್ ಡಿಬಿ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳ್ಳಲಿದೆ.
ಮಂಗಳೂರು: ಬಿಹಾರ ಮೂಲದ ಪ್ರೇಮ್‌ಜಿತ್ ಅಲಿಯಾಸ್ ಪಂಕಜ್ ಕುಮಾರ್ ಎಂಬ 14 ವರ್ಷದ ಬಾಲಕನು ಸೋಮವಾರ ಮಧ್ಯಾಹ್ನ 2.30 ರ ವೇಳೆಗೆ ಮನೆಯಲ್ಲಿ ಯಾರಿಗೂ ಹೇಳದೇ ಮನೆಬಿಟ್ಟು ಹೋದವನು ಮರಳಿ ಬಾರದೇ ಕಾಣೆಯಾಗಿದ್ದಾನೆ.ಬಾಲಕನ ಗುರುತು ಚಹರೆಯು ಸುಮಾರು 5 ಅಡಿ 7 ಇಂಚು ಎತ್ತರವಿದ್ದು, ಗೋಧಿ ಮೈಬಣ್ಣ, ಕುತ್ತಿಗೆಯಲ್ಲಿ ಕೆಂಪು ಬಣ್ಣದ ದಾರ ಮತ್ತು ತಾಯತವಿದ್ದು, ಎಡಕೈನಲ್ಲಿ ಲೋಹದ ಖಡಗ ಧರಿಸಿರುತ್ತಾನೆ. ಬಲ ತೊಡೆಯಲ್ಲಿ ಹಳೆಯ ಶಸ್ತç ಚಿಕೆತ್ಸೆಯ ಗುರುತಿದೆ. ಕಪ್ಪು ಚೌಕುಳಿಗಳಿರುವ ಹಳದಿ ಬಣ್ಣದ ಶರ್ಟ್, […]
ಮೂಡುಬಿದಿರೆ: 25 ವರ್ಷಗಳ ಕಂಬಳ ಕ್ಷೇತ್ರದ ಸಾಧನೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಇರುವೈಲು ಪಾಣಿಲ ಸತೀಶ್ಚಂದ್ರ ಸಾಲ್ಯಾನ್ ಅವರಿಗೆ ಇರುವೈಲು ಪಾಣಿಲ ಅಭಿಮಾನಿ ಬಳಗದ ವತಿಯಿಂದ ನಾಳೆ ಸಂಜೆ 7 ಗಂಟೆಗೆ ಮೂಡುಬಿದಿರೆಯ ಕನ್ನಡ ಭವನದಲ್ಲಿ ಸನ್ಮಾನ ನಡೆಯಲಿದೆ. ಸನ್ಮಾನದ ಬಳಿಕ ‘ ಶಿವದೂತೆ ಗುಳಿಗೆ’ ನಾಟಕ ಪ್ರದರ್ಶನಗೊಳ್ಳಲಿದೆ.
ಮೂಡುಬಿದಿರೆ: ಮಾಜಿ ಸಚಿವ ಕೆ ಅಮರನಾಥ ಶೆಟ್ಟಿ ಅವರ ಕಿರಿಯ ಸಹೋದರ, ವಿಜಯಬ್ಯಾಂಕ್ ನ ನಿವೃತ್ತ ಅಧಿಕಾರಿ ರತ್ನಾಕರ ಶೆಟ್ಟಿ ಮುಂಡ್ರುದೆಗುತ್ತು (70) ಅವರು ಡಿ. ಇಂದು ಬೆಂಗಳೂರಿನ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಮತ್ತು ಪುತ್ರಿಯನ್ನು ಅಗಲಿದ್ದಾರೆ. ಪಾಲಡ್ಕ ಮೂಡುಬಿದಿರೆ ಮಹಾವೀರ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಬಳಿಕ ವಿಜಯ ಬ್ಯಾಂಕ್ ನಲ್ಲಿ ಉದ್ಯೋಗಕ್ಕೆ ಸೇರಿದ ಅವರು ವಿವಿಧ ಶಾಖೆಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದರು. ಸಾಮಾಜಿಕ ಚಟುವಟಿಕೆಗಳಲ್ಲಿ ಅವರು ಸಕ್ರಿಯರಾಗಿದ್ದರು.ಅಣ್ಣ ಅಮರನಾಥ ಶೆಟ್ಟರ ನಿಧನದ ಬಳಿಕ […]
ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವ ಸಂದರ್ಭ ಗ್ದಾಮಸ್ಥರು ಓಡಾಡುವ ಸಂಪರ್ಕ ರಸ್ತೆಯನ್ನು ಮುಚ್ಚದೆ ಗ್ರಾಮೀಣ ರಸ್ತೆಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಅಲ೦ಗಾರು ಪೋಯ್ಯೆದಪಲ್ಕೆ, ಕಾನ, ಅ೦ಬೂರಿ, ಮ೦ಜನಕಟ್ಟೆ,ಬೆಳುವಾಯಿ, ಗ್ರಾಮದ ಗ್ರಾಮಸ್ಥರು ಬುಧವಾರ ಪೋಯ್ಯದಪಲ್ಕೆ ಎಂಬಲ್ಲಿ ಪ್ರತಿಭಟನೆ ನಡೆಸಿದರು.ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಇಂತಹ ಫೈ ಓವರ್‌ಗಳ ಕಾಮಗಾರಿಗಳು ಜನರಿಗೆ ತೊಂದರೆಯಾಗುತ್ತಿವೆ. ಈ ಮಾರ್ಗಕ್ಕೆ ಅಂಡರ್‌ಪಾಸ್ ಮಾರ್ಗವನ್ನಾದರೂ ನಿರ್ಮಿಸಿ ಕೊಡಬೇಕು. ಸಂಪೂರ್ಣವಾಗಿ ಈ ರಸ್ತೆ ಮುಚ್ಚಬಾರದು. ಇಂತಹ ಅನ್ಯಾಯದ ವಿರುದ್ಧ ಹೋರಾಡಲು ಮೂಡುಬಿದಿರೆಯ ಜನತೆ […]
ಮೂಡುಬಿದಿರೆ: ಬಾನಂಗಳದಲ್ಲಿ ಸಿಡಿಮದ್ದುಗಳ ಚಿತ್ತಾರ, ವೇದಘೋಷಗಳ ನಿನಾದ, ಭಜನೆಗಳು, ಪುಷ್ಪ ಪಲ್ಲಕ್ಕಿಗಳು, ಪ್ರೇಕ್ಷಕರ ಜಯ ಘೋಷ ಹಾಗೂ ಮಂಗಳವಾದ್ಯಗಳೊಂದಿಗೆ ಸಾಂಸ್ಕೃತಿಕ ರಥ ಎಡದಿಂದ ಬಲಕ್ಕೆ ಸಂಚರಿಸಿ ಸ್ವಸ್ಥಾನಕ್ಕೆ ಮರಳಿ, ಧ್ವಜ ಅವರೋಹಣದೊಂದಿಗೆ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘೩೦ನೇ ವಿರಾಸತ್’ನ ಸಾಂಸ್ಕೃತಿಕ ಕಾರ‍್ಯಕ್ರಮಗಳಿಗೆ ಶನಿವಾರ ರಾತ್ರಿ ತೆರೆ ಬಿತ್ತು.ಲೋಕ ಮಾರ್ಗದರ್ಶಕರಾದ ರಾಮ-ಕೃಷ್ಣರ ಮೂರ್ತಿ ಪ್ರತಿಷ್ಠಾಪಿಸಿದ ಸಾಂಸ್ಕೃತಿಕ ರಥವನ್ನು ಮುಖ್ಯ ವೇದಿಕೆಯ ಮುಂಭಾಗದಲ್ಲಿ ಎಡದಿಂದ ಬಲಕ್ಕೆ ಎಳೆಯಲಾಯಿತು.ಇದಕ್ಕೂ ಮೊದಲು ಸಣ್ಣ ರಥದಲ್ಲಿ ಗಣಪತಿ, ಪಲ್ಲಕ್ಕಿಯಲ್ಲಿ ಶಕ್ತಿ ಮತ್ತು ಭಕ್ತಿಯ ಪ್ರತೀಕವಾಗಿ […]
ಮೂಡುಬಿದಿರೆ: ತಾಲೂಕಿನ ಹೊಸಬೆಟ್ಟು ಗ್ರಾಮದ ಪಂಜಿರೇಲು ಕಾಯರ್‌ದ ಬಾಕ್ಯಾರ್ ಗಡುಪಡು ಸ್ಥಳದಲ್ಲಿ ಡಿಸೆಂಬರ್ ದೊಂಪದ ಬಲಿ ನಡೆಯಲಿದ್ದು, ಆ ದಿನ ಸಂಜೆ ಗಂಟೆ ೬ ಕ್ಕೆ ಸರಿಯಾಗಿ ಹೊಸಬೆಟ್ಟು ಗುತ್ತುವಿನಿಂದ ಕೊಡಮಣಿತ್ತಾಯ ಭಂಡಾರ ಹಾಗೂ ಬಾಂದೊಟ್ಟು ಬರ್ಕೆಯಿಂದ ದೈವ ಕುಮಾರನ ಭಂಡಾರ ಬರಲಿದೆ. ಹಾಗೂ ರಾತ್ರಿ ೧೨ ಗಂಟೆಗೆ ಮಹಾಮ್ಮಾಯಿ ದೇವಿಗೆ ಗದ್ದಿಗೆ ಪೂಜೆ ಹಾಗೂ ರಾತ್ರಿ ೧೨ ರಿಂದ ಮಹಾಮ್ಮಾಯಿ ದೇವಿಗೆ ಗದ್ದಿಗೆ ಪೂಜೆ ನಡೆಯಲಿದೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ ವ್ಯಾಪಕ ಮಳೆಯಾಗುತ್ತಿದ್ದು ಅರೆಂಜ್ ಅಲರ್ಟ್ ಘೋಷಣೆಯಾದ ಹಿನ್ನಲೆ ಮುಂಜ್ರಾಗತ ಕ್ರಮವಾಗಿ ದಕ್ಷಿಣ ಕನ್ನಡದ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಥಾಮಿಕ,ಫ್ರೌಡ, ಶಾಲೆ, ಹಾಗೂ ಪದವಿ ಪೂರ್ವ(12ನೇ ತರಗತಿ)ಯವರೆಗೆ ರಜೆಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಘೋಷಿಸಿದ್ದಾರೆ.ಭಾರತೀಯ ಹವಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂದತೆ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ತೀವ್ರ ಮಳೆಯಾಗುವ ಸಾಧ್ಯತೆ ಇರುವುದರಿಂದ ಎಲ್ಲಾ […]
ಮೂಡುಬಿದಿರೆ: ಜಾನಪದ ಕ್ರೀಡೆ ಕಂಬಳ ನಮ್ಮ ಹೆಮ್ಮೆಯ ಕ್ರೀಡೆ. ಇಲ್ಲಿ ತೀರ್ಪುಗಾರರು ಪಾರದರ್ಶಕವಾಗಿ ಕೆಲಸ ಮಾಡಬೇಕು ಈ ನಿಟ್ಟಿನಲ್ಲಿ ಅವರು ನೀಡುವ ತೀರ್ಪುಗಾರರು ನೀಡುವ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಜಿಲ್ಲಾ ಕಂಬಳ ಸಮಿತಿಯ ಸಭೆಯಲ್ಲಿ ನಿರ್ಣಯಿಸಲಾಗಿದೆ.ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಒಂಟಿಕಟ್ಟೆಯ ಸೃಷ್ಠಿ ಗಾರ್ಡನ್ ನಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.ಈ ಬಗ್ಗೆ ಮಾತನಾಡಿದ ದೇವಿ ಪ್ರಸಾದ್ ಶೆಟ್ಟಿ ಅವರು ತೀರ್ಪುಗಾರರು ನೀಡುವ ತೀರ್ಪಿನ ಬಗ್ಗೆ ಕಂಬಳ ಆಯೋಜಕರು, ಕೋಣಗಳ […]
ಮಂಗಳೂರು: ಕರಾವಳಿ ಭಜನಾ ಸಂಸ್ಕಾರ ವೇದಿಕೆ ಮಂಗಳೂರು ಇದರ ದಕ್ಷಿಣ ಕನ್ನಡ ಜಿಲ್ಲಾ ವಿಶೇಷ ಸಭೆಯನ್ನು ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಮೂಡುಶೆಡ್ಡೆ ಯವರ ಅಧ್ಯಕ್ಷತೆಯಲ್ಲಿ ಬಂಟ್ಸ್ ಹಾಸ್ಟೆಲ್ ಸಭಾಭವನ ಭಾನುವಾರ ನಡೆಯಿತುಸಭೆಯಲ್ಲಿ ಸಂಘಟನೆಯ ಉದ್ದೇಶದ ಬಗ್ಗೆ ಮತ್ತು ಬೈಲಾ ದ ಬಗ್ಗೆ ಸಂಘಟನೆಯ ಗೌರವ ಸಲಹೆಗರರಾದ ನರೇಶ್ ಕುಮಾರ್ ಸಸಿಹಿತ್ಲು ಇವರು ಪ್ರಾಸ್ತಾವಿಕ ಮಾತನಾಡಿದರು.ಸಂಘಟನೆಯ ಗೌರವಾಧ್ಯಕ್ಷ ರಮೇಶ್ ಕಲ್ಮಾಡಿ ಮಾತನಾಡಿ,ಭಜನಾ ಸ್ಪರ್ಧೆಯ ಬಗ್ಗೆ ಚೌಕಟ್ಟು ಯಾಕೆ ಬೇಕು ಎನ್ನುವ ಬಗ್ಗೆ ಮಾಹಿತಿ ನೀಡಿದರು.ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಪೂಜಾರಿ […]