
ಮೂಡುಬಿದಿರೆ: ಭಜನೆ ಮಾಡುವುದರಿಂದಾಗಿ ಮಕ್ಕಳಲ್ಲಿ ಜ್ಞಾನವೃದ್ಧಿ ಆಗುವುದು ಹಾಗೂ ಕುಣಿತ ಭಜನೆಯಿಂದಾಗಿ ದೈಹಿಕವಾಗಿಯೂ ಸದೃಢರಾಗುತ್ತಾರೆ. ಭಜನಾ ಕಾರ್ಯಕ್ರಮದ ಜೊತೆಗೆ ಸಂಸ್ಕಾರಯುತ ಶಿಕ್ಷಣವನ್ನು ಕೊಡುವುದು ಅಗತ್ಯವಿದೆ ಎಂದು ಮೂಡುಬಿದಿರೆ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತು ಅಧ್ಯಕ್ಷ ಲಕ್ಷ್ಮಣ ಸುವರ್ಣ ಹೇಳಿದರು.ಅವರು ಪಣಪಿಲದಲ್ಲಿ ನಡೆದ ಭಜನಾ ಮಂಡಳಿಯ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ ಅಳಿಯೂರು ಮಾಹಿತಿ ನೀಡಿದರು.ಭಜನಾ ತರಬೇತಿ ಗುರುಗಳಾದ ನಾಗೇಶ್ ನೆರಿಯ ,ಅಭಿಷೇಕ್ ಚಾರ್ಮಾಡಿ ಭಜನಾ ತರಬೇತಿ […]
ಮೂಡುಬಿದಿರೆ: ಇಲ್ಲಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಕೇಂದ್ರದಲ್ಲಿ ‘ಲಾಸಿಕ್ ಲೇಸರ್ ಕಣ್ಣಿನ ಉಚಿತ ತಪಾಸಣಾ ಶಿಬಿರ’ವು ಎಪ್ರಿಲ್ 19, ಶನಿವಾರದಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರ ವರೆಗೆ ನಡೆಯಲಿದೆ.18 ವರ್ಷ ಪ್ರಾಯದಿಂದ ಸುಮಾರು 40 ವರ್ಷ ಪ್ರಾಯದವರೆಗಿನವರಿಗೆ ಮಾಡಬಹುದಾದ ಅತ್ಯಾಧುನಿಕ ಲೇಸರ್ ಚಿಕಿತ್ಸೆಯ ಮೂಲಕ ಕನ್ನಡಕ ಮತ್ತು ಕಾಂಟಾಕ್ಟ್ ಲೆನ್ಸ್‌ನಿಂದ ಮುಕ್ತಿ ಹೊಂದಬಹುದಲ್ಲದೇ ಈ ಚಿಕಿತ್ಸೆಯಿಂದ 5 ನಿಮಿಷಗಳಲ್ಲಿ ಪರಿಶುದ್ಧವಾದ ದೃಷ್ಟಿಯನ್ನು ಪಡೆಯಬಹುದು. ಚಿಕಿತ್ಸೆಯ ನಂತರ ಕೂಡಲೇ ರೋಗಿಯು ತನ್ನೆಲ್ಲಾ ದೈನಂದಿನ ಚಟುವಟಿಕೆಗಳನ್ನು […]
ಮೂಡುಬಿದಿರೆ: ವಿಶ್ವಪ್ರವಾದಿ ಮುಹಮ್ಮದ್ ಮುಸ್ತಫಾ ( ಸ.ಅ.) ಅವರ ಸಂದೇಶಗಳನ್ನು , ಹಿರಿಯರು ,ಉಲೆಮಾ -ಉಮರಾಗಳ ಮಾತುಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಹೋದಲ್ಲಿ ಸರ್ವಜನರ ಪ್ರೀತಿಗೆ ಪಾತ್ರರಾಗಲು ಮತ್ತು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ’ ಎಂದು ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಅವರು ಹೇಳಿದರು.ಮೂಡುಬಿದಿರೆ ಸಮೀಪದ ಪುಚ್ಚಮೊಗರು ಎಲಿಯಾ ದರ್ಗಾದ ಉರೂಸ್ ಸಮಾರಂಭ ಪ್ರಯುಕ್ತ ಹಮ್ಮಿಕೊಂಡಿದ್ದ ಸರ್ವಧರ್ಮ ಸೌಹಾರ್ದ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಯುವಜನತೆ ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಬೇಕು, ಹಿಂದೆಲ್ಲಾ ಯಾವುದೇ […]
ಮೂಡುಬಿದಿರೆ: ಭಗವಾನ್ ಶ್ರೀ ಮಹಾವೀರ ಸ್ವಾಮಿಯ, 2624ನೇ ಜನ್ಮ ಕಲ್ಯಾಣ ಮಹೋತ್ಸವ, ಮಹಾವೀರ ಜಯಂತಿಯ ದಿನವಾದ ಗುರುವಾರ ಸಂಜೆ ಬೆಟ್ಕೇರಿಯಿಂದ ಸಾವಿರ ಕಂಬದ ಬಸದಿ ವರೆಗೆ ಮಹಾವೀರ ಸ್ವಾಮಿಯ ವೈ ಭವದ ಮೆರವಣಿಗೆಯು ನಡೆಯಿತು. ಜೈನ ಮಠದ ಭಟ್ಟಾರಕ ಚಾರುಕೀತಿ೯ ಪಂಡಿತಾಚಾಯ೯ವಯ೯ ಸ್ವಾಮೀಜಿ ಮೆರವಣಿಗೆಗೆ ಚಾಲನೆಯನ್ನು ನೀಡಿದರು. ಮಹಾವೀರ ಸ್ವಾಮಿಯ ಮೂತಿ೯ ಮತ್ತು ಧವಳಗ್ರಂಥಗಳನ್ನು ಮೆರವಣಿಗೆಯಲ್ಲಿ ಹೊತ್ತು ತರಲಾಯಿತು.ನಂತರ 125 ಮಂದಿಯಿಂದ ಸಾಮೂಹಿಕ ಅಷ್ಟ ವಿಧಾಚ೯ನೆ ಸೇವೆ ನಡೆಯಿತು.ವಕೀಲ ಎಂ. ಬಾಹುಬಲಿ ಪ್ರಸಾದ್, ಪಟ್ಣಶೆಟ್ಟಿ ಎಂ. ಸುದೇಶ್ […]
ಮೂಡುಬಿದಿರೆ: ತಾಲೂಕಿನ ರಾಷ್ಟೀಯ ಹಬ್ಬಗಳ ಆಚರಣ ಸಮಿತಿ ಆಶ್ರಯದಲ್ಲಿ ತಾಲೂಕು ಆಡಳಿತ ಸೌಧದಲ್ಲಿ ಗುರುವಾರ ನಡೆದ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಮಹಾವೀರರ ಭಾವಚಿತ್ರದೆದುರು ದೀಪ ಬೆಳಗಿಸಿ ಮೂಡುಬಿದಿರೆ ಶ್ರೀ ಜೈನ ಮಠಾಧೀಶ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಉದ್ಘಾಟಿಸಿದರು.ನಂತರ ಸಂದೇಶ ನೀಡಿದ ಸ್ವಾಮೀಜಿಭಗವಾನ್ ಮಹಾವೀರರು ಬದುಕು ಬದುಕಲು ಬಿಡು ಎಂಬ ತತ್ವ ಸಾರಿದವರು. ಇವತ್ತಿಗೂ ಭಗವಾನ್ ಮಹಾವೀರರ ಸಂದೇಶಗಳು ಪ್ರಸ್ತುತವಾಗಿದೆ. ಅಹಿಂಸೋ ಪರಮೋ ಧರ್ಮ ಎಂಬ ಸಂದೇಶವನ್ನು ಮನೆ-ಮನಗಳಿಗೆ ಮುಟ್ಟಿಸುವ ಕೆಲಸ ಮಾಡೋಣ ಎಂದ ಅವರು […]
ಮೂಡುಬಿದಿರೆ : ಆಳ್ವಾಸ್ ಪಿಯು ಕಾಲೇಜಿನ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಗಳಲ್ಲಿ ಒಟ್ಟು 45 ವಿದ್ಯಾರ್ಥಿಗಳು ರಾಜ್ಯದ ಪ್ರಥಮ 10 ರ‍್ಯಾಂಕ್‌ಗಳಲ್ಲಿ ಸ್ಥಾನವನ್ನು ಪಡೆಯುವ ಮೂಲಕ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಸಾರ್ವತ್ರಿಕ ದಾಖಲೆಯನ್ನು ನಿರ್ಮಿಸಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ವಿಜ್ಞಾನ ವಿಭಾಗದಲ್ಲಿ ಸಂಸ್ಥೆಯ ಬಿಂದು ನವಲೆ, ರಾಜ ಯದು ವಂಶಿ ಯಾದವ್ ಹಾಗೂ ವಿಜೇತ್ ಜಿ ಗೌಡ 598 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ […]
ಮೂಡುಬಿದಿರೆ: ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಇಟಲ ದರೆಗುಡ್ಡೆ ಇದರ ಬ್ರಹ್ಮಕಲಶೋತ್ಸವದ ಚಪ್ಪರ ಮುಹೂತ೯ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ ಕಾಯ೯ಕ್ರಮವು ಸೋಮವಾರ ನಡೆಯಿತು.ಉದ್ಯಮಿ ರಮಾನಂದ ಸಾಲ್ಯಾನ್ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಕೆ. ನರಸಿಂಹ ತಂತ್ರಿ ಹಾಗೂ ರಾಘವೇಂದ್ರ ತಂತ್ರಿ ಮತ್ತು ಅಸ್ರಣ್ಣರಾದ ನಾಗರಾಜ್ ಭಟ್ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳೊಂದಿಗೆ ಚಪ್ಪರ ಮುಹೂರ್ತ ನೆರವೇರಿತು. ಕಾತಿ೯ಕ್ ಶಿತಾ೯ಡಿ ಅವರು ಕ್ಷೇತ್ರದ ಬಗ್ಗೆ ರಚಿಸಿರುವ ಹಾಡಿನ ಪೋಸ್ಟರ್ ನ್ನು ಇದೇ ಸಂದಭ೯ದಲ್ಲಿ […]
ಮೂಡುಬಿದಿರೆ: ದರೆಗುಡ್ಡೆ ಗ್ರಾಮ ಪಂಚಾಯತ್ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಶೇ 25 ಅನುದಾನದಲ್ಲಿ ಸುಮಾರು 25 ಫಲಾನುಭವಿಗಳಿಗೆ ನೀರಿನ ಟ್ಯಾಂಕ್ ನ್ನು ವಿತರಿಸಲಾಯಿತು.ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಉಪಾಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿ ರಾಜು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮೂಡಬಿದಿರೆ: ತಾಲೂಕಿನ ಹಿಂದು ಮುಖಂಡನ ಮನೆಯಿಂದಲೇ ದನ ಕಳ್ಳತನ ವಾರದೊಳಗೆ ಆರೋಪಿಗಳನ್ನ ಬಂಧಿಸದಿದ್ದರೆ ಹಿಂಜಾವೇ ಯಿಂದ ಪ್ರತಿಭಟನೆ ನಡೆಸುವುದಾಗಿ ಹಿಂ.ಜಾ. ವೇದಿಕೆಯ ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ದರೆಗುಡ್ಡೆ ಎಚ್ಚರಿಸಿದ್ದಾರೆಮೂಡಬಿದಿರೆಯ ಬೆಳುವಾಯಿ ಹಿಂದು ಮುಖಂಡರಾದ ಸೋಮನಾಥ್ ಕೋಟ್ಯಾನ್ ರವರ ಮನೆಯ ಹಟ್ಟಿಯಿಂದಲೇ ದನ ಕಳ್ಳತನ ಮಾಡಿದ ಪ್ರಕರಣ ನಡೆದಿದ್ದು ಇದೊಂದು ಗಂಭೀರ ಪ್ರಕರಣವಾಗಿದ್ದು ಇದನ್ನು ಹಿಂದೂ ಜಾಗರಣ ವೇದಿಕೆ ಮೂಡಬಿದ್ರೆ ತಾಲೂಕು ತೀವ್ರವಾಗಿ ಖಂಡಿಸುತ್ತದೆ ಕಳೆದ ಕೆಲವು ತಿಂಗಳುಗಳಿಂದ ದನ ಕಳ್ಳತನದ ಪ್ರಕರಣಗಳು ಹೆಚ್ಚಾಗಿದ್ದು ಈ […]
ಮೂಡುಬಿದಿರೆ: ದರೆಗುಡ್ಡೆ ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವದ ಲೋಗೊವನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ತಿಮ್ಮಯ್ಯ ಶೆಟ್ಟಿ ಮತ್ತು ಕಾರ್ಯಾಧ್ಯಕ್ಷ ಸಂತೋಷ್ ಕೆ. ಪೂಜಾರಿ ಬುಧವಾರ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಿದರು.ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಸುಕೇಶ್ ಶೆಟ್ಟಿ ಎದಮೇರು ಮಾತನಾಡಿ, ಇಟಲ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಪಣಪಿಲ ಅರಮನೆಯ ಪಟ್ಟದ ದೇವರಾಗಿದ್ದು 9 ಮಾಗಣೆಗಳ ಗ್ರಾಮವನ್ನು ಹೊಂದಿರುತ್ತದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಊರವರ ಸಹಕಾರದೊಂದಿಗೆ ದೇವಸ್ಥಾನವನ್ನು ಶಿಲಾಮಯವಾಗಿ […]