Category: Manglore

  • ಮೂಡುಬಿದಿರೆಯಲ್ಲಿ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ “ಪ್ರಸಾದ್ ನೇತ್ರಾಲಯ” ಉದ್ಘಾಟನೆ

    ಮೂಡುಬಿದಿರೆಯಲ್ಲಿ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ “ಪ್ರಸಾದ್ ನೇತ್ರಾಲಯ” ಉದ್ಘಾಟನೆ

    ಮೂಡುಬಿದಿರೆ: ಕರಾವಳಿ ಕರ್ನಾಟಕದ ಕಣ್ಣಿನ ಆಸ್ಪತ್ರೆಗಳ ದೊಡ್ಡ ನೆಟ್‌ವರ್ಕ್ ಹೊಂದಿರುವ ಪ್ರಸಾದ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ 10ನೇ ಸುಸಜ್ಜಿತ ಚಿಕಿತ್ಸಾ ಕೇಂದ್ರ ಆಸ್ಪತ್ರೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಹಾಗೂ ಸಭಾ ಕಾರ್ಯಕ್ರಮವನ್ನು  ಮೂಡುಬಿದಿರೆ ಶ್ರೀ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರು ಭಾನುವಾರ ಮೂಡುಬಿದಿರೆಯ ಬಡಗ ಬಸದಿ ಎದುರಿನ ಫಾರ್ಚೂನ್-2 ಕಟ್ಟಡದಲ್ಲಿ ಉದ್ಘಾಟಿಸಿದರು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಾಚಿಸಿ ಮಾತನಾಡಿದ ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿ, ಆಧ್ಯಾತ್ಮಿಕ ಕೇಂದ್ರವಾದ ಮೂಡುಬಿದಿರೆಯಲ್ಲಿ […]

    Continue Reading

  • ಅನಾರೋಗ್ಯ ಪೀಡಿತರಿಗಾಗಿ  ಮಿಡಿಯುತ್ತಿದ್ದ ಹೃದಯ ಇನ್ನಿಲ್ಲ

    ಅನಾರೋಗ್ಯ ಪೀಡಿತರಿಗಾಗಿ  ಮಿಡಿಯುತ್ತಿದ್ದ ಹೃದಯ ಇನ್ನಿಲ್ಲ

    ಮೂಡುಬಿದಿರೆ:  ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಸ್ಪಂದಿಸುತಿದ್ದ ಯುವಕ, ಇತ್ತೀಚೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮೂಡುಬಿದಿರೆ ಕಡೆಪಲ್ಲ ನಿವಾಸಿ ವಿಜೇಶ್ ನಿನ್ನೆ ರಾತ್ರಿ ನಿಧನರಾಗಿದ್ದಾರೆ.ಬ್ರಹ್ಮಕಲಶ, ಕಂಬಳ ಹಾಗೂ ಜಾತ್ರೆಗಳ  ಸಂದಭ೯ಗಳಲ್ಲಿ ವಿವಿಧ ರೀತಿಯ ವೇಷ ಹಾಕಿ ಅನಾರೋಗ್ಯ ಪೀಡಿತರಿಗೆ ಮಿಡಿಯುತ್ತಿದ್ದ ಹೃದಯ ಇನ್ನಿಲ್ಲ.  ವಿಜೇಶ್ ಅವರಿಗೆ ಕಳೆದ 10 ದಿನಗಳ ಹಿಂದೆ ಎದೆನೋವು ಕಾಣಿಸಿಕೊಂಡಿದ್ದು ಸ್ಟ್ರೋಕ್ ಆಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಇದೇ ಸಂದಭ೯ದಲ್ಲಿ ಬಿಪಿ ಮತ್ತು ಕಿಡ್ನಿಯ ಸಮಸ್ಯೆಯು ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆಗೆ  ಸ್ಪಂದಿಸದೇ ನಿನ್ನೆರಾತ್ರಿ ನಿಧನರಾಗಿದ್ದಾರೆ.ವಿಜೇಶ್ ಅವರ  ತಂದೆ […]

    Continue Reading

  • ಅಪ್ರಾಪ್ತ ಬಾಲಕಿಯರೀವ೯ರಿಗೆ ಲೈಂಗಿಕ ಕಿರುಕುಳ : ಯುವಕ ಹಾಗೂ ಮಧ್ಯವಯಸ್ಕನ ವಿರುದ್ಧ ಪೊಕ್ಸೋ ಕೇಸ್  ದಾಖಲು

    ಅಪ್ರಾಪ್ತ ಬಾಲಕಿಯರೀವ೯ರಿಗೆ ಲೈಂಗಿಕ ಕಿರುಕುಳ : ಯುವಕ ಹಾಗೂ ಮಧ್ಯವಯಸ್ಕನ ವಿರುದ್ಧ ಪೊಕ್ಸೋ ಕೇಸ್  ದಾಖಲು

    ಮೂಡುಬಿದಿರೆ : ಎರಡು ಪ್ರಕರಣಗಳಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರೀವ೯ರಿಗೆ  ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕ  ಮತ್ತು ಮಧ್ಯ ವಯಸ್ಸಿನ ವ್ಯಕ್ತಿ ಸಹಿತ ಇಬ್ಬರನ್ನು ಮೂಡುಬಿದಿರೆ ಪೊಲೀಸರು ಮಂಗಳವಾರ ಬಂಧಿಸಿ ಪೊಕ್ಸೋ ಪ್ರಕರಣ ದಾಖಲಿಸಿದ್ದಾರೆ.  ಪ್ರಾಂತ್ಯ ಗ್ರಾಮದ ಅಜಂಕಲ್ಲುವಿನ ನಿವಾಸಿ ಪ್ರಕಾಶ್ (57) ಹಾಗೂ ಆಲಂಗಾರು ಉಮಿಯದ ಪವನ್ (19) ಎಂಬವರು ಬಂಧಿತ ಆರೋಪಿಗಳು.  ಪ್ರಾಂತ್ಯ ಅಜಂಕಲ್ಲುವಿನ ಪ್ರಕಾಶ್ ಎಂಬಾತ ತನ್ನ ಮನೆಯ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಬಾಲಕಿಯ ಮನೆಗೆ ಯಾರೂ ಇಲ್ಲದಾಗ ಕಳೆದ ಒಂದು ವಷ೯ದಿಂದ […]

    Continue Reading

  • ನಾಳೆಯಿಂದ ಮಾ. 19ರವರೆಗೆ ಇರುವೈಲು ವರ್ಷಾವಧಿ ಜಾತ್ರಾ ಮಹೋತ್ಸವ

    ನಾಳೆಯಿಂದ ಮಾ. 19ರವರೆಗೆ ಇರುವೈಲು ವರ್ಷಾವಧಿ ಜಾತ್ರಾ ಮಹೋತ್ಸವ

    ಮೂಡುಬಿದಿರೆ: ಇರುವೈಲು ಶ್ರೀ  ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಮಹಾ ರಥೋತ್ಸವವು ಮಾರ್ಚ್ 11ರ ಮಂಗಳವಾರ  ಮೊದಲ್ಗೊಂಡು 19 ರ  ಬುಧವಾರದವರೆಗೆ ನಡೆಯಲಿದೆ.11ರ ಮಂಗಳವಾರ ಬೆಳಿಗ್ಗೆ 9ಗಂಟೆಗೆ ಕುಂಟ ಮುಹೂರ್ತ.13ರ ಗುರುವಾರ ಬೆಳಿಗ್ಗೆ ನಾಗದೇವರ ಸಾನಿಧ್ಯದಲ್ಲಿ ತಂಬಿಲ ಸೇವೆ, ಮಹಾಪೂಜೆ, ಸಂಜೆ 6 ಗಂಟೆಗೆ ಅಂಕುರಾರೋಪಣ, ಉತ್ಸವ ಬಲಿ.14ರ ಶುಕ್ರವಾರ ಬೆಳಿಗ್ಗೆ 8ರಿಂದ ಕಲಶ ಪ್ರಧಾನ ಹೋಮ,12-05ಕ್ಕೆ ಧ್ವಜಾರೋಹಣ, ಮಧ್ಯಾಹ್ನ ಅನ್ನ ಸಂತರ್ಪಣೆ,ಉತ್ಸವ ಬಲಿ, ಕಂಚಿಲಾಲೆ. ರಾತ್ರಿ 9:30 ರಿಂದ ಇರುವೈಲು  ದುರ್ಗಾಪರಮೇಶ್ವರಿ ಯಕ್ಷಗಾನ […]

    Continue Reading

  • ಮಾರ್ಚ್ 11 ರಿಂದ15 ರವರೆಗೆ ಅಂಬಾಡಬೆಟ್ಟು ವರ್ಷಾವಧಿ ಜಾತ್ರೆ ಆರಂಭ

    ಮಾರ್ಚ್ 11 ರಿಂದ15 ರವರೆಗೆ ಅಂಬಾಡಬೆಟ್ಟು ವರ್ಷಾವಧಿ ಜಾತ್ರೆ ಆರಂಭ

    ಮೂಡುಬಿದಿರೆ: ಶ್ರೀ ಕ್ಷೇತ್ರ ಅಂಬಾಡಬೆಟ್ಟು ಹೊಸಬೆಟ್ಟುವಿನ ವರ್ಷಾವಧಿ ಜಾತ್ರೆಯು ಮಾರ್ಚ್ 11ರಿಂದ 15 ರವರೆಗೆ ನಡೆಯಲಿದೆ.ಮಾರ್ಚ್  11 ರಂದು ಸತ್ಯನಾರಾಯಣ ಪೂಜೆ ನಡೆಯಲಿದ್ದು, 12 ರಂದು ಶ್ರೀ ದೈವ ಧರ್ಮರಸು ದೈವ ಕುಮಾರ ದೇವತೆಯ ನೇಮೋತ್ಸವ, 13 ರಂದು ಕೊಡಮಣಿತ್ತಾಯ ದೈವದ ನೇಮ ಹಾಗೂ 14,ರಂದು ಕೊಡಮಣಿತ್ತಾಯ ದೈವದ ಕಡೆ ಓಕುಲಿ ಬಲಿ ,15 ರಂದು ಬ್ರಹ್ಮ ಬೈದರ್ಕಳ ನೇಮೋತ್ಸವವು ನಡೆಯಲಿದ್ದು, ದಿನಂಪ್ರತಿ ಅನ್ನಸಂತರ್ಪಣೆ ನಡೆಯಲಿದೆ.

    Continue Reading

  • “ನಾಳೆ ಇರುವೈಲಿನಿಂದ ಕಟೀಲಿಗೆ ಭಕ್ತಿಯ ನಡಿಗೆ ಅಮ್ಮನೆಡೆಗೆ”

    “ನಾಳೆ ಇರುವೈಲಿನಿಂದ ಕಟೀಲಿಗೆ ಭಕ್ತಿಯ ನಡಿಗೆ ಅಮ್ಮನೆಡೆಗೆ”

    ಮೂಡುಬಿದಿರೆ: ಶ್ರೀ ಕ್ಷೇತ್ರ ಇರುವೈಲಿನಿಂದ ಕಟೀಲು ಶ್ರೀ ಭ್ರಮರಾಂಬಿಕೆಯ ಸನ್ನಿಧಿಗೆ ಊರ-ಪರವೂರ ಭಕ್ತ ವೃಂದ ಶ್ರೀ ಕ್ಷೇತ್ರ ಇರುವೈಲು ಇದರ ನೇತೃತ್ವದಲ್ಲಿ ನಾಳೆ ಮುಂಜಾನೆ 3.30 ಕ್ಕೆ ಲೋಕ ಕಲ್ಯಾಣಾರ್ಥ ಹಾಗೂ ಭಕ್ತಾದಿಗಳ ಅಭೀಷ್ಟೆಯ ಫಲಸಿದ್ಧಿಗಾಗಿ ೧೨ ನೇ ವರ್ಷದ ಭಕ್ತಿಯ ನಡಿಗೆ ಅಮ್ಮನೆಡೆಗೆ  ಪಾದಯಾತ್ರೆಯು ಭಜನಾ ಸಂಕೀರ್ತನೆಯೊಂದಿಗೆ ಸಾಗಲಿದೆ‌. ಭಕ್ತಾದಿಗಳು ಸಮಯಕ್ಕೆ ಸರಿಯಾಗಿ ಕ್ಷೇತ್ರದಲ್ಲಿ ಹಾಜರಾಗಬೇಕು.  ಹಾಗೂ ಕಟೀಲಿನಿಂದ ಇರುವೈಲಿಗೆ ಬರಲು ವಾಹನದ ವ್ಯವಸ್ಥೆ ಇದ್ದು, ಲಘು ಉಪಹಾರದ ವ್ಯವಸ್ಥೆಯು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

    Continue Reading

  • ಆಕ್ಟೀವಾಗೆ ಢಿಕ್ಕಿ ಹೊಡೆದ ಕಾರು

    ಆಕ್ಟೀವಾಗೆ ಢಿಕ್ಕಿ ಹೊಡೆದ ಕಾರು

    ಮೂಡುಬಿದಿರೆ: ಶುಕ್ರವಾರ ಸಂಜೆ ಶಿತಾ೯ಡಿ ಬಳಿ ಕಾರೊಂದು ಆಕ್ಟಿವಾ ಸ್ಕೂಟಿಗೆ ಡಿಕ್ಕಿಯಾದ ಪರಿಣಾಮವಾಗಿ ಆಕ್ಟಿವಾ  ಸವಾರೆ, ಶಿಕ್ಷಕಿ ಮೃತಪಟ್ಟ ಘಟನೆ ನಡೆದಿದೆ.ಶಿರ್ತಾಡಿ ಹೋಲಿ ಏಂಜಲ್ಸ್ ಖಾಸಗಿ ಶಾಲೆಯ ಶಿಕ್ಷಕಿ ಸುಜಯ ಭಂಡಾರಿ (35) ಮೃತಪಟ್ಟವರು.ಸುಜಯಾ ಅವರು ಶುಕ್ರವಾರ ಶಾಲೆಬಿಟ್ಟು ಮನೆಗೆ ಹೋಗುವಾಗ ಶಿರ್ತಾಡಿ ಸೇತುವೆ ಬಳಿ ಮೂಡುಬಿದಿರೆ ಕಡೆಯಿಂದ ಶಿರ್ತಾಡಿ ಕಡೆ ಬರುತ್ತಿದ್ದ ಹೋಂಡಾ ಸಿಟಿ ಕಾರು ಸುಜಯಾ ಅವರ ಆಕ್ಟಿವಾಕ್ಕೆ ಢಿಕ್ಕಿ ಹೊಡೆದ ಪರಿಣಾಮವಾಗಿ ರಸ್ತೆಗೆಸೆಯಲ್ಪಟ್ಟ ಸುಜಯಾ ಅವರ ತಲೆಗೆ ತೀವ್ರ ತರದ ಗಾಯವಾಗಿತ್ತು.ಅವರನ್ನು ಮಂಗಳೂರಿನ […]

    Continue Reading

  • ಪುತ್ತೆ ಸೋಮನಾಥೇಶ್ವರ ದೇಗುಲಕ್ಕೆ  ಭಕ್ತರ ಭಕ್ತಿಯ ಹೊರೆಕಾಣಿಕೆ ಮೆರವಣಿಗೆ

    ಪುತ್ತೆ ಸೋಮನಾಥೇಶ್ವರ ದೇಗುಲಕ್ಕೆ  ಭಕ್ತರ ಭಕ್ತಿಯ ಹೊರೆಕಾಣಿಕೆ ಮೆರವಣಿಗೆ

    ಮೂಡುಬಿದಿರೆ : ಮಹತೋಭಾರ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ನಡೆಯುವ ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕದಂಗವಾಗಿ ವೈಭವದ ಹೊರೆಕಾಣಿಕೆ ಮೆರವಣಿಗೆಯು ಶುಕ್ರವಾರ ನಡೆಯಿತು.ಅನುವಂಶೀಯ ಆಡಳಿತ ಮೊಕ್ತೇಸರ, ಚೌಟರ ಅರಮನೆಯ ಕುಲದೀಪ ಎಂ. ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಅರಮನೆಯ ಅಂಗಣದಲ್ಲಿ ಎಡಪದವು ಮುರಳೀಧರ ತಂತ್ರಿಗಳು ಹಾಗೂ ಬಸದಿಗಳ ಇಂದ್ರರು ಪ್ರಾರ್ಥನೆ ನೆರವೇರಿಸಿ ದೀಪ ಪ್ರಜ್ವಲಿಸಿದರು.ಚೌಟರ ಅರಮನೆಗೆ ಸಂಬಂದಪಟ್ಟ ಶ್ರೀ ಕ್ಷೇತ್ರ ಧರ್ಮಸ್ಥಳದ ಅನಿತಾ ಸುರೇಂದ್ರ ಕುಮಾರ್ ರಾಣಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆಗೈದರು.ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ […]

    Continue Reading

  • ಮೂಡುಬಿದಿರೆ ವ್ಯಾಪ್ತಿಯ ಪಶು ಚಿಕಿತ್ಸಾಲಯ ಕಟ್ಟಡಗಳ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಶಾಸಕ ಕೋಟ್ಯಾನ್

    ಮೂಡುಬಿದಿರೆ ವ್ಯಾಪ್ತಿಯ ಪಶು ಚಿಕಿತ್ಸಾಲಯ ಕಟ್ಟಡಗಳ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಶಾಸಕ ಕೋಟ್ಯಾನ್

    ಮೂಡುಬಿದಿರೆ : ದ.ಕ.ಜಿ. ಪಂಚಾಯತ್ ಮಂಗಳೂರು. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಆರ್. ಐ. ಡಿ. ಎಫ್ -೨೮ರಲ್ಲಿ ಮಂಜೂರಾದ ತಾಲೂಕಿನ ಮೂಡುಬಿದಿರೆ ಮತ್ತು ಶಿತಾ೯ಡಿಯಲ್ಲಿ ತಲಾ ಐವತ್ತಮೂರುವರೆ ಲಕ್ಷ ವೆಚ್ಚದಲ್ಲಿ ನಿಮಾ೯ಣಗೊಳ್ಳಲಿರುವ ಪಶು ಚಿಕಿತ್ಸಾಲಯದ ನೂತನ ಕಟ್ಟಡಕ್ಕೆ ಶಾಸಕ ಉಮಾನಾಥ ಎ. ಕೋಟ್ಯಾನ್ ಶುಕ್ರವಾರ ಶಿಲಾನ್ಯಾಸಗೈದರು.ನಂತರ ಮಾತನಾಡಿದ ಶಾಸಕ ಕೋಟ್ಯಾನ್ ಹಿಂದಿನ ಸರ್ಕಾರದ ಅವಧಿಯಲ್ಲಿ ನೂತನ ಪಶು ಚಿಕಿತ್ಸಾ ಆಸ್ಪತ್ರೆಗೆ ೫೩.೧೬ ಲಕ್ಷ ವೆಚ್ಚದಲ್ಲಿ ಅನುದಾನ ಬಿಡುಗಡೆಗೊಂಡಿದ್ದು, ಇದೀಗ ಹಳೆಯ ಕಟ್ಟಡವನ್ನು ದುರಸ್ತಿಗೊಳಿಸಿ […]

    Continue Reading

  • ಫೆ.28 ರಿಂದ ಮಾರ್ಚ್ 7ರವರೆಗೆ ಪುತ್ತಿಗೆ ದೇಗುಲದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ

    ಫೆ.28 ರಿಂದ ಮಾರ್ಚ್ 7ರವರೆಗೆ ಪುತ್ತಿಗೆ ದೇಗುಲದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ

    ಮೂಡುಬಿದಿರೆ: ಸುಮಾರು 800 ವರ್ಷಗಳ ಇತಿಹಾಸವಿರುವ ಮೂಡುಬಿದಿರೆ ಪುತ್ತಿಗೆಯ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಫೆ.28 ರಿಂದ ಮಾ. 7 ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರು ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಕುಲದೀಪ ಎಂ.ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಅವರು ಬುಧವಾರ ಶ್ರೀ ಕ್ಷೇತ್ರದಲ್ಲಿ  ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿ ‘ ಈಗಾಗಲೇ ಸುಮಾರು 15 ಕೋಟಿ ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿ […]

    Continue Reading