Category: Manglore

  • ಧರ್ಮಸ್ಥಳ ಭಜನಾ ಪರಿಷತ್ತ್ ನ ಜಿಲ್ಲಾಮಟ್ಟದ ಸಭೆ

    ಧರ್ಮಸ್ಥಳ ಭಜನಾ ಪರಿಷತ್ತ್ ನ ಜಿಲ್ಲಾಮಟ್ಟದ ಸಭೆ

    ಬಂಟ್ವಾಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಾದೇಶಿಕ  ಭಜನಾ ಪರಿಷತ್ ಶ್ರೀ ಕ್ಷೇತ್ರ ಧರ್ಮಸ್ಥಳದ ಜಿಲ್ಲಾ ಮಟ್ಟದ ಭಜನಾ ಪರಿಷತ್ ಸಭೆಯು ಬುಧವಾರ ಬಂಟ್ವಾಳ ಯೋಜನಾ ಕಚೇರಿಯ ಸಭಾಂಗಣದಲ್ಲಿ, ನಡೆಯಿತು.ಭಜನ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಶ್ರೀ ಪಿ ಚಂದ್ರಶೇಖರ್ ಸಾಲ್ಯಾನ್ ಕೊಯ್ಯೂರು ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಭಜನಾ ಮಂಡಳಿ ಹಾಗೂ ಮಂದಿರಗಳ ರಿಜಿಸ್ಟ್ರೇಷನ್ ಮುಂತಾದ ದಾಖಲಾತಿಗಳನ್ನು ಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದ ಅವರು ಭಜನಾ ಪರಿಷತ್ತು ನಗರ ಭಜನೆ,ಮನೆ ಮನ ಭಜನೆ, ಸಂಧ್ಯಾ ಭಜನೆ ಮುಖಾಂತರವಾಗಿ […]

    Continue Reading

  • ಫೆ. 25 ರಿಂದ ಮಾರ್ಚ್ 3 ರವರೆಗೆ ಶ್ರೀ ನಡ್ಯೋಡಿ ದೈವಸ್ಥಾನ ಬ್ರಹ್ಮಕಲಶೋತ್ಸವ ಸಂಭ್ರಮ

    ಫೆ. 25 ರಿಂದ ಮಾರ್ಚ್ 3 ರವರೆಗೆ ಶ್ರೀ ನಡ್ಯೋಡಿ ದೈವಸ್ಥಾನ ಬ್ರಹ್ಮಕಲಶೋತ್ಸವ ಸಂಭ್ರಮ

    ಮೂಡುಬಿದಿರೆ: ಇಲ್ಲಿನ ಶತಮಾನಗಳ ಇತಿಹಾಸವಿರುವ ನಡ್ಯೋಡಿ ದೈವಸ್ಥಾನ ಮಾರ್ಪಾಡಿ-ಕಲ್ಲಬೆಟ್ಟು ಇದರ ನಾಲ್ಕನೇ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ನೇಮೋತ್ಸವವು ಫೆ.25ರಿಂದ ಮಾರ್ಚ್ ೩ರವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ, ಅಧ್ಯಕ್ಷ  ದಿಲೀಪ್ ಕುಮಾರ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿತಿಳಿಸಿದ್ದಾರೆ.ಅವರು ಶುಕ್ರವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಮಾಯಂದಲೆ ದೇವಿಯ ಮೂರ್ತಿ ಪುನರ್ ಪ್ರತಿಷ್ಠೆ, ನೂತನ ಮುಖಮಂಟಪ ಮತ್ತು ರಾಜಗೋಪುರ ಲೋಕಾರ್ಪಣೆಗೊಳ್ಳಲಿದೆ.ಫೆ.25ರಂದು ಸಂಜೆ 4 ಗಂಟೆಗೆ ಕೋಟೆಬಾಗಿಲು ವೀರಮಾರುತಿ ದೇವಸ್ಥಾನದಿಂದ ನಡ್ಯೋಡಿ […]

    Continue Reading

  • ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಸುಜಾತ ಶೆಟ್ಟಿ ಆಯ್ಕೆ

    ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಸುಜಾತ ಶೆಟ್ಟಿ ಆಯ್ಕೆ

    ಮೂಡುಬಿದಿರೆ: ತಾಲೂಕಿನ  ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಮುಂದಿನ ಮೂರು ವರ್ಷಗಳ ಅವಧಿಗೆ  ಸುಜಾತ ಜೆ.ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರ ಆದೇಶದಂತೆ ವ್ಯವಸ್ಥಾಪನಾ ಸಮಿತಿಯ ಸದಸ್ಯರ ಸಭೆಯಲ್ಲಿ ಈ ಆಯ್ಕೆ ನಡೆದಿದೆ.ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ದೇವಸ್ಥಾನದ ಪ್ರಧಾನ ಅರ್ಚಕ ಐ ರಾಘವೇಂದ್ರ ಭಟ್ ಇರುವೈಲ್, ಶಿವಾನಂದ ನಾಯ್ಕ್, ಪ್ರದೀಪ್ ಶೆಟ್ಟಿ, ಪೂವಪ್ಪ ಸಾಲ್ಯಾನ್,ಶುಭಕರ ಕಾಜವ, ಪದ್ಮನಾಭ ಪೂಜಾರಿ, ಮೋಹನ್ ನಾಯಕ್,ಮತ್ತು ದೀಪಾ ಆಯ್ಕೆಯಾಗಿದ್ದಾರೆ.

    Continue Reading

  • ನಾಳೆ ಬೆದ್ರ ಕೆಫೆ ಆರಂಭ: ಮೂರು ದಿನ “ಟೀ” ದರ ಕೇವಲ ೧ ರೂ

    ನಾಳೆ ಬೆದ್ರ ಕೆಫೆ ಆರಂಭ: ಮೂರು ದಿನ “ಟೀ” ದರ ಕೇವಲ ೧ ರೂ

    ಮೂಡುಬಿದಿರೆ: ತಾಲೂಕಿನ ರಾಜೀವ್ ಗಾಂಧಿ ವಾಣಿಜ್ಯ ಸಂಕೀರ್ಣದಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ಚಾ,ಕಾಫಿ, ಬರ್ಗರ್,ಪಿಝ್ಝಾ, ಶವರ್ಮ, ಜ್ಯೂಸ್, ಚಾಟ್ಸ್ ಮುಂತಾದ ಐಟಮ್‌ಗಳನ್ನೊಳಗೊಂಡ ನೂತನ ಉಪಹಾರ ಕೇಂದ್ರ ‘ ಬೆದ್ರ ಕೆಫೆ’ಯು ನಾಳೆ ಸಂಜೆ ೪-೩೦ ಉದ್ಘಾಟನೆಗೊಳ್ಳಲಿದೆ.ವಿನೂತನ ಶೈಲಿಯ ಪರಿಕಲ್ಪನೆಯ ಈ ಬೆದ್ರ ಕೆಫೆ ಉದ್ಘಾಟನಾ ಸಮಾರಂಭದಲ್ಲಿ ಡಾ.ಎಂ.ಮೋಹನ ಆಳ್ವ,ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ, ಮಿಥುನ್ ರೈ, ಪುರಸಭಾಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಪುರಸಭಾ ಸದಸ್ಯರಾದ ಶಕುಂತಲಾ ಹರೀಶ್ ಹಾಗೂ ರಾಜೇಶ್ ನಾಯ್ಕ್, ಪುರಸಭಾ ಮುಖ್ಯಾಧಿಕಾರಿ […]

    Continue Reading

  • ಹಿಂದೂಗಳು ನಾವೆಲ್ಲ ಒಂದು ಎಂಬ ಭಾವನೆ ನಮ್ಮಲ್ಲಿ ಇಲ್ಲದೇ ಹೋದರೆ ದೇಶಕ್ಕೂ ಅಪಾಯ, ಧರ್ಮಕ್ಕೂ ಅಪಾಯ: ಯುವ ವಕೀಲ ಶರತ್ ಶೆಟ್ಟಿ

    ಹಿಂದೂಗಳು ನಾವೆಲ್ಲ ಒಂದು ಎಂಬ ಭಾವನೆ ನಮ್ಮಲ್ಲಿ ಇಲ್ಲದೇ ಹೋದರೆ ದೇಶಕ್ಕೂ ಅಪಾಯ, ಧರ್ಮಕ್ಕೂ ಅಪಾಯ: ಯುವ ವಕೀಲ ಶರತ್ ಶೆಟ್ಟಿ

    ಮೂಡುಬಿದಿರೆ: ವೇದಗಳಲ್ಲಿ ಎಲ್ಲಿಯೂ ಜಾತಿ ವ್ಯವಸ್ಥೆಯೆಂಬುದಿರಲಿಲ್ಲ. ವೇದಗಳಲ್ಲಿ ಇದದ್ದು ವರ್ಣ ವ್ಯವಸ್ಥೆ ಮಾತ್ರ. ಹಾಗಾಗಿ ಜಾತಿ ವ್ಯವಸ್ಥೆ ನಮಗೆ ಬೇಡ. ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂಬ ಭಾವನೆ ನಮ್ಮಲ್ಲಿ ಮೂಡಬೇಕು. ಅಂತಹ ಭಾವನೆ ನಮ್ಮಲ್ಲಿ ಬಾರದೇ ಹೋದರೆ ದೇಶಕ್ಕೂ ಅಪಾಯ ಧರ್ಮಕ್ಕೂ ಅಪಾಯವಿದೆ ಎಂದು ಖ್ಯಾತ ಯುವ ವಕೀಲ ಶರತ್ ಶೆಟ್ಟಿ ತಿಳಿಸಿದರು.ಅವರು ಶನಿವಾರ ದರೆಗುಡ್ಡೆ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ  ನಡೆದ ಕರಾವಳಿ ಕೇಸರಿ ಸೇವಾ ಟ್ರಸ್ಟ್ ರಿ. ಬೆದ್ರ ಕರಾವಳಿ ಕೇಸರಿ ಮಹಿಳಾ […]

    Continue Reading

  • ಎಲ್ಲಿಯೂ ಕಾಣಸಿಗದ ಅಪರೂಪದ ಬ್ರಹ್ಮನ ದೇವಸ್ಥಾನ ಲಾಡಿಯಲ್ಲಿದೆ – ಡಾ. ಡಿ. ವಿರೇಂದ್ರ ಹೆಗ್ಗಡೆ

    ಎಲ್ಲಿಯೂ ಕಾಣಸಿಗದ ಅಪರೂಪದ ಬ್ರಹ್ಮನ ದೇವಸ್ಥಾನ ಲಾಡಿಯಲ್ಲಿದೆ – ಡಾ. ಡಿ. ವಿರೇಂದ್ರ ಹೆಗ್ಗಡೆ

    ಮೂಡುಬಿದಿರೆ: ಬ್ರಹ್ಮನಿಗೆ ಎಲ್ಲಿಯೂ ದೇವಸ್ಥಾನವಿಲ್ಲ.ಆದರೆ ಇಲ್ಲಿ ಅಪರೂಪದ ಬ್ರಹ್ಮಸ್ಥಾನವನ್ನು ನಿಮಿ೯ಸಿ ಎಲ್ಲರಿಗೂ ಅನುಗ್ರಹ ಸಿಗುವಂತೆ ಮಾಡಿರುವುದು ಈ ಕ್ಷೇತ್ರದ ವಿಶೇಷ. ಸೃಷ್ಠಿ ಮಾಡುವುದು ಸುಲಭ ಆದರೆ ಅದನ್ನು ರಕ್ಷಣೆ ಮಾಡುವುದು ಕಷ್ಟ ಆದರೆ ಇಲ್ಲಿನ ದೇವಸ್ಥಾನವನ್ನು  ಶ್ರದ್ಧೆ, ಏಕಾಗ್ರತೆ, ಭಕ್ತಿ ಮತ್ತು ಉತ್ಸಾಹದಿಂದ ಶಾಶ್ವತವಾಗಿ ನಿಮಿ೯ಸಲಾಗಿದೆ.ಎಂದು ಶ್ರೀ ಕ್ಷೇತ್ರ ಧಮ೯ಸ್ಥಳದ ಧಮಾ೯ಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.   ಅವರು ಶ್ರೀ ಚತುಮು೯ಖ ಬ್ರಹ್ಮ ದೇವಸ್ಥಾನ (ನಾಗಬ್ರಹ್ಮ ಸ್ಥಾನ) ಲಾಡಿ ಮೂಡುಬಿದಿರೆ ಇದರ ನೂತನ ಶಿಲಾಮಯ ದೇವಳದ ಅನಾವರಣ […]

    Continue Reading

  • ಕಾಯರಕಟ್ಟದಲ್ಲಿ ಉರುಳಿಗೆ ಸಿಲುಕಿದ ಚಿರತೆ- ಚಿಕಿತ್ಸೆ ನೀಡಿ ರಕ್ಷಿಸಿದ ಅರಣ್ಯಾಧಿಕಾರಿಗಳು

    ಕಾಯರಕಟ್ಟದಲ್ಲಿ ಉರುಳಿಗೆ ಸಿಲುಕಿದ ಚಿರತೆ- ಚಿಕಿತ್ಸೆ ನೀಡಿ ರಕ್ಷಿಸಿದ ಅರಣ್ಯಾಧಿಕಾರಿಗಳು

    ಮೂಡುಬಿದಿರೆ: ಇಲ್ಲಿನ ಪಡುಮಾನಾ೯ಡು ಗ್ರಾ. ಪಂಚಾಯತ್ ವ್ಯಾಪ್ತಿಯ ಕಾಯರಕಟ್ಟ ಸರಕಾರಿ ಜಾಗದಲ್ಲಿ ಉರುಳಿಗೆ ಬಿದ್ದಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ ಘಟನೆ ಶನಿವಾರ ನಡೆದಿದೆ.   ಚಿರತೆಯ ಬಾಲಕ್ಕೆ ತಂತಿ ಕಟ್ಟಿದ ಗೂಟದ ಸಮೇತ ಬಂದು ಮರಕ್ಕೆ ಹತ್ತುವ ಸಮಯದಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿತ್ತು.  ಈ ಬಗ್ಗೆ ನಿಖರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ರಕ್ಷಿಸಿ ಕಛೇರಿಗೆ ತಂದು ಚುಚ್ಚುಮದ್ದು ನೀಡಿದ್ದಾರೆ. ಸಂಜೆ ವೇಳೆಗೆ ಅರಣ್ಯ ಪ್ರದೇಶಕ್ಕೆ ಬಿಡಲಿದ್ದಾರೆ.ಮೂಡುಬಿದಿರೆ ವಲಯ ಅರಣ್ಯಾಧಿಕಾರಿ  ಕಿರಣ್ ಕುಮಾರ್ ಜಿ.  ಅರವಳಿಕೆ ತಜ್ಞರಾದ […]

    Continue Reading

  • ಭಜನೆಯ ವ್ಯಾಪ್ತಿಗೆ ಅಂತ್ಯವೆಂಬುವುದಿಲ್ಲ: ಮಾಣಿಲ‌ ಶ್ರೀ ಮೋಹನದಾಸ ಸ್ವಾಮೀಜಿ

    ಭಜನೆಯ ವ್ಯಾಪ್ತಿಗೆ ಅಂತ್ಯವೆಂಬುವುದಿಲ್ಲ: ಮಾಣಿಲ‌ ಶ್ರೀ ಮೋಹನದಾಸ ಸ್ವಾಮೀಜಿ

    ಮೂಡುಬಿದಿರೆ: ಯಾರೂ ಹರಿನಾಮ ಸಂಕೀರ್ತನೆಯನ್ನು ಭಕ್ತಿ, ಪ್ರೀತಿ, ಭಾವುಕತೆಯಿಂದ ಸಮರ್ಪಣಿಯನ್ನು ಮಾಡುತ್ತಾರೋ ಅವರಿಗೆ ಅರಿವಿಗೆ ಬರುತ್ತದೆ ಯಾವುದೂ ನಾ ಮಾಡುವುದಲ್ಲ. ಆಡಿಸುವವ ಮೇಲೊಬ್ಬನಿದ್ದಾನೆ ಎಂಬ ಸತ್ಯ ಅರಿಯುತ್ತಾನೆ. ಭಜನೆಯು ಎಷ್ಟು ಪ್ರಭಾವವನ್ನು ಹೊಂದಿದೆ ಎಂದು ತಿಳಿದಿದ್ದರೂ, ಅದನ್ನು ಅರಿತುಕೊಂಡಿರುವವರ ಸಂಖ್ಯೆ ತೀರಾ ಕಡಿಮೆ ಎಂದೆ ನಿಸುತ್ತದೆ. ಆದರೆ ಭಜನೆ ವ್ಯಾಪ್ತಿಗೆ  ಅಂತ್ಯವೆಂಬುದಿಲ್ಲ. ಭಜನೆಯ ಪ್ರಭಾವ ಪ್ರಬಲವಾಗಿದೆ. ಅದನ್ನು ಕರಾವಳಿ ಭಜನಾ ಸಂಸ್ಕಾರ ವೇದಿಕೆಯು ಭಜನೆಗೆ ಇರುವ ಆಯಾಯ ಕಟ್ಟುಪಾಡುಗಳನ್ನು ಪ್ರತಿಯೊಂದು ಮನೆ ಮನೆಗೂ ತಲುಪಿಸಬೇಕು ಸುಸಂಸ್ಕೃತವಾದ ಭಜನೆಯನ್ನು […]

    Continue Reading

  • ಲಾಡಿ ಬ್ರಹ್ಮಕಲಶೋತ್ಸವದ ಬ್ಯಾನರ್ ಹರಿದ ಕಿಡಿಗೇಡಿಗಳ ಬಂಧನ

    ಲಾಡಿ ಬ್ರಹ್ಮಕಲಶೋತ್ಸವದ ಬ್ಯಾನರ್ ಹರಿದ ಕಿಡಿಗೇಡಿಗಳ ಬಂಧನ

    ಮೂಡುಬಿದಿರೆ: ಇಲ್ಲಿನ  ಶ್ರೀ ಚತುರ್ಮುಖ  ಬ್ರಹ್ಮ  ದೇವಸ್ಥಾನ ಲಾಡಿ ಇದರ  ಬ್ರಹ್ಮಕಲಶೋತ್ಸವಕ್ಕೆ ಮೂಡುಬಿದಿರೆ ಪುರಸಭಾ ಸದಸ್ಯ ಇಕ್ಬಾಲ್ ಕರೀಂ  ಶುಭಕೋರಿ  ಅಳವಡಿಸಿದ   ಬ್ಯಾನರ್ ನ್ನು ಕಿಡಿಗೇಡಿಗಳು ಹರಿದು ಹಾಕಿದ್ದು,  ಬ್ಯಾನರ್ ಹರಿದ ಕಿಡಿಗೇಡಿಗಳನ್ನು   ದೂರು ಬಂದ ಒಂದು ಗಂಟೆಯಲ್ಲಿ  ಮೂಡಬಿದ್ರಿ ಪೊಲೀಸ್ ಇನ್ಸ್ಪೆಕ್ಟರ್  ಸಂದೇಶ್ ಪಿಜಿ ಹಾಗೂ ತಂಡ ಬಂಧಿಸಿದ್ದಾರೆ. ಬಂಧಿತ  ಆರೋಪಿಗಳು ಜಾರ್ಕಂಡ್ ರಾಜ್ಯದ ಮಹಮ್ಮದ್ ಸಿರಾಜ್ ಅನ್ಸಾರಿ(೨೬) ಹಾಗೂ ಬಿಹಾರ್ ರಾಜ್ಯದ ಮಹಮ್ಮದ್ ಕಾಮ್ಡು ಜಮನ್ ಎಂದು ತಿಳಿದು ಬಂದಿದೆಫ್ಲೆಕ್ಸ್ ಬ್ಯಾನರ್ ನ  ಅಹಿತಕರ […]

    Continue Reading

  • ಪದ್ಮಶ್ರೀ ಪುರಸ್ಕ್ರತೆ ಸುಕ್ರಿ ಗೌಡ ನಿಧನ

    ಪದ್ಮಶ್ರೀ ಪುರಸ್ಕ್ರತೆ ಸುಕ್ರಿ ಗೌಡ ನಿಧನ

    ಮೂಡುಬಿದಿರೆ : ಕಳೆದ ಹಲವು ವಷ೯ಗಳಿಂದ ಉಸಿರಾಟದ ತೊಂದರೆ ಸಹಿತ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಹಾಡುಹಕ್ಕಿ, ಪದ್ಮಶ್ರೀ ಸುಕ್ರಿ ಬೊಮ್ಮ ಗೌಡ(88) ಗುರುವಾರ ನಸುಕಿನ ವೇಳೆ ಅಂಕೋಲಾದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಡಿಗೇರಿಯ ಸುಕ್ರಜ್ಜಿ ಕಳೆದ ಹಲವು ವರ್ಷದಿಂದ ಉಸಿರಾಟದ ಸಮಸ್ಯೆ ಸೇರಿದಂತೆ ಕೆಲ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಅವರು ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಕಳೆದ ಎರಡು ದಿನದ ಹಿಂದೆಯೂ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ವಾಪಸ್ಸಾಗಿದ್ದರು. […]

    Continue Reading