



ಮೂಡುಬಿದಿರೆ: ಇತ್ತೀಚಿನ ಭಾರಿ ಮಳೆಯಿಂದಾಗಿ ನಾಗರಕಟ್ಟೆ ಪ್ರದೇಶದಲ್ಲಿ ಅನೇಕ ಮನೆಗಳು ಜಲಾವೃತಗೊಂಡಿವೆ. ಈ ಪ್ರದೇಶದಲ್ಲಿ ನಿರ್ಮಿಸಿರುವ ಸೇತುವೆ ಮೊದಲು ಕಿರಿದಾಗಿದ್ದು, ಪುರಸಭೆ ಅದರ ಅಗಲವನ್ನು ಹೆಚ್ಚಿಸಿಕೊಂಡು ಹೊಸದಾಗಿ ನಿರ್ಮಿಸಿದ ಬಳಿಕ ನೀರು ಸರಾಗವಾಗಿ ಹರಿದು ಹೋಗುತ್ತಿತ್ತು. ಆದರೆ ಈ ಬಾರಿ ಸುರಿಯುತ್ತಿರುವ ಹೆಚ್ಚಿನ ಮಳೆಯಿಂದಾಗಿ ತೋಡಿನಲ್ಲಿ ನೀರು ತುಂಬಿಕೊಂಡು, ಪಕ್ಕದಲ್ಲಿರುವ ಹಡೀಲು ಬಿದ್ದಿರುವ ಗದ್ದೆಗಳ ಮೇಲೆ ಹರಿದಿದ್ದು, ವಸಂತ ಭಂಡಾರಿ ಮತ್ತು ಮೋಹನ್ ಕೋಟ್ಯಾನ್ ಅವರ ಮನೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಭಾರಿ ಮಳೆಯಿಂದಾಗಿ ಆ ಪ್ರದೇಶದ ಜನರು […]

ಮೂಡುಬಿದಿರೆ: ಗುರುವಾರ ರಾತ್ರಿ ಶಿರ್ತಾಡಿ ಗ್ರಾಮದಲ್ಲಿ ವಿಕ್ರಮ ಆಚಾರ್ಯ ಅವರ ಮನೆ ಭಾಗಶಃ ಕುಸಿದಿದ್ದು, ಸಂಬಂಧಿಸಿದಂತೆ ಅಪಾರ ನಷ್ಟ ಸಂಭವಿಸಿದೆ. ವಿಕ್ರಮ ಆಚಾರ್ಯ, ಅವರ ತಾಯಿ, ಪತ್ನಿ, ಮತ್ತು ಮಕ್ಕಳೊಂದಿಗೆ ಮಲಗಿದಾಗ ರಾತ್ರಿ 2 ಗಂಟೆ ಸುಮಾರಿಗೆ ಮನೆಯ ಹಿಂಭಾಗದಲ್ಲಿ ದೇವರ ಕೋಣೆ ಭಾಗ ಕುಸಿದಿದ್ದು, ಅದೃಷ್ಟವಶಾತ್ ಮನೆದಿನರೀಗ ಇವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಪಂಚಾಯತ್ ಸಿಬ್ಬಂದಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯ ಕುಸಿತಕ್ಕೆ ಕಾರಣವಾದ ಸಂದರ್ಭಗಳನ್ನು ಪರಿಶೀಲಿಸುತ್ತಿದ್ದಾರೆ, […]

ಮಂಗಳೂರು: ನಗರದ ಹೊರವಲಯದ ವಾಮಂಜೂರು ಬಳಿಯ ಕೆತ್ತಿಕಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಗುಡ್ಡ ಕಡಿತ ಮಾಡಿರುವ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಘೋಷಿಸಿದ್ದಾರೆ. ಅಪಾಯದ ಸ್ಥಿತಿಯಲ್ಲಿ ಇರುವ ಕೆತ್ತಿಕಲ್ ಗುಡ್ಡವನ್ನು ವೀಕ್ಷಿಸಿ, ಸ್ಥಳೀಯರ ಅಭಿಪ್ರಾಯಗಳನ್ನು ಸಂಗ್ರಹಿಸಿದ ನಂತರ ಅವರು ಮಾಧ್ಯಮದೊಂದಿಗೆ ಮಾತನಾಡಿದರು. ಸಚಿವರು ತಿಳಿಸಿದಂತೆ, ನಿರಂತರ ಮಳೆಯ ಕಾರಣದಿಂದಾಗಿ ಈ ಪ್ರದೇಶದಲ್ಲಿ ಭೂ ಕುಸಿತದ ಅಪಾಯ ತಲೆದೋರಿದೆ. ಸ್ಥಳೀಯರು ಗುಡ್ಡವನ್ನು ಬೇಕಾಬಿಟ್ಟಿ ಅಗೆದು ಮಣ್ಣು ಅಗೆಯುತ್ತಿರುವ ಬಗ್ಗೆ […]

ವಿದ್ಯಾರ್ಥಿಗಳನ್ನು ಒಳ್ಳೆಯ ನಾಗರಿಕನನ್ನಾಗಿ ಮಾಡುವುದೇ ಸ್ಕೌಟ್ಸ್ ಮತ್ತು ಗೈಡ್ಸ್ನ ಧೈಯೋದ್ಧೇಶ. ಪ್ರತಿಯೊಬ್ಬರು ಇದರ ನಿಯಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ಗೆ ಸೇರಲು ತುಂಬಾ ಅವಕಾಶಗಳಿವೆ ಅದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ನಿಮಗೆ ವಿದ್ಯೆ ನೀಡುತ್ತಿರುವ ಪ್ರತಿ ಶಿಕ್ಷಕರನ್ನು ಪ್ರತಿದಿನ ಸ್ಮರಿಸಬೇಕು. ಬದುಕಿನಲ್ಲಿ ಶಿಸ್ತು ಮುಖ್ಯ. ಆ ಶಿಸ್ತಿನ ಪಾಠವನ್ನು ಶಿಕ್ಷಕರು ನಿಮಗೆ ಕಲಿಸುತ್ತಾರೆ. ಆ ಮೂಲಕ ನೀವು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಹೊರಹೊಮ್ಮಬೇಕು. ಒಬ್ಬ ನಾಗರಿಕನಾಗಿ ನನ್ನ ಜವಬ್ದಾರಿಗಳೇನು ಎಂದು ಅರಿತುಕೊಳ್ಳಬೇಕು. ನಾವೆಲ್ಲಾ ಪರಿಸರದ ಕೂಸುಗಳು ಪರಿಸರದೊಂದಿಗೆ […]

ಪೆರಾಡಿ: ಅಗಸ್ಟ್ 01ಬೆಳ್ತಂಗಡಿ ತಾಲೂಕಿನಲ್ಲಿ ವಾರಗಳಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಪೆರಾಡಿ ಗ್ರಾಮದ ಕನ್ಯಾನ ಸಾರಮ್ಮ ಎಂಬ ಮಹಿಳೆಯ ಮನೆಯು ಸಂಪೂರ್ಣವಾಗಿ ಕುಸಿದು ಬಿದ್ದು ನೆಲಸಮಗೊಂಡಿದ್ದು ಈ ಕುಟುಂಬವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ. ರಕ್ಷಿತ್ ಶಿವರಾಂ ಬೇಟಿ ನೀಡಿ ಪರಿಶೀಲನೆ ನಡೆಸಿ ಶೀಘ್ರ ಪರಿಹಾರ ಕ್ರಮಗಳನ್ನು ನೀಡುವ ಭರವಸೆಯನ್ನು ನೀಡಿದರು. ನಿಯೋಗದಲ್ಲಿ ಬದ್ರಿಯಾ ಜುಮಾ ಮಸೀದಿ ಪೆರಾಡಿ ಅಧ್ಯಕ್ಷರಾದ ಅಬ್ದುಲ್ ಸಲಾಂ ಮರೋಡಿ, ಜಮಾಅತ್ ಖತೀಬ್ ಸಫ್ವಾನ್ ಬಾಖವಿ ಮಾಪಾಲ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ […]

ದಕ್ಷಿಣ ಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನಾಳೆ ಆಗಸ್ಟ್ 2ರಂದು ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ, ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಪ್ರಕಟಿಸಿದ್ದಾರೆ. ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮತ್ತು ಪಶ್ಚಿಮ ಘಟ್ಟದ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗಗಳಲ್ಲಿ ಮುಂದಿನ ಕೆಲವು ದಿನಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇರುವುದರಿಂದ ರೆಡ್ ಅಲರ್ಟ್ […]

ಮೂಡುಬಿದಿರೆ: ಬುಧವಾರ ನಡೆದ ಭಾರೀ ಮಳೆಯ ಪರಿಣಾಮ, ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬನ್ನಡ್ಕದಲ್ಲಿ ಹಲವು ಹಾನಿ ಸಂಭವಿಸಿದೆ. ಸತೀಶ್ ರಾವ್ ಮತ್ತು ದರಣೇಂದ್ರ ಜೈನ್ ಅವರ ಮನೆಗಳ ಆವರಣಗೋಡೆಗಳು ಕುಸಿದಿವೆ. ಸ್ಥಳೀಯ ಎಸ್ ಕೆ.ಎಫ್ ಕಂಪೆನಿಯ ಅಪಾಯಕಾರಿ ಆವರಣಗೋಡೆಯೂ ಮಳೆಯಿಂದ ಬಿದ್ದು ಹೋಗಿದೆ. ಬನ್ನಡ್ಕ ಪಾಡಿಯಾರ್ ಗೆ ಹೋಗುವ ಮುಖ್ಯ ರಸ್ತೆಯು ಬಿರುಕು ಬಿಟ್ಟಿದ್ದು, ಜನ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಮೂಡುಬಿದರೆ: ಇಲ್ಲಿಗೆ ಸಮೀಪದ ತಾಕೊಡೆ ಹಾಗೂ ಪುಚ್ಚೇರಿಯ ನಡುವೆ ಬೃಹತ್ ಮರ ಒಂದು ರಸ್ತೆಗೆ ಅಡ್ಡಲಾಗಿ ಬಿದ್ದು ವಾಹನ ಸಂಚಾರಕ್ಕೆ ತೀವ್ರತೊಡಕು ಉಂಟಾಗಿದೆಇದರಿಂದಾಗಿ ಬಂಟ್ವಾಳ ಭಾಗಕ್ಕೆ ತೆರಳುವ ವಾಹನಗಳು ಸರತಿಯ ಸಾಲಿನಲ್ಲಿ ನಿಲ್ಲುವಂತಾಗಿದೆ.. ಮರ ಬೀಡುವ ಸಂದರ್ಭದಲ್ಲಿ ವಿದ್ಯುತ್ ತಂತಿಗೆ ಹಾನಿ ಉಂಟಾಗಿದೆ ಅದೃಷ್ಟ ವಿಷಾದ್ ಯಾವುದೇ ದೊಡ್ಡ ಅನಾಹುತಗಳು ಸಂಭವಿಸಿಲ್ಲ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಸ್ಥಳೀಯರ ಸಹಕಾರದೊಂದಿಗೆ ಮರತೆರವುಗೊಳಿಸುವ ಕಾರ್ಯ ನಡೆಯುತ್ತಿದೆ

ಮಂಗಳೂರು : ಬಸ್ ಸಿಬ್ಬಂದಿ ಮಾನವೀಯ ಸೇವೆಗಳಿಗೆ ಇತಿಹಾಸವಿದೆ. ಗ್ರಾಮಾಂತರ ಭಾಗದಲ್ಲಿ ವಿಷದ ಹಾವು ಕಚ್ಚಿದ ರೋಗಿಯನ್ನು ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಿಸಿದ ಚರಿತ್ರೆಯಿದೆ. ಸಿಬ್ಬಂದಿಯ ಮಾನವೀಯ ಸೇವೆಗೆ ಸಾರ್ವಜನಿಕವಾಗಿ ಸಿಕ್ಕಿರುವ ಪ್ರೋತ್ಸಾಹ ಪ್ರಶಂಸನೀಯ. ಸಿಬ್ಬಂದಿ ಮೆರೆದ ಮಾನವೀಯ ಸೇವೆ ಎಲ್ಲರಿಗೂ ಮಾದರಿಎಂದು ದ.ಕ ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಹೇಳಿದರು. ಅವರು ದ.ಕ ಬಸ್ಸು ಮಾಲಕರ ಸಂಘ ಮಂಗಳೂರು ಇವರ ಹಂಪನಕಟ್ಟೆ ಕಚೇರಿಯ ಪಿ.ಭಾಸ್ಕರ್ ಸಾಲಿಯಾನ್ ವೇದಿಕೆಯಲ್ಲಿ ಬಸ್ಸಿನಲ್ಲಿ ಎದೆ ನೋವಿಗೆ […]

ಮೂಡುಬಿದಿರೆ ಬಡಗು ಬಸದಿ ಬಳಿಯ ರಸ್ತೆ ಅಂಚಿನ ಮಣ್ಣು ಕುಸಿತಕ್ಕೊಳಗಾಗಿ ಅಪಾಯಕಾರಿ ಸ್ಥಿತಿಯಲ್ಲಿರುವ ಸೇತುವೆ ಹಾಗೂ ವಿವಿಧ ರೀತಿಯ ಹಾನಿ ಪ್ರಮಾಣಗಳನ್ನು ಶಾಸಕರಾದ ಉಮಾನಾಥ ಎ. ಕೋಟ್ಯಾನ್ ಪರಿಶೀಲಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಅವರು ಪುರಸಭಾ ಮುಖ್ಯಾಧಿಕಾರಿ ಇಂದು ಎಂ. ಹಾಗೂ ವಿವಿಧ ಸಂಬಂಧಿತ ಇಂಜಿನಿಯರ್‌ಗಳೊಂದಿಗೆ ಚರ್ಚೆ ನಡೆಸಿ ಪರಿಹಾರ ರೂಪವನ್ನು ನೀಡುವಲ್ಲಿ ಸರಕಾರಕ್ಕೆ ಬೇಡಿಕೆ ಸಲ್ಲಿಸಲು ಸಮಾಲೋಚನೆ ನಡೆಸಿದರು. ಬಿಜೆಪಿ ಮಂಡಲ ಕಾರ್ಯದರ್ಶಿ ರಂಜಿತ್ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ, ಉದ್ಯಮಿಗಳಾದ ಮಹೇಂದ್ರವರ್ಮ ಜೈನ್, […]