



ಮಂಗಳೂರು, ಜು.2: ಜುಲೈ 3ನೇ ವಾರದಲ್ಲಿ ರಾಜ್ಯದ ವಿವಿಧ ಚಾರಣ ಪಥಗಳಿಗೆ ಆನ್ ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.ಮಂಗಳೂರಿನ ಪಡೀಲ್ ನಲ್ಲಿರುವ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜನವರಿ 26ರಂದು ಕುಮಾರಪರ್ವತಕ್ಕೆ ಸಾವಿರಾರು ಚಾರಣಿಗರು ಒಂದೇ ದಿನ ಲಗ್ಗೆ ಇಟ್ಟು ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾದ ಚಾರಣಕ್ಕೆ ಈ ಆಗಸ್ಟ್ ನಿಂದ ಮರು ಚಾಲನೆ […]

ಮೂಡುಬಿದಿರೆ ಟೆಂಪಲ್ ಟೌನ್ ರೋಟರಿ ಕ್ಲಬ್ 2024-25 ನೇ ಸಾಲಿನ ಅಧ್ಯಕ್ಷರಾಗಿ ಪೂರ್ಣಚಂದ್ರ ಜೈನ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಆಯ್ಕೆಯಿಂದ ಕ್ಲಬ್ ತನ್ನ ನಾಯಕತ್ವ ಮತ್ತು ಸಮುದಾಯ ಸೇವೆಯ ಪರಂಪರೆಯನ್ನು ಮುಂದುವರಿಸುತ್ತಿದೆ. ಅಧ್ಯಕ್ಷರೊಂದಿಗೆ, ಕೆಳಗಿನ ಸದಸ್ಯರನ್ನು ಕ್ಲಬ್‌ನ ಪ್ರಮುಖ ಸ್ಥಾನಗಳಿಗೆ ಆಯ್ಕೆ ಮಾಡಲಾಗಿದೆ: ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 3 ರಂದು (ಬುಧವಾರ) ಸಂಜೆ ನಿಶ್ಮಿತಾ ಪ್ಯಾರಡೈಸ್ ಹಾಲ್ ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ಕ್ಲಬ್‌ಗೆ ಪ್ರಮುಖ ಸನ್ನಿವೇಶವಾಗಿದ್ದು, ಹೊಸ ನಾಯಕತ್ವದ ಹಸ್ತಾಂತರ ಮತ್ತು […]

ಗುರುಕುಲ ಶಾಲೆಯಲ್ಲಿ ಶೈಕ್ಷಣಿಕ ಪರಿಕರಗಳ ವಿತರಣಾ ಸಮಾರಂಭಮಾಳದ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕ ಪರಿಕರಗಳ ವಿತರಣಾ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಗುರುಕುಲ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶ್ರೀ ಗಜಾನನ ಮರಾಠೆ ಶಾಲಾ ಬೆಳವಣಿಗೆಯನ್ನು ವಿಶ್ಲೇಷಿಸಿದರು ಹೊಸದಾಗಿ ಸೇರ್ಪಡೆಯಾದ ಮಕ್ಕಳಿಗೆ ಪ್ರೋತ್ಸಾಹ ರೂಪವಾಗಿ ಕಳೆದ ಆರು ವರ್ಷಗಳಿಂದ ಒಂದು ಸಾವಿರ ರೂಪಾಯಿಗಳನ್ನು ಠೇವಣಿಗಾಗಿ ನೀಡುತ್ತಿರುವ ದಾನಿಗಳು ಗುರುಗಳಾದ ನಾಗಭೂಷಣ ಜೋಶಿ, ಸಮವಸ್ತ್ರ ಪ್ರಾಯೋಜಕರಾದ ಶ್ರೀ ರವಿ ಮರಾಠೆ ಶೃಂಗೇರಿ, ಕ್ರೀಡೋಪಕರಣಗಳನ್ನು […]

ಕೇಮಾರು : ಜುಲೈ 28ರಂದು ಜರಗಲಿರುವ ಕೆಸರುಡೊಂಜಿ ದಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ. ಯುವ ಉತ್ಸಾಹಿ ಬಳಗ (ರಿ.) ನೇತೃತ್ವದಲ್ಲಿ ಯುವಸಂಗಮ ಕಾಂತಾವರ (ರಿ.) ಇದರ ಸಹಭಾಗಿತ್ವದಲ್ಲಿ 28.7.2024ನೇ ಅದಿತ್ಯವಾರದಂದು ಕೇಮಾರು ಹಕ್ಕೇರಿ ಬಾಕಿಮಾರು ಗದ್ದೆಯಲ್ಲಿ ಜರಗುವಕೆಸರುಡೊಂಜಿ ದಿನ 2024 ಇದರ ಆಮಂತ್ರಣ ಪತ್ರಿಕೆಯನ್ನು ಜೂ 30ರಂದು ಶ್ರೀ ಕ್ಷೇತ್ರ ಕೇಮಾರುನಲ್ಲಿ ಶ್ರೀ ಸಾಂದಿಪನಿ ಸಾಧನಶ್ರಮದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ದಿವ್ಯಹಸ್ತದಿಂದ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಯುವ ಉತ್ಸಾಹಿ ಬಳಗ (ರಿ.) ಕೇಮಾರು […]

ಇರುವೈಲು ಕೋರೆಬಳಿ ಉಲಾಯಿ ಪಿದಾಯಿ ಆಟವಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ನೇತೃತ್ವದ ಪೊಲೀಸರ ತಂಡವು ಮೂವರನ್ನು ಬಂಧಿಸಿದ್ದಾರೆ. ಇತರ ಕೆಲವು ಮಂದಿ ಪರಾರಿಯಾಗಿದ್ದಾರೆ.ಅಕ್ಬರ್ ,ಗಣೇಶ್ ಹಾಗೂ ಅರುಣ್ ಎಂಬವರು ಬಂಧಿತರಾಗಿದ್ದು ಇತರ ಕೆಲವರು ಪರಾರಿಯಾಗಿದ್ದಾರೆ.ಆರೋಪಿಗಳಿಂದ ಮೂರು ಸಾವಿರ ನಗದು,ಏಳು ಮೊಬೈಲ್ ಹಾಗೂ ಒಂದು ಬೈಕನ್ನು ವಶಪಡಿಸಿಕೊಳ್ಳಲಾಗಿದೆ.ಪ್ರಕರಣ ದಾಖಲಾಗಿದೆ.

ಮೂಡಬಿದರೆ : ಪೊಲೀಸ್ ಅಧಿಕಾರಿಯಾದವರು ದಕ್ಷತೆ, ಪ್ರಮಾಣಿಕತೆಯಿಂದ ಕೆಲಸ ಮಾಡಿದ್ರೆ ಎಂತಹಾ ಗೌರವ ಸಿಗುತ್ತೆ ಅನ್ನೋದಕ್ಕೆ ಮೂಡಬಿದಿರೆಯ ಈ ಪೊಲೀಸ್ ಅಧಿಕಾರಿಯೇ ಸಾಕ್ಷಿ. ಪೊಲೀಸ್ ಅಧಿಕಾರಿಯಾಗಿ 39 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗಿದ್ದ ದಿವಾಕರ್ ರೈ ಅವರಿಗೆ ಸಹೋದ್ಯೋಗಿಗಳು ಪುಷ್ಪಾರ್ಚನೆಯ ಗೌರವ ಸಲ್ಲಿಸಿದ್ದಾರೆ. ದಿವಾಕರ ರೈ ಅವರು ಸೇವೆಯಿಂದ ಇಂದು ನಿವೃತ್ತರಾಗಿದ್ದರು. ಮೂಡಬಿದಿರೆಯ ಪೊಲೀಸ್ ಠಾಣೆಯಿಂದ ಅವರು ಸೇವೆಯನ್ನು ಮುಗಿಸಿ ಮನೆಗೆ ತೆರಳುವ ವೇಳೆಯಲ್ಲಿ ಅವರು ಠಾಣೆಯಿಂದ ಪೊಲೀಸ್ ಜೀಪ್ ಏರುವ ವರೆಗೂ ಮೂಡಬಿದಿರೆಯ […]

ಬ್ರಿಡ್ಜ್ ಟೌನ್ : ಇಲ್ಲಿನ ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ಸೋಲಿಸಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆ ಮುತ್ತಿಟ್ಟಿದೆ. ಆ ಮೂಲಕ ದಕ್ಷಿಣ ಆಫ್ರಿಕಾ ಗೆ ಮತ್ತೆ ಚೋಕರ್ಸ್ ಪಟ್ಟ ಖಾಯಂ ಆಗಿದೆ. 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಚೊಚ್ಚಲ ವಿಶ್ವಕಪ್ ಗೆದ್ದಿದ್ದ ಭಾರತ, ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸೋಲಿಸಿ ಚಾಂಪಿಯನ್ ಪಟ್ಟ ಪಡೆಯಿತು. 2007ರಲ್ಲಿ […]

ಮೂಡುಬಿದಿರೆ: ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿರುವ ಪ್ರಶಾಂತ್ ಅಡ್ಡರ್ ಅವರು ಎ.ಎಸ್.ಐ ಆಗಿ ಪದೋನ್ನತಿ ಹೊಂದಿದ್ದಾರೆ. ಪುತ್ತೂರು, ಮೂಡುಬಿದಿರೆ, ಬಜ್ಪೆ, ಮಂಗಳೂರು ದಕ್ಷಿಣ (ಸಂಚಾರ) ಹೀಗೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿರುವ ಪ್ರಶಾಂತ್ ಅವರು ಮತ್ತೆ ಮೂಡುಬಿದಿರೆ ಠಾಣೆಗೆ ಹೆಡ್ ಕಾನ್ಸ್ಟೆಬಲ್ ಆಗಿ ಬಂದು, ಇದೀಗ ಮೂಡುಬಿದಿರೆ ಠಾಣೆಯಲ್ಲೇ ಎ.ಎಸ್.ಐ. ಆಗಿ ಪದೋನ್ನತಿ ಹೊಂದಿದ್ದಾರೆ. ಸುಮಾರು 28 ವರ್ಷಗಳ ಸೇವಾವಧಿಯಲ್ಲಿ, ತಮ್ಮ ನಿಷ್ಠೆಯ ಸೇವೆಯಿಂದಾಗಿ ಪ್ರಶಾಂತ್ ಅವರು ಸಾರ್ವಜನಿಕ ವಲಯದಿಂದ ಮೆಚ್ಚುಗೆ ಗಳಿಸಿದ್ದಾರೆ. […]

ಮೂಡುಬಿದಿರೆ: ಕಳೆದ 23 ವರ್ಷಗಳಿಂದ ಅಗ್ನಿಶಾಮಕ ದಳದಲ್ಲಿ ಚಾಲಕರಾಗಿದ್ದ ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಅಮನಬೆಟ್ಟುವಿನ ನಿವಾಸಿ ಚಂದ್ರಶೇಖರ ಅವರು ಶುಕ್ರವಾರ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಪದೋನ್ನತಿಯನ್ನು ಹೊಂದಿದ್ದಾರೆ. 2001ರಲ್ಲಿ ಅಗ್ನಿಶಾಮಕ ಇಲಾಖೆಯಲ್ಲಿ ಸೇವೆಯನ್ನು ಆರಂಭಿಸಿದ್ದ ಅವರು ಬೆಳ್ತಂಗಡಿ, ಮೂಡುಬಿದಿರೆ ಮತ್ತು ಕಾರ್ಕಳದಲ್ಲಿ ಸೇವೆಯನ್ನು ಸಲ್ಲಿಸಿದ್ದರು.ಇದೀಗ ಕಾರ್ಕಳದಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಅವರು ಕಾರ್ಕಳ ಅಗ್ನಿಶಾಮಕ ಠಾಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ.

ಮೂಡುಬಿದಿರೆ: ಬಸ್ ಏಜೆಂಟ್ ಮತ್ತು ನಿರ್ವಾಹಕರಾಗಿದ್ದ ಗಣೇಶ್ (45) ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪೇಟೆಗೆ ಹೂ ಮತ್ತು ಪತ್ರಿಕೆಗಳನ್ನು ತಂದ ಅವರು ಮನೆಗೆ ಹಿಂದಿರುಗುತ್ತಿದ್ದಾಗ ಎದೆನೋವು ಕಾಣಿಸಿಕೊಂಡು, ತಕ್ಷಣ ಅವರನ್ನು ಜಿ.ವಿ.ಪೈ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ದುರದೃಷ್ಟವಶಾತ್, ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಈ ಹಿಂದೂ ಒಂದು ಬಾರಿ ಹೃದಯಾಘಾತದಿಂದ ಬಳಲಿದ ಗಣೇಶ್, ಅಂದಿನ ಚಿಕಿತ್ಸೆಯಿಂದ ಬೇರೆಯಾದರೂ, ಈ ಬಾರಿ ಅದೃಷ್ಟ ಅವನ ಕೈಚೆಲ್ಲಿತು. ಮೂಡುಬಿದಿರೆಯಲ್ಲಿ ಹಲವು ವರ್ಷಗಳಿಂದ ಬಸ್ ಸಿಬ್ಬಂದಿಯಾಗಿ, ಬೇರೆ ವಾಹನಗಳ ಚಾಲಕನಾಗಿ […]