
ಮೂಡುಬಿದಿರೆ: ಬಾಬು ರಾಜೇಂದ್ರ ಪ್ರೌಢಶಾಲೆಯ ಸಂಸ್ಥಾಪಕರ ದಿನವನ್ನು ಬುಧವಾರ ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು.ಶ್ರೀ ಮಹಾವೀರ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ಶೆಟ್ಟಿ ಅವರು ಶಾಲಾ ಹಸ್ತಪ್ರತಿ “ರಾಜೇಂದ್ರ” ವನ್ನು ಬಿಡುಗಡೆಗೊಳಿಸಿ ಮಾತನಾಡಿ ವಿದ್ಯಾರ್ಥಿಗಳು ಓದುವುದನ್ನುಸರಿಯಾಗಿ ಗಮನದಲ್ಲಿಟ್ಟುಕೊಂಡು ಓದಿ. ನೀವು ಎಷ್ಟು ಸಲ, ಎಷ್ಟು ದಿನ ಓದಿದ್ದೀರಿ ಎನ್ನುವುದು ಮುಖ್ಯ ಅಲ್ಲ.ಕಠಿಣ ಪರಿಶ್ರಮ, ತಾಳ್ಮೆ, ಅಚಲವಾದ ನಂಬಿಕೆ, ಯಶಸ್ಸು ಗಳಿಸುತ್ತೇನೆಂಬ ವಿಶ್ವಾಸ ಹಾಗೂ ಶಿಸ್ತು ನಿಮ್ಮಲ್ಲಿದ್ದರೆ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ. ಇಂದು ಶಿಕ್ಷಣ ಸೇವೆಯಾಗಿ ಉಳಿದಿಲ್ಲ ಬದಲಾಗಿ ಅದು ಉದ್ಯಮವಾಗಿ […]
ಮೂಡುಬಿದಿರೆ ಜ್ಯೋತಿನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ 125 ವಿದ್ಯಾರ್ಥಿಗಳಿಗೆ ಶ್ರೀಮತಿ ವನಜಾಕ್ಷಿ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಬರಹ ಪುಸ್ತಕಗಳನ್ನು ವಿತರಿಸಲಾಯಿತು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಪುಸ್ತಕಗಳನ್ನು ವಿತರಿಸಿ ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ನೀಡುತ್ತಿರುವ ಕನ್ನಡ ಮಾಧ್ಯಮ, ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರ ಪ್ರಯತ್ನ ಅಗತ್ಯ ಎಂದರು. ಟ್ರಸ್ಟ್‌ನ ಪ್ರವರ್ತಕ, ಉದ್ಯಮಿ ಶ್ರೀಪತಿ ಭಟ್, ಲಯನ್ಸ್ ಕ್ಲಬ್ ಅಧ್ಯಕ್ಷ ಜೊಸ್ಸಿ ಮಿನೇಜಸ್, ವಲಯಾಧ್ಯಕ್ಷ ಎಂ.ಕೆ. ದಿನೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ, […]
ವಿನಾಶದ ಅಂಚಿನಲ್ಲಿರುವ ಭತ್ತದ ತಳಿಗಳು ಹಾಗೂ ಸಸ್ಯ ಪ್ರಬೇಧಗಳ ಕುರಿತು ಮಾಹಿತಿ ನೀಡುವ ಉಳಿವಿಗಾಗಿ ಅರಿವು ವಿಶಿಷ್ಟ ಕಾರ್ಯಕ್ರಮವು ಮೂಡಬಿದಿರೆಯ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯಿತು. ೮೪೦ ಭತ್ತದ ತಳಿಗಳನ್ನು ಸಂಗ್ರಹಿಸಿ ಬೆಳೆಸುತ್ತಿರುವ ಸಾಧಕಿ ಆಸ್ಮಾಭಾನು ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಅಪರೂಪ ಮಾಹಿತಿಗಳನ್ನು ನೀಡಿದರು. ಈ ವೇಳೆ ಮಾತನಾಡಿದ ಅವರು, ಪರಿಸರ ಎಂದರೆ ಅದೊಂದು ವಿಚಾರ, ಭಾವನೆಗಳ ಸಾಗರವಾಗಿದೆ. ಆದರೆ ಇಂದು ಅಂತಹ ಪರಿಸರವನ್ನು ಮನುಷ್ಯ ಸಂಕುಲ ನಾಶ ಮಾಡುತ್ತಿದೆ. ಹಿಂದೆ ಪ್ರಕೃತಿಯಲ್ಲಿ ಬೇರೆ […]
ಮೂಡುಬಿದಿರೆ: ಈ ವರ್ಷದ ಅತ್ಯುತ್ತಮ ಸಾಮಾಜಿಕ ಸೇವೆ, ಸಾಧನೆಯ ಚಟುವಟಿಕೆಗಳಿಗಾಗಿ ಮೂಡುಬಿದಿರೆ ರೋಟರಿ ಕ್ಲಬ್ ರೋಟರಿ ಜಿಲ್ಲೆಯ ಪ್ಲಾಟಿನಂ ಪ್ಲಸ್ ಎವಾರ್ಡ್ ಗೌರವ ಪಡೆದಿದೆ. ಮೈಸೂರಿನ ಐವರಿ ಸಿಟಿ ರೋಟರಿ ಕ್ಲಬ್ ಆತಿಥ್ಯದಲ್ಲಿ ಜರಗಿದ ಜೈತ್ರ ಯಾತ್ರಾ 2024 ಅವಾರ್ಡ್ ನೈಟ್ ಸಮಾರಂಭದಲ್ಲಿ ರೋಟರಿ ಜಿಲ್ಲಾ ಗವರ್ನರ್ ಹೆಚ್. ಆರ್. ಕೇಶವ್ ಹಿರಿತನದಲ್ಲಿ ಚಿತ್ರ ನಟಿ ಪ್ರಿಯಾಂಕ ಅವರು ಮೂಡುಬಿದಿರೆ ರೋಟರಿ ಅಧ್ಯಕ್ಷ ನಾಗರಾಜ್ ಬಿ. ಕಾರ್ಯದರ್ಶಿ ನಾಗರಾಜ್ ಹೆಗ್ಡೆ ಸಹಿತ ಪದಾಧಿಕಾರಿಗಳ ಬಳಗಕ್ಕೆ ಪ್ರಶಸ್ತಿ ಪ್ರದಾನ […]
ಮೂಡುಬಿದಿರೆ: ಕರ್ನಾಟಕ ಪಬ್ಲಿಕ್ ಸ್ಕೂಲ್ ಮಿಜಾರು ಪ್ರೌಢಶಾಲಾ ವಿಭಾಗ ಇಲ್ಲಿ ಇಂದು ಬಾಲಕಾರ್ಮಿಕ ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಬಾಲಕಾರ್ಮಿಕ ವಿರೋಧಿ ದಿನಾಚರಣೆಯ ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರನ್ನು ಎಚ್ಚರಿಸುತ್ತಾ ಜಾಥಾದಲ್ಲಿ ತೊಡಗಿದ್ದರು. ಸಂಸ್ಥೆಯ ಮುಖ್ಯ ಶಿಕ್ಷಕಿ ವೀಣಾ ಲೊಲಿಟ ಪಾಯಸ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿ ಬಾಲಕಾರ್ಮಿಕತೆಯ ಬಗ್ಗೆ ಅರಿವು ಹಾಗೂ ಅದರಿಂದಾಗುವ ತೊಂದರೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಸಂಸ್ಥೆಯ ಎಲ್ಲಾ ಸಹ ಶಿಕ್ಷಕರು ಹಾಗೂ ಶಾಲಾ ಎಸ್. ಡಿ. ಎಂ. ಸಿಯ ಅಧ್ಯಕ್ಷರು ಉಪಸ್ಥಿತರಿದ್ದರು.
ಮಂಗಳೂರು, ಜೂ.11: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿಗೆ ವಾರಕ್ಕೆ 4 ದಿನಗಳ ಕಾಲ ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ (ಐಎಕ್ಸ್) ವಿಮಾನಗಳು ಜು.22ರಿಂದ ಪ್ರತಿದಿನ ಮಂಗಳೂರಿನಿಂದ ಅಬುಧಾಬಿಗೆ ಹಾರಾಟ ನಡೆಸಲಿದೆ. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿಗೆ ಮಂಗಳವಾರ, ಗುರುವಾರ, ಶನಿವಾರ ಮತ್ತು ರವಿವಾರ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ಹಾರಾಟ ನಡೆಸುತ್ತಿತ್ತು. ಇದೀಗ ಮೂರು ವಿಮಾನಗಳು ಹೆಚ್ಚುವರಿ ಸೇರ್ಪಡೆಯೊಂದಿಗೆ ಪ್ರತಿ ದಿನ ಹಾರಾಟ ನಡೆಸಲಿದೆ ಎಂದು ಪ್ರಕಟನೆ ತಿಳಿಸಿದೆ.
ಶ್ರೀ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸುವ ಸುಸಂದರ್ಭದಲ್ಲಿ ಬೋಳಿಯಾರಿನಲ್ಲಿ ಬಿಜೆಪಿಯ ವಿಜಯೋತ್ಸವದಲ್ಲಿ ಭಾಗಿಯಾಗಿ “ಭಾರತ್ ಮಾತಾ ಕಿ ಜೈ” ಘೋಷಣೆ ಕೂಗಿದ ಕಾರ್ಯಕರ್ತರಿಗೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದು ಗಾಯಾಳುಗಳು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರನ್ನು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ,ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ, ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಹಾಗೂ ಪ್ರಮುಖರುಗಳು ಭೇಟಿಯಾಗಿ ಧೈರ್ಯ […]
ವೃಕ್ಷ ಬಿಸಿನೆಸ್ ಸೊಲ್ಯೂಷನ್ ಮತ್ತು ಕೆನರಾ ಫಿಶ್ ಫಾರ್ಮರ್ಸ್ ಕಂಪೆನಿ ವಂಚನೆ ಪ್ರಕರಣ ಸಿಬಿಐಗೆ ಒಪ್ಪಿಸಲು ಒತ್ತಾಯ ಮಂಗಳೂರು: ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ವೃಕ್ಷ ಬಿಸಿನೆಸ್ ಸೊಲ್ಯೂಷನ್ ಮತ್ತು ಕೆನರಾ ಫಿಶ್ ಫಾರ್ಮರ್ಸ್ ಕಂಪೆನಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ವಂಚನೆ ಎಸಗಿರುವ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.“ವೃಕ್ಷ ಬಿಸಿನೆಸ್ ಸೊಲ್ಯೂಶನ್ ಎಂಬ ಸಂಸ್ಥೆಯು ಮಂಗಳೂರಿನಲ್ಲಿ ಸ್ಥಾಪನೆಯಾಗಿ ಗ್ರಾಹಕರ ಹಣಕ್ಕೆ ಹೆಚ್ಚಿನ ಬಡ್ಡಿ […]
ಕರಾವಳಿ ಕೇಸರಿ ಸೇವಾ ಟ್ರಸ್ಟ್ (ರಿ), ಕರಾವಳಿ ಕೇಸರಿ ಮಹಿಳಾ ಘಟಕ (ರಿ), ದರೆಗುಡ್ಡೆ ಇದರ ವತಿಯಿಂದ ದರೆಗುಡ್ಡೆ ಪ್ರೌಢಶಾಲೆ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಮೂಡಬಿದ್ರೆ ಶಾಸಕ ಉಮನಾಥ್ ಕೋಟ್ಯಾನ್ ಅವರು ತನ್ನ ಶಾಸಕ ಅವಧಿಯಲ್ಲಿ ಸರಕಾರಿ ಶಾಲಾ ಮಕ್ಕಳಿಗಾಗಿ ನೀಡಿರುವಂತಹ ಅದೆಷ್ಟೋ ಕೊಡುಗೆಗಳು ಹಾಗೂ ಸರಕಾರಿ ಶಾಲೆ ಮಾಡಿರುವಂತಹ ಸಾಧನೆಗಳು ಇಡೀ ಕ್ಷೇತ್ರಕ್ಕೆ ಹೆಸರು ತರುವಂತದ್ದು ಎಂದು ಮಕ್ಕಳನ್ನು ಅಭಿನಂದಿಸಿದರು, ಕರಾವಳಿ […]
ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ ಯುವ ಸಂಘಟನೆ ವತಿಯಿಂದ ಮೂಡುಬಿದಿರೆ ಪುರಸಭಾ ವ್ಯಪ್ತಿಯ ಗಾಂಧಿನಗರ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.ವಾರ್ಡ್ ಸದಸ್ಯರಾದ ಶ್ರೀಮತಿ ದಿವ್ಯ ಜಗದೀಶ್ ಎಂ.ಕೆ ಮುಖ್ಯಾತೀತಿಯಾಗಿ ಆಗಮಿಸಿದ್ದರು, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಮತಿ ಸುನೀತಾ ಶೆಟ್ಟಿ, ಉಪಾಧ್ಯಕ್ಷರಾದ ಯಶೋಧರ ಬಂಗೇರ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಕಸ್ತೂರಿ, ನೇತಾಜಿ ಬ್ರಿಗೇಡ್ ಸಂಸ್ಥಾಪಕರಾದ ರಾಹುಲ್ ಕುಲಾಲ್, ಅಧ್ಯಕ್ಷರಾದ ದಿನೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ನಂದ, ಉಪಾಧ್ಯಕ್ಷರಾದ ಶರತ್ ಕುಂದರ್, ಕಾರ್ಯದರ್ಶಿಗಳಾದ […]