
ಜವನರ್ ಬೆದ್ರ ಫೌಂಡೇಶನ್ (ರಿ.) ಮೂಡುಬಿದಿರೆ ಇದರ ಆಶ್ರಯದಲ್ಲಿ ಜಿಲ್ಲಾ ಸರಕಾರಿ ವೆಸ್ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ಮಹಾರಕ್ತದಾನ ಶಿಬಿರವು ಜೂ. 8ರಂದು ಇಲ್ಲಿನ ಸಮಾಜಮಂದಿರ ಸಭಾಭವನದಲ್ಲಿ ಜರಗಿತು. ಸಮಾಜಮಂದಿರ ಸಭಾದ ಹಿರಿಯ ಸದಸ್ಯ ನ್ಯಾಯವಾದಿ ಕೆ. ಆರ್. ಪಂಡಿತ್ ಶಿಬಿರವನ್ನು ಉದ್ಘಾಟಿಸಿದರು. ಎವರ್ ಕೇರ್ ಕ್ಲಿನಿಕ್ ನ ವೈದ್ಯ ಡಾ. ನಾರಾಯಣ ಪೈ ಬಿ., ನಿವೃತ್ತ ಸುಬೇದಾರ್ ಮೇಜರ್ ರಾಜೇಂದ್ರ ಜಿ., ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಪ್ರಾದೇಶಿಕ ರಕ್ತ ಪೂರಣ ಕೇಂದ್ರದ ಉತ್ಕರ್ಷ್ ಮತ್ತು […]
ಜೂ.17ರಂದು ಕರಾವಳಿಯಲ್ಲಿ ಬಕ್ರೀದ್ಮಂಗಳೂರು, ಜೂ.7: ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ದುಲ್‌ಹಜ್ ತಿಂಗಳ ಪ್ರಥಮ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಜೂ.17ರಂದು ಕರಾವಳಿಯಲ್ಲಿ ಬಕ್ರೀದ್ (ಈದುಲ್ ಅಝ್‌ಹಾ) ಆಚರಿಸಲು ದ.ಕ.ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಸೂಚಿಸಿದ್ದಾರೆ.ಜೂ.8ರ ಶನಿವಾರ ದುಲ್ಹಜ್ಜ್ ಒಂದು ಆಗಿರುತ್ತದೆ. ಜೂ.16ರಂದು ಅರಫಾ ದಿನವಾಗಿರುತ್ತದೆ ಎಂದು ಖಾಝಿ ತಿಳಿಸಿರುವುದಾಗಿ ಮಸ್ಜಿದ್ ಝೀನತ್ ಬಕ್ಷ್ ಹಾಗೂ ಈದ್ಗಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜೀವನದಲ್ಲಿ ಅದೃಷ್ಟದ ಜೊತೆಗೆ ಪ್ರಯತ್ನವಿದ್ದಾಗ ಯಾವುದೇ ಕಾರ್ಯದಲ್ಲೂ ಯಶಸ್ಸು ಕಾಣಲು ಸುಲಭ ಸಾಧ್ಯ ಎಂದು ಎಂಆರ್ ಜಿ ಗ್ರೂಪ್ ನ ಸ್ಥಾಪಕ ಮತ್ತು ಅಧ್ಯಕ್ಷ ಪ್ರಕಾಶ್ ಶೆಟ್ಟಿ ಹೇಳಿದರು.ಆಳ್ವಾಸ್ ಪ್ರಗತಿಯ 14 ನೇ ಆವೃತ್ತಿಯ ಬೃಹತ್ ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಸಾಂಸ್ಕೃತಿಕ,ಕ್ರೀಡೆ, ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಮೂಡಬಿದ್ರೆಯ ಆಳ್ವಾಸ್ ಸಂಸ್ಥೆ ಹಲವು ವರ್ಷಗಳಿಂದ ಅನೇಕ ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ಉದ್ಯೋಗದ ಸದಾವಕಾಶವನ್ನು ಕಲ್ಪಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು ವಿದ್ಯೆ ಬೇಕು ಆದರೆ, ಅದರ […]
ಮೂಡುಬಿದಿರೆ: ತಾಲೂಕಿನ ಶಿರ್ತಾಡಿ ಗ್ರಾ.ಪಂ.ವ್ಯಾಪ್ತಿಯ ಮಕ್ಕಿ ಎಂಬಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪೊಲೀಸರು ದಾಳಿ ನಡೆಸಿದ ಮೂರು ಬೈಕ್ ಮತ್ತು ಕೋಳಿಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಗುರುವಾರ ನಡೆದಿದೆ.ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದು ಈ ಸಂದರ್ಭ ಆಡುತ್ತಿದ್ದವರು ಪರಾರಿಯಾಗಿದ್ದಾರೆ.ಕೋಳಿ ಅಂಕದಲ್ಲಿ ಪಾಲ್ಗೊಂಡವರು ಎಳೆ ಪ್ರಾಯದವರಾಗಿದ್ದಾರೆನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗೌರವ ಅಧ್ಯಕ್ಷರುಗಳಾಗಿ ದಿವಾಕರ ಶೆಟ್ಟಿ ತೋಡಾರು, ಕೆಪಿ ಸುಚಾರಿತಾ ಶೆಟ್ಟಿ. ಉಪಾಧ್ಯಕ್ಷರುಗಳಾಗಿ ಸದಾಶಿವ ನೆಲ್ಲಿಮಾರ್, ಉಮೇಶ್ ಶೆಟ್ಟಿ ಬಡಗ ಮಿಜಾರು, ದುರ್ಗದಾಸ ಶೆಟ್ಟಿ ಮುಚ್ಚೂರು, ಕೋಶಾಧಿಕಾರಿಯಾಗಿ ಸದಾಶಿವ ಶೆಟ್ಟಿಗಾರ್, ಪ್ರಧಾನ ಸಂಚಾಲಕರಾಗಿ ಪುನೀತ್ ಕುಮಾರ್ ಕಂಬಳಿ, ರವಿಪ್ರಸಾದ್ ಕೆ ಶೆಟ್ಟಿ ಮನೋಜ್ ಕುಮಾರ್ ಶೆಟ್ಟಿ, ಜೊತೆ ಕಾರ್ಯದರ್ಶಿ ಮುರಳಿಧರ್ ಕೋಟ್ಯಾನ್ ಸಂತೋಷ್ ಶೆಟ್ಟಿ ಸ್ನೇಹ ಸ್ಪಂದನ ದಿಗ್ವನಾಥ ಶೆಟ್ಟಿ ಕಲ್ಲಬೆಟ್ಟು ಪ್ರಶಾಂತ್ ಭಂಡಾರಿ ಪುತ್ತಿಗೆಸಂಘಟನಾ ಕಾರ್ಯದರ್ಶಿ ಜಯಪ್ರಕಾಶ್ ಭಂಡಾರಿ ವಕೀಲರುಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಸುಧಾಕರ ಶೆಟ್ಟಿ ನಾಗರಾಜ ಆಚಾರ್ಯ […]
ರೋಟರಿ ಆಂಗ್ಲ ಮಾಧ್ಯಮ ಶಾಲೆ , ಜ್ಯೋತಿ ನಗರ ಮೂಡುಬಿದಿರೆ ಇಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಶಾಲಾ ಮಂತ್ರಿಮಂಡಲದ ಚುನಾವಣಾ ಪ್ರಕ್ರಿಯೆಯು ಶಿಸ್ತು ಬದ್ಧವಾಗಿ ಯಶಸ್ವಿಯಾಗಿ ನಡೆಯಿತು. ಮುಖ್ಯ ಚುನಾವಣಾ ಅಧಿಕಾರಿಯಾಗಿ ಶಾಲಾ ಮುಖ್ಯೋಪಾಧ್ಯಾಯಿನಿ ತಿಲಕಾ ಅನಂತವೀರ ಜೈನ್, ಮತಗಟ್ಟೆ ಅಧಿಕಾರಿಗಳಾಗಿ ಡೀಲನ್ , ವಿನಯಾ, ಗಾಯತ್ರಿ , ಸುನೀತಾ ಇವರು ಕಾರ್ಯನಿರ್ವಹಿಸಿದರು. ಪ್ರಾಥಮಿಕ ವಿಭಾಗದಲ್ಲಿ ನಾಯಕ/ನಾಯಕಿಯ ಸ್ಥಾನಕ್ಕೆ ನಂದನಾ ಪ್ರಭು , ದಿಶಾನ್ ಡಿ ನಾಯ್ಕ್ , ರಿಯಾನ್ ಆಲೆನ್ ಡಿ ಸೋಜಾ , ರಂಜನಾ […]
ಕಳೆದ 7 ವರ್ಷಗಳಿಂದ ದ.ಕ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ತುರ್ತು ರಕ್ತದ ಅವಶ್ಯಕತೆ ಸಂದರ್ಭದಲ್ಲಿ ರಕ್ತದಾನಿಗಳ ಸಹಕಾರದಿಂದ 10,000 ಗಿಂತಲೂ ಅಧಿಕ ಯೂನಿಟ್ ರಕ್ತವನ್ನು ಪೂರೈಸಿದ ಸಂಸ್ಥೆ ಜವನೆರ್ ಬೆದ್ರ ಫೌಂಡೇಶನ್(ರಿ).ರಕ್ತನಿಧಿ ಇದರ ವತಿಯಿಂದ ಇದೇ ಮೊದಲ ಬಾರಿಗೆ ದಿನಾಂಕ 08/06/2024 ರಂದು ಮೂಡಬಿದ್ರೆ ಸಮಾಜ ಮಂದಿರದಲ್ಲಿ ನಡೆಯಲಿದೆ ಮಹಾ ರಕ್ತದಾನ ಶಿಬಿರ, ಮಲೇರಿಯಾ , ಡೆಂಗ್ಯೂ ಹೆಚ್ಚಲಿರುವ ಜೂನ್ ತಿಂಗಳಲ್ಲಿ ಪ್ರತಿ ವರ್ಷ ರಕ್ತದ ಕೊರತೆ ಇರುತ್ತದೆ, ಹಾಗಾಗಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಮಹಾ […]
ಲೋಕಸಭಾ ಚುನಾವಣೆಯಲ್ಲಿ ಸನ್ಮಾನ್ಯ ನರೇಂದ್ರ ಮೋದಿಜಿಯವರು ನೇತೃತ್ವದ NDA ಬಹುಮತಗಳಿಂದ ಜಯಶಾಲಿಯಾದ ಹಿನ್ನಲೆಯಲ್ಲಿ ಯುವಶಕ್ತಿ ಬೆಳುವಾಯಿ ವಾಟ್ಸಾಪ್ ಬಳಗದ ವತಿಯಿಂದ ಸುಮಾರು 5000 ಮೋದಿ ಲಡ್ಡು ಹಂಚಲಾಯಿತು
ಮೂಡುಬಿದಿರೆ: ಜೆಸಿಐ ತ್ರಿಭುವನ್ ಮೂಡುಬಿದಿರೆ ಇದರ ವತಿಯಿಂದ ಏ .ಜೆ ಸೋನ್ಸ್ ಐಟಿಐ ಕಾಲೇಜಿನಲ್ಲಿ ತಾಂತ್ರಿಕ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮವು ಬುಧವಾರ ನಡೆಯಿತು.ಪ್ರಾಂಶುಪಾಲರಾದ ಶ್ರೀಕಾಂತ್ ಹೊಳ್ಳ ಮತ್ತು ಜೆ.ಟಿ.ಒ ಆಶ್ರಿತ ಉಪಸ್ಥಿತರಿದ್ದರು.ತನ್ಮಯ್ ಟೆಕ್ನಾಲಜಿ ಯಾ ತರಬೇತಿದಾರರಾದ ಮತ್ತು ಜೆಸಿಐ ಅಧ್ಯಕ್ಷ ಪ್ರದೀಪ್ ಕುಮಾರ್ ಅವರು ಲೀಡ್ ಆಂಡ್ರಾಯ್ಡ್ ಟಿವಿ, ಸ್ಮಾರ್ಟ್ ಟಿವಿ ಯ ಮದರ್ ಬೋರ್ಡ್ ಪ್ಯಾನಲ್ ಮತ್ತು ಪವರ್ ಸಪ್ಲೈ ವಿಭಾಗವನ್ನು ವಿವರಿಸಿದರು. ತರಬೇತಿಯಲ್ಲಿ 35ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮೂಡುಬಿದಿರೆ: ವಾಲ್ಪಾಡಿ ಗ್ರಾಮ ಪಂಚಾಯತ್ ನ ಎಂದ್ರಟ್ಟ ಕೆರೆ ಬಳಿ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೇಖರ್ ಅವರು ಗಿಡಗಳನ್ನು ನೆಡುವ ಮೂಲಕ ಚಾಲನೆಯನ್ನು ನೀಡಿದರು. ಗ್ರಾ.ಪಂ.ಅಧ್ಯಕ್ಷೆ ವಿಶಾಲಾಕ್ಷಿ, ಮೂಡುಬಿದಿರೆ ತಾಲೂಕು ಪಂಚಾಯತ್ ನ ಸಹಾಯಕ ನಿರ್ದೇಶಕರಾದ ಸಾಯೀಶ್ ಚೌಟ, ಪಂಚಾಯತ್ ಸದಸ್ಯರಾದ ಪ್ರದೀಪ್ ಕುಮಾರ್, ಪಂಚಾಯತ್ ಸಿಬ್ಬಂದಿಗಳಾದ ಮಂಜುಶ್ರೀ, ಸೌಮ್ಯ, ಪ್ರಿಯಾ , ಸಂದೀಪ್, ವಿದ್ಯಾ ಡಿ,ತಾಲೂಕು IEC ಸಂಯೋಜಕಿ ಅನ್ವಯ, ತಾಲೂಕು ಪಂಚಾಯತ್ ಸಿಬ್ಬಂದಿಗಳಾದ ಮುಕೇಶ್, […]