Category: Mdb Live 24

  • ಶಿರ್ತಾಡಿ: ನಿಲ್ಲಿಸಿದ್ದ ಕಾರಿನಿಂದ ಐದು ಲಕ್ಷ ರೂ.ಕಳ್ಳತನ

    ಶಿರ್ತಾಡಿ: ನಿಲ್ಲಿಸಿದ್ದ ಕಾರಿನಿಂದ ಐದು ಲಕ್ಷ ರೂ.ಕಳ್ಳತನ

    ನಿಲ್ಲಿಸಿದ್ದ ಕಾರಿನಲ್ಲಿದ್ದ 4,95,000 ರೂ.ನಗದನ್ನು ಬೈಕ್ ನಲ್ಲಿ ಬಂದ ಅಪರಿಚಿತರಿಬ್ಬರು ಕದ್ದೊಯ್ದ ಘಟನೆ ಇಂದು ಸಂಜೆ    ಶಿರ್ತಾಡಿಯಲ್ಲಿ ನಡೆದಿದೆ.   ದೀಕ್ಷಿತ್ ಎಂಬವರು ಶಿರ್ತಾಡಿ ಬ್ಯಾಂಕ್ ನಿಂದ ಐದು ಲಕ್ಷ ರೂ.ಡ್ರಾ ಮಾಡಿಕೊಂಡು ಅದರಿಂದ ಐದು ಸಾವಿರ ರೂ.ತೆಗೆದು ಶಿರ್ತಾಡಿಯ ಜಯಶ್ರೀ ಹೊಟೇಲ್ ಗೆ ಹೋಗಿದ್ದರು.    ಉಳಿದ 4,95,000 ನ್ನು ಕಾರಿನಲ್ಲಿಟ್ಟಿದ್ದರು.ಇದೇ ಸಂದರ್ಭದಲ್ಲಿ ಅಪರಿಚಿತರಿಬ್ಬರು ಬೈಕ್ ನಲ್ಲಿ ಬಂದು ಕಾರಿನೊಳಗಿದ್ದ 4,95,000 ನ್ನು ಕದ್ದೊಯ್ದಿದ್ದಾರೆ. ಕಳ್ಳರು ಹಣ ಕದ್ದೊಯ್ಯುವ ದೃಶ್ಯಗಳು ಸಿಸಿ ಕೆಮರಾಗಳಲ್ಲಿ ದಾಖಲಾಗಿದೆ. […]

    Continue Reading

  • ದೈಹಿಕ ಶಿಕ್ಷಣ ವಿಶ್ರಾಂತ ಶಿಕ್ಷಕ ಕೃಷ್ಣರಾಜ ಶೆಟ್ಟಿ

    ದೈಹಿಕ ಶಿಕ್ಷಣ ವಿಶ್ರಾಂತ ಶಿಕ್ಷಕ ಕೃಷ್ಣರಾಜ ಶೆಟ್ಟಿ

    ಮೂಡುಬಿದಿರೆ: ಇಲ್ಲಿನ ಜೈನ ಪ್ರೌಢ ಶಾಲೆಯ ವಿಶ್ರಾಂತ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣರಾಜ ಶೆಟ್ಟಿ ( 62) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನ ಹೊಂದಿದರು. ಒಟ್ಟು 31 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ಅವರು ಜೈನ್ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಸಿದ್ದರು. ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಸಹಿತ ಹಲವೆಡೆ ಅವರು ಗೌರವಾದರಗಳಿಗೆ ಪಾತ್ರರಾಗಿದ್ದರು.ಕೆಲವು ದಿನಗಳ ಹಿಂದೆ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅವರು ಪತ್ನಿ. ಶಿಕ್ಷಕಿ, ಕ್ಲಸ್ಟರ್ ಸಿಆರ್.ಪಿ ನಿರ್ಮಲಾ , […]

    Continue Reading