
ಮೂಡುಬಿದಿರೆ: ತಾಲೂಕಿನಾದ್ಯಾಂತ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಬಡಜನರಿಗೆ ಇನ್ಮುಂದೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟವುಳ್ಳ ಊಟ, ತಿಂಡಿ ದೊರೆಯಲಿದೆ. ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ದಿನಂಪ್ರತಿ ವಿವಿಧ ಬಗೆಯ ತಿಂಡಿಗಳಿಗೆ ಕೇವಲ ೫ ರೂ ಮೊತ್ತದಲ್ಲಿ ಹಾಗೂ ಊಟವೂ ೧೦ ರೂ ದರದಲ್ಲಿ ಸಿಗಲಿದೆ. ಯಾವ್ಯಾವ ದಿನ ಯಾವೆಲ್ಲಾ ಬಗೆಯ ಊಟ ತಿಂಡಿಗಳು ಸಿಗುತ್ತದೆಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಮೂಡುಬಿದಿರೆ: ಅಸಂಘಟಿತ ಕಾರ್ಮಿಕರು, ಬಡವರು ಹಸಿವಿನಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಾದ್ಯಂತ ಇಂದಿರಾ ಕ್ಯಾಂಟೀನನ್ನು ಆರಂಭಿಸಿದ್ದಾರೆ. ಇದು ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ಇಲ್ಲಿನ ಆಡಳಿತ ಸೌಧದ ಎದುರು ಅವರು ಬುಧವಾರ ಇಂದಿರಾ ಕ್ಯಾಂಟೀನನ್ನು ಉದ್ಘಾಟಿಸಿ ಮಾತನಾಡಿದರು. ಅಗ್ಗದ ದರದಲ್ಲಿ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟ ಸಿಗುತ್ತದೆ. ಬಡವರ ಹಸಿವು ನೀಗಿಸುವ ಇಂತಹ ಉತ್ತಮ ಸೌಲಭ್ಯ ದೇಶದ ಬೇರೆ ಯಾವ ರಾಜ್ಯಗಳಲ್ಲು ಇಲ್ಲ. […]
ಮೂಡುಬಿದಿರೆ : ಮಹತೋಭಾರ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ನಡೆಯುವ ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕದಂಗವಾಗಿ ವೈಭವದ ಹೊರೆಕಾಣಿಕೆ ಮೆರವಣಿಗೆಯು ಶುಕ್ರವಾರ ನಡೆಯಿತು.ಅನುವಂಶೀಯ ಆಡಳಿತ ಮೊಕ್ತೇಸರ, ಚೌಟರ ಅರಮನೆಯ ಕುಲದೀಪ ಎಂ. ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಅರಮನೆಯ ಅಂಗಣದಲ್ಲಿ ಎಡಪದವು ಮುರಳೀಧರ ತಂತ್ರಿಗಳು ಹಾಗೂ ಬಸದಿಗಳ ಇಂದ್ರರು ಪ್ರಾರ್ಥನೆ ನೆರವೇರಿಸಿ ದೀಪ ಪ್ರಜ್ವಲಿಸಿದರು.ಚೌಟರ ಅರಮನೆಗೆ ಸಂಬಂದಪಟ್ಟ ಶ್ರೀ ಕ್ಷೇತ್ರ ಧರ್ಮಸ್ಥಳದ ಅನಿತಾ ಸುರೇಂದ್ರ ಕುಮಾರ್ ರಾಣಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆಗೈದರು.ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ […]
ಮೂಡುಬಿದಿರೆ: ಯಾರೂ ಹರಿನಾಮ ಸಂಕೀರ್ತನೆಯನ್ನು ಭಕ್ತಿ, ಪ್ರೀತಿ, ಭಾವುಕತೆಯಿಂದ ಸಮರ್ಪಣಿಯನ್ನು ಮಾಡುತ್ತಾರೋ ಅವರಿಗೆ ಅರಿವಿಗೆ ಬರುತ್ತದೆ ಯಾವುದೂ ನಾ ಮಾಡುವುದಲ್ಲ. ಆಡಿಸುವವ ಮೇಲೊಬ್ಬನಿದ್ದಾನೆ ಎಂಬ ಸತ್ಯ ಅರಿಯುತ್ತಾನೆ. ಭಜನೆಯು ಎಷ್ಟು ಪ್ರಭಾವವನ್ನು ಹೊಂದಿದೆ ಎಂದು ತಿಳಿದಿದ್ದರೂ, ಅದನ್ನು ಅರಿತುಕೊಂಡಿರುವವರ ಸಂಖ್ಯೆ ತೀರಾ ಕಡಿಮೆ ಎಂದೆ ನಿಸುತ್ತದೆ. ಆದರೆ ಭಜನೆ ವ್ಯಾಪ್ತಿಗೆ ಅಂತ್ಯವೆಂಬುದಿಲ್ಲ. ಭಜನೆಯ ಪ್ರಭಾವ ಪ್ರಬಲವಾಗಿದೆ. ಅದನ್ನು ಕರಾವಳಿ ಭಜನಾ ಸಂಸ್ಕಾರ ವೇದಿಕೆಯು ಭಜನೆಗೆ ಇರುವ ಆಯಾಯ ಕಟ್ಟುಪಾಡುಗಳನ್ನು ಪ್ರತಿಯೊಂದು ಮನೆ ಮನೆಗೂ ತಲುಪಿಸಬೇಕು ಸುಸಂಸ್ಕೃತವಾದ ಭಜನೆಯನ್ನು […]
ಮೂಡುಬಿದಿರೆ : ಇಲ್ಲಿನ ಪುರಸಭೆಯ ಪೌರ ಕಾಮಿ೯ಕೆಯೋವ೯ರು ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುರಸಭಾ ವ್ಯಾಪ್ತಿಯ ಬಿರಾವಿನಲ್ಲಿ ಮಂಗಳವಾರ ನಡೆದಿದೆ. ಬಿರಾವು ಅರಂತ ಕಂಪೌಂಡ್ ನ ನಿವಾಸಿ ದಿ. ಚಂದ್ರಹಾಸ್ ಅವರ ಪತ್ನಿ ಯಶೋಧ (43ವ) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈಕೆ ಕಳೆದ ಕೆಲವು ವರುಷಗಳಿಂದ ಪೌರಕಾಮಿ೯ಕೆಯಾಗಿ ಪುರಸಭೆಯಲ್ಲಿ ದುಡಿಯುತ್ತಿದ್ದು ಎರಡು ವಷ೯ಗಳ ಹಿಂದೆ ಹುದ್ದೆ ಖಾಯಂ ಆಗಿತ್ತು.ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು ಓವ೯ ಕಾಲೇಜು ಶಿಕ್ಷಣ ಪಡೆಯುತ್ತಿದ್ದು ಮತ್ತೋವ೯ ಮಂಗಳೂರಿನಲ್ಲಿದ್ದಾನೆಂದು ತಿಳಿದು […]
ಮೂಡುಬಿದಿರೆ: ಇಲ್ಲಿನ ಮಾರ್ಕೆಟ್ ನಲ್ಲಿ ನಿನ್ನೆ ರಾತ್ರಿಯಿಂದ ಅನಧಿಕೃತವಾಗಿ ವ್ಯಾಪಾರ ಮಾಡಲು ಸಿದ್ಧಗೊಂಡಿದ್ದ ಸೀಯಾಳದ ಅಂಗಡಿಯನ್ನು ಮಾಜಿ ಸಚಿವ ಕೆ. ಅಭಯಚಂದ್ರ ಅವರು ತೆರವುಗೊಳಿಸಲು ಸೂಚಿಸಿದ ಹಿನ್ನೆಲೆಯಲ್ಲಿ ಪುರಸಭೆಯ ಅಧಿಕಾರಿಗಳು ಸೋಮವಾರ ಬೆಳಿಗ್ಗೆ ತೆರವುಗೊಳಿಸಿದ ಘಟನೆ ನಡೆದಿದೆ.ಕಳೆದ ಹಲವು ವರ್ಷಗಳಿಂದ ದಿನೇಶ್ ಅವರು ಸೀಯಾಳದ ವ್ಯಾಪಾರ ಮಾಡುತ್ತಾ ಬಂದಿದ್ದು ದಿನಕ್ಕೆ 150 ರೂ ಬಾಡಿಗೆಯನ್ನು ಸುಂಕವಸೂಲಿ ಗುತ್ತಿಗೆದಾರರಿಗೆ ನೀಡುತ್ತಿದ್ದರು.ಇತ್ತೀಚೆಗೆ ಮಾರ್ಕೆಟ್ ನ ಸುಂಕ ವಸೂಲಿ ಗುತ್ತಿಗೆ ಬೇರೊಬ್ಬರ ಪಾಲಾಗಿದ್ದು ಹೊಸ ಗುತ್ತಿಗೆದಾರರು ದಿನಕ್ಕೆ ರೂ 600 ಸುಂಕ […]
ಮೂಡುಬಿದಿರೆ :ವಿದ್ಯೆ ಸಾರ್ಥಕತೆಯ ಗುರಿಯನ್ನು ಹೊಂದಿರಬೇಕು. ಮನೆ ಮತ್ತು ಶಾಲೆಯ ವಾತಾವರಣ ಪೂರಕವಾಗಿದ್ದರೆ ಮಕ್ಕಳು ಸಮಾಜಕ್ಕೆ ಮತ್ತು ಊರಿಗೆ ಉತ್ತಮ ಹೆಸರು ತರಲು ಸಾಧ್ಯವಾಗುತ್ತದೆ ಎಂದು ವೈದಿಕ ಗುರುರಾಜ ಭಟ್ ಹೇಳಿದರು.ಅವರು ಶನಿವಾರ ದ.ಕ. ಜಿ.ಪಂ.ಸ.ಹಿ. ಪ್ರಾಥಮಿಕ ಶಾಲೆ ನೀರ್ಕೆರೆ, ಪ್ರತಿಭಾ ಪುರಸ್ಕಾರ ಸಮಿತಿ, ಹಳೆವಿದ್ಯಾರ್ಥಿಗಳ ಸಂಘ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಕ್ಷರ ಮಾತೆ ಸಾವಿತ್ರಿ ಬಾಯಿ ಪುಲೆ’ ಹೆಸರಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಾಲಾ ಮುಖ್ಯಶಿಕ್ಷಕಿ ಯಮುನಾ […]
ಮೂಡುಬಿದಿರೆ:ಹದಿನೆಂಟು ಮಾಗಣೆಗಳ ಒಡೆಯ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಾಲಯಕ್ಕೆ ಕೆ.ಪಿ. ಸಿ. ಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಭೇಟಿ ನೀಡಿ,ದೇವಳದ ಜೀರ್ಣೋದ್ದಾರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು, ಜೊತೆಗೆ ಉತ್ತಮ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.