
ಮೂಡುಬಿದಿರೆ :ವಿದ್ಯೆ ಸಾರ್ಥಕತೆಯ ಗುರಿಯನ್ನು ಹೊಂದಿರಬೇಕು. ಮನೆ ಮತ್ತು ಶಾಲೆಯ ವಾತಾವರಣ ಪೂರಕವಾಗಿದ್ದರೆ ಮಕ್ಕಳು ಸಮಾಜಕ್ಕೆ ಮತ್ತು ಊರಿಗೆ ಉತ್ತಮ ಹೆಸರು ತರಲು ಸಾಧ್ಯವಾಗುತ್ತದೆ ಎಂದು ವೈದಿಕ ಗುರುರಾಜ ಭಟ್ ಹೇಳಿದರು.ಅವರು ಶನಿವಾರ ದ.ಕ. ಜಿ.ಪಂ.ಸ.ಹಿ. ಪ್ರಾಥಮಿಕ ಶಾಲೆ ನೀರ್ಕೆರೆ, ಪ್ರತಿಭಾ ಪುರಸ್ಕಾರ ಸಮಿತಿ, ಹಳೆವಿದ್ಯಾರ್ಥಿಗಳ ಸಂಘ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಕ್ಷರ ಮಾತೆ ಸಾವಿತ್ರಿ ಬಾಯಿ ಪುಲೆ’ ಹೆಸರಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಾಲಾ ಮುಖ್ಯಶಿಕ್ಷಕಿ ಯಮುನಾ […]
ಮೂಡುಬಿದಿರೆ: ಕಲ್ಲಮುಂಡ್ಕೂರಿನ ಶ್ರೀ ಮಂಜುಶ್ರೀ ಭಜನಾ ಮಂಡಳಿ ಕಳಸಬೈಲು ಇದರ ೧೫ ನೇ ವರ್ಷದ ಭಜನಾ ಮಂಗಲೋತ್ಸವವು ಡಿಸೆಂಬರ್ ೨೬ ಹಾಗೂ ೨೭ ರಂದು ಮನೆ ಮನೆ ಭಜನೆ ನಡೆಯಲಿದ್ದು, ಡಿಸೆಂಬರ್ ೨೮ ಶನಿವಾರದಂದು ಭಜನಾ ಮಂಗಲೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಮಂಜುಶ್ರೀ ಭಜನಾ ಮಂಡಳಿ ಕಳಸಬೈಲು ಬಾನಂಗಡಿ , ಕಲ್ಲಮುಂಡ್ಕೂರು ಪ್ರಕಟಣೆಯಲ್ಲಿ ತಿಳಿಸಿದೆ.
ಕಾಪು:ರಾಯಲ್ ಗ್ಲೀನ್ ಕೋ ಆರ್ಡಿನೇಷನ್ ಇದರ ಪ್ರಾಯೋಜಕತ್ವದಲ್ಲಿ ಸೌಹಾರ್ದ ಮೂಡುಬಿದಿರೆ ಇದರ ಸಂಯೋಜನೆ ಯೊಂದಿಗೆ ಕಾಪುದ ಅಹಮದಿ ಮೊಹಲ್ಲಾದ ಪಕೀರ್ನಕಟ್ಟೆಯ ಜಾಮಿಯಾ ಮಸೀದಿಯಲ್ಲಿ ಉಚಿತ ಎಲ್ ಇಡಿ ಬಲ್ಬ್ ಜೋಡಿಸುವ ಸ್ವಉದ್ಯೋಗ ತರಬೇತಿ ಶಿಬಿರವುಗುರುವಾರ ನಡೆಯಿತು.ಈ ಉಚಿತ ತರಬೇತಿಯಲ್ಲಿ 70ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ . ಎಲ್ಇಡಿ ಮತ್ತು ಎಸಿ ಡಿಸಿ ಬಲ್ಬ್ ಜೋಡಿಸುವ ತರಬೇತಿ ಪಡೆದರುಸ್ವಯಂಸೇವಾ ತಂಡದ ಮಹಮ್ಮದ್ ಶಾಕಿರ್, ಮಹಮ್ಮದ್ ಶಾಫಿ ಎಲ್ ಇಡಿ ಬಲ್ಬ್ ಜೋಡಣೆ ಯ ತರಬೇತಿ ನೀಡಿದರು.ಈ ಸಂದರ್ಭದಲ್ಲಿ ರಾಯಲ್ […]
ಸದ್ಯಕ್ಕೆ ತುಳುನಾಡಿನಾದ್ಯಂತ ಬರೀ ಸದ್ದು ಮಾಡುತ್ತಿರುವ ದಸ್ಕತ್ ಸಿನಿಮಾ ಎಲ್ಲಾರ ಮನೆಮನದಲ್ಲಿ ಗುನುಗುಟ್ಟುತ್ತಿದೆ. ವಿಭಿನ್ನ ಕಥೆ, ಛಾಯಾಗ್ರಹಣ, ಸಂಗೀತ ನಟನೆಯನ್ನು ಹೊಂದಿರುವ ನೈಜ್ಯ ಶೈಲಿಯಲ್ಲಿ ಸಿನಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಅತ್ಯದ್ಭುತವಾಗಿ ಕಂಡು ಬರುವ ಪಾತ್ರ ಶೇಖರ ಎಂಬ ಕಟ್ಟುಮಸ್ತು ದೇಹ ಹೊಂದಿರುವ ಯುವಕನ ಪಾತ್ರ. ಈ ಪಾತ್ರ ಸಿನಿಪ್ರಿಯರ ಗಮನ ಸೆಳೆದಿರುವುದು ಸುಳ್ಳಾಲ್ಲ. ಆ ಪಾತ್ರಕ್ಕೆ ಜೀವ ತುಂಬಿದವರು ಒಂದು ಹಳ್ಳಿ ಪ್ರತಿಭೆ ದೀಕ್ಷಿತ್ ಅಂಡಿಂಜೆ. ಇವರು ಮೂಲತಃ ಬೆಳ್ತಂಗಡಿ ತಾಲೂಕಿನ ಅಂಡಿಂಜೆಯ ದಿ|ಸಂಜೀವ […]
ಮೂಡುಬಿದಿರೆ: ಇದು ಗೂಗಲ್ ಮಾಹಿತಿ ಸುನಾಮಿಯ ಕಾಲ, ಆದರೆ, ಶಿಕ್ಷಕರ ಸ್ಥಾನ ತುಂಬಲು ಗೂಗಲ್ ಗೆ ಸಾಧ್ಯವಿಲ್ಲ. ವಿದ್ಯಾರ್ಥಿಗಳು ನಮ್ಮ ತರಗತಿಯಲ್ಲಿ ಏಕೆ ಕುಳಿತುಕೊಳ್ಳಬೇಕು ಎಂದು ಶಿಕ್ಷಕರು ತಮ್ಮಲ್ಲಿ ಪ್ರಶ್ನಿಸಿಕೊಳ್ಳಬೇಕು. ಆಗ ತರಗತಿಯ ಎಲ್ಲ ವಿದ್ಯಾರ್ಥಿಗಳು ಬುದ್ಧಿವಂತರಾಗುತ್ತಾರೆ ಎಂದು ರಾಜೀವ್ ಗಾಂಧಿ ಅರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ. ರಾಮಚಂದ್ರ ಸೆಟ್ಟಿ ಹೇಳಿದರು.ಆಳ್ವಾಸ್ ಪ್ರಕೃತಿಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಯೋಗ ಸಭಾಂಗಣದಲ್ಲಿ ಶಿಕ್ಷಕರಿಗಾಗಿ ನಡೆದ ಆರು ದಿನಗಳ ರಾಷ್ಟ್ರೀಯ ಮಟ್ಟದ […]
ಮೂಡುಬಿದಿರೆ:ಹದಿನೆಂಟು ಮಾಗಣೆಗಳ ಒಡೆಯ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಾಲಯಕ್ಕೆ ಕೆ.ಪಿ. ಸಿ. ಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಭೇಟಿ ನೀಡಿ,ದೇವಳದ ಜೀರ್ಣೋದ್ದಾರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು, ಜೊತೆಗೆ ಉತ್ತಮ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.
ಮಂಗಳೂರು: ಡಾ. ದಾಮೋದರ ಗೌಡ ಕೆ.ಎಂ, ಫಿಸಿಯಾಲಜಿಯ ಆಸೋಸಿಯೇಟ್ ಪ್ರೊಫೆಸರ್, ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ, ನಿಟ್ಟೆ ವಿಶ್ವವಿದ್ಯಾಲಯ, ಅವರಿಗೆ ಇಂಡಿಯನ್ ಅಸೋಸಿಯೇಶನ್ ಆಫ್ ಬಯೋಮೆಡಿಕಲ್ ಸೈನ್ಟಿಸ್ಟ್ಸ್ (IABMS) ನ ಕಾರ್ಯನಿರ್ವಾಹಕ ಸಮಿತಿಯಿಂದ “ಫೆಲೋ” ಪದವಿಯನ್ನು 45ನೇ ವಾರ್ಷಿಕ ಸಮ್ಮೇಳನದಲ್ಲಿ ಪ್ರದಾನ ಮಾಡಲಾಯಿತು.ಈ ಸಮ್ಮೇಳನವು ಮಂಗಳೂರು ಎ.ಜೆ. ಮೆಡಿಕಲ್ ಸೈನ್ಸಸ್ ಮತ್ತು ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆಯಿತು.ಭಾರತದಾದ್ಯಂತ ಒಟ್ಟು ಆರು IABMS ಜೀವನ ಸದಸ್ಯರನ್ನು ಈ ಪದವಿಗಾಗಿ ಆಯ್ಕೆ ಮಾಡಲಾಯಿತು. ಬಯೋಮೆಡಿಕಲ್ ಸೈನ್ಸಸ್ ಕ್ಷೇತ್ರದಲ್ಲಿ ಸಂಶೋಧನಾ ಅನುಭವಗಳಲ್ಲಿ ಅತ್ಯುತ್ತಮ […]
ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವ ಸಂದರ್ಭ ಗ್ದಾಮಸ್ಥರು ಓಡಾಡುವ ಸಂಪರ್ಕ ರಸ್ತೆಯನ್ನು ಮುಚ್ಚದೆ ಗ್ರಾಮೀಣ ರಸ್ತೆಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಅಲ೦ಗಾರು ಪೋಯ್ಯೆದಪಲ್ಕೆ, ಕಾನ, ಅ೦ಬೂರಿ, ಮ೦ಜನಕಟ್ಟೆ,ಬೆಳುವಾಯಿ, ಗ್ರಾಮದ ಗ್ರಾಮಸ್ಥರು ಬುಧವಾರ ಪೋಯ್ಯದಪಲ್ಕೆ ಎಂಬಲ್ಲಿ ಪ್ರತಿಭಟನೆ ನಡೆಸಿದರು.ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಇಂತಹ ಫೈ ಓವರ್‌ಗಳ ಕಾಮಗಾರಿಗಳು ಜನರಿಗೆ ತೊಂದರೆಯಾಗುತ್ತಿವೆ. ಈ ಮಾರ್ಗಕ್ಕೆ ಅಂಡರ್‌ಪಾಸ್ ಮಾರ್ಗವನ್ನಾದರೂ ನಿರ್ಮಿಸಿ ಕೊಡಬೇಕು. ಸಂಪೂರ್ಣವಾಗಿ ಈ ರಸ್ತೆ ಮುಚ್ಚಬಾರದು. ಇಂತಹ ಅನ್ಯಾಯದ ವಿರುದ್ಧ ಹೋರಾಡಲು ಮೂಡುಬಿದಿರೆಯ ಜನತೆ […]
ಮೂಡುಬಿದಿರೆ: ಮಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು, ಸಖಿ ಒನ್‌ಸ್ಟಾಪ್ ಸೆಂಟರ್ ಸರ್ಕಾರಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು, ಸಮುದಾಯ ಆರೋಗ್ಯ ಕೇಂದ್ರ ಮೂಡುಬಿದಿರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್‌ಟೌನ್, ಇನ್ನರ್‌ವೀಲ್ ಕ್ಲಬ್ ಮೂಡುಬಿದಿರೆ ಇವರ ಸಹಭಾಗಿತ್ವದಲ್ಲಿ ಲಿಂಗತ್ವಾಧಾರಿತ ದೌರ್ಜನ್ಯ ತಡೆ ಹಾಗೂ ಮಹಿಳಾ ಸಹಾಯವಾಣಿ ಕುರಿತು ಅರಿವು ಕಾರ್ಯಕ್ರಮವನ್ನು ಇನ್ನರ್‌ವೀಲ್ ಕ್ಲಬ್‌ನ ಅಧ್ಯಕ್ಷೆ ಬಿಂಧ್ಯಾ ಶರತ್ ಉದ್ಘಾಟಿಸಿದರು.ಸಂಪನ್ಮೂಲ ವ್ಯಕ್ತಿಯಾದ ಸಖಿ ಒನ್ ಸ್ಟಾಪ್ ಸೆಂಟರ್‌ನ ಆಡಳಿತಾಧಿಕಾರಿ […]
ಮೂಡುಬಿದಿರೆ: ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಶ್ರೀ ಕ್ಷೇತ್ರ ಇರುವೈಲು ಇದರ ೭೫ ನೇ ಭಜನಾ ಮಂಗಲೋತ್ಸವದ ನಗರ ಭಜನೆಯು ಆದಿತ್ಯವಾರ ದೇವಿಯ ಸನ್ನಿಧಿಯಲ್ಲಿ ಪೂಜಾ ವಿಧಿ ವಿಧಾನಗಳನ್ನು ಕ್ಷೇತ್ರದ ಪ್ರಧಾನ ಅರ್ಚಕ ರಾಘವೇಂದ್ರ ಆಸ್ರಣ್ಣ ನೇರವೇರಿಸಿದರು. ಕೈಯಲ್ಲಿ ತಾಳ ಹಿಡಿದು ಭಜಕರೊಡಗೂಡಿ ಭಜನೆಯನ್ನು ಹಾಡಿ ೭೫ ರ ಸಂಭ್ರಮದ ಭಜನಾ ಮಂಗಲೋತ್ಸವದ ಮನೆ ಮನೆ ನಗರ ಭಜನೆಯನ್ನು ದೇವಿಯ ಸನ್ನಿಧಿಯಿಂದ ಪ್ರಾರಂಭಿಸಿದರು.ಭಜನಾ ಪ್ರಿಯೇ ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಧನು ಸಂಕ್ರಮಣದಿಂದ ಆರಂಭಗೊಂಡು ಮಕರ ಸಂಕ್ರಮಣದವರೆಗೆ […]