
ಮೂಡುಬಿದಿರೆ: ಆಳ್ವಾಸ್ ವಿರಾಸತ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನದ ಬಳಿಕ ಸುಧೆಯಾಗಿ ಹರಿದದ್ದು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಅವರ ಸ್ವರ ಮಾಧುರ್ಯ.ಶ್ರೀ ರಾಗದ ಮೂಲಕ ಕಛೇರಿ ಆರಂಭಿಸಿದ ಅವರು ಮುರಲೀ ಸ್ತುತಿಸುತ್ತಾ ‘ಆನಂದ ದೇ ಮುಖ ಚಂದ್ರ ಐ ಸೇ ಚಾಂದನಿ ಸಾಂದ್ರ…’ಬಾದಲ್ ಆಯೇ ನಭಾ ಮೇ…ಯಾದ’ ಸಂಗಶ್ರೋತ್ರವಿನ ಯೋಚನಾ ಲಹರಿಗೆ ತೆರೆದುಕೊಳ್ಳುವ ಪುರಾತನ ಶ್ರೀ ರಾಗ ಹಾಡಿದ ಅವರು, ‘ ಗಾಯನ ಕೇಳುಗರಿಗೆ ಸುಲಲಿತ ಹಾಗೂ ಇಂಪಾಗಿರಬೇಕು’ ಎಂದು ಕೇಳುವುದನ್ನೂ […]
ಕಾರ್ಕಳ:ರೋಯಲ್ ಗ್ಲೇಮ್ ಕಂಪೆನಿ ಹಾಗೂ ಮೆಡಿಸಿನ್ ಹೆಲ್ಪ್ ಲೈನ್ ಕಾರ್ಕಳ ಇವುಗಳ ಜಂಟಿ ಆಶ್ರಯದಲ್ಲಿ ಕಾರ್ಕಳದ ಮದೀನ ಮಸ್ಜಿದ್ ಹಾಲ್ ನಲ್ಲಿ ಮಹಿಳೆಯರಿಗೆ ಉಚಿತ ಎಲ್ ಈ ಡಿ ಬಲ್ಬ್ ಜೋಡಣೆ ಮಾಡುವ ಸ್ವ ಉದ್ಯೋಗ ಕಾರ್ಯಕ್ರಮ ನಡೆಯಿತು.ಸುಮಾರು 60 ಕ್ಕೂ ಹೆಚ್ಚು ಮಹಿಳೆಯರು ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.ರೋಯಲ್ ಗ್ಲೇಮ್ ಕಂಪೆನಿ ಯ ಪದಾಧಿಕಾರಿಗಳು ಎಲ್ ಈ ಡಿ ಬಲ್ಬ್ ಜೋಡಿಸುವ ವಿಧಾನ ಮತ್ತು ಇದರ ಪ್ರಯೋಜನ ದ ಕುರಿತು ಮಾಹಿತಿಯನ್ನು ನೀಡಿದರು.ರೋಯಲ್ […]
ಮೂಡುಬಿದಿರೆ: ಮಂಗಳೂರು- ಮೂಡುಬಿದಿರೆ- ಕಾರ್ಕಳ ನಡುವೆ ಸರ್ಕಾರಿ ಬಸ್ ಬೇಕೆಂಬುವುದು ವಿದ್ಯಾರ್ಥಿಗಳೂ ಸೇರಿದಂತೆ ಸಾರ್ವಜನಿಕರ ಬೇಡಿಕೆಯಾಗಿತ್ತು. ಜನರ ಈ ಬಹುದಿನಗಳ ಬೇಡಿಕೆಯು ಇನ್ನೇನೂ ಪೂರ್ಣಗೊಂಡಿದೆ ಎಂದಾಗ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳ ನಡುವೆ ಪೋಸ್ಟರ್ ಗುದ್ದಾಟ ಸದ್ದು ಮಾಡುತ್ತಿದೆ.ಇತ್ತ ಕಡೆ ಬಿಜೆಪಿ ಪಕ್ಷವು ಸರ್ಕಾರಿ ಬಸ್ ಮೂಡುಬಿದಿರೆ, ಕಾರ್ಕಳ ಹಾಗೂ ಮಂಗಳೂರು ಮಧ್ಯೆ ಸಂಚಾರಿಸಲು ಶಾಸಕರೇ ಅವಿರತವಾಗಿ ಪ್ರಯತ್ನ ನಡೆಸಿ ಸರ್ಕಾರಿ ಬಸ್ ಬಂದಿದೆ ಎಂದು ಪೋಸ್ಟರ್‌ನ್ನು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡುತ್ತಿದ್ದರೆ, ಇತ್ತ […]
ಮೂಡುಬಿದಿರೆ): ಕರಾವಳಿಯ (ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ) ಯುವಜನತೆ ಕೃಷಿ ವಿಮುಖರಾಗುತ್ತಿದ್ದು, ಮಣ್ಣಿನೆಡೆಗೆ ಅವರನ್ನು ಸೆಳೆಯುವ ಇಂತಹ ಕಾರ್ಯಕ್ರಮಗಳು ಆದರ್ಶ ಮತ್ತು ಅನುಕರಣೀಯ’ ಎಂದು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ. ಜಗದೀಶ್ ಹೇಳಿದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಡಿ.೧೦ ರಿಂದ ಡಿ. ೧೫ರವರೆಗೆ ಆಯೋಜಿಸಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘೩೦ನೇ ವರ್ಷದ ಅಳ್ವಾಸ್ ವಿರಾಸತ್’ ಅಂಗವಾಗಿ ಏರ್ಪಾಡಿಸಲಾದ ಅನ್ವೇಷಣಾತ್ಮಕ ಶತಾಯುಷಿ ಕೃಷಿಕ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ಕೃಷಿಮೇಳ, […]
ಮೂಡುಬಿದಿರೆ : ೨೦೨೩-೨೪ ಹಾಗೂ ೨೪-೨೫ ನೇ ಸಾಲಿನ ೧೫ನೇ ಹಣಕಾಸು ಯೋಜನೆಯ ಅನುದಾನ, ನಗರೋತ್ಥಾನ ಹಂತ-೪ ಎಸ್.ಎಫ್ .ಸಿ ಮುಕ್ತ ನಿಧಿ ಅನುದಾನ ಹಾಗೂ ಪುರಸಭಾ ನಿಧಿಯ ಅನುದಾನದಡಿ ಸಹಿತ ಒಟ್ಟು ರೂ ೫.೧೨ ಕೋ.ವೆಚ್ಚದಲ್ಲಿ ನಡೆಯಲಿರುವ ವಿವಿಧ ಕಾಮಗಾರಿಗಳಿಗೆ ಶಾಸಕ ಉಮಾನಾಥ ಎ.ಕೋಟ್ಯಾನ್ ಶನಿವಾರ ಪುರಸಭೆಯಲ್ಲಿ ಶಿಲಾನ್ಯಾಸಗೈದರು.ಶಿಲಾನ್ಯಾಸಗೈದು ಮಾತನಾಡಿದ ಕೋಟ್ಯಾನ್ ಅವರು ಪುರಸಭೆಯ ಆರ್ಥಿಕ ಸ್ಥಿತಿಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಒಂದು ಕೋ.ವೆಚ್ಚದಲ್ಲಿ ಮೂಡುಬಿದಿರೆಯ ಹೃದಯ ಭಾಗದಲ್ಲಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲಾಗುತ್ತಿದೆ. ಜ್ಯೋತಿನಗರದ ಬಳಿ ಎಂ.ಆರ್.ಘಟಕವನ್ನು […]
ಮೂಡುಬಿದಿರೆ: ತಾಲೂಕಿನ ಹೊಸಬೆಟ್ಟು ಗ್ರಾಮದ ಪಂಜಿರೇಲು ಕಾಯರ್‌ದ ಬಾಕ್ಯಾರ್ ಗಡುಪಡು ಸ್ಥಳದಲ್ಲಿ ಡಿಸೆಂಬರ್ ದೊಂಪದ ಬಲಿ ನಡೆಯಲಿದ್ದು, ಆ ದಿನ ಸಂಜೆ ಗಂಟೆ ೬ ಕ್ಕೆ ಸರಿಯಾಗಿ ಹೊಸಬೆಟ್ಟು ಗುತ್ತುವಿನಿಂದ ಕೊಡಮಣಿತ್ತಾಯ ಭಂಡಾರ ಹಾಗೂ ಬಾಂದೊಟ್ಟು ಬರ್ಕೆಯಿಂದ ದೈವ ಕುಮಾರನ ಭಂಡಾರ ಬರಲಿದೆ. ಹಾಗೂ ರಾತ್ರಿ ೧೨ ಗಂಟೆಗೆ ಮಹಾಮ್ಮಾಯಿ ದೇವಿಗೆ ಗದ್ದಿಗೆ ಪೂಜೆ ಹಾಗೂ ರಾತ್ರಿ ೧೨ ರಿಂದ ಮಹಾಮ್ಮಾಯಿ ದೇವಿಗೆ ಗದ್ದಿಗೆ ಪೂಜೆ ನಡೆಯಲಿದೆ
ಮೂಡುಬಿದಿರೆ: ಇಲ್ಲಿನ ವಿದ್ಯಾಗಿರಿ ಬಳಿ ನೂತನವಾಗಿ ಆರಂಭಗೊಂಡ ಅಶೋಕ್ ಅಂಚನ್ ಮಾಲಕತ್ವದ ಸ್ಟೋರಿಸ್ ಬೈ ಕ್ಯಾಂಡಿಡ್ ಕ್ಲಬ್ ನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಅವರು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಅಶೋಕ್ ಅವರು ತಮ್ಮ ಊರಿನಲ್ಲಿಯೇ ಇದ್ದುಕೊಂಡು ಸ್ಟೋರಿಸ್ ಬೈ ಕ್ಯಾಂಡಿಡ್ ಕ್ಲಬ್ ಎಂಬ ನೂತನವಾದ ಸ್ಟುಡಿಯೋವನ್ನು ಪ್ರಾರಂಭಿಸಿರುವುದು ಖುಷಿಯ ವಿಚಾರ. ಫೋಟೋಗ್ರಾಫಿ ವೃತ್ತಿಯಲ್ಲಿ ಸಾಕಷ್ಟು ಅವಕಾಶಗಳಿದ್ದು, ಮೂಡುಬಿದಿರೆ ವ್ಯಾಪ್ತಿಯಲ್ಲಿ ವಿವಿಧ ವಿದ್ಯಾಸಂಸ್ಥೆಗಳು, ಹಾಗೂ ೫೦ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದು, […]
ಮಂಗಳೂರು: ಮನುಷ್ಯನ ಅನೇಕ ದುರಾಸೆಯ ಫಲವೇ ಹವಾಮಾನ ವೈಪರೀತ್ಯಕ್ಕೆ ಮೂಲ ಕಾರಣ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿನ ಮುಂದುವರಿದ ಅಧ್ಯಯನಗಳ ರಾಷ್ಟ್ರೀಯ ಸಂಸ್ಥೆ (ಎನ್‌ಐಎಎಸ್)ಯ ಇಸ್ರೋ ಮುಖ್ಯ ಪ್ರಾಧ್ಯಾಪಕ ಡಾ. ಪಿ. ಜಿ. ದಿವಾಕರ್ ಅಭಿಪ್ರಾಯಪಟ್ಟರು.ಅವರು ಬುಧವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮತ್ತು ಎನ್‌ಐಎಎಸ್ ಜಂಟಿ ಆಶ್ರಯದಲ್ಲಿ ಉಳ್ಳಾಲದ ಬಿಎಂ ಶಾಲೆಯಲ್ಲಿ ಹಮ್ಮಿಕೊಂಡ ‘ವಿದ್ಯಾರ್ಥಿ- ವಿಜ್ಞಾನಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯು ತೀವ್ರ ಸಮಸ್ಯೆಯಾಗಿ ಬೆಳೆಯುತ್ತಿದೆ. ಅದರಲ್ಲೂ ,ಕರಾವಳಿ ಭಾಗದ ಜನರಿಗೆ ವಾತಾವರಣದಲ್ಲಾಗುವ […]
ಮೂಡುಬಿದಿರೆ: ಇಲ್ಲಿನ ಬೆಳುವಾಯಿ ಪೇಟೆ ಪಕ್ಕದಲ್ಲೇ ರಾತ್ರಿ ಹಗಲೆನ್ನದೆ ಹೈಟೆಕ್ ಇಸ್ಪೀಟು ದಂಧೆ ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕೆಲ ದಿನಗಳ ಹಿಂದೆ ಪೊಲೀಸರು ಇಲ್ಲಿನ ಇಸ್ಪೀಟು ಅಡ್ಡೆಗೆ ದಾಳಿ ನಡೆಸಿ ಕೆಲವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದೀಗ ಮತ್ತೆ ದೊಡ್ಡ ಮಟ್ಟಿನಲ್ಲಿ ಅದೂ ಕೂಡಾ ಪೇಟೆಯ ಪಕ್ಕದಲ್ಲೇ ನಡೆಯುತ್ತಿದೆ ಎಂಬ ಸಾರ್ವಜನಿಕರಿಂದ ದೂರು ಕೇಳಿಬರುತ್ತಿದೆ.
ಮೂಡುಬಿದಿರೆ: ಮಂಗಳೂರಿನ ಸಸಿಹಿತ್ಲುವಿನಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಸ್ಪರ್ಧಿಸಿದ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.ಜನಪದ ನೃತ್ಯ (ಡೊಳ್ಳು- ಪ್ರಥಮ), ಜನಪದ ನೃತ್ಯ (ಏಕವ್ಯಕ್ತಿ) ಪ್ರಥಮ, ಕತೆ ಬರೆಯುವುದು- ಪ್ರಥಮ ಮತ್ತು ದ್ವಿತೀಯ, ಭಾಷಣ ಕಲೆ -ಪ್ರಥಮ, ಕವಿತೆ ಬರೆಯುವುದು -ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದಿದ್ದಾರೆ.ಪ್ರಥಮ ಬಹುಮಾನ ವಿಜೇತರು ರಾಜ್ಯಮಟ್ಟದ ಯುವಜನೋತ್ಸವಕ್ಕೆ ಆಯ್ಕೆಯಾಗಿದ್ದಾರೆ.ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ […]