
ಮಂಗಳೂರು: ಕರಾವಳಿ ಭಜನಾ ಸಂಸ್ಕಾರ ವೇದಿಕೆ ಮಂಗಳೂರು ಇದರ ದಕ್ಷಿಣ ಕನ್ನಡ ಜಿಲ್ಲಾ ವಿಶೇಷ ಸಭೆಯನ್ನು ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಮೂಡುಶೆಡ್ಡೆ ಯವರ ಅಧ್ಯಕ್ಷತೆಯಲ್ಲಿ ಬಂಟ್ಸ್ ಹಾಸ್ಟೆಲ್ ಸಭಾಭವನ ಭಾನುವಾರ ನಡೆಯಿತುಸಭೆಯಲ್ಲಿ ಸಂಘಟನೆಯ ಉದ್ದೇಶದ ಬಗ್ಗೆ ಮತ್ತು ಬೈಲಾ ದ ಬಗ್ಗೆ ಸಂಘಟನೆಯ ಗೌರವ ಸಲಹೆಗರರಾದ ನರೇಶ್ ಕುಮಾರ್ ಸಸಿಹಿತ್ಲು ಇವರು ಪ್ರಾಸ್ತಾವಿಕ ಮಾತನಾಡಿದರು.ಸಂಘಟನೆಯ ಗೌರವಾಧ್ಯಕ್ಷ ರಮೇಶ್ ಕಲ್ಮಾಡಿ ಮಾತನಾಡಿ,ಭಜನಾ ಸ್ಪರ್ಧೆಯ ಬಗ್ಗೆ ಚೌಕಟ್ಟು ಯಾಕೆ ಬೇಕು ಎನ್ನುವ ಬಗ್ಗೆ ಮಾಹಿತಿ ನೀಡಿದರು.ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಪೂಜಾರಿ […]
ಮೂಡುಬಿದಿರೆ: ತಾಲೂಕಿನ ಅಳಿಯೂರಿಗೆ ಮಂಜೂರಾಗಿರುವ ಸರಕಾರಿ ಪ.ಪೂ. ಕಾಲೇಜಿಗೆ ವಿವೇಕ ಯೋಜನೆಯಡಿ ರೂ 1ಕೋಟಿ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಕೊಠಡಿಗಳಿಗೆ ಶಾಸಕ ಉಮನಾಥ್ ಎ ಕೋಟ್ಯಾನ್ ಸೋಮವಾರ ಶಿಲಾನ್ಯಾಸಗೈದರು.ಇದೇ ಸಂದರ್ಭದಲ್ಲಿ ಸಹಸ್ರ ಪೌಂಡೇಶನ್ ವತಿಯಿಂದ ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಸೌರಶಕ್ತಿ ಸ್ಯಾನಿಟರಿ ಪ್ಯಾಡ್ ಮೆಷಿನನ್ನು ಶಾಲೆಗೆ ಹಸ್ತಾಂತರಿಸಲಾಯಿತು.ಪ್ರವೀಣ್ ಭಟ್ ಅಳಿಯೂರು ಅವರು ಶಿಲಾನ್ಯಾಸದ ವೈದಿಕ ಕಾರ್ಯ ನಡೆಸಿದರು.ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ, ಉಪಾಧ್ಯಕ್ಷ ಗಣೇಶ್ ಬಿ.ಅಳಿಯೂರು, ಪ್ರೌಢಶಾಲಾ ಎಸ್ ಡಿಎಂಸಿ ಅಧ್ಯಕ್ಷ ಪ್ರದೀಪ್ ಕುಮಾರ್, ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ […]
ಮೂಡುಬಿದಿರೆ: ನೆಲ್ಲಿಕಾರಿನ ಬೋರುಗುಡ್ಡೆಎಂಬಲ್ಲಿ ಮನೆಯೊಂದರ ಹಟ್ಟಿಯಿಂದ ಜಾನುವಾರುಗಳನ್ನು ಕಳವು ಗೈಯಲು ಮುಂದಾಗಿದ್ದ ತಂಡವೊಂದನ್ನು ಮೂಡಬಿದ್ರಿ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ ಪಿ.ಜಿ ನೇತೃತ್ವದ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.ಮೂಡುಬಿದಿರೆಯ ಗಂಟಾಲ್ ಕಟ್ಟೆ ಮಹಮ್ಮದ್ ಸಪ್ಟನ್, ಸಲೀಂ ಬಂಧಿತ ಆರೋಪಿಗಳು.ನವಂಬರ್ 22ರ ನಸುಕಿನ ಜಾವ 2.15ರ ವೇಳೆಗೆ ಮೂಡುಬಿದಿರೆಯ ನೆಲ್ಲಿಕಾರಿನ ಬೋರುಗುಡ್ಡೆ ಎಂಬಲ್ಲಿ ಪಂಜ ಮನೆಯ ಹಟ್ಟಿಯ ಬಳೆ ಬಿಳಿ ಕಾರೊಂದು ನಿಲ್ಲಿಸಲಾಗಿತ್ತು. ಕಾರಿನ ಶಬ್ದ ಕೇಳಿ ಮನೆ ಮಂದಿ ಹೊರಬಂದಾಗ ಕಾರು ಚಾಲನೆಯ ಸ್ಥಿತಿಯಲ್ಲಿ ಕಂಡು ಬಂತು. […]
ಮೂಡುಬಿದಿರೆ: 2024 ನೇ ಸಾಲಿನ ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಅವರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮವು ಶನಿವಾರ ಎಕ್ಸಲೆಂಟ್ ನ ರಾಜ ಸಭಾಂಗಣದಲ್ಲಿ ನಡೆಯಿತು.ಕಾರ್ಕಳ ವರ್ಧಮಾನ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿರುವ ಶಶಿಕಲಾ ಹೆಗ್ಡೆ ಅಭಿನಂದನಾ ಮಾತುಗಳನ್ನಾಡಿ, ಸೂಕ್ತ ಅವಕಾಶ ಸಿಕ್ಕಲ್ಲಿ ಸಾಧನೆಯ ಶಿಖರವನ್ನು ಏರಲು ಸಾಧ್ಯ ಅನ್ನುವುದಕ್ಕೆ ರಶ್ಮಿತಾ ಜೈನ್ ಅವರೇ ಸಾಕ್ಷಿ ಎಂದರು. ಬಾಲ್ಯದಿಂದಲೂ ಅವರೊಡನೆ ಒಡನಾಡಿದ ನೆನಪುಗಳನ್ನು ಮೆಲುಕು ಹಾಕುತ್ತಾ ರಶ್ಮಿತಾ […]
ಮೂಡುಬಿದಿರೆ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಮಂಗಳೂರಿನ ಲಕ್ಷಿö್ಮÃ ಮೆಮೋರಿಯಲ್ ಫಿಸಿಯೋಥೆರಪಿ ಕಾಲೇಜು ಸಹಯೋಗದಲ್ಲಿ ನವೆಂಬರ್ 21 ಮತ್ತು 22ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಅಂತರ ಕಾಲೇಜು ವೇಯ್ಟ್ ಲಿಫ್ಟಿಂಗ್, ಪವರ್ ಲಿಫ್ಟಿಂಗ್ ಮತ್ತು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಆಳ್ವಾಸ್ ಹೋಮೀಯೋಪಥಿ ಕಾಲೇಜಿನ ವಿದ್ಯಾರ್ಥಿಗಳು ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸಮಗ್ರ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದಾರೆ.ಶಶಾಂಕ್ ನಾಗರಾಜ್ ದೊಡ್ಡಮನಿ (55 ಕೆಜಿ ವಿಭಾಗ), ಈರಯ್ಯ ಬಸಯ್ಯ ಹಿರೇಮಠ್ (61 ಕೆಜಿ ವಿಭಾಗ), ಪವನ್ ಎಸ್ ದೊಡ್ರಲ್ […]
ಮೂಡುಬಿದಿರೆ: ‘ಬರಹ ಅಥವಾ ಕಾವ್ಯವನ್ನು ರಂಗರೂಪಕ್ಕೆ ತರುವುದು ಒಂದು ಸಾಹಸ. ‘ಚಾರುವಸಂತ’ದ ಮೂಲಕ ಹಂಪನಾ ಅವರ ಕನಸು ಈಡೇರಿದೆ’ ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಎ. ವಿವೇಕ ರೈ ಹೇಳಿದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ನಗರದ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡ ರಂಗ ಮಾಂತ್ರಿಕ ಜೀವನ್‌ರಾಂ ಸುಳ್ಯ ನಿರ್ದೇಶನದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ವಿದ್ಯಾರ್ಥಿಗಳು ಅಭಿನಯಿಸಿದ, ಹಂಪನಾ ವಿರಚಿತ ದೇಸೀ ಮಹಾ ಕಾವ್ಯದ ರಂಗರೂಪ ‘ಚಾರು ವಸಂತ’ ನಾಟಕದ ಪ್ರದರ್ಶನ, ರಂಗಪಯಣ ಉದ್ಘಾಟನೆ ಮತ್ತು […]
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ತಂಡವು ಕುಂದಾಪುರದ ಭಂಡಾಕರ‍್ಸ್ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾಲಯ ಆಶ್ರಯದಲ್ಲಿ ಜರುಗಿದ ಮಂಗಳೂರು ವಿ.ವಿ. ಅಂತರ್ ಕಾಲೇಜು ಬಾಡಿ ಬಿಲ್ಡಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆಯಿತು. ಆಳ್ವಾಸ್ ಕಾಲೇಜಿನ ಕಿಶಾನ್ ಶೆಟ್ಟಿ ಮಿ. ಯೂನಿವರ್ಸಿಟಿ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು. ದ್ವಿತೀಯ ತಂಡ ಪ್ರಶಸ್ತಿ ಎಸ್.ಡಿ.ಎಮ್ ಬಿ ಬಿ ಎಮ್ ಮಂಗಳೂರು, ತೃತೀಯ ತಂಡ ಪ್ರಶಸ್ತಿ ಸೆಕ್ರೇಡ್ ಹಾರ್ಟ್ ಕಾಲೇಜು ಮಡಂತ್ಯಾರು ಪಡೆಯಿತು. 15ನೇ ಬಾರಿ ಸಮಗ್ರ ಪ್ರಶಸ್ತಿಯನ್ನು ಪಡೆಯುತ್ತಾ ಬಂದಿರುವ ಆಳ್ವಾಸ್ […]
ಮೂಡುಬಿದಿರೆ: ಪ್ರಕೃತಿ ಚಿಕಿತ್ಸಾ ಪದ್ಧತಿಯು ಅತ್ಯುತ್ತಮ ಜೀವನವನ್ನು ನಡೆಸಲು ರಹದಾರಿಯಾಗಿದ್ದು ಇದರ ಮೂಲ ತತ್ವಗಳನ್ನು ಪಾಲಿಸುವುದರಿಂದ ಜೀವನ ಶೈಲಿ ಬದಲಾವಣೆಯಾಗುವುದಲ್ಲದೇ ಯೋಗಭ್ಯಾಸಗಳಿಂದ ಆಯುಷ್ಯ ವೃದ್ಧಿಯಾಗುತ್ತದೆ ಎಂದು ಪ್ರಕೃತಿ ಚಿಕಿತ್ಸಾ ತಜ್ಞ ಡಾ. ಮಹಮ್ಮದ್ ರಫೀಕ್ ತಿಳಿಸಿದರು.ಅವರು ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜು ಆಯೋಜಿಸಿದ್ದ 7ನೇ ರಾಷ್ಟಿçÃಯ ಪ್ರಕೃತಿ ಚಿಕಿತ್ಸಾ ದಿನದ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಪ್ರಕೃತಿ ಚಿಕಿತ್ಸೆ ಮತ್ತು ಯೋಗವನ್ನು ಸರಿಯಾಗಿ ಪಾಲಿಸುವುದರಿಂದ ಮಾನಸಿಕ ಸ್ಥಿತಿಗತಿಗಳನ್ನು ಸಮತೋಲನದಲ್ಲಿಟ್ಟುಕೊಳ್ಳಬಹುದು. ಆ ಮೂಲಕ ಎಲ್ಲಾ ವರ್ಗದ ಮತ್ತು […]
ಮೂಡುಬಿದಿರೆ: ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಮಹತ್ವದ ಪ್ರಯೋಗ, ನಾಡೋಜ ಹಂಪನಾ ವಿರಚಿತ ದೇಸೀ ಮಹಾಕಾವ್ಯದ ರಂಗರೂಪ “ಚಾರುವಸಂತ ” ನಾಟಕವು ಮತ್ತೆ ರಂಗಕ್ಕೆ ಬರಲು ಸಿದ್ಧತೆ ನಡೆಸಿದೆ. ನ.21 ,22 ರಂದು ಮೂಡುಬಿದಿರೆಯ ಸ್ಕೌಟ್ ಗೈಡ್ ಕನ್ನಡಭವನದಲ್ಲಿ ಮೊದಲೆರಡು ಪ್ರದರ್ಶನ ಏರ್ಪಡಿಸಲಾಗಿದೆ.ಡಾ.ನಾ.ದಾಮೋದರ ಶೆಟ್ಟಿ ರಚಿಸಿದ, ಡಾ.ಜೀವನ್ ರಾಂ ಸುಳ್ಯ ನಿರ್ದೇಶನದ ಚಾರುವಸಂತವು ಕಳೆದ ವರ್ಷ ರಾಜ್ಯಾದ್ಯಂತ ಪ್ರದರ್ಶನ ನಡೆಸಿ ಸಂಚಲನ ಮೂಡಿಸಿತ್ತು. ಬಹುಬೇಡಿಕೆಯ ನಾಟಕವಾಗಿರುವ ಚಾರುವಸಂತ ಮತ್ತೆ ತನ್ನ ಚೈತ್ರಯಾತ್ರೆ ಕೈಗೊಳ್ಳಲಿದೆ.ನ.21 ರಂದು ಗುರುವಾರ ಸಂಜೆ 6.15 […]
ಮೂಡುಬಿದಿರೆ:ಬೆಳುವಾಯಿ ಪಂಚಾಯಿತಿ ಮಾಜಿ ಸದಸ್ಯ, ಕಾನಾ ನಿವಾಸಿ ಸಿವಿಲ್ ಗುತ್ತಿಗೆದಾರ ಮಾಧವ ಭಂಡಾರಿ(61)ಅನಾರೋಗ್ಯದಿಂದ ಬುಧವಾರ ನಿಧನರಾದರು. ಅವರು ಈ ಹಿಂದೆಮೂಡುಬಿದಿರೆಯಲ್ಲಿ ಹಲವು ವರ್ಷ ಸ್ವಂತ ಸೆಲೂನ್ ಹೊಂದಿದ್ದರು. ಸಿವಿಲ್ ಗುತ್ತಿಗೆದಾರರಾಗಿದ್ದು ಜತೆಗೆ ರಿಯಲ್ ಎಸ್ಟೇಟ್ ವ್ಯವಹಾರವನ್ನು ಮಾಡುತ್ತಿದ್ದರು. ಅವರಿಗೆ ಪತ್ನಿ,ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ.