
ಮೂಡುಬಿದಿರೆ: ಬನ್ನಡ್ಕ ರಾಷ್ಟಿಯ ಹೆದ್ದಾರಿ ಬಳಿ ಸೋಮವಾರ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ, ದ್ವಿಚಕ್ರ ವಾಹನ ಸವಾರ, ಸ್ಥಳೀಯವಾಗಿ ಗೂಡಂಗಡಿ ನಡೆಸುತ್ತಿದ್ದ ಅಬ್ದುಲ್ ಘನಿ ಮೃತಪಟ್ಟಿದ್ದಾರೆ.ಇನ್ನೊಂದು ದ್ವಿಚಕ್ರ ವಾಹನದಲ್ಲಿದ್ದ ಸಂದೀಪ್ ನಾಯಕ್ ಸಣ್ಣಪುಟ್ಟ ಗಾಯಗಳಾಗಿವೆ. ಅವರ ದೊಡ್ಡಮ್ಮ ಬೇಬಿ ನಾಯ್ಕ್ ಅವರಿಗೆ ಗಂಭೀರವಾಗಿ ಗಾಯಗಳಾಗಿವೆ.ತಿಂಗಳ ಹಿಂದೆ ಅದೇ ಪರಿಸರದಲ್ಲಿ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿಯಾಗಿ ವಿದ್ಯಾರ್ಥಿಯೋರ್ವ ಮೃತಪಟ್ಟಿದ್ದ.
ಮೂಡುಬಿದಿರೆ: ಮೂಡುಬಿದಿರೆ ಇಲ್ಲಿನ ಜ್ಯೋತಿನಗರದಲ್ಲಿ ಹೊಸದಾಗಿ ಪ್ರಾರಂಭಗೊಂಡ ಮಾರುತಿ ಸುಜುಕಿ ಅರೆನಾ ಶೋ ರೂಮ್ ಅದ್ದೂರಿಯಾಗಿ ಇಂದು ಸಂಜೆ ಶುಭಾರಂಭಗೊಳ್ಳಲಿದೆ.ಶೋ ರೂಮ್ ನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಅವರು ಉದ್ಘಾಟಿಸಲಿದ್ದಾರೆ.ಇದೇ ಸಂದರ್ಭದಲ್ಲಿ 4 ನೇ ತಲೆಮಾರಿನ ಡಿಜೈರ್ ಕಾರನ್ನು ಲೋಕಾರ್ಪಣೆಗೊಳ್ಳಲಿದೆ.ಈ ಸಂದರ್ಭದಲ್ಲಿ ಮತ್ತಿತರ ಗಣ್ಯರುಗಳು ಪಾಲ್ಗೊಂಡು ಶುಭಹಾರೈಸಲಿದ್ದಾರೆ.
ಮೂಡುಬಿದಿರೆ : ಕರಾವಳಿಯ ಮರಾಟಿ ಸಮುದಾಯದ ನ್ಯಾಯಯುತ ಬೇಡಿಕೆಗಳನ್ನು ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲಿಸಿ, ಮುಖ್ಯಮಂತ್ರಿಯವರ ಗಮನಕ್ಕೆ ತಂದು ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹಾದೇವಪ್ಪ ಹೇಳಿದರು.ಅವರು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ನುಡಿಸಿರಿ ವೇದಿಕೆಯಲ್ಲಿ ಭಾನುವಾರ ನಡೆದ ಕರಾವಳಿ ಮರಾಟಿ ಸಮಾವೇಶ 2024 ‘ಗದ್ದಿಗೆ’ಯನ್ನು ಉದ್ಘಾಟಿಸಿ ಮಾತನಾಡಿದರು.ಸಂವಿಧಾನದ ಆಶಯವನ್ನು ಈಡೇರಿಸುವಲ್ಲಿ ಚುನಾಯಿತ ಪ್ರತಿನಿಧಿಗಳು ರಾಜಕೀಯ ಬಿಟ್ಟು ಕೆಲಸ ಮಾಡಬೇಕು. ಶಿಕ್ಷಣದ ಮೂಲಕ ಆರ್ಥಿಕ ಸದೃಢತೆ ಸಾಧ್ಯ. ರಾಜಕೀಯ ಉದ್ದೇಶ ಇಲ್ಲದೆ ಆರ್ಥಿಕವಾಗಿ […]
ಮೂಡುಬಿದಿರೆ: ತಾಲೂಕಿನಲ್ಲಿ ಭಾನುವಾರ ಸಂಜೆ ಬೀಸಿದ ಬಿರುಗಾಳಿ ಮಳೆಗೆ ಕೋಟೆಬಾಗಿಲು ಮತ್ತು ಕಲ್ಲಬೆಟ್ಟುವಿನಲ್ಲಿ ರಸ್ತೆಗೆ ಅಡ್ಡವಾಗಿ ಮರಗಳು ಉರುಳಿ ಬಿದ್ದ ಪರಿಣಾಮವಾಗಿ ವಾಹನ ಸಂಚಾರಕ್ಕೆ ತಡೆಯುಂಟಾದ ಘಟನೆ ನಡೆದಿದೆ.ಕಲ್ಲಬೆಟ್ಟು ಎಕ್ಸಲೆಂಟ್ ಕಾಲೇಜು ಬಳಿಯ ರಾಜ್ಯ ಹೆದ್ದಾರಿ ಮತ್ತು ಕೋಟೆಬಾಗಿಲು ಮಸೀದಿ ಬಳಿ ಶಿರ್ತಾಡಿ ರಾಜ್ಯ ಹೆದ್ದಾರಿಗೆ ಮರ ಬಿದ್ದ ಪರಿಣಾಮ ಮರಿಯಾಡಿ ಬಳಿಯ ಒಳರಸ್ತೆಯ ಮೂಲಕ ವಾಹನ ಸಂಚಾರ ನಡೆಯಿತು.ಕೋಟೆಬಾಗಿಲು ಪ್ರಗತಿ ರಸ್ತೆಯಲ್ಲೂ ಮರಬಿದ್ದಿದೆ. ಮುರಮೇಲುನಲ್ಲಿ ಟಿಸಿ ಮತ್ತು ಕೆಲವು ವಿದ್ಯುತ್ ಕಂಬಗಳೂ ಬಿದ್ದು ವಿದ್ಯುತ್ ಸಂಪರ್ಕ […]
ಮೂಡುಬಿದಿರೆ: ಸಾಮಾಜಿಕ ಸೇವೆ ಸಲ್ಲಿಸುವ ಸಂಘಟನೆ ತ್ರಿಶೂಲ್ ಫ್ರೆಂಡ್ಸ್ ರಿ.ಬೆದ್ರ ಇವರ ಯೋಜನೆಯ ಅಡಿಯಲ್ಲಿ ಮೂಡುಮಾರ್ನಾಡು ತಂಡ್ರಕೆರೆ ಎಂಬಲ್ಲಿ ಸಂಘಟನೆಯ ಯುವಕರೇ ಒಟ್ಟು ಸೇರಿ ನೂತನವಾಗಿ ನಿರ್ಮಿಸಲಾದ ಮನೆಯನ್ನು ಭಾನುವಾರ ಮನೆಯ ಯಜಮಾನ ಸುಂದರ ಇವರಿಗೆ ರಜಿನಿ ಶೆಟ್ಟಿ ಹಾಗೂ ಸಂಘಟನೆಯ ಯುವಕರು ಜತೆಗೂಡಿ ನಾಮಫಲಕವನ್ನು ಬಿಡುಗಡೆಗೊಳಿಸಿ ಮನೆಯ ಕೀ ಯನ್ನು ಹಸ್ತಾಂತರಿಸಿದರು.ಕೀ ಹಸ್ತಾಂತರಿಸಿ ಮಾತನಾಡಿದ ರಜಿನಿ ಶೆಟ್ಟಿ ತ್ರಿಶೂಲ್ ಫ್ರೆಂಡ್ಸ್ ಸಂಘಟನೆಯಿಂದ ಇನ್ನಷ್ಟು ಸಮಾಜ ಸೇವೆಯನ್ನು ಮಾಡುವಂತಾಗಲಿ, ಇವರ ಉತ್ತಮ ಸೇವಾ ಯೋಜನೆಗಳಿಗೆ ಭಗವಂತನ ಅನುಗ್ರಹವಿರಲೆಂದು […]
ಮೂಡುಬಿದರೆಯ ರೋಟರಿ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಆಳ್ವಾಸ್ ವಿದ್ಯಾಲಯದ ಕನ್ನಡ ಭಾಷಾ ಉಪನ್ಯಾಸಕಿ ಶ್ರೀಮತಿ ಸುಧಾರಾಣಿ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ ಭಾಷೆ ನಾಶವಾದರೆ ಸಂಸ್ಕೃತಿ ನಾಶವಾದಂತೆ.. ಯಾವುದೇ ಭಾಷೆಯ ಪದ ಅಳಿದರೆ ಜಗ ಅಳಿದಂತೆ,ಭಾಷೆಯನ್ನು ಪ್ರೀತಿಸುವುದು ಒಂದು ಭಾವನೆ…. ತಾಯಿ ಮಗಳು ಎಂಬ ಭಾವನೆಯಲ್ಲಿ ಭಾರತ ಮಾತೆಯನ್ನು ಮತ್ತು ಕರ್ನಾಟಕ ಮಾತೆ ಪೂಜಿಸಬೇಕು ಮತ್ತು ಗೌರವಿಸಬೇಕು…ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಅನಂತ ಕೃಷ್ಣರಾವ್ ಇವರು […]
ಮೂಡುಬಿದಿರೆ : ಬಿಲ್ಲವ ಮಹಿಳೆಯರನ್ನು ಅವಮಾನಿಸಿ ಕುಣಿತ ಭಜನೆ ಮಾಡುವ ಹೆಣ್ಣು ಮಕ್ಕಳ ವಿರುದ್ಧ ಅವಾಚ್ಯ ಪದಗಳಿಂದ ನಿಂದಿಸಿದ್ದ ಪುತ್ತೂರು ವಲಯ ಕಾಣಿಯೂರು ಅರಣ್ಯಾಧಿಕಾರಿ ಸಂಜೀವ ಕಾಣಿಯೂರು ವಿರುದ್ಧ ಭಜಕರು ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಯನ್ನು ಉದ್ಯೋಗದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಸೋಮವಾರ ಮೂಡುಬಿದಿರೆ ಪೊಲೀಸ್ ಠಾಣೆಗೆ ಭಜನೆಯ ಕಾರ್ಯಕರ್ತರು ಪ್ರತಿಭಟನಾ ರೂಪವಾಗಿ ದೂರನ್ನು ನೀಡಿದರು. ಮಹಿಳೆಯರ ಬಗ್ಗೆ ಮತ್ತು ಕುಣಿತ ಭಜನೆ ಮಾಡುವ ಮಕ್ಕಳ ಬಗ್ಗೆ ನಿಂದನಾತ್ಮಕವಾಗಿ ಮಾತನಾಡಿದ ಅರಣ್ಯ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಆತನ […]
ಕಳೆದ ನಾಲ್ಕೈದು ವರ್ಷಗಳಿಂದ ಮೂಡುಬಿದಿರೆ ಮಾರ್ಕೆಟ್ ಕಟ್ಟಡ ವಿವಾದ ಹೈಕೋರ್ಟ್‌ನಲ್ಲಿ ನಡೆಯುತ್ತಿದ್ದ ವಿಚಾರಣೆಗೆ ಕೊನೆಗೂ ಅಂತಿಮ ತೀರ್ಪು ಬಂದಿದೆ. ಶುಕ್ರವಾರ ನಡೆದ ವಿಚಾರಣೆಯಲ್ಲಿ, ಮೂಡುಬಿದಿರೆ ಪುರಸಭೆ ಹಾಗೂ ಮಾರ್ಕೆಟ್ ಕಟ್ಟಡಕ್ಕೆ ಪೂರಕವಾದ ತೀರ್ಪು ನೀಡಲಾಗಿದೆ ಎಂದು ತಿಳಿದುಬಂದಿದೆ. ಸುದೀರ್ಘ ಕಾಲದ ವಿಚಾರಣೆ ನಂತರ, ಹೈಕೋರ್ಟ್ ಪುರಸಭೆಗೆ ಮೂರು ವಾರಗಳಲ್ಲಿ ಪ್ರಾಚ್ಯ ಇಲಾಖೆಗೆ ಕಟ್ಟಡ ಕಾಮಗಾರಿ ಮುಂದುವರಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಲು ಆದೇಶ ನೀಡಿದ್ದು, ಪ್ರಾಚ್ಯ ಇಲಾಖೆ ಅದರ ನಂತರ ನಾಲ್ಕು ವಾರಗಳಲ್ಲಿ ಅನುಮತಿ ನೀಡಬೇಕೆಂದು ಆದೇಶಿಸಿದೆ. […]
ಪರೀಕ್ಷೆ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿ ಓರ್ವ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ದುರ್ಗಟನೆ ರಾಷ್ಟ್ರೀಯ ಹೆದ್ದಾರಿ ಬನ್ನಡ್ಕದಲ್ಲಿ ಸಂಭವಿಸಿದೆ.ಪಡುಮಾರ್ನಾಡು ಪಂಚಾಯತ್ ಬಳಿಯ ಅಚ್ಚರಕಟ್ಟೆ ನಿವಾಸಿ ರವಿ ಅವರ ಪುತ್ರ, ಮೂಡುಬಿದಿರೆ ಜೈನ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿ ಆದಿತ್ಯ ಮೃತಪಟ್ಟ ದುರ್ದೈವಿ.ವಿದ್ಯಾರ್ಥಿ ಆದಿತ್ಯ ಇಂದು ಪರೀಕ್ಷೆ ಮುಗಿಸಿ ತನ್ನ ಗೆಳೆಯರೊಡನೆ ಮನೆಗೆ ಹೋಗಲು ಬನ್ನಡ್ಕದಲ್ಲಿ ಬಸ್ಸಿನಿಂದಿಳಿದು ರಸ್ತೆ ದಾಟುವ ಸಂದರ್ಭದಲ್ಲಿ ವೇಗವಾಗಿ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಆದಿತ್ಯ […]
ಮೂಡಬಿದ್ರೆ: ಸೆಪ್ಟೆಂಬರ್ 24ಸಮಸ್ತ ವಿದ್ಯಾಭ್ಯಾಸ ಮಂಡಳಿಯ ಅಧೀನದಲ್ಲಿರುವ ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ ಇದರ ವತಿಯಿಂದ ನೀಡಲ್ಪಡುವ ಮುಅಲ್ಲಿಂ ಮಂಝಿಲ್ ಮನೆಯ ಶಿಲಾನ್ಯಾಸ ಕಾರ್ಯವು ಸೆ. 25 (ಬುಧವಾರ) ಅಪರಾಹ್ನ ಗಂಟೆ 3.00ಕ್ಕೆ ಸರಿಯಾಗಿ ಮೂಡಬಿದ್ರೆಯ ಅಂಗರಕರ್ಯಯಲ್ಲಿ ನಡೆಯಲಿದೆ. ಸಮಸ್ತ ಅಧ್ಯಕ್ಷರೂ, ಕರ್ನಾಟಕ, ಕೇರಳ ರಾಜ್ಯಗಳ ಹಲವಾರು ಮೊಹಲ್ಲಾದ ಸಂಯುಕ್ತ ಖಾಝಿಗಳೂ ಆದ ‘ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕ್ಕೋಯ ತಂಙಳ್’ ಶಿಲಾನ್ಯಾಸ ಕಾರ್ಯವನ್ನು ನೆರೆವೇರಿಸಲಿದ್ದಾರೆ. ಸಮಸ್ತದ ವಿದ್ಯಾಭ್ಯಾಸ ಮಂಡಳಿಯ ವತಿಯಿಂದ ವರ್ಷಂಪ್ರತಿ […]