
ಮೂಡುಬಿದಿರೆ : ಇಲ್ಲಿನ ಸಮಾಜ ಮಂದಿರ ಸಭಾ (ರಿ.) ವತಿಯಿಂದ ಜರಗುವ ಈ ಬಾರಿಯ ೭೭ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ಸಂದರ್ಭದಲ್ಲಿ ಶತಮಾನದ ಇತಿಹಾಸವಿರುವ ಮೂಡುಬಿದಿರೆ ಎಂ.ಸಿ.ಎಸ್. ಸೊಸೈಟಿಯ ವಿಶೇಷ ಕಾರ್ಯನಿರ್ವಹಣಾಧಿಕಾರಿ, ಸಹಕಾರಿ ಸಾಧಕ ಚಂದ್ರಶೇಖರ ಎಂ. ಅವರಿಗೆ “ಸಮಾಜ ಮಂದಿರ ಪುರಸ್ಕಾರ 2024” ಪ್ರದಾನ ನಡೆಯಲಿದೆ ಎಂದು ಸಮಾಜ ಮಂದಿರ ಸಭಾದ ಅಧ್ಯಕ್ಷ , ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಬಾರಿ ೭೭ನೇ ದಸರಾ ಸಾಹಿತ್ಯ […]
ಮೂಡುಬಿದಿರೆ: ಮಾರ್ಪಾಡಿ ಗ್ರಾಮದ ವಿವೇಕಾನಂದ ನಗರದ ಬಳಿಯ ನಿರ್ಮಲಾ ಪಂಡಿತ್ ಮತ್ತು ಮೂಡುಮಾರ್ನಾಡು ಗ್ರಾಮದ ಪ್ರೇಮಾ ಅವರ ಕುತ್ತಿಗೆಯಿಂದ ಚಿನ್ನದ ಸರಗಳನ್ನು ಎಗರಿಸಿ ಪರಾರಿಯಾಗಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ ಯಶಸ್ವಿಯಾಗಿದೆ. ಬಂಧಿತರನ್ನು ಮಂಗಳೂರು ಚೆಂಬುಗುಡ್ಡೆಯ ಹಬೀಬ್ ಹಸನ್ (ಹಬ್ಬಿ) ಮತ್ತು ಬಂಟ್ವಾಳ ತಾಲೂಕು ಪರ್ಲಿಯಾ ಕ್ರಾಸ್‌ರೋಡ್‌ನ ಉಮ್ಮರ್ ಸಿಯಾಫ್ (ಚಿಯಾ) ಎಂದು ಗುರುತಿಸಲಾಗಿದೆ. ಹಬ್ಬಿ ವಿರುದ್ಧ ಉಭಯ ಜಿಲ್ಲೆಗಳ ವಿವಿಧ […]
ಮೂಡುಬಿದರೆ:ಕಾಂತಾವರ ಕನ್ನಡ ಸಂಘದ ನುಡಿ ತೇರು ಸಾಕ್ಷ್ಯ ಚಿತ್ರ ವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಂತರ್ಜಾಲಕ್ಕೆ ಲೋಕಾರ್ಪಣೆ ಮಾಡಿದರು.ಕಾಂತಾವರ ಕನ್ನಡ ಸಂಘದ ಮಾದರಿ ಕಾರ್ಯ ಪ್ರತಿಯೊಂದು ಸಂಘಟನೆಗಳಿಗೂ ಪ್ರೇರಣೆಯಾಗಿದೆ.ಕನ್ನಡ ಕಟ್ಟುವ ಕೆಲಸವನ್ನು ಕಾಂತಾವರ ಕನ್ನಡ ಸಂಘ ಯಶಸ್ವಿಯಾಗಿ ಮಾಡುತ್ತಿದೆ ಎಂದರು. ಡಾಕ್ಟರ್ ನಾ ಮೊಗಸಾಲೆ ಅವರ ಕರ್ತೃತ್ವ ಶಕ್ತಿ ಇಚ್ಛಾಶಕ್ತಿಗಳ ಮೂಲಕ ಕನ್ನಡ ಸಂಘ ಇವತ್ತು ಬಹುದೊಡ್ಡ ಕಾರ್ಯವನ್ನು ಮಾಡಿದೆ ಎಂದು ಶ್ಲಾಘಿಸಿದರು.ಕಾಂತಾವರ ಕನ್ನಡ ಸಂಘಕ್ಕೆ 50ರ ಶುಭ ಸಮಯದಲ್ಲಿ […]
ಮೂಡುಬಿದಿರೆ: ಯಾವುದೇ ಸ್ಪರ್ಧೆಗಳಲ್ಲಿ ಸೋಲು- ಗೆಲುವು ಇರುತ್ತದೆ. ಇದನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾಸ್ಪೂರ್ತಿಯಿಂದ ಆಟವಾಡಿ ಯಶಸ್ವಿಯಾಗಿ ಎಂದು ಮೂಡುಬಿದಿರೆ ಪೊಲೀಸ್ ಠಾಣೆಯ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಹೇಳಿದರು.ಅವರು ದ.ಕ.ಜಿ.ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಛೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮೂಡುಬಿದಿರೆ ಹಾಗೂ ರೋಟರಿ ಆಂಗ್ಲ ಮಾಧ್ಯಮ ಶಾಲೆ ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ವಿಭಾಗದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು.ರೋಟರಿ […]
ಕಾರ್ಕಳ: ಲೈವ್ ಚಾನೆಲ್ ಅಸೋಸಿಯೇಶನ್ ಉದ್ಘಾಟನೆ—ಒಗ್ಗಟ್ಟಿನಿಂದ ಆರ್ಥಿಕ ಸದೃಢತೆ ಸಾಧ್ಯ ಕಾರ್ಕಳ: ಲೈವ್ ಚಾನೆಲ್ ನಿರ್ವಹಿಸುವವರು ಸಂಘಟಿತರಾದಲ್ಲಿ ಆರ್ಥಿಕವಾಗಿ ಸದೃಢರಾಗಲು ಸಾಧ್ಯವಿದೆ. ಇದು ಲೈವ್ ಚಾನೆಲ್ ಮಾಲಕರಿಗೆ ಅನುಕೂಲಕರ ಬೆಳವಣಿಗೆ ಎಂದೇ ದಾಯ್ಜಿವರ್ಲ್ಡ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ ಅಭಿಪ್ರಾಯ ವ್ಯಕ್ತಪಡಿಸಿದರು. ವಾಲ್ಟರ್ ನಂದಳಿಕೆ ಅವರು ಸೆಪ್ಟೆಂಬರ್ 17ರಂದು ಕಾರ್ಕಳ ಬಂಡಿಮಠ ಶ್ರೀ ಮೂಡುಮಹಾಗಣಪತಿ ಕಲಾಮಂದಿರದಲ್ಲಿ ನೂತನವಾಗಿ ಸ್ಥಾಪನೆಯಾದ ಲೈವ್ ಚಾನೆಲ್ ಅಸೋಸಿಯೇಶನ್ ಉದ್ಘಾಟಿಸಿ, ಮುಂದಿನ ಮಾತನಾಡಿದರು. ಅವರು, ಲೈವ್ ಚಾನೆಲ್ ಮಾಲಕರು ಅನೇಕ […]
ಕನ್ಯಾ ಮರಿಯಮ್ಮನವರ ಜನ್ಮದಿನದ ಸಂದರ್ಭದಲ್ಲಿ, ಐಸಿವೈಎಂಮೂಡುಬಿದಿರೆ ವಲಯ ಕ್ಯಾಥೋಲಿಕ್ ಸಭಾ ಮೂಡುಬಿದಿರೆ ವಲಯ, ರೋಟರಾಕ್ಟ್ ಕ್ಲಬ್ – ಮೂಡುಬಿದಿರೆ, ರೋಟರಿ ಕ್ಲಬ್ – ಮೂಡುಬಿದಿರೆ, ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಮಿಡ್ ಟೌನ್, ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್, ಲಯನ್ಸ್ ಕ್ಲಬ್ ಮೂಡುಬಿದಿರೆ, ಲಯನ್ಸ್ ಕ್ಲಬ್ – ಅಲಂಗಾರ್, ಯುವ ಕೊಂಕನ್ಸ್ ಅಸೋಸಿಯೇಷನ್ – ಮೂಡುಬಿದಿರೆ ಇನ್ನರ್ ವೀಲ್ ಕ್ಲಬ್ -ಮೂಡುಬಿದಿರೆ, ಜೆಸಿಐಮೂಡುಬಿದಿರೆ ತ್ರಿಭುವನ್ ಅವರು 14 ನೇ ಸೆಪ್ಟೆಂಬರ್ 2024 ರಂದು ಸಮಾಜ ಮಂದಿರದಲ್ಲಿ ಮೂಡುಬಿದಿರೆಯಲ್ಲಿ “10 ನೇ ವರ್ಷದ ಸರ್ವಧರ್ಮಿಯರೊಂದಿಗೆ ತೆನೆ ಹಬ್ಬ” ಆಚರಿಸಿದರು. ಐಸಿವೈಎಂ ಮೂಡುಬಿದಿರೆ ವಲಯದ ಕಾರ್ಯಕಾರಿ ಸಮಿತಿಯ ಸದಸ್ಯರ ನೇತೃತ್ವದಲ್ಲಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮೂಡುಬಿದಿರೆ ವಲಯದ ಐಸಿವೈಎಂ ಅಧ್ಯಕ್ಷರಾದ ಶ್ರೀ ಜೆವಿನ್ ಡಿಸೋಜಅವರು ಸ್ವಾಗತಿಸಿದರು. ಅತಿ ವಂದನೆಯ ಗುರು. ಐಸಿವೈಎಂ ಮೂಡುಬಿದಿರೆ ವಲಯದ ನಿರ್ದೇಶಕ ವಂ ಓನಿಲ್ ಡಿ’ಸೋಜಾ ಅವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಮುಖ್ಯ ಅತಿಥಿ ಶ್ರೀ ಗಣೇಶ್ ಕಾಮತ್ ಅವರೊಂದಿಗೆ ಉದ್ಘಾಟಿಸಿದರು.ಶ್ರೀವಿನ್ಸ್ಟನ್ ಸಿಕ್ವೇರಾ -ಐಸಿವೈಎಂ ಮಂಗಳೂರು ಧರ್ಮಪ್ರಾಂತ್ಯದಅಧ್ಯಕ್ಷರು,ಶ್ರೀ ಅಲ್ವಿನ್ ರೊಡ್ರಿಗಸ್ – ಮೂಡುಬಿದಿರೆ ವಲಯದ ಕೆಥೋಲಿಕ್ ಸಭಾ ಅಧ್ಯಕ್ಷರು; ರೋಟರಾಕ್ಟರ್ ಮೊಹಮ್ಮದ್ ಅಕಿಫ್ – ರೋಟರಾಕ್ಟ್ ಕ್ಲಬ್ ಅಧ್ಯಕ್ಷರು, ಮೂಡುಬಿದಿರೆ; ರೋಟೇರಿಯನ್ರವಿಪ್ರಸಾದ್ ಉಪಾಧ್ಯಯ– ರೋಟರಿ ಕ್ಲಬ್ ಅಧ್ಯಕ್ಷ, ಮೂಡುಬಿದಿರೆ; ರೋಟರಿ ಪೂರ್ಣಚಂದ್ರ ಜೈನ್- ರೋಟರಿ ಕ್ಲಬ್ ಆಫ್ ಮೂಡುಬಿದಿರೆಯಟೆಂಪಲ್ ಟೌನ್‌ನ ಅಧ್ಯಕ್ಷರು; ರೋಟರಿ ವಿದೇಶ್ ಎಂ – ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಮಿಡ್ ಟೌನ್ ಅಧ್ಯಕ್ಷ; ಆನ್ ಬಿಂದಿಯಾ ಶರತ್ ಡಿಶೆಟ್ಟಿ – ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರು, ಮೂಡುಬಿದಿರೆ; ಪ್ರದೀಪ್ಕುಮಾರ್ – ಜೆಸಿಐ ತ್ರಿಭುವನ್ ಅಧ್ಯಕ್ಷರು ಮೂಡುಬಿದಿರೆ; ಬೊನವೆಂಚರ್ಮೆನೇಜಸ್ – ಲಯನ್ಸ್ ಕ್ಲಬ್ ಅಧ್ಯಕ್ಷರು, ಮೂಡುಬಿದಿರೆ; ಈ ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಜೆಸಿಂತಾ ಡಿಮೆಲ್ಲೋ – ಲಯನ್ಸ್ಕ್ಲಬ್, ಅಲಂಗಾರ್ ಮತ್ತು ಯುವ […]
ಮೂಡುಬಿದಿರೆ : ಜೇಸಿ ಸಪ್ತಾಹದಂಗವಾಗಿ ಜೆಸಿಐ ಮೂಡುಬಿದಿರೆ ತ್ರಿಭುವನ್ ಮತ್ತು ಇನ್ನರ್ ವೀಲ್ ಕ್ಲಬ್ ನ ಜಂಟಿ ಆಶ್ರಯದಲ್ಲಿ ಮಾಸ್ತಿಕಟ್ಟೆ ಅರ್ಹತಾ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನ ಚಿತ್ರಕಲಾ ಸ್ಪರ್ಧೆ ನಡೆಯಿತು. ಎಲ್ ಕೆಜಿಯಿಂದ 7ನೇ ತರಗತಿಯವರೆಗೆ ವಿವಿಧ ವಿಭಾಗದಲ್ಲಿ ನಡೆದ ಸ್ಪರ್ಧೆಯನ್ನು ಇನ್ನರ್ ವೀಲ್ ಅಧ್ಯಕ್ಷೆ ಬಿಂದಿಯಾ ಎಸ್.ಶೆಟ್ಟಿ ಉದ್ಘಾಟಿಸಿದರು.ಜೆಸಿಐ ನ ಅಧ್ಯಕ್ಷ ಪ್ರದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಯಾಗಿ ಜೆಸಿಐ ಸೀನಿಯರ್ ಚೇಂಬರಿನ ಚಂದ್ರಹಾಸ ದೇವಾಡಿಗ ಉಪಸ್ಥಿತರಿದ್ದರು.ಜೆಸಿ ಪೂರ್ವ ಅಧ್ಯಕ್ಷರುಗಳಾದ ಸಂಗೀತ ಪ್ರಭು, ಸಂತೋಷ್ ಕುಮಾರ್, […]
ಮೂಡುಬಿದಿರೆ: ಸರಕಾರಿ ಪ್ರೌಢಶಾಲೆ ಅಳಿಯೂರು ಇಲ್ಲಿ 2024 -25 ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ತಾಲೂಕು ಮಟ್ಟದ ಬಾಲಕ ಮತ್ತು ಬಾಲಕಿಯರ ಕಬಡ್ಡಿ ಪಂದ್ಯಾಟ ನಡೆಯಿತು.ವಾಲ್ಪಾಡಿ ಗ್ರಾ. ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ದೀಪ ಬೆಳಗಿಸುವುದರ ಮೂಲಕ ಪಂದ್ಯಾಟವನ್ನು ಉದ್ಘಾಟಿಸಿದರು.ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರದೀಪ್ ಕುಮಾರ್ ಅಧ್ಯಕ್ಷತೆಯನ್ನು ವಹಿಸಿ ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ನೆಲ್ಲಿಕಾರು ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಪೂಜಾರಿ,” ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಚಾಲಕರಾದ ಲಕ್ಷ್ಮಣ ಸುವರ್ಣ, ವಾಲ್ಪಾಡಿ ಗ್ರಾ.ಪಂಚಾಯತ್ […]
ಮೂಡುಬಿದಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 61ನೇ ವರ್ಷದ ಗಣೇಶೋತ್ಸವ ಪ್ರಯುಕ್ತ ನಾಳೆ ನಡೆಯಲಿರುವ ಶೋಭಾಯಾತ್ರೆ ವೇಳೆ ವಾಹನ ಸಂಚಾರದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರು ತಿಳಿಸಿದ್ದಾರೆ. ಮಧ್ಯಾಹ್ನ 12 ಗಂಟೆಯ ನಂತರ ಸಾರ್ವಜನಿಕರು ತಮ್ಮ ವಾಹನಗಳನ್ನು ನಗರಕ್ಕೆ ತರದೆ, ಮೂಡುಬಿದಿರೆಯ ಹೊರವರ್ತುಲ (ಬೈಪಾಸ್ ರಸ್ತೆ) ಹಾಗೂ ಬದಲಿ ಮಾರ್ಗಗಳಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ. ಇನ್ನು ಬೆಳಿಗ್ಗೆಯಿಂದ ಕಾರ್ಯಕ್ರಮ ಮುಗಿಯುವವರೆಗೂ ವಾಹನಗಳನ್ನು ರಸ್ತೆ ಬದಿಯಲ್ಲಿ ಪಾರ್ಕ್ ಮಾಡುವುದನ್ನು ತಪ್ಪಿಸಲು ಸಹಕರಿಸುವಂತೆ […]
ಮೂಡುಬಿದಿರೆ ಸಮಾಜ ಮಂದಿರ ಸಭಾ ವತಿಯಿಂದ ಸುಮಾರು ಒಂದು ಲಕ್ಷ ರೂ. ಅಧಿಕ ಮೌಲ್ಯದ ಹತ್ತು ಬ್ಯಾರಿಕೇಡ್ ಮೂಡುಬಿದಿರೆ ಪೊಲೀಸ್ ಠಾಣೆಗೆ ಹಸ್ತಾಂತರ ಕಾರ್ಯಕ್ರಮ ಸಮಾಜ ಮಂದಿರದಲ್ಲಿ ನಡೆಯಿತು. ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ. ಜಿ. ಯವರಿಗೆ ಬ್ಯಾರಿಕೇಡ್ ಹಸ್ತಾಂತರಿಸಿದರು. ನಂತರ ಮಾತನಾಡಿದ ಅಭಯಚಂದ್ರರವರು ರಸ್ತೆ ಸಮಸ್ಯೆನಿವಾರಣೆ, ಹಬ್ಬ ಹರಿದಿನಗಳ ಸಂದರ್ಭದಲ್ಲಿ ಪೊಲೀಸರಿಗೆ ಅನುಕೂಲವಾಗಲೆಂದು ಬ್ಯಾರಿಕೇಡ್ ನೀಡಿರುವುದಾಗಿ ತಿಳಿಸಿದರು. ಸಂದೇಶ್ ಪಿ. ಜಿ.ಯವರು ಮಾತನಾಡಿ ಸಮಾಜ […]