
ಮೂಡುಬಿದಿರೆ: ಇಲ್ಲಿನ ಕೋಟಿ-ಚೆನ್ನಯ ಜೋಡುಕರೆ ಕಂಬಳದ ಸಮಿತಿಯಿಂದ ಒಂಟಿಕಟ್ಟೆಯ ರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆಯುವ 22 ನೇ ವರ್ಷದ ಕೋಟಿ-ಚೆನ್ನಯ ಜೋಡುಕರೆ ಕಂಬಳದ ಪೂರ್ವಭಾವಿಯಾಗಿ ನಡೆಯುವ ಕುದಿ ಕಂಬಳವು ಬುಧವಾರ ಆರಂಭಗೊಂಡಿತು.ಮೂಡುಬಿದಿರೆ ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ ಕುದಿ ಕಂಬಳಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.ಪುರಸಭಾ ಉಪಾಧ್ಯಕ್ಷ ನಾಗರಾಜ ಫೂಜಾರಿ, ಕಂಬಳ ಸಮಿತಿಯ ಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರು, ಬೆಳುವಾಯಿ ಗ್ರಾ.ಪಂ.ಸದಸ್ಯ ರಘು ಮತ್ತಿತರರು ಈ ಸಂದರ್ಭದಲ್ಲಿದ್ದರು.
ಮೂಡುಬಿದಿರೆ: ದಾರಿ ಕೇಳುವ ನೆಪದಲ್ಲಿ ವೃದ್ಧೆಯ ಚಿನ್ನದ ಸರ ಎಗರಿಸಿದ ದ್ವಿಚಕ್ರ ವಾಹನ ಸವಾರರು! ಮೂಡುಬಿದಿರೆ, ಸೋಮವಾರ: ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಸವಾರರು ವೃದ್ಧೆಯೊಬ್ಬರ ಬಳಿ ದಾರಿ ಕೇಳುವ ನೆಪದಲ್ಲಿ ಮಾತನಾಡಿ, ಆಕೆಯ ಕುತ್ತಿಗೆಯಲ್ಲಿದ್ದ 3 ಪವನ ಚಿನ್ನದ ಸರವನ್ನು ಎಗರಿಸಿ ಪರಾರಿಯಾದ ಘಟನೆ ದ.ಕ ಜಿಲ್ಲೆಯ ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರ್ನಾಡಿನಲ್ಲಿ ಸಂಭವಿಸಿದೆ. ಮಾರ್ನಾಡು ವರ್ಧಮಾನ ಬಸದಿ ಬಳಿಯ 82 ವರ್ಷದ ವೃದ್ಧೆ ಪ್ರೇಮಾ ಅವರು ತಮ್ಮ ಮನೆಯ ಸಮೀಪದ ಅಂಗಡಿಯಿಂದ ಹಾಲು […]
ಮೂಡುಬಿದಿರೆ: ಸ್ಥಳೀಯ ತರಕಾರಿ ಮಾರ್ಕೆಟ್‌ನಲ್ಲಿ ಫಾಸ್ಟ್ ಫುಡ್ ಸ್ಟಾಲ್‌ಗಳು ಪಾದಚಾರಿ ಮಾರ್ಗದ ಮೇಲೆ ಸಿಲಿಂಡರ್‌ಗಳನ್ನು ಇಟ್ಟುಕೊಂಡು ಜನರ ಮೇಲೆ ದರ್ಪ ತೋರಿಸುತ್ತಿದ್ದು, ರಾತ್ರಿಯ ವೇಳೆ ಕುಡುಕರು ಮದ್ಯಗಳನ್ನು ಸೇವಿಸುವುದು ಸಾಮಾನ್ಯವಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ಅನೇಕ ಬೀದಿ ನಾಯಿಗಳು ಸುತ್ತುವರಿದಿದ್ದರಿಂದ ಜನರಿಗೆ ಓಡಾಡಲು ಕೂಡ ಕಷ್ಟವಾಗಿದೆ. ಈ ಕುರಿತು ಪುರಸಭಾಧಿವೇಶನದಲ್ಲಿ ಸದಸ್ಯೆ ದಿವ್ಯ ಜಗದೀಶ್ ಅವರ ಸಹಿತ ಸದಸ್ಯರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಶನಿವಾರ ನಡೆದ ಪುರಸಭಾಧಿವೇಶನದಲ್ಲಿ ನೂತನ ಅಧ್ಯಕ್ಷೆ ಜಯಶ್ರೀ ಕೇಶವ್ ಅವರ […]
ಮೂಡುಬಿದಿರೆ: ಇಲ್ಲಿನ ಪುರಸಭೆ ಮತ್ತು ಹಲವು ಸಂಘ ಸಂಸ್ಥೆಗಳ ವತಿಯಿಂದ ಅಳವಡಿಸಲಾಗಿರುವ ಸಂಚಾರಿ ಫಲಕಗಳನ್ನು ಶಾಸಕ ಉಮಾನಾಥ ಕೋಟ್ಯಾನ್ ಶನಿವಾರ ಅನಾವರಣಗೊಳಿಸಿದರು. ಈ ಸಮಾರಂಭದಲ್ಲಿ ಪುರಸಭಾಧ್ಯಕ್ಷ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ಪುರಸಭಾ ಸದಸ್ಯರಾದ ಪಿ.ಕೆ. ಥೋಮಸ್, ಪುರಸಭಾ ಮುಖ್ಯಾಧಿಕಾರಿ ಇಂದು ಎಂ, ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ., ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು. ಸಂಚಾರಿ ಫಲಕಗಳು ಸಾರ್ವಜನಿಕರಿಗೆ ಉತ್ತಮ ದಾರಿದೀಪದಂತೆ ಕಾರ್ಯನಿರ್ವಹಿಸುವುದಕ್ಕಾಗಿ ಹಾಗೂ ಸಂಚಾರ ಸುಗಮಗೊಳಿಸುವ ದೃಷ್ಟಿಯಿಂದ ಅಳವಡಿಸಲಾಗಿದ್ದು, ಈ ಪ್ರಯತ್ನವನ್ನು […]
14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ ಹಳೆ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 14 ವರ್ಷಗಳಿಂದ ತಲೆಮರೆಸಿ ಕೊಂಡಿದ್ದ ಆರೋಪಿಯೋರ್ವನನ್ನು ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ನೇತೃತ್ವದ ಪೊಲೀಸರ ತಂಡವು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಬಂಧಿತ ಆರೋಪಿ ಮಂಗಳೂರು ತಾಲೂಕು ಕೊಳವೂರಿನ ಅಯ್ಯನ ಮನೆ ನಿವಾಸಿ ರಮೇಶ (38) ಎಂದು ಗುರುತಿಸಲಾಗಿದೆ. 2010ರಲ್ಲಿ ಮೂಡುಬಿದಿರೆಯ ಗಾಂಧಿನಗರದ ನ್ಯೂ ಕಿರಣ್ ಫ್ಯಾಕ್ಟರಿಗೆ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ, ಬ್ಯಾಂಕ್ ನವರು ಫ್ಯಾಕ್ಟರಿಯ ಸ್ಥಿರಾಸ್ತಿ ಹಾಗೂ ಸೊತ್ತುಗಳನ್ನು 2010 ಸೆಪ್ಟೆಂಬರ್ […]
ಶ್ರೀ ಗೋಪಾಲಕೃಷ್ಣ ದೇವರ 108 ವರ್ಷದ ಮೊಸರುಕುಡಿಕೆ ಸಲುವಾಗಿ ಜವನೇರ್ ಬೆದ್ರ ಫೌಂಡೇಶನ್ ಹಾಕಿರುವ ಮೊಸರು ಕುಡಿಕೆಯ ಮಂಟಪ ಬಳಿ ದೇವರ ಸಮ್ಮುಖದಲ್ಲಿ , ಟೀಮ್ ಬೆದ್ರ ಪಿಲಿ ಅವರ ಹುಲಿ ವೇಷ,108 ಭಜಕರ ತಂಡ, ಸರ್ವೋದಯ ಫ್ರೆಂಡ್ಸ್ ಅವರ ನಾಸಿಕ್ ಬ್ಯಾಂಡ್, ಪವರ್ ಫ್ರೆಂಡ್ ಅವರ ಸಿಂಗಾರಿ ಮೇಳ , ಯಕ್ಷಗಾನ ಶೈಲಿಯ ಶ್ರೀ ಕೃಷ್ಣ 108 ವರ್ಷ ಮೊಸರು ಕುಡಿಕೆ ಹೊಡೆಯುವ ಆಕರ್ಷಕ ಜನಸಮೋಹ ಸೇರಿರುವ ಭಾವಚಿತ್ರ , ಈ ಬಾರಿ 108 ನೇ […]
ಗುರುಕುಲ ಶಾಲೆಯಲ್ಲಿ ಕೃಷ್ಣವೇಷ ಸ್ಪರ್ಧೆ. ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೃಷ್ಣವೇಷ ಸ್ಪರ್ಧೆ ನಡೆಯಿತು. ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆಗೊಂಡ ಸ್ಪರ್ಧೆಯಲ್ಲಿ0 – 2 / 2 – 5 /5 – 10 / ವರ್ಷದೊಳಗಿನ ಮಾಳ ಗ್ರಾಮದ ವ್ಯಾಪ್ತಿಯ ಸುಮಾರು 50 ವಿದ್ಯಾರ್ಥಿಗಳು ಭಾಗವಹಿಸಿದ್ದರು. ತೀರ್ಪುಗಾರರಾಗಿ ಶ್ರೀ ಶ್ರೀರಂಗ ಜೋಶಿ, ಡಾ| ಸತ್ಯನಾರಾಯಣ ಭಟ್, ಶ್ರೀಮತಿ ರಮಿತಾ ಶೈಲೇಂದ್ರ ರಾವ್ ಕಾರ್ಕಳ. ಇವರು ಆಗಮಿಸಿದ್ದರು. […]
ಮೂಡುಬಿದಿರೆಯಲ್ಲಿ ಮಂಗಳವಾರ ನಡೆದ 38ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಅವರಿಗೆ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಶ್ರೀ ಕೃಷ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಭಯಚಂದ್ರರ ರಾಜಕೀಯ, ಸಾಮಾಜಿಕ ಹಾಗೂ ಶಿಕ್ಷಣ ಕ್ಷೇತ್ರದ ಸೇವೆಯನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಕಾರ್ಯಕ್ರಮದಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಉದ್ಯಮಿ ಶ್ರೀಪತಿ ಭಟ್, ಪುರಸಭಾಧ್ಯಕ್ಷೆ ಜಯಶ್ರೀ, ಮುಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಬಿಜೆಪಿ ಮುಖಂಡ ಸುದರ್ಶನ ಎಂ, […]
ಮೂಡುಬಿದಿರೆ: ಇಲ್ಲಿನ ಒಂಟಿಕಟ್ಟೆ ಕಡಲಕೆರೆಯಲ್ಲಿ ಈ ವರ್ಷದ ದೋಣಿ ವಿಹಾರಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಚಾಲನೆ ನೀಡಿದರು. ಈ ಸಾಲಿನ ದೋಣಿ ವಿಹಾರಕ್ಕೆ ಮಂಗಳವಾರ ಸಂಜೆ ಚಾಲನೆ ನೀಡಲಾಯಿತು. ಈ ವೇಳೆ ಸುಮಾರು 20,000 ಕಾಟ್ಲಾ ಮತ್ತು 20,000 ಕಾಮನ್ ಕಾರ್ಪ್ ಮೀನಿನ ಮರಿಗಳನ್ನು ಕೆರೆಗೆ ಬಿಡಲಾಯಿತು. ಮಾಜಿ ಸಚಿವ ಅಭಯಚಂದ್ರ ಜೈನ್, ಪುರಸಭೆ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ ಪೂಜಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ರೋಟರಿ ಅಧ್ಯಕ್ಷ ರವಿಪ್ರಸಾದ್ ಉಪಾಧ್ಯಾಯ ಉಪಸ್ಥಿತರಿದ್ದರು.
ಮೂಡುಬಿದಿರೆ: ಮನೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ವಿದ್ಯುತ್ ಉಪಕರಣಗಳಿಗೆ ಹಾನಿಯುಂಟಾದ ಘಟನೆ ತಾಲೂಕಿನ ತೋಡಾರಿನಲ್ಲಿ ನಡೆದಿದೆ.ತೋಡಾರು ಹಿದಾಯತ್ ನಗರದ ವಿಜಯ್ ಎಂಬವರ ಮನೆಯಲ್ಲಿ ಇಂದು ಸಂಜೆ ಖಾಸಗಿ ಕಾರ್ಯಕ್ರಮವಿತ್ತು ಅದಕ್ಕೆ ಬಾಡಿಗೆಗೆ ಗ್ಯಾಸ್ ಸ್ಟವ್ ನ್ನು ತರಿಸಲಾಗಿತ್ತು. ಅಡಿಗೆ ಮಾಡುತ್ತಿದ್ದ ಸಂದರ್ಭದಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡು ಫ್ರಿಡ್ಜ್ ಮತ್ತು ಸ್ವಿಚ್ ಬೋಡ್ ನ ಕನೆಕ್ಷನ್ ಸುಟ್ಟು ಹಾಕಿದೆ ತಕ್ಷಣ ಗ್ಯಾಸ್ ಸ್ಟವ್ ನ್ನು ಹೊರಗೆ ಸಾಗಿಸಲಾಗಿದೆ.ಸ್ಥಳೀಯರು ಮತ್ತು ಮೂಡುಬಿದಿರೆ ಅಗ್ನಿಶಾಮಕದ ಅಧಿಕಾರಿಗಳು […]