
ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮೂಡಬಿದ್ರೆ , ಇದರ 108ನೇ ವರ್ಷದ ಅಷ್ಟೋತ್ತರ ಸಂಭ್ರಮದ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಮುದ್ದುಕೃಷ್ಣ ಸ್ಪರ್ಧೆ ದೇಗುಲದಲ್ಲಿ ಅಷ್ಟಮಿಯ ದಿನ ಏರ್ಪಡಿಸಲಾಯಿತು , ಸುಮಾರು 60 ಸ್ಪರ್ಧಿಗಳು ಭಾಗವಹಿಸಿದ್ದರು. ಆಳ್ವಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ನಿರ್ದೇಶಕ ಶ್ರೀ ವಿವೇಕ್ ಆಳ್ವ ಇವರು ದೀಪ ಪ್ರಜ್ವಲನ ಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಪ್ರಾಸ್ತಾವಿಕ ಹಾಗೂ ಸ್ವಾಗತ ಭಾಷಣವನ್ನು ಶ್ರೀ ಅಮರ್ ಕೋಟೆ ನೆರವೇರಿಸಿದರು. ಮೂಡಬಿದ್ರೆ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು […]
ಮೂಡುಬಿದಿರೆ: ಶ್ರೀ ಕೃಷ್ಣ ಜನ್ಮಾಷ್ಠಮಿಯ ಉತ್ಸವದ ಅಂಗವಾಗಿ ಇಲ್ಲಿನ ಶ್ರೀ ಗೋಪಾಲ ಕೃಷ್ಣ ದೇವಸ್ಥಾನ ಇದರ 108ನೇ ವರ್ಷದ ಮೊಸರು ಕುಡಿಕೆ ಶೋಭಾಯಾತ್ರೆಯು ನಗರದ ರಾಜ ಬೀದಿಯಲ್ಲಿ ಸಂಚರಿಸಲಿರುವುದರಿಂದ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಸಾರ್ವಜನಿಕರು ತಮ್ಮ ವಾಹನವನ್ನು ಮಧ್ಯಾಹ್ನ 01.00 ಗಂಟೆಯ ನಂತರ ಮೂಡುಬಿದಿರೆ ನಗರಕ್ಕೆ ಬಾರದೇ ಮೆರವಣಿಗೆ ಮುಗಿಯುವವರೆಗೆ ಹೊರಗಿನ ವರ್ತುಲಾ [ರಿಂಗ್ ರೋಡ್) ರಸ್ತೆಯಲ್ಲಿ ಸಂಚರಿಸಿ ಸಹಕರಿಸುವಂತೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ಮೂಡುಬಿದಿರೆ: ದ.ಕ.ಜಿಲ್ಲಾ.ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮೂಡುಬಿದಿರೆ ಹಾಗೂ ದ.ಕ.ಜಿ.ಪಂ.ಸ.ಹಿ.ಪ್ರಾ.ಶಾಲೆ ಕಲ್ಲಬೆಟ್ಟು ಇವುಗಳ ಸಹಯೋಗದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ 2024-25ನೇ ಸಾಲಿನ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆ ಶುಕ್ರವಾರ ಕಲ್ಲಬೆಟ್ಟು ಅಕ್ಷಯಧಾಮ ಸಭಾಭವನದಲ್ಲಿ ನಡೆಯಿತು.ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಯ್ಯ ಅವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿ ದೇಹ ಮತ್ತು ಮನಸ್ಸು ಸದೃಢವಾಗಲು ಯೋಗ ಸಹಕಾರಿ. ವಿದ್ಯಾರ್ಥಿಗಳ ಸರ್ವಾಂಗಿಣ ಬೆಳವಣಿಗೆಗೆ ಕೇವಲ ಓದುವ, ಬರೆಯುವ […]
ಮೂಡುಬಿದಿರೆ: ಕಳೆದ 29 ವರ್ಷಗಳ ಹಿಂದೆಗಳ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಮತ್ತು ಅವರ ತಂಡವು ಬಂಧಿಸಿದೆ. ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಒಂಟಿಕಟ್ಟೆ ಹರೀಶ್ ಪೂಜಾರಿ (57ವ) ಎಂದು ಗುರುತಿಸಲಾಗಿದೆ. ಮೂಡುಬಿದಿರೆ ಒಂಟಿಕಟ್ಟೆ ನಿವಾಸಿ ಮಹಾಬಲ ಪೂಜಾರಿ, ಸತೀಶ್ ಪೂಜಾರಿ ಎಂಬವರು 29ವರ್ಷಗಳ ಹಿಂದೆ ಮನೆಯಲ್ಲಿ ರಾತ್ರಿ ಗಾರೆ ಕೆಲಸ ಮಾಡುತ್ತಿದ್ದಾಗ ಹರೀಶ್ ಪೂಜಾರಿ ಹಲ್ಲೆ ನಡೆಸಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ.ಆರೋಪಿಯು ಕೋಟೆಬಾಗಿಲು ಬಳಿ ಕೆಲಸ ಮಾಡುತ್ತಿರುವ ಬಗ್ಗೆ […]
ಮೂಡುಬಿದಿರೆ: ತಂದೆಯೋರ್ವ ತನ್ನ ಅಪ್ರಾಪ್ತ ಮಗಳನ್ನೇ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭಿಣಿಯನ್ನಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆಯನ್ನು ಮೂಡುಬಿದಿರೆ ಪೊಲೀಸರು ಫೊಕ್ಸೊ ಪ್ರಕರಣದಲ್ಲಿ ಗುರುವಾರ ಬಂಧಿಸಿದ್ದಾರೆ.ಬಂಧಿತ ಆರೋಪಿ ಅಳಿಯೂರಿನ ಉಮೇಶ್ ಶೆಟ್ಟಿ (55) ಎಂದು ತಿಳಿದುಬಂದಿದೆ. ಈತ ವೃತ್ತಿಯಲ್ಲಿ ಕೂಲಿ ಕಾರ್ಮಿಕ. ಆರು ತಿಂಗಳ ಹಿಂದೆ ಮನೆಯಲ್ಲೆ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಮಗಳು ಪ್ರೌಢ ಶಾಲೆಯಲ್ಲಿ ಓದುತ್ತಿದ್ದಾಳೆ. ಇತ್ತೀಚೆಗೆ ಮಗಳ ಆರೋಗ್ಯದಲ್ಲಿ ಏರು ಪೇರು ಉಂಟಾದಾಗ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಕರೆದೊಯ್ದಿದ್ದ. ಅಲ್ಲಿ ವೈದ್ಯಕೀಯ […]
ಮೂಡುಬಿದಿರೆಯ ಕನ್ನಡ ಭವನದ ಎದುರಿನ ರಸ್ತೆಯ ಚರಂಡಿ ನವೀಕರಣಕ್ಕಾಗಿ ಅಲ್ಲಿ ಜಲ್ಲಿ ತಂದು ಹಾಕಲಾಗಿದೆ. ಇದು ಪ್ರಗತಿಪರ ಹೆಜ್ಜೆಯಾಗಿದೆಯಾದರೂ, ಅಲ್ಲಿ ಹಾಕಿದ ಜಲ್ಲಿ ರಸ್ತೆಗೆ ಹರಿದಿದ್ದು, ವಾಹನ ಸವಾರರಿಗೆ ಅಪಾಯವನ್ನುಂಟುಮಾಡುತ್ತಿದೆ. ಈ ಕಾರಣದಿಂದಾಗಿ, ಈಗಾಗಲೇ ಇಬ್ಬರು ಬೈಕ್ ಸವಾರರು ತಮ್ಮ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡು ಬಿದ್ದು ಸಣ್ಣ ಪುಟ್ಟ ಗಾಯಗಳನ್ನು ಅನುಭವಿಸಿದ್ದಾರೆ. ಇಂತಹ ಅಪಾಯವನ್ನು ತಡೆಯಲು ಸಂಬಂಧಪಟ್ಟವರು ಶೀಘ್ರದಲ್ಲಿ ಜಲ್ಲಿಯನ್ನು ಸರಿಯಾಗಿ ಬದಿಗಿಟ್ಟು, ರಸ್ತೆ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅತಿ ಅವಶ್ಯಕವಾಗಿದೆ.
ಮೂಡುಬಿದಿರೆ: ಉತ್ಸಾಹ ಮತ್ತು ಹೋರಾಟದ ಮನೋಭಾವದ ವ್ಯಕ್ತಿ ನೇತಾಜಿ ಅವರ ಹೆಸರನ್ನಿಟ್ಟುಕೊಂಡು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿರುವ ಸಂಸ್ಥೆ ನೇತಾಜಿ ಬ್ರಿಗೇಡ್ ನ ಕೆಲಸ ಕಾರ್ಯಗಳು ಶ್ಲಾಘನೀಯ ಎಂದು ಸಂಸದ ಬೃಜೇಶ್ ಚೌಟ ಹೇಳಿದರು. ಅವರು ನೇತಾಜಿ ಬ್ರಿಗೇಡ್ (ರಿ) ಮೂಡುಬಿದಿರೆ ಇದರ 5ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ, ಜೀವಸಾರ್ಥಕತೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು ಇವುಗಳ ಸಹಯೋಗದಲ್ಲಿ ಸಮಾಜ ಮಂದಿರದಲ್ಲಿ […]
ಮೂಡುಬಿದಿರೆ: ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಅಂಗವಾಗಿ ಮೂಡುಬಿದಿರೆಯ ನಾರಾಯಣ ಗುರು ಪ್ರತಿಷ್ಠಾನ(ರಿ)ದ ವತಿಯಿಂದ ಸಮಾಜ ಸೇವಕ, ಸ್ಪೂರ್ತಿ ವಿಶೇಷ ಶಾಲೆಯ ಸ್ಥಾಪಕ ಪ್ರಕಾಶ್ ಜೆ.ಶೆಟ್ಟಿಗಾರ್ ಅವರಿಗೆ ‘ನಾರಾಯಣ ಗುರು ಪ್ರಶಸ್ತಿ-2024’ನ್ನು ನೀಡಿ ಗೌರವಿಸಿದೆ.ಸಂಸ್ಥೆಯು ಸ್ಪೂರ್ತಿ ವಿಶೇಷ ಶಾಲೆಗೆ ದೇಣಿಗೆಯನ್ನು ನೀಡಿದೆ.ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಪ್ರತಿಷ್ಠಾನದ ಅಧ್ಯಕ್ಷ ಶಿವಾನಂದ ಶಾಂತಿ, ಕಾರ್ಯದರ್ಶಿ ಮೇಘರಾಣಿ, ಸುರೇಶ್ ಅಂಚನ್ , ಪ್ರದೀಪ್ ಭಟ್, ಹರೀಶ್, ರಮೇಶ್ ಈ ಸಂದರ್ಭದಲ್ಲಿದ್ದರು.
ಮೂಡುಬಿದಿರೆ: ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.) ಅಮನ ಬೆಟ್ಟು40ನೇ ಸೇವಾ ಯೋಜನೆ ರೂ 10,000 ಸಹಾಯಧನವನ್ನು ಅನಾರೋಗ್ಯ ಪೀಡಿತೆ ಪ್ರಾಂತ್ಯ ಪರಿಸರದ ರೋಜಲಿನ್ ಡಿ. ಸೋಜಾ ಎಂಬವರಿಗೆ ಸಮಾಜ ಮಂದಿರದಲ್ಲಿ ಹಸ್ತಾಂತರಿಸಿತು. ಮೂಡುಬಿದ್ರಿ ತಾಲೂಕಿನ ಹಜಂಕಾಲ ಬೆಟ್ಟು ಪ್ರಾಂತ್ಯ ಪರಿಸರದ ರೋಜಲಿನ್ ಡಿ. ಸೋಜಾ ಎಂಬವರಿಗೆ 35ವರ್ಷ ದ ಹಿಂದೆ ವಿಷದ ಹಾವು ಕಚ್ಚಿದ ಪರಿಣಾಮ ವಾಗಿ ಅವರ ಗಾಯ ಗುಣವಾಗದೆ ಈಗಲೂ ಖಾಸಗಿ ಆಸ್ಪತ್ರೆಯಲ್ಲಿ 2 ದಿನಕ್ಕೊಮ್ಮೆ ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.ಹಾಗೂ ಅವರ […]
ಮೂಡುಬಿದಿರೆ ಪುರಸಭೆ ಚುನಾವಣೆ: ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕುತೂಹಲ ತೀವ್ರ ಮೂಡುಬಿದಿರೆ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಗೊಂಡಿದ್ದು, ಇವುಗಳಿಗಾಗಿ ನಾಳೆ (ಚುನಾವಣೆ ದಿನಾಂಕ) ಚುನಾವಣೆ ನಡೆಯಲಿದೆ. ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ (ಹಿಂ.ವ.ಎ) ಮಹಿಳಾ ಮೀಸಲಾತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಪ್ರಕಟವಾಗಿದೆ. 12 ಸದಸ್ಯ ಬಲ ಹೊಂದಿರುವ ಬಿಜೆಪಿ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಜಯಶ್ರೀ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಗರಾಜ್ ಪೂಜಾರಿ ಅವರ ಹೆಸರು ಕೇಳಿಬರುತ್ತಿದೆ. ಒಟ್ಟು […]