
ಮೂಡುಬಿದಿರೆ: ಇಲ್ಲಿನ ಸಮಾಜ ಮಂದಿರ ಸಭಾದ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.ಸಮಾಜ ಮಂದಿರ ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರು ಧ್ವಜವನ್ನು ಅರಳಿಸಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಶ್ರಮಿಸಿದವರನ್ನು ಮತ್ತು ದೇಹವನ್ನು ತ್ಯಾಗ ಮಾಡಿದವರನ್ನು ನೆನಪಿಸಿಕೊಂಡರು.ಸಮಾಜ ಮಂದರಿ ಸಭಾದ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಕಾರ್ಯದರ್ಶಿ ಸುರೇಶ್ ಪ್ರಭು ಮತ್ತು ಸದಸ್ಯರು ಈ ಸಂದರ್ಭದಲ್ಲಿದ್ದರು.
ರಾಣಿ ಅಬ್ಬಕ್ಕ ಕಿರು ಉದ್ಯಾವನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಜವನೆರ್ ಬೆದ್ರ ಫೌಂಡೇಶನ್ (ರಿ) ವತಿಯಿಂದ ಅರಮನೆ ಬಾಗಿಲಿನ ಜವನೆರ್ ಬೆದ್ರ ರಾಣಿ ಅಬ್ಬಕ್ಕ ಕಿರು ಉದ್ಯಾನವನದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಮುಂಜಾನೆ ನಡೆಯಿತು. ಚೌಟ ಮನೆತನದ ಕುಲದೀಪ್ ಎಂ , ಮಾಜಿ ಯೋಧ ಸುಬೇದಾರ್ ಮೇಜರ್ ರಾಜೇಂದ್ರ ಜಿ ,ರಾಣಿ ಅಬ್ಬಕ್ಕನ ಪುತ್ತಲಿಗೆ ಪುಷ್ಪಾರ್ಚನೆ ಮಾಡಿ ಧ್ವಜಾರೋಹಣ ನೆರವೇರಿಸಿದರು. ಸಂಘಟನೆಯ ಅಧ್ಯಕ್ಷ ಶ್ರೀ ಅಮರಕೋಟೆ , ಕಾರ್ಯದರ್ಶಿ ಶ್ರೀದಿನೇಶ್ ನಾಯಕ್, ಸಂಚಾಲಕ ಶ್ರೀನಾರಾಯಣ ಪಡುಮಲೆ , ಪ್ರಮುಖರಾದ ರಂಜಿತ್ […]
ಪೊಲೀಸ್ ಇಲಾಖೆಯ ದಕ್ಷ ಸೇವೆಗಾಗಿ ನೀಡಲ್ಪಡುವ ಮುಖ್ಯಮಂತ್ರಿ ಪದಕಕ್ಕೆ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರು ಭಾಜನರಾಗಿದ್ದಾರೆ. ರಾಜ್ಯದ ಸುಮಾರು 126 ಮಂದಿ ಪೊಲೀಸ್ ಅಧಿಕಾರಿಗಳು 2023 ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದು ಅದರಲ್ಲಿ ಸಂದೇಶ್ ಪಿ.ಜಿ.ಅವರೂ ಇದ್ದಾರೆ. ದ.ಕ ಹಾಗೂ ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿರುವ ಸಂದೇಶ್ ಅವರು ತಮ್ಮ ಡೇರಿಂಗ್ ಮೂಲಕ ನಿಷ್ಠಾವಂತ ಅಧಿಕಾರಿಯಾಗಿ ಇಲಾಖೆ ಹಾಗೂ ಸಾರ್ವಜನಿಕ ವಲಯದಲ್ಲಿ ಗಮನಸೆಳೆದಿದ್ದಾರೆ. ಪ್ರಸ್ತುತ ಅವರು […]
ಮೂಡಬಿದಿರೆ: 14.8.24 ರಂದು ನಡೆದ ಸೇವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಸದಸ್ಯರಿಗೆ ಹೃತ್ಪೂರ್ವಕ ಧನ್ಯವಾದಗಳು. ಪ್ರತ್ಯೇಕವಾಗಿ, ಇವತ್ತಿನ ಕಾರ್ಯಕ್ರಮವು ಲಯನ್ ರೋನಾಲ್ಡ್ Cardoza ರವರ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ನೆರವೇರಿಸಲಾಯಿತು. ದಕ್ಷಿಣ ಕನ್ನಡದ ಮೂಡಬಿದ್ರಿಯ ನಡ್ಯೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ, ಸ್ವಾತಂತ್ರ್ಯ ದಿನದ ಅಂಗವಾಗಿ, ಟೀಶರ್ಟ್, ಟೈ, ಐ ಡಿ, ಬೆಲ್ಟ್ ಸೇರಿದಂತೆ ಸುಮಾರು 5800 ರೂಪಾಯಿ ವೆಚ್ಚದ ಕೊಡುಗೆಯನ್ನು ನೀಡಲಾಯಿತು. ಈ ಸಂಧರ್ಭದಲ್ಲಿ, ಲಯನ್ ರೋನಾಲ್ಡ್ ಕಾರ್ಡೋಜಾ ರವರಿಗೆ ವಿಶೇಷ ಧನ್ಯವಾದಗಳು. ಹಾಗೂ, ಲಯನ್ […]
ಮೂಡುಬಿದಿರೆ: ಗಾಳಿ-ಮಳೆಗೆ ಇಂದೋ ನಾಳೆಯೋ ಕುಸಿದು ಬೀಳಲಿದ್ದ ಒಂಟಿ ಮಹಿಳೆಯ ಮನೆಯೊಂದಕೆ ಪಂಚಾಯತ್ ಉಪಾಧ್ಯಕ್ಷರು ಮತ್ತು ದಾನಿಗಳು ಸೇರಿ ಆ ಮನೆಗೆ ಕಾಯಕಲ್ಪ ನೀಡಿ ಮಾನವೀಯತೆ ಮೆರೆದಿದ್ದಾರೆ. ಪುತ್ತಿಗೆ ಗ್ರಾ.ಪಂಚಾಯತ್ ವ್ಯಾಪ್ತಿಯ ಗುಂಡ್ಯಡ್ಕ ಫಾಲ್ಸ್ ಬಳಿಯ ನಿವಾಸಿ ದಿ.ಸೀತಾರಾಮ ಆಚಾರ್ಯ ಅವರ ಪುತ್ರಿ ರೇವತಿಯಾಗಿದ್ದು ತಂದೆ-ತಾಯಿಯ ಮರಣ ನಂತರ ಒಬ್ಬರೇ ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದರು.ಇತ್ತೀಚೆಗೆ ಸುರಿದ ಭಾರೀ ಮಳೆಗಾಳಿಯಿಂದಾಗಿ ಮನೆಯ ಮೇಲ್ಛಾವಣಿ ಕುಸಿದಿದ್ದಲ್ಲದೆ ಹೆಂಚು ಹಾರಿ ಹೋಗಿತ್ತು. ತನ್ನ ಮನೆಯ ಪರಿಸ್ಥಿತಿಯನ್ನು ಕಂಡು ಕಂಗಾಲಾಗಿದ್ದ ರೇವತಿ […]
ಭಾರತೀಯ ಕಥೊಲಿಕ ಯುವ ಸಂಚಲನ ಮೂಡುಬಿದ್ರಿವಲಯ ಮತ್ತು ಭಾರತೀಯ ಕಥೊಲಿಕ ಯುವ ಸಂಚಲನ ಗಂಟಾಲ್ಕಟ್ಟೆ ಘಟಕ ಇದರ ಸಹಯೋಗದೊಂದಿಗೆ ಮೂಡಬಿದ್ರಿ ವಲಯದ ಯುವ ಜನರಿಗೆ ಒಂದು ದಿನದ ಮಾಹಿತಿ ಕಾರ್ಯಗಾರ “ಯವ ಎಕ್ತಾರ್ 2024” ಎಂಬ ಸಮಾಲೋಚನೆ ಸಭೆಯನ್ನು ಗಂಟಾಲ್ಕಟ್ಟೆಯ ನಿತ್ಯ ಸಹಾಯ ಮಾತ ಇಗರ್ಜಿಯ ಸಭಾಭವನದಲ್ಲಿ ದಿನಾಂಕ 11-08-2024 ರಂದು ನಡೆಯಿತು. ಬೆಳಗಿನ ಜಾವ ಕಾರ್ಯಕ್ರಮವನ್ನು ಮೂಡಬಿದ್ರಿ ವಲಯದ ವಿಗಾರ್ಜನರಲ್ ಹಾಗೂ ಭಾರತೀಯ ಕಥೊಲಿಕ ಯುವ ಸಂಚಲನ ಮೂಡುಬಿದ್ರಿ ವಲಯದ ನಿರ್ದೇಶಕರಾದ ಅತಿವಂದನೀಯ ಫಾದರ್ ಒನಿಲ್ ಡಿಸೋಜಾಉದ್ಘಾಟಿಸಿದರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿತ್ಯ ಸಹಾಯಮಾತ ಇಗರ್ಜಿ ಗಂಟಾಲ್ಕಟ್ಟೆಯ ಧರ್ಮಗುರುಗಳಾದ ಫಾದರ್ ರೊನಾಲ್ಡ್ ಡಿಸೋಜಾಆಗಮಿಸಿ ನೆರೆದಿರುವ ಯುವಜನರನ್ನು ಉದ್ದೇಶಿಸಿ “ಯುವಜನರು ಮತ್ತು ಇಂದಿನ ಕ್ರೈಸ್ತ ಸಭೆ” ಎಂಬ […]
ಶಿರ್ತಾಡಿಯಲ್ಲಿ ಸ್ಥಾಪಿಸಲ್ಪಟ್ಟಿರುವ ಮೂಡುಬಿದಿರೆ ತಾಲೂಕಿನ ಪ್ರಪ್ರಥಮ ಕಾನೂನು ಕಾಲೇಜು “ಭುವನಜ್ಯೋತಿ” ಕಾನೂನು ಮಹಾವಿದ್ಯಾಲಯವನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಹಾಗೂ ಆಂದ್ರಪ್ರದೇಶದ ರಾಜ್ಯಪಾಲರಾದ ಎಸ್.ಅಬ್ದುಲ್ ನಝೀರ್ ಅವರು ಇಂದು ಉದ್ಘಾಟಿಸಿದರು. ಹೈಕೋರ್ಟ್ ನ್ಯಾಯಾಧೀಶರಾದ ಕೃಷ್ಣ ಎಸ್.ದೀಕ್ಷಿತ್, ಕರ್ನಾಟಕ ರಾಜ್ಯ ಕಾನೂನು ವಿ.ವಿ.ಯ ಉಪಕುಲಪತಿ ಡಾ.ಸಿ.ಬಸವರಾಜು, ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ವಿಶಾಲರಘು ಎಚ್.ಎಲ್ ಹಾಗೂ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ರವೀಂದ್ರ ಎಂ.ಜೋಶಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಭುನವಜ್ಯೋತಿ ಟ್ರಸ್ಟ್ ನ ಕಾರ್ಯದರ್ಶಿ ಆರ್.ಪ್ರಶಾಂತ್ […]
ಕೆಲ್ಲಪುತ್ತಿಗೆಯ ತೋಡಿನಲ್ಲಿ ಸತ್ತುಬಿದ್ದ ದನವನ್ನು ಮೇಲಕ್ಕೆತ್ತಿ ದಫನ ಮಾಡಲು ಸಹಕರಿಸಿದ ವಾಲ್ಪಾಡಿ, ಮಕ್ಕಿಯ ಯುವಕರು!ಕೆಲ್ಲಪುತ್ತಿಗೆಯ ತೋಡೊಂದರಲ್ಲಿ ದನವೊಂದು ಸತ್ತುಬಿದ್ದು ದುರ್ನಾತ ಬೀರುತ್ತಿತ್ತು.ಮೇಯಲು ಬಿಟ್ಟಿದ್ದ ಆ ದನವು ಇತ್ತೀಚಿನ ಜೋರಾದ ಮಳೆಗೆ ತೋಡಿನಲ್ಲಿ ಕೊಚ್ಚಿಕೊಂಡು ಹೋಗಿ ಮೇಲಕ್ಕೆ ಬರಲಾಗದೆ ಅಲ್ಲೇ ಕೊನೆಯುಸಿರೆಳೆದಿತ್ತು.ಸತ್ತು ಕೆಲವು ದಿನಗಳಾಗಿದ್ದರಿಂದ ದುರ್ನಾತ ಎದ್ದು ಯಾರೂ ಅದರ ಬಳಿ ಹೋಗಿರಲಿಲ್ಲ.ತೀರಾ ದುರ್ನಾತದಿಂದಾಗಿ ಯಾರು ಕೂಡಾ ಅದನ್ನು ಮೇಲಕ್ಕೆತ್ತಿ ದಫನ ಮಾಡಲು ಹೋಗಿರಲಿಲ್ಲ.ಸಂಬಂಧಪಟ್ಟ ಇಲಾಖೆಯವರು ಸ್ಥಳಕ್ಕೆ ಹೋಗಿ ” ಕೂಡಲೇ ವ್ಯವಸ್ಥೆ ಮಾಡಿ” ಎಂದು ಸೂಚಿಸಿದ್ದಲ್ಲದೆ ಅದನ್ನು […]
ಮೂಡುಬಿದಿರೆ ವಲಯ ಅರಣ್ಯಾಧಿಕಾರಿಯಾಗಿರುವ ದಿನೇಶ್ ಜಿ.ಡಿ.ಅವರು ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಯಾಗಿ ಭಡ್ತಿ ಹೊಂದಿದ್ದು ಸಿದ್ಧಾಪುರ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ದಿನೇಶ್ ಅವರು ಮೂಡುಬಿದಿರೆ ವಲಯ ಅರಣ್ಯಾಧಿಕಾರಿಯಾಗಿದ್ದು ಈ ಹಿಂದೆ ಕೂಡಾ ಮೂಡುಬಿದಿರೆಯಲ್ಲಿ ವಲಯಾರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಕಾರ್ಕಳಕ್ಕೆ ವರ್ಗಾವಣೆಗೊಂಡಿದ್ದರು. ಅಲ್ಲಿಂದ ಕಾರ್ಕಳ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿಯಾಗಿ ವರ್ಗಾವಣೆಗೊಂಡು ಮತ್ತೆ ಮೂಡುಬಿದಿರೆಗೆ ವಲಯ ಅರಣ್ಯಾಧಿಕಾರಿಯಾಗಿ ವರ್ಗಾವಣೆಗೊಂಡು ಬಂದಿದ್ದರು.
ಸ್ಪಷ್ಟ ಗುರಿಯಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದಕ್ಕೆ ಉತ್ತಮ ನಿದರ್ಶನ ಎಕ್ಸಲೆಂಟ್ ಮೂಡುಬಿದಿರೆಯ ನಿಶಾಂತ್ ಪಿ ಹೆಗ್ಡೆಯ ಶೈಕ್ಷಣಿಕ ಸಾಧನೆ ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಏಕ ನಿಷ್ಠೆ ನಿರಂತರ ಹೊಸತನದ ಹುಡುಕಾಟ ಗುರಿಮುಟ್ಟುವಲ್ಲಿನ ಶ್ರದ್ಧೆ ವಿದ್ಯಾರ್ಥಿಗಿದ್ದರೆ ಆತನಿಗೆ ವಿದ್ಯೆ ಒಲಿಯುತ್ತದೆ. ಹೀಗೆ ನಿರಂತರ ಸಾಧನೆಯ ಮೂಲಕ ವಿದ್ಯಾರ್ಥಿ ಜೀವನದಲ್ಲಿ ಅಪೂರ್ವ ಯಶಸ್ಸನ್ನು ಪಡೆದ ವಿದ್ಯಾರ್ಥಿ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ನಿಶಾಂತ್ ಪಿ. ಹೆಗ್ಡೆ. ಪ್ರತಿಯೊಂದು ವಿದ್ಯಾರ್ಥಿಯ ಬಾಲ್ಯವು […]