
ಮೂಡುಬಿದಿರೆ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಡುಬಿದಿರೆ ತಾಲೂಕು ಇವುಗಳ ಸಹಭಾಗಿತ್ವದಲ್ಲಿ ಪ್ರಾಂತ್ಯ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.ಜನಜಾಗೃತಿ ತಾಲೂಕು ಉಪಾಧ್ಯಕ್ಷ ಪ್ರಸಾದ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮಂಗಳೂರು ಯುನಿವರ್ಸಿಟಿ ಉಪನ್ಯಾಸಕ ಡಾ.ಪ್ರಭಾಕರ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು.ಜನಜಾಗೃತಿ ವಲಯ ಅಧ್ಯಕ್ಷ ಜೋಸ್ಸಿ ಮೆನೇಜಸ್, ಪ್ರಾಂತ್ಯ ಶಾಲೆಯ ಮುಖ್ಯೋಪಾಧ್ಯಾಯ ರಾಮಚಂದ್ರ, ಪ್ರಗತಿ ಬಂಧು ಒಕ್ಕೂಟದ ವಲಯ ಅಧ್ಯಕ್ಷ ಅರುಣ್ ಶೆಟ್ಟಿ, […]
ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ವತಿಯಿಂದ ಪೊಲೀಸ್,ಅಗ್ನಿಶಾಮಕದಳ ಸಿಬ್ಬಂಧಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ವತಿಯಿಂದ ಮೂಡುಬಿದಿರೆ ಪೊಲೀಸ್ ಸಿಬ್ಬಂದಿಗಳು ಹಾಗೂ ಕುಟುಂಬದವರಿಗೆ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಕುಟುಂಬದವರಿಗಾಗಿ ಮೂಡುಬಿದಿರೆಯ ಜೈನ್ ಮೆಡಿಕಲ್ ಸೆಂಟರ್ ನಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರು ಉದ್ಘಾಟಿಸಿದರು.ಡಾ.ಮಹಾವೀರ ಜೈನ್,ಡಾ.ಪ್ರಣಮ್ಯ ಜೈನ್,ಕ್ಲಬ್ ಅಧ್ಯಕ್ಷ ಪೂರ್ಣಚಂದ್ರ ಜೈನ್, ಕಾರ್ಯದರ್ಶಿ ಹರೀಶ್ ಎಂ.ಕೆ ಮತ್ತಿತರರು ಈ […]
ಮೂಡುಬಿದಿರೆ: ಗುರುವಾರ ಮುಂ ಸುರಿದ ಮಳೆಗೆ ಪುತ್ತಿಗೆ ಗ್ರಾ.ಪಂಚಾಯತ್ ವ್ಯಾಪ್ತಿಯ ಹಂಡೇಲಿನಲ್ಲಿ ಗುಡ್ಡ ಕುಸಿದು ಮನೆಗಳಿಗೆ ಹಾನಿಯಾಗಿದೆ.ಹಂಡೇಲು- ಮುಂಡೇಲಿನ ಝೀನತ್ ಅವರ ಮನೆಗೆ ಗುಡ್ಡ ಕುಸಿದು, ಜಮೀಲ ಮತ್ತು ಅಸ್ಮತ್, ಜೈನಾಬು ಅವರ ಮನೆಗೆ ಮಣ್ಣು ಕುಸಿದು ಬಿದ್ದು ಹಾನಿಯಾಗಿದೆ.ಮೈಮೂನ, ಮೊಹಮ್ಮದ್, ಅಬ್ದುಲ್ ಹಮೀದ್, ಮುಂಡೇಲಿನ ಅಬೂಬಕ್ಕರ್,ಗಿಡ್ಡಬೆಟ್ಟು ಶಾರದಾ ಅವರ ಮನೆಯ ಕಂಪೌಂಡ್ ಕುಸಿದು ಬಿದ್ದು ಹಾನಿಯಾಗಿದೆ.ಹಾನಿಗೊಳಗಾಗಿರುವ ಸ್ಥಳಕ್ಕೆ ಪಂಚಾಯತ್ ಅಭಿವೃದ್ದಿ ಅಧಿಕಾರಿ ಭೀಮ ನಾಯಕ್ ಬಿ.ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಅಪಾಯದಲ್ಲಿರುವ ಕುಟುಂಬದವರಿಗೆ ಪುತ್ತಿಗೆ […]
ವಿದ್ಯಾಗಿರಿ: ಶಿಕ್ಷಣ ಕ್ಷೇತ್ರದಲ್ಲಿ ನಾಟಕ ಮತ್ತು ಕಲೆ ಕೇವಲ ಪಠ್ಯೇತರ ಚಟುವಟಿಕೆಗಳಲ್ಲ. ಬದಲಾಗಿ ಅವು ಸೃಜನಶೀಲತೆ, ಬೌದ್ಧಿಕ ಬೆಳವಣಿಗೆಯನ್ನು ಅಭಿವೃದ್ಧಿ ಪಡಿಸಲಿರುವ ಪ್ರಬಲ ಸಾಧನಗಳಾಗಿವೆ ಎಂದು ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್‌ರಾಮ್ ಸುಳ್ಯ ತಿಳಿಸಿದರು.ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯ ಶಿವರಾಮ ಕಾರಂತ ಸಭಾಭವನದಲ್ಲಿ ಹಮ್ಮಿಕೊಂಡ ‘ಶಿಕ್ಷಣದಲ್ಲಿ ಕಲೆ ಹಾಗೂ ನಾಟಕದ ಪಾತ್ರ’ ದ ಕುರಿತು ಕರ‍್ಯಗಾರದಲ್ಲಿ ಮಾತನಾಡಿದರು.ಶಿಕ್ಷಣದಲ್ಲಿ ಕಲೆಯನ್ನು ರೂಢಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳನ್ನು ಸೃಜನಶೀಲರನ್ನಾಗಿ ಮಾಡಲು ಸಾಧ್ಯವಾಗುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸ್ವಯಂ ಅಭಿವ್ಯಕ್ತಿ ಮತ್ತು ಸಂವಹನಕ್ಕಾಗಿ ಮೌಲ್ಯಯುತವಾದ […]
ಮೂಡುಬಿದಿರೆ: ಕೇರಳದ ವಯನಾಡಿನಲ್ಲಿ ನಡೆದ ದುರಂತದಲ್ಲಿ ತುರ್ತು ಕಾರ್ಯಾಚರಣೆ ಪೂರೈಸಿ ಹಿಂದಿರುಗಿದ ಭಾರತೀಯ ಮಿಲಿಟರಿ ಕಮಾಂಡರ್‌ಗಳಿಗೆ, ಮೂಡುಬಿದಿರೆಯ ಮೆಸ್ಕಾಂ ಅಧಿಕಾರಿಗಳು ಮತ್ತು ವಿದ್ಯುತ್ ಗುತ್ತಿಗೆದಾರರು ಶುಕ್ರವಾರ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನ್, ತಾಂತ್ರಿಕ ವಿಭಾಗದ ಸಹಾಯಕ ಇಂಜಿನಿಯರ್ ನಿತೇಶ್, ಕಿರಿಯ ಇಂಜಿನಿಯರ್ ಮಮತಾ, ಕಿರಿಯ ಇಂಜಿನಿಯರ್ ಕೃಷ್ಣರಾಜ, ಪವರ್ ಮ್ಯಾನ್ ಪಪ್ಪುಕುಮಾರ, ಮಾಪಕ ಓದುಗ ವಿಜಯ, ಗುತ್ತಿಗೆದಾರರಾದ ಸತ್ಯಪ್ರಕಾಶ್ ಹೆಗ್ಡೆ, ಅನಿಶ್ ಡಿಸೋಜ, ವಿಶ್ವಾಲ್ ತೋಡಾರ್, ಶಶಿಧರ್ ಮತ್ತಿತರರು ಉಪಸ್ಥಿತರಿದ್ದರು.
ಮೂಡುಬಿದಿರೆ: ಇತ್ತೀಚಿನ ಭಾರಿ ಮಳೆಯಿಂದಾಗಿ ನಾಗರಕಟ್ಟೆ ಪ್ರದೇಶದಲ್ಲಿ ಅನೇಕ ಮನೆಗಳು ಜಲಾವೃತಗೊಂಡಿವೆ. ಈ ಪ್ರದೇಶದಲ್ಲಿ ನಿರ್ಮಿಸಿರುವ ಸೇತುವೆ ಮೊದಲು ಕಿರಿದಾಗಿದ್ದು, ಪುರಸಭೆ ಅದರ ಅಗಲವನ್ನು ಹೆಚ್ಚಿಸಿಕೊಂಡು ಹೊಸದಾಗಿ ನಿರ್ಮಿಸಿದ ಬಳಿಕ ನೀರು ಸರಾಗವಾಗಿ ಹರಿದು ಹೋಗುತ್ತಿತ್ತು. ಆದರೆ ಈ ಬಾರಿ ಸುರಿಯುತ್ತಿರುವ ಹೆಚ್ಚಿನ ಮಳೆಯಿಂದಾಗಿ ತೋಡಿನಲ್ಲಿ ನೀರು ತುಂಬಿಕೊಂಡು, ಪಕ್ಕದಲ್ಲಿರುವ ಹಡೀಲು ಬಿದ್ದಿರುವ ಗದ್ದೆಗಳ ಮೇಲೆ ಹರಿದಿದ್ದು, ವಸಂತ ಭಂಡಾರಿ ಮತ್ತು ಮೋಹನ್ ಕೋಟ್ಯಾನ್ ಅವರ ಮನೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಭಾರಿ ಮಳೆಯಿಂದಾಗಿ ಆ ಪ್ರದೇಶದ ಜನರು […]
ಮೂಡುಬಿದಿರೆ: ಗುರುವಾರ ರಾತ್ರಿ ಶಿರ್ತಾಡಿ ಗ್ರಾಮದಲ್ಲಿ ವಿಕ್ರಮ ಆಚಾರ್ಯ ಅವರ ಮನೆ ಭಾಗಶಃ ಕುಸಿದಿದ್ದು, ಸಂಬಂಧಿಸಿದಂತೆ ಅಪಾರ ನಷ್ಟ ಸಂಭವಿಸಿದೆ. ವಿಕ್ರಮ ಆಚಾರ್ಯ, ಅವರ ತಾಯಿ, ಪತ್ನಿ, ಮತ್ತು ಮಕ್ಕಳೊಂದಿಗೆ ಮಲಗಿದಾಗ ರಾತ್ರಿ 2 ಗಂಟೆ ಸುಮಾರಿಗೆ ಮನೆಯ ಹಿಂಭಾಗದಲ್ಲಿ ದೇವರ ಕೋಣೆ ಭಾಗ ಕುಸಿದಿದ್ದು, ಅದೃಷ್ಟವಶಾತ್ ಮನೆದಿನರೀಗ ಇವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಪಂಚಾಯತ್ ಸಿಬ್ಬಂದಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯ ಕುಸಿತಕ್ಕೆ ಕಾರಣವಾದ ಸಂದರ್ಭಗಳನ್ನು ಪರಿಶೀಲಿಸುತ್ತಿದ್ದಾರೆ, […]
ವಿದ್ಯಾರ್ಥಿಗಳನ್ನು ಒಳ್ಳೆಯ ನಾಗರಿಕನನ್ನಾಗಿ ಮಾಡುವುದೇ ಸ್ಕೌಟ್ಸ್ ಮತ್ತು ಗೈಡ್ಸ್ನ ಧೈಯೋದ್ಧೇಶ. ಪ್ರತಿಯೊಬ್ಬರು ಇದರ ನಿಯಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ಗೆ ಸೇರಲು ತುಂಬಾ ಅವಕಾಶಗಳಿವೆ ಅದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ನಿಮಗೆ ವಿದ್ಯೆ ನೀಡುತ್ತಿರುವ ಪ್ರತಿ ಶಿಕ್ಷಕರನ್ನು ಪ್ರತಿದಿನ ಸ್ಮರಿಸಬೇಕು. ಬದುಕಿನಲ್ಲಿ ಶಿಸ್ತು ಮುಖ್ಯ. ಆ ಶಿಸ್ತಿನ ಪಾಠವನ್ನು ಶಿಕ್ಷಕರು ನಿಮಗೆ ಕಲಿಸುತ್ತಾರೆ. ಆ ಮೂಲಕ ನೀವು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಹೊರಹೊಮ್ಮಬೇಕು. ಒಬ್ಬ ನಾಗರಿಕನಾಗಿ ನನ್ನ ಜವಬ್ದಾರಿಗಳೇನು ಎಂದು ಅರಿತುಕೊಳ್ಳಬೇಕು. ನಾವೆಲ್ಲಾ ಪರಿಸರದ ಕೂಸುಗಳು ಪರಿಸರದೊಂದಿಗೆ […]
ದಕ್ಷಿಣ ಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನಾಳೆ ಆಗಸ್ಟ್ 2ರಂದು ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ, ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಪ್ರಕಟಿಸಿದ್ದಾರೆ. ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮತ್ತು ಪಶ್ಚಿಮ ಘಟ್ಟದ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗಗಳಲ್ಲಿ ಮುಂದಿನ ಕೆಲವು ದಿನಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇರುವುದರಿಂದ ರೆಡ್ ಅಲರ್ಟ್ […]
ಮೂಡುಬಿದಿರೆ: ಬುಧವಾರ ನಡೆದ ಭಾರೀ ಮಳೆಯ ಪರಿಣಾಮ, ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬನ್ನಡ್ಕದಲ್ಲಿ ಹಲವು ಹಾನಿ ಸಂಭವಿಸಿದೆ. ಸತೀಶ್ ರಾವ್ ಮತ್ತು ದರಣೇಂದ್ರ ಜೈನ್ ಅವರ ಮನೆಗಳ ಆವರಣಗೋಡೆಗಳು ಕುಸಿದಿವೆ. ಸ್ಥಳೀಯ ಎಸ್ ಕೆ.ಎಫ್ ಕಂಪೆನಿಯ ಅಪಾಯಕಾರಿ ಆವರಣಗೋಡೆಯೂ ಮಳೆಯಿಂದ ಬಿದ್ದು ಹೋಗಿದೆ. ಬನ್ನಡ್ಕ ಪಾಡಿಯಾರ್ ಗೆ ಹೋಗುವ ಮುಖ್ಯ ರಸ್ತೆಯು ಬಿರುಕು ಬಿಟ್ಟಿದ್ದು, ಜನ ಸಂಚಾರಕ್ಕೆ ತೊಂದರೆ ಉಂಟಾಗಿದೆ.