
ಮೂಡುಬಿದಿರೆ: ಸೊಸೈಟಿಯ ಸದಸ್ಯರೆಲ್ಲರ ಕಾಳಜಿ ಮತ್ತು ಸಹಕಾರದಿಂದಕಳೆದ ಆರ್ಥಿಕ ವರ್ಷದಲ್ಲಿ 1736 ಕೋಟಿ ರೂ ವ್ಯವಹಾರ ನಡೆಸಲು ಸಾಧ್ಯವಾಗಿದೆ. ಸದಸ್ಯರ ವಿಶ್ವಾಸ ಮತ್ತು ವ್ಯವಹಾರದ ಜತೆಗೆ ಸಾಲಗಾರರ ಕ್ಲಪ್ತ ಸಮಯದ ಮರುಪಾವತಿಯಿಂದ ಈ ಅಭಿವೃದ್ಧಿ ಸಾಧ್ಯವಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸೊಸೈಟಿ ಅಧ್ಯಕ್ಷ ಸಹಕಾರಿ ರತ್ನ ಎಂ. ಬಾಹುಬಲಿ ಪ್ರಸಾದ್ ಹೇಳಿದರು. ಅವರು ಕನ್ನಡ ಭವನದಲ್ಲಿ ರವಿವಾರ ಜರಗಿದ ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿಯ 108ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ […]
ಮೂಡುಬಿದಿರೆ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸಹ ಸದಸ್ಯನಾಗಿ ಮೂಡುಬಿದಿರೆ ತಾಲೂಕಿನ ತೆಂಕಮಿಜಾರು ಗ್ರಾಮದ ಕುಡುಬಿ ಸಮಾಜದ ಯುವಕ ಕಂಬಳ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಅವರು ಆಯ್ಕೆಯಾಗಿದ್ದಾರೆ.ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಪ್ರಥಮ ಸರ್ವ ಸದಸ್ಯರ ಸಭೆಯಲ್ಲಿ ಸದಸ್ಯರನ್ನು ನೇಮಕ ಮಾಡಲಾಗಿದ್ದು, ಅಂಕೋಲಾದ ಮದ್ಯಖಾರ್ವಿ ವಾಡಾದ ಖಾರ್ವಿ ಮುಖಂಡ ಜಗದೀಶ್ ಯಶ್ವಂತ್, ಉಡುಪಿ ಶಿರೂರಿನ ಕೊಂಕಣಿ ದಾಲ್ದಿ ಸಮುದಾಯದ ಸಾಹಿತಿ ಹಾಗೂ ಸಂಘಟಕ ಮಾಮ್ದು ಇಬ್ರಾಹಿಂ ಹಾಗೂ ಕುಡುಬಿ ಸಮುದಾಯದ ಶ್ರೀನಿವಾಸ ಗೌಡ ಅವರನ್ನು […]
ಪ್ರಕೃತಿ ಹಚ್ಚ ಹಸಿರಾಗಿದ್ದರೆ ಮಾನವನಿಗೆ ಉಸಿರು. ಮನುಷ್ಯ ಮತ್ತು ಪ್ರಕೃತಿಯ ನಡುವೆ ಪರಸ್ಪರ ಕೊಡುಕೊಳ್ಳುವಿಕೆ ಇದ್ದರೆ ಬದುಕು ಹಸನಾಗುತ್ತದೆ. ಪ್ರಕೃತಿಯ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ಆ ನಿಟ್ಟಿನಲ್ಲಿ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ಸಸ್ಯ ಶ್ಯಾಮಲಾ ಎಂಬ ಘೋಷ ವಾಕ್ಯದಡಿ ಮೂಡುಬಿದಿರೆಯಿಂದ ವೇಣೂರಿನವರಗೆ ವಿವಿಧ ತಳಿಗಳ ಒಂದು ಸಾವಿರ ಸಸ್ಯಗಳನ್ನು ನೆಡುವ ಸಂಕಲ್ಪವನ್ನು ತೊಟ್ಟು ಈಗಾಗಲೇ ಕಾರ್ಯತತ್ಪರವಾಗಿದೆ. ಇಂದು ನೆಡುವ ಗಿಡ ಸಾವಿರ ಜನರಿಗೆ ಆಶ್ರಯವಾಗಬೇಕು. ಸಮಾಜದಲ್ಲಿ ಪರಿಸರ ಜಾಗೃತಿ ಮೂಡಬೇಕು. ವಿದ್ಯಾರ್ಥಿಗಳಲ್ಲಿ ಪ್ರಕೃತಿ ಪ್ರೇಮವು […]
ಮೂಡುಬಿದಿರೆ: ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರಾಷ್ಟೀಯ ಸೇವಾ ಯೋಜನೆ ಹಾಗೂ ರೋವರ್ ರೇಂಜರ್ಸ್ ಘಟಕದ ಘಟಕದ ವತಿಯಿಂದ ಕಾರ್ಕಳದ ಮಿಯ್ಯಾರು ಗ್ರಾಮದಲ್ಲಿ ‘ಕೆಸರಾಟ ಪಾಠ’ ಕರ‍್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಿಯ್ಯಾರು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಮಾಧವ ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಿಯ್ಯಾರು ಗ್ರಾಮಕ್ಕೂ ಎನ್‌ಎಸ್‌ಎಸ್ ಚಟುವಟಿಕೆಗಳಿಗೂ ಅವಿನಾಭಾವ ನಂಟಿದೆ. ಈ ಗ್ರಾಮದಲ್ಲಿ ಹೆಚ್ಚಿನ ಎನ್‌ಎಸ್‌ಎಸ್ ಕ್ಯಾಂಪ್‌ಗಳು ನಡೆಯುತ್ತವೆ. ಈ ಕರ‍್ಯಕ್ರಮದಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಜೀವನ ಪಾಠ ಲಭಿಸಲಿ ಎಂದು ಹಾರೈಸಿದರು. ಆಳ್ವಾಸ್ ವಿದ್ಯಾ ಸಂಸ್ಥೆಯ ಟ್ರಸ್ಟಿ […]
ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ೨೦೨೪-೨೫ ನೇ ಶೈಕ್ಷಣಿಕ ವರ್ಷದ ಜೈನ ಪಾಠಗಳಾ ಉದ್ಘಾಟನಾ ಸಮಾರಂಭದಲ್ಲಿ ನರಸಿಂಹರಾಜಪುರದ ಅತಿಶಯ ಕ್ಷೇತ್ರ ಬಸ್ತಿಮಠದ ಪರಮಪೂಜ್ಯ ಡಾ.ಸ್ವಸ್ತಿಶ್ರೀ ಲಕ್ಷ್ಮೀ ಸೀನ ಭಟ್ಟಾರಕ ಪಟ್ಟಾಚರ‍್ಯರ‍್ಯ ಮಹಾಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನವನ್ನಿತ್ತರು. ಬಳಿಕ ಇದೇ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಎಕ್ಸಲೆಂಟ್ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ಕಂಬಳ, ಕ್ರೀಡೆ ಹಾಗೂ ಇನ್ನಿತರ ಬೇರೆ ಬೇರೆ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು, ‘ಬೆದ್ರ ಫ್ರೆಂಡ್ಸ್’ ಇದರ ರುವಾರಿಯಾಗಿ ಅನೇಕ ಸೇವಾಕಾರ್ಯಕ್ರಮಗಳನ್ನು ಕೈಗೊಂಡ ಸ್ನೇಹ ಜೀವಿ, ಸರಳಜೀವಿ ಹಾಗೂ ಮೂಡಬಿದ್ರೆಗೆ […]
ಮೂಡುಬಿದಿರೆಯ ಸಮಾಜ ಮಂದಿರ ಸಭಾದಲ್ಲಿ ವಾಚ್ ಮೆನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಕುಮಾರ್ ಹೆಗ್ಡೆ (56 ವ) ಅವರು ಬಿಪಿ ಹೈ ಆಗಿ ಸೋಮವಾರ ಬೆಳಿಗ್ಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕೊಕ್ರಾಡಿಯ ನಿವಾಸಿ ಸುಕುಮಾರ್ ಹೆಗ್ಡೆ ಅವರು ಕಳೆದ 5 ವರ್ಷಗಳಿಂದ ಸಮಾಜ ಮಂದಿರದಲ್ಲಿ ವಾಚ್ ಮೆನ್ ಆಗಿ ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದು, ಹಗಲಿನಲ್ಲಿ ಬೇರೆ ಕಡೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಅವರಿಗೆ ಉಳಿದುಕೊಳ್ಳಲು ಸಮಾಜ ಮಂದಿರದ ವತಿಯಿಂದಲೇ ಅಲ್ಲಿಯೇ ರೂಮ್ ನೀಡಲಾಗಿತ್ತು. ಸೋಮವಾರ […]
ಮೂಡುಬಿದಿರೆ: ಕೋಟೆಬಾಗಿಲು ಪ್ರದೇಶದ ನಿವಾಸಿ ಅನ್ಸಾರ್ ಅವರ ಪುತ್ರ ಶಾರಿಕ್, ಭಾನುವಾರ ರಾತ್ರಿ ಸ್ನಾನಗೃಹದಲ್ಲಿ ಸಂಭವಿಸಿದ ದುರಂತದಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಕೋಟೆಬಾಗಿಲಿನ ಅಪಾರ್ಟ್‌ಮೆಂಟ್‌ನಲ್ಲಿ ಶಾರಿಕ್ ಮತ್ತು ಅವರ ತಾಯಿ ವಾಸಿಸುತ್ತಿದ್ದರು. ಶಾರಿಕ್ ಸ್ನಾನಕ್ಕೆಂದು ತೆರಳಿದಾಗ, ಆತನ ತಾಯಿ ನಿದ್ರಿಸುತ್ತಿದ್ದರು. ಆದರೆ, ಬಹಳ ಹೊತ್ತಾದರೂ ಶಾರಿಕ್ ಹೊರಬರದೇ ಇದ್ದಾಗ, ರಾತ್ರಿ ಮನೆಗೆ ಬಂದ ಶಾರಿಕ್‌ನ ಸಹೋದರ ಸ್ನಾನಗೃಹದ ಬಾಗಿಲು ಒಡೆದು ನೋಡಿ, ದುರ್ಘಟನೆ ಬೆಳಕಿಗೆ ತಂದುಕೊಂಡರು. ಸ್ನಾನಗೃಹದ ಗ್ಯಾಸ್ ಗೀಸರ್‌ನಿಂದ ಉಂಟಾದ ಕೆಮಿಕಲ್ ಸ್ಪ್ರೇಡ್ ಆಗಿ ಶಾರಿಕ್ ಉಸಿರುಗಟ್ಟಿದ […]
ಮೂಡುಬಿದಿರೆ: ಪ್ರತಿದಿನ ಪತ್ರಿಕೆಗಳನ್ನು ಓದುವುದರಿಂದ ಸಮಾಜದ ಆಗುಹೋಗುಗಳನ್ನು ತಿಳಿದುಕೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ, ಪರಿಣಾಮಕಾರಿ ಸಂವಹನ, ಶಬ್ದ ಸಂಪತ್ತಿನ ವೃದ್ಧಿ ಸಾಧ್ಯ ಎಂದು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ತಿಳಿಸಿದರು. ಅವರು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಮೂಡಬಿದಿರೆ ತಾಲೂಕು ಘಟಕ ಹಾಗೂ ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜು ಜಂಟಿಯಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕರ‍್ಯಕ್ರಮದಲ್ಲಿ ಮಾತನಾಡಿದರು. ಇಂದಿನ ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ವಿವಿಧ ನವ ಮಾಧ್ಯಮಗಳು ನಕಾರತ್ಮಕ, ಅತಿರಂಜಿತ ಸುದ್ದಿಗಳಿಗೆ […]
ಸೈನಿಕರು ತುಂಬಾ ಭಾವ ಜೀವಿಗಳು-ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿಕೆನಮ್ಮನ್ನು ರಕ್ಷಣೆ ಮಾಡುತ್ತಿರುವ ಸೈನಿಕರನ್ನು ಪ್ರತೀಕ್ಷಣ ಸ್ಮರಿಸಬೇಕು. ಸೈನಿಕರು ಭಾವಜೀವಿಗಳು, ನಚೀಕೇತ್, ಸೌರಭ್ ಕಾಲಿಯಾರಂತಹ ಮೊದಲಾದ ವೀರ ಯೋಧರ ಬಲಿದಾನದ ಪ್ರತಿಫಲವಾಗಿ ಇಂದಿನ ಭಾರತ ಭವ್ಯವಾಗಿದೆ. ಕಾರ್ಗಿಲ್ ಯುದ್ಧವಲ್ಲ ಅದೊಂದು ಕಾರ್ಯಚರಣೆ. ಯಾಕೆ ಭಾರತಕ್ಕೆ ಕಾರ್ಗಿಲ್ ಮುಖ್ಯವೆಂದರೆ ೫೨೭ ಸೈನಿಕರು ತಮ್ಮ ಯಶಸ್ವಿ ಕಾರ್ಯಚರಣೆಯಿಂದ ಭಾರತಕ್ಕೆ ಜಯ ತಂದುಕೊಟ್ಟು ಹುತಾತ್ಮರಾದರು. ಇಂದು ಆ ಕಾರ್ಯಚರಣೆಯಲ್ಲಿ ಮಡಿದ ಅಷ್ಟೂ ಸೈನಿಕರನ್ನು ಸ್ಮರಿಸಿಕೊಳ್ಳುವುದು ಅತೀ ಮುಖ್ಯ ಎಂಬುದಾಗಿ ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ […]
ಮೂಡುಬಿದಿರೆ : ಬಂಟ್ವಾಳ – ಮೂಡುಬಿದಿರೆ ರಾಜ್ಯ ಹೆದ್ದಾರಿಯ ಮೇಲೆ ನಿನ್ನೆ ತಡರಾತ್ರಿ 11:30ರ ವೇಳೆಗೆ ಪ್ರಾಂತ್ಯ ಗ್ರಾಮದ ಮಿಜಾರ್ ಫ್ಯೂಯಲ್ಸ್ ಪೆಟ್ರೋಲ್ ಪಂಪಿನ ಬಳಿ ಹೆದ್ದಾರಿಗೆ ಅಡ್ಡವಾಗಿ ಮರವೊಂದು ವಿಪರೀತ ಗಾಳಿ-ಮಳೆಗೆ ಧರೆಗೆ ಉರಿಳಿತ್ತು. ರಾತ್ರಿ ವೇಳೆ ವಾಹನ ಸಂಚಾರ ಕಡಿಮೆ ಇದದ್ದರಿಂದ ಯಾವುದೇ ವಾಹನಗಳಿಗೆ ಹಾನಿಯಾಗಲಿಲ್ಲ. ಮರ ಬಿದ್ದ ಸ್ಥಳದಲ್ಲಿದ್ದ ಬಿರಾವು ಮೂಲದ ಸದಾಶಿವ ಶಟ್ಟಿಯವರು ತಮ್ಮ ಮನೆಗೆ ಧಾವಿಸಿ ಮರ ಕಡಿಯುವ ಮಿಷಿನ್ ತಂದು ಧರೆಗೆ ಉರುಳಿದ್ದ ಮರವನ್ನು ತೆರವು ಮಾಡುವಲ್ಲಿ ಸಹಾಯ […]