
ಮೂಡುಬಿದಿರೆ: ಪುತ್ತಿಗೆ ಗ್ರಾಪಂನ ಹಂಡೇಲಿನಲ್ಲಿ ಪಂಚಾಯಿತಿ ವ್ಯಾಪ್ತಿಯ ಪುತ್ತಿಗೆ ಪದವು ಹಂಡೇಲು ಮಸೀದಿ ಬಳಿ ಶುಕ್ರವಾರ ಸಾಯಂಕಾಲ ಕಾರು ಡಿಕ್ಕಿಯಾಗಿ ಸೈಕಲ್ ಸವಾರ, ಪಂಪ್ ಆಪರೇಟಿವ್ ರಮೇಶ್ ಅಂಚನ್(56) ಮೃತಪಟ್ಟಿದ್ದಾರೆ. ಸಾಯಂಕಾಲ 6.30ರ ವೇಳೆ ರಮೇಶ್ ಅವರು ಸೈಕಲ್ ನಲ್ಲಿ ಹೋಗುತ್ತಿರುವಾಗ ಕಲ್ಲಮುಂಡ್ಕೂರು ಕಡೆಯಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ತಲೆ, ಕಾಲಿಗೆ ತೀವ್ರ ತರಹದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ರಮೇಶ್ ಅವರು ಹಲವು ವರ್ಷಗಳ ಹಿಂದೆ ಮೂಡುಬಿದಿರೆ ಮಾರುಕಟ್ಟೆ […]
ಮೂಡುಬಿದಿರೆ: ದೇಶಪ್ರೇಮ ಎಂದಾಕ್ಷಣ ಸೇನೆ ಸೇರುವುದು ಮಾತ್ರವಲ್ಲ. ದೇಶದ ಅಭ್ಯುದಯಕ್ಕಾಗಿ ಸಲ್ಲಿಸುವ ಪ್ರತೀ ಕರ‍್ಯವು ದೇಶಪ್ರೇಮವೆನಿಸುತ್ತದೆ ಎಂದು ಪತ್ರಕರ್ತ ಹಾಗೂ ಯುವ ವಾಗ್ಮಿ ಶ್ರೀಕಾಂತ್ ಶೆಟ್ಟಿ ನುಡಿದರು. ಅವರು ಶುಕ್ರವಾರ ಶಿವರಾಮ ಕಾರಂತರ ಸಭಾಂಗಣದಲ್ಲಿ ನಡೆದ ಆಳ್ವಾಸ್ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ೨೦೨೪-೨೫ನೇ ವರ್ಷದ ಚಟುವಟಿಕೆಗಳು ಹಾಗೂ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದರು.ಭಾರತದ ಸ್ವಾತಂತ್ರ‍್ಯದ ನಂತರ ಐದು ಪ್ರಮುಖ ಯುದ್ಧಗಳು ನಡೆದಿವೆ. ಪಾಕಿಸ್ತಾನ ನಾಲ್ಕು ಯುದ್ಧಗಳಲ್ಲೂ ನಮ್ಮ ವಿರುದ್ಧ ಗೆಲ್ಲಲಾಗಲಿಲ್ಲ. ಸೈನಿಕರ ಸಾವು […]
ಮೂಡುಬಿದಿರೆ: ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಜುಲೈ ೨೬ರಿಂದ ಆರಂಭವಾಗಲಿರುವ ಒಲಿಂಪಿಕ್ಸ್ ಗೇಮ್ಸ್ಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ದತ್ತು ಶಿಕ್ಷಣ ಯೋಜನೆಯಲ್ಲಿ ಶಿಕ್ಷಣ ಮುಗಿಸಿರುವ ಐವರು ಹಿರಿಯ ವಿದ್ಯಾರ್ಥಿಗಳು ನಮ್ಮ ದೇಶವನ್ನೂ ಪ್ರತಿನಿಧಿಸಲಿದ್ದಾರೆ. ಇದರೊಂದಿಗೆ ಈ ವರೆಗೆ ಒಟ್ಟು ೧೧ ಕ್ರೀಡಾಪಟುಗಳು ವಿವಿಧ ಒಲಿಂಪಿಕ್ಸ್ ಗೇಮ್ಸ್ನಲ್ಲಿ ಭಾಗವಹಿಸಿದ ಕೀರ್ತಿ ಆಳ್ವಾಸ್ ಸಂಸ್ಥೆಗೆ ಸಲ್ಲುತ್ತದೆ. ಇದು ಕರ್ನಾಟಕ ರಾಜ್ಯದಿಂದ ಒಂದು ಸಂಸ್ಥೆಯಿಂದ ಅತೀ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ ಹಿರಿಮೆಗೆ ಆಳ್ವಾಸ್ ಪಾತ್ರವಾಗುತ್ತಿದೆ. ಈ ಬಾರಿಯ ಒಲಿಂಪಿಕ್ಸ್ ಗೇಮ್‌ನಲ್ಲಿ ೪೪೦೦ ರಿಲೇಯ […]
ಮೂಡುಬಿದಿರೆ: ಮೂಡುಬಿದಿರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಶ್ರೀಧರ್ ಪಿ. ಅವರು ಅಧಿಕಾರ ಸ್ವೀಕರಿಸಿದ್ದಾರೆ. ಮೂಡುಬಿದಿರೆ ಎ.ಸಿ.ಎಫ್ ಆಗಿದ್ದ ಸತೀಶ್ ಎನ್. ಅವರು ಕಾರ್ಕಳ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ. ಶ್ರೀಧರ್ ಅವರು ಮಂಗಳೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು, ಅಲ್ಲಿಂದ ಮೂಡುಬಿದಿರೆಗೆ ವರ್ಗಾವಣೆಗೊಂಡು ಬಂದಿದ್ದಾರೆ. ಈ ಹಿಂದೆ ಮೂಡುಬಿದಿರೆ ವಲಯಾರಣ್ಯಾಧಿಕಾರಿಯಾಗಿ ಮೂಡುಬಿದಿರೆಯಲ್ಲಿ ಸೇವೆ ಸಲ್ಲಿಸಿದ್ದ ಶ್ರೀಧರ್ ಅವರು ದಕ್ಷ ಅಧಿಕಾರಿಯಾಗಿ ಗಮನ ಸೆಳೆದಿದ್ದರು.
ಕಳೆದ ಕೆಲ ವರ್ಷಗಳಿಂದ ಮೂಡುಬಿದಿರೆ ನೂತನ ಮಾರ್ಕೆಟ್ ಕಟ್ಟಡ ವಿವಾದವು ಹೈಕೋರ್ಟ್ ನಲ್ಲಿದ್ದು ಇದರ ವಿಚಾರಣೆಯನ್ನು ಮತ್ತೆ ಆ.8 ಕ್ಕೆ ಮುಂದೂಡಿದೆ. ಸಂರಕ್ಷಿತ ಸ್ಮಾರಕ ಪ್ರದೇಶದ ವ್ಯಾಪ್ತಿಯಲ್ಲಿ ಹೊಸ ಮಾರುಕಟ್ಟೆ ಕಟ್ಟಡ ನಿರ್ಮಾಣ ಮಾಡುವ ಮೂಡುಬಿದಿರೆ ಪುರಸಭೆಯ ಕ್ರಮವನ್ನು ಪ್ರಶ್ನಿಸಿ ಜೈಸನ್ ಮಾರ್ಷಲ್ ಸುವಾರಿಸ್ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಮಾರುಕಟ್ಟೆ ಕಟ್ಟಡ ನಿರ್ಮಾಣ ಅನುಮತಿಯನ್ನು ತಿರಸ್ಕರಿಸಿದ ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರದ ಕ್ರಮವನ್ನು ಪ್ರಶ್ನಿಸಿ ಮೂಡುಬಿದಿರೆ ಪುರಸಭೆ ಸಲ್ಲಿಸಿರುವ ಅರ್ಜಿಗಳ ವಿಚಾರಣೆ […]
ಮೂಡುಬಿದರೆ: ಅಲಂಕಾರ ಪಂಡಿತ್ ರೆಸಾರ್ಟ್ ಸಂಸ್ಥೆಗೆ ಮಂಗಳೂರಿನ ಎಂಸಿಸಿ ಬ್ಯಾಂಕ್ ಬೀಗಮುದ್ರೆ ಜಡಿದಿದೆ ಸುಮಾರು 14 ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಂತೆ ಈ ಬೀಗ ಮುದ್ರೆ ಹಾಕಲಾಗಿದೆ ಬ್ಯಾಂಕಿನ ಅಧಿಕಾರಿಗಳು ಕಾನೂನು ರೀತಿಯಲ್ಲಿ ಹೋರಾಟ ಮಾಡಿದ್ದು ಕಾನೂನು ರೀತಿಯಲ್ಲಿ ಪ್ರಕ್ರಿಯೆಗಳು ನಡೆದಿವೆ .ಬುಧವಾರ ಮೂಡಬಿದ್ರೆ ಠಾಣಾಧಿಕಾರಿಗಳ ಸಹಿತ ಬ್ಯಾಂಕ್ ಸಿಬ್ಬಂದಿಗಳು ಅಧಿಕಾರಿಗಳು ನ್ಯಾಯಾಲಯದ ಅಧಿಕಾರಿಗಳ ಸಮಕ್ಷಮ ಪ್ರಕ್ರಿಯೆ ನಡೆಸಲಾಯಿತು
ಮೂಡುಬಿದಿರೆ: ಬೆಳುವಾಯಿಯ ಯಕ್ಷದೇವ ಮಿತ್ರಕಲಾ ಮಂಡಳಿಯ 27ನೇ ವರ್ಷದ ‘ಯಕ್ಷ ಸಂಭ್ರಮ 2024’ ಜು. 27ರಂದು ಮಧ್ಯಾಹ್ನ 1:30 ರಿಂದ ಪ್ರೀತಂ ಗಾರ್ಡನ್‌ನಲ್ಲಿ ನಡೆಯಲಿದೆ. ಮಂಡಳಿಯ ಅಧ್ಯಕ್ಷ ದೇವಾನಂದ ಭಟ್ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಸಾರಿಗೆ ಉದ್ಯಮಿ ನಾರಾಯಣ ಪಿ.ಎಂ ಉದ್ಘಾಟಿಸಲಿದ್ದು, ಉದ್ಯಮಿ ಕೆ. ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಪ್ರಸಿದ್ಧ ಕಲಾವಿದರಿಂದ ತೆಂಕು, ಬಡಗು ಕೂಡಾಟ ‘ವೀರ ವೈಷ್ಣವ’ […]
ಮೂಡುಬಿದಿರೆ: ಉಡುಪಿ-ಕಾಸರಗೋಡು ನಡುವೆ ಹಾದು ಹೋಗುವ 400 ಕೆವಿ ವಿದ್ಯುತ್ ಲೈನ್ ಅಳವಡಿಕೆ ವಿರೋಧಿಸಿ ಕಂಪೆನಿಯವರ ದುರ್ವರ್ತನೆ ಖಂಡಿಸಿ ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಲೈನ್ ವಿರೋಧಿ ಹೋರಾಟ ಸಮಿತಿಯಿಂದ ಜು.30ರಂದು ಬೆಳಿಗ್ಗೆ 10ಕ್ಕೆ ಮಿಜಾರು ಗೋಪಾಲಕೃಷ್ಣ ದೇವಸ್ಥಾನ ಬಳಿಯ ಬೈತರಿಯಲ್ಲಿ ಭಾರಿ ಪ್ರತಿಭಟನೆ ನಡೆಯಲಿದೆ ಎಂದು ಸಮಿತಿಯ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ತಿಳಿಸಿದ್ದಾರೆ. ಅವರು ಬುಧವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಈ ಪ್ರತಿಭಟನೆಯಲ್ಲಿ ಮಿಜಾರು, […]
ಕಲ್ಲಬೆಟ್ಟು: ಭಾರತೀಯ ನ್ಯಾಯಾಂಗ ವ್ಯವಸ್ಥೆ ಅತ್ಯಂತ ಬಲಿಷ್ಠವಾಗಿದ್ದು ಪ್ರತಿಯೊಬ್ಬ ಪ್ರಜೆಯೂ ಗೌರವಯುತವಾಗಿ ಬಾಳುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಅದರಲ್ಲಿಯೂ ಮಕ್ಕಳ ಸುರಕ್ಷತೆಗೆ ಸಂಬAಧಿಸಿದAತೆ ರಚನೆಯಾಗಿರುವ ಕಠಿಣ ಕಾನೂನುಗಳಿಂದ ಪೋಷಕರು ಮತ್ತು ಮಕ್ಕಳು ಸಹಜ ಬದುಕನ್ನು ನಡೆಸಲು ಸಹಕಾರಿಯಾಗಿದೆ. ದೇಶದ ಭವಿಷ್ಯವಾದ ಮಕ್ಕಳ ಸುರಕ್ಷತೆ ಸಮಾಜದ ಹೊಣೆಗಾರಿಕೆಯಾಗಿದೆ ಎಂದು ಕಾರ್ಕಳದ ನ್ಯಾಯವಾದಿಗಳಾದ ಭವಿಷ್ ಕುಂದರ್ ತಿಳಿಸಿದರು.ಅವರು ಎಕ್ಸಲೆಂಟ್ ಪದವಿಪೂರ್ವ ಕಾಲೇಜು ಮತ್ತು ರಾಷ್ಟೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ನಡೆದ ಪೋಕ್ಸೋ ಕಾಯ್ದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ […]
ಮೂಡುಬಿದಿರೆ: ಸಾಹಿತ್ಯ ಕೃತಿಗಳು ಬಿಡುಗಡೆಗೊಂಡು ವಿದ್ಯಾರ್ಥಿಗಳು ಸ್ಫೂರ್ತಿಗೊಳಗಾಗುವಂತೆ, ಸಂಶೋಧನಾ ಕೃತಿಗಳು ಬಿಡುಗಡೆಗೊಂಡು ವಿದ್ಯಾರ್ಥಿಗಳು ಪ್ರೇರಣೆಗೊಳಗಾಗಬೇಕು ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಅಭಿಪ್ರಾಯ ಪಟ್ಟರು.ಅವರು ಆಳ್ವಾಸ್ ಕನ್ನಡ ವಿಭಾಗದ ಉಪನ್ಯಾಸಕ ಹರೀಶ್ ಟಿ.ಜಿ.ಯವರ ‘ಉದ್ದ ಲಂಗದ ಕಾಲೇಜು ದಿನಗಳು’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ನಾವು ಅನೇಕ ಸಂಕ್ರಮಣ ಕಾಲಘಟ್ಟವನ್ನು ದಾಟಿ ಬಂದಿದ್ದೆವೆ. ಪ್ರಸ್ತುತ ಸಮಾಜ ‘ನಿರ್ಧರಿತ ಆರ್ಥಿಕತೆ’ ಯಿಂದ ಬದಲಾಗಿ ‘ಆರ್ಥಿಕತೆ ನಿರ್ಧರಿತ ಸಮಾಜ’ವಾಗಿ ಬದಲಾಗುತ್ತಿದೆ. ಇದರಿಂದಾಗಿ, ಪ್ರತಿಯೊಂದು ವಿಷಯವು ಹಣಕಾಸಿನ ಆಧಾರದ ಮೇಲೆ ನಿರ್ಧರಿತವಾಗುತ್ತಿದೆ. ಹಿಂದಿನ […]