



ಜನನಿಬಿಡ ಹಾಗೂ ವಾಹನ ನಿಲುಗಡೆಗಳಿಗೆ ಸ್ಥಳವಕಾಶ ಕಡಿಮೆ ಇದ್ದ ಪ್ರದೇಶದಲ್ಲಿದ್ದ ಮೂಡಬಿದ್ರೆ ಬ್ಲಾಕ್ ಕಾಂಗ್ರೆಸ್ ಕಚೇರಿಯನ್ನು ಕಾರ್ಯಕರ್ತರಿಗೆ ಅನುಕೂಲ ವಾಗುವಂತೆ ಕೋರ್ಟ್ ರಸ್ತೆಯಲ್ಲಿರುವ ಸ್ವರಾಜ್ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು, ಈ ಕಚೇರಿ ಉದ್ಘಾಟನೆಯು ಜುಲೈ 10ರಂದು ಬೆಳಿಗ್ಗೆ 11 ಗಂಟೆಗೆ ನೆರವೇರಲಿದ್ದು ,ಇದೇ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ಮಿಥುನ್ ಎಂ ರೈ ಯವರ “ಸಹಾಯ” ಎಂಬ ಕಚೇರಿಯು ಕೂಡಕಾರ್ಯರಂಭಗೊಳ್ಳಲಿದೆ. ತದನಂತರ ಮೂಡಬಿದ್ರೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ನೇಮಕಗೊಂಡ ಶ್ರೀ ಹರ್ಷವರ್ಧನ್ ಪಡಿವಾಳ ಮತ್ತು ಇನ್ನಿತರ ನಿರ್ದೇಶಕರ […]

ಮೂಡುಬಿದಿರೆ: ಕಲೆ, ಸಂಸ್ಕೃತಿ, ಕ್ರೀಡೆಯ ಮೂಲಕ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಶ್ರಮಿಸುತ್ತಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಂಗ ಸಂಸ್ಥೆಯಾದ ಮೂಡುಬಿದಿರೆ ತಾಲ್ಲೂಕಿನ ಮಿಜಾರಿನ ಪ್ರಕೃತಿಯ ಮಡಿನಲ್ಲಿರುವ ‘ಆಳ್ವಾಸ್ ಎಂಜಿನಿಯರಿAಗ್ ಮತ್ತು ತಂತ್ರಜ್ಞಾನ ಕಾಲೇಜು’ (ಎಐಇಟಿ) ಸ್ವಾಯತ್ತ ಸ್ಥಾನಮಾನ ಪಡೆದಿದ್ದು, ೨೦೩೪-೩೫ನೇ ಸಾಲಿನ ವರೆಗೆ ಅನ್ವಯಿಸಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.ಆಳ್ವಾಸ್ ಇಂಜಿನಿಯರಿAಗ್ ಕಾಲೇಜಿನ ವೈಶಿಷ್ಟö್ಯಗಳು:‘ಆಳ್ವಾಸ್ ಇಂಜಿನಿಯರಿAಗ್ ಕಾಲೇಜು ನ್ಯಾಕ್‌ನ ಮೊದಲ ಸೈಕಲ್‌ನಲ್ಲೇ (ಓಂAಅ) ಂ+ ಶ್ರೇಣಿಯನ್ನು […]

ಉದ್ಘಾಟನೆಗೆ ಮುನ್ನವೇ ಕುಸಿಯುವ ಭೀತಿಯಲ್ಲಿ ಕಲ್ಲಮುಂಡ್ಕೂರು ಹರಿಯಾಳ ಕಾಲು ಸಂಕ. ಬಲ ಕಳೆದುಕೊಂಡ ತಡೆಗೋಡೆಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹರಿಯಾಳ ಬಳಿ ಸುಮಾರು 15 ಲಕ್ಷ ರೂ.ವೆಚ್ಚದಲ್ಲಿ ಕಾಲು ಸಂಕವನ್ನು ನಿರ್ಮಾಣ ಮಾಡಲಾಗಿದ್ದರೂ ಅದರ ತಡಗೋಡೆಯೀಗ ಮಳೆಯಿಂದಾಗಿ ಕುಸಿತಗೊಂಡಿದ್ದು ಕಾಲು ಸಂಕವೂ ಕುಸಿತ ಕಾಣುವ ಅಪಾಯದಲ್ಲಿದೆ.ಹಾಗಾಗಿ ಈ ಭಾಗದ ಜನರು ಕೂಡಾ ಈ ಪೊಸಾ ಕಾಲು ಸಂಕವನ್ನು ದಾಟಲು ಭಯಪಡುತ್ತಿದ್ದಾರೆ.ಲೋಕೋಪಯೋಗಿ ಇಲಾಖೆ ಮಂಗಳೂರು ವಿಭಾಗದ ವತಿಯಿಂದ ಈ ಕಾಲು ಸಂಕ ನಿರ್ಮಾಣ ಮಾಡಲಾಗಿದ್ದು ಇದಕ್ಕೆ ಸುಮಾರು 15 […]

ಮಂಗಳೂರು: ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಕರಾವಳಿ ಭಾಗಕ್ಕೆ ಮತ್ತೆ ರೆಡ್ ಅಲರ್ಟ್ ಘೋಷಿಸಲಾಗಿದೆ ಮಳೆಯ ತೀವ್ರತೆಯಿಂದಾಗಿ ರಾಜ್ಯದ ಕರಾವಳಿ ಭಾಗಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಈಗಾಗಲೇ ನದಿಗಳು ತುಂಬಿ ಹರಿಯುತ್ತಿದ್ದು, ಕಡಲ ತೀರ ಪ್ರದೇಶಗಳಲ್ಲಿ ಪ್ರಬಲ ಅಲೆಗಳು ಸಂಚಲನ ಮೂಡಿಸುತ್ತಿವೆ. ಈ ಪರಸ್ಥಿತಿಯಲ್ಲಿ, ಭಾರೀ ಮಳೆಯ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮತ್ತೆ ರೆಡ್ ಅಲರ್ಟ್ ಘೋಷಿಸಲಾಗಿದೆ. ರೆಡ್ ಅಲರ್ಟ್ ಹಿನ್ನೆಲೆಯಲ್ಲಿ, ಈ ದಿನ ಮತ್ತು ನಾಳೆ, ಜಿಲ್ಲೆಯ ಎಲ್ಲಾ ಅಂಗನವಾಡಿ, […]

ವಿದ್ಯಾಗಿರಿ: ಸ್ನಾತಕೋತ್ತರ ವಾಣಿಜ್ಯ ವಿದ್ಯಾರ್ಥಿಗಳು ವಾಣಿಜ್ಯದ ಎಲ್ಲಾ ಆಯಾಮಗಳಲ್ಲಿ ನಿಪುಣತೆ ಹೊಂದುವುದು ಅವಶ್ಯಕ ಎಂದು ಲೆಕ್ಕಪರಿಶೋಧಕ ಎಂ. ಉಮೇಶ್ ರಾವ್ ಹೇಳಿದರು.ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ ಸ್ನಾತಕೋತ್ತರ ವಿಚಾರಸಂಕಿರಣ ಸಭಾಂಗಣದಲ್ಲಿ ನಡೆದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.ಜಗ್ಗತ್ತು ಒಂದು ರಣರಂಗ. ಇದ್ದನ್ನು ಎದುರಿಸುವ ಎಲ್ಲ ಕಲೆಗಳನ್ನು ವಿದ್ಯಾರ್ಥಿ ಆಗಿದ್ದಾಗಲೇ ಸಿದ್ಧ ಪಡಿಸಿಕೊಳ್ಳಬೇಕು. ತಂತ್ರಜ್ಞಾನದ ಹೊಸ ಆವಿಷ್ಕಾರ ಕೃತಕ ಬುದ್ಧಿಮತ್ತೆ (ಏಐ) ವಾಣಿಜ್ಯ ವಿದ್ಯಾರ್ಥಿಗಳಿಗೆ ಸವಾಲಾಗಿ ರೂಪುಗೊಂಡಿದ್ದು, ನಮ್ಮ ಬುದ್ಧಿಶಕ್ತಿಯನ್ನು ವೃದ್ಧಿಸಿಕೊಂಡರೆ […]

ಮೂಡುಬಿದಿರೆ: ಮೂಡುಮಾರ್ನಾಡು ಸರಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಸುಮಂತ್ ಎಸ್ ಅವರು ಆಂಧ್ರ ಪ್ರದೇಶದ ಗುಂಟೂರಿನ ಆಚಾರ್ಯ ನಾಗಾರ್ಜುನ ವಿವಿಯಲ್ಲಿ ನಡೆದ ದಕ್ಷಿಣ ಭಾರತ ವಲಯ ಚಾಂಪಿಯನ್ ಶಿಪ್‌ನಲ್ಲಿ 600 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈಗಾಗಲೇ ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದರು. ಬೆಂಗಳೂರಿನ ಹೆಚ್‌ಸಿಎಲ್ ಫೌಂಡೇಶನ್ ಈ ಕ್ರೀಡಾಕೂಟಗಳನ್ನು ಆಯೋಜಿಸಿತ್ತು. ಸುಮಂತ್ ಅವರು ಕೆಲ್ಲಪುತ್ತಿಗೆಯ ಶೇಖರ ಪೂಜಾರಿ ಮತ್ತು ಮೋಹಿನಿ ಅವರ ಪುತ್ರರಾಗಿದ್ದಾರೆ. ಸುಮಂತ್ […]

ಮಂಗಳೂರು: ಪ್ರಾದೇಶಿಕ ಚಲನ ಚಿತ್ರಗಳಿಗೆ ಸರಕಾರದಿಂದ ಸಬ್ಸಿಡಿ ನೀಡವಂತೆ ತುಳು ಚಲನ ಚಿತ್ರ ನಿರ್ಮಾಪಕರ ಸಂಘ (ರಿ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್ ಧನರಾಜ್ ಅವರು ಬೆಂಗಳೂರಿನಲ್ಲಿ ಮುಖ್ಯಂಮತ್ರಿಯವರಿಗೆ ಮನವಿ ನೀಡಿದ್ದಾರೆ.ಕರ್ನಾಟಕದಲ್ಲಿ ವರ್ಷಂಪ್ರತಿ ಸುಮಾರು 15 ರಿಂದ 20 ತುಳು ಸಿನಿಮಾಗಳು ತೆರೆ ಕಾಣುತ್ತಿದೆ. ಪ್ರಾದೇಶಿಕ ಭಾಷೆಗಳ ಅಭಿಮಾನದಿಂದ ನಿರ್ಮಾಪಕರು ಚಲನ ಚಿತ್ರ ನಿರ್ಮಿಸುತ್ತಾರೆ. ಯಾವು ಪರಭಾಷೆಗೆ ಕಡಿಮೆ ಇಲ್ಲದಂತೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಸಿನಿಮಾ ನಿರ್ಮಿಸುತ್ತಾರೆ. […]

ಮೂಡುಬಿದಿರೆ ಟೆಂಪಲ್ ಟೌನ್ ರೋಟರಿ ಕ್ಲಬ್ 2024-25 ನೇ ಸಾಲಿನ ಅಧ್ಯಕ್ಷರಾಗಿ ಪೂರ್ಣಚಂದ್ರ ಜೈನ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಆಯ್ಕೆಯಿಂದ ಕ್ಲಬ್ ತನ್ನ ನಾಯಕತ್ವ ಮತ್ತು ಸಮುದಾಯ ಸೇವೆಯ ಪರಂಪರೆಯನ್ನು ಮುಂದುವರಿಸುತ್ತಿದೆ. ಅಧ್ಯಕ್ಷರೊಂದಿಗೆ, ಕೆಳಗಿನ ಸದಸ್ಯರನ್ನು ಕ್ಲಬ್‌ನ ಪ್ರಮುಖ ಸ್ಥಾನಗಳಿಗೆ ಆಯ್ಕೆ ಮಾಡಲಾಗಿದೆ: ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 3 ರಂದು (ಬುಧವಾರ) ಸಂಜೆ ನಿಶ್ಮಿತಾ ಪ್ಯಾರಡೈಸ್ ಹಾಲ್ ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ಕ್ಲಬ್‌ಗೆ ಪ್ರಮುಖ ಸನ್ನಿವೇಶವಾಗಿದ್ದು, ಹೊಸ ನಾಯಕತ್ವದ ಹಸ್ತಾಂತರ ಮತ್ತು […]

ಗುರುಕುಲ ಶಾಲೆಯಲ್ಲಿ ಶೈಕ್ಷಣಿಕ ಪರಿಕರಗಳ ವಿತರಣಾ ಸಮಾರಂಭಮಾಳದ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕ ಪರಿಕರಗಳ ವಿತರಣಾ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಗುರುಕುಲ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶ್ರೀ ಗಜಾನನ ಮರಾಠೆ ಶಾಲಾ ಬೆಳವಣಿಗೆಯನ್ನು ವಿಶ್ಲೇಷಿಸಿದರು ಹೊಸದಾಗಿ ಸೇರ್ಪಡೆಯಾದ ಮಕ್ಕಳಿಗೆ ಪ್ರೋತ್ಸಾಹ ರೂಪವಾಗಿ ಕಳೆದ ಆರು ವರ್ಷಗಳಿಂದ ಒಂದು ಸಾವಿರ ರೂಪಾಯಿಗಳನ್ನು ಠೇವಣಿಗಾಗಿ ನೀಡುತ್ತಿರುವ ದಾನಿಗಳು ಗುರುಗಳಾದ ನಾಗಭೂಷಣ ಜೋಶಿ, ಸಮವಸ್ತ್ರ ಪ್ರಾಯೋಜಕರಾದ ಶ್ರೀ ರವಿ ಮರಾಠೆ ಶೃಂಗೇರಿ, ಕ್ರೀಡೋಪಕರಣಗಳನ್ನು […]

ಕೇಮಾರು : ಜುಲೈ 28ರಂದು ಜರಗಲಿರುವ ಕೆಸರುಡೊಂಜಿ ದಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ. ಯುವ ಉತ್ಸಾಹಿ ಬಳಗ (ರಿ.) ನೇತೃತ್ವದಲ್ಲಿ ಯುವಸಂಗಮ ಕಾಂತಾವರ (ರಿ.) ಇದರ ಸಹಭಾಗಿತ್ವದಲ್ಲಿ 28.7.2024ನೇ ಅದಿತ್ಯವಾರದಂದು ಕೇಮಾರು ಹಕ್ಕೇರಿ ಬಾಕಿಮಾರು ಗದ್ದೆಯಲ್ಲಿ ಜರಗುವಕೆಸರುಡೊಂಜಿ ದಿನ 2024 ಇದರ ಆಮಂತ್ರಣ ಪತ್ರಿಕೆಯನ್ನು ಜೂ 30ರಂದು ಶ್ರೀ ಕ್ಷೇತ್ರ ಕೇಮಾರುನಲ್ಲಿ ಶ್ರೀ ಸಾಂದಿಪನಿ ಸಾಧನಶ್ರಮದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ದಿವ್ಯಹಸ್ತದಿಂದ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಯುವ ಉತ್ಸಾಹಿ ಬಳಗ (ರಿ.) ಕೇಮಾರು […]