
ಇರುವೈಲು ಕೋರೆಬಳಿ ಉಲಾಯಿ ಪಿದಾಯಿ ಆಟವಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ನೇತೃತ್ವದ ಪೊಲೀಸರ ತಂಡವು ಮೂವರನ್ನು ಬಂಧಿಸಿದ್ದಾರೆ. ಇತರ ಕೆಲವು ಮಂದಿ ಪರಾರಿಯಾಗಿದ್ದಾರೆ.ಅಕ್ಬರ್ ,ಗಣೇಶ್ ಹಾಗೂ ಅರುಣ್ ಎಂಬವರು ಬಂಧಿತರಾಗಿದ್ದು ಇತರ ಕೆಲವರು ಪರಾರಿಯಾಗಿದ್ದಾರೆ.ಆರೋಪಿಗಳಿಂದ ಮೂರು ಸಾವಿರ ನಗದು,ಏಳು ಮೊಬೈಲ್ ಹಾಗೂ ಒಂದು ಬೈಕನ್ನು ವಶಪಡಿಸಿಕೊಳ್ಳಲಾಗಿದೆ.ಪ್ರಕರಣ ದಾಖಲಾಗಿದೆ.
ಮೂಡಬಿದರೆ : ಪೊಲೀಸ್ ಅಧಿಕಾರಿಯಾದವರು ದಕ್ಷತೆ, ಪ್ರಮಾಣಿಕತೆಯಿಂದ ಕೆಲಸ ಮಾಡಿದ್ರೆ ಎಂತಹಾ ಗೌರವ ಸಿಗುತ್ತೆ ಅನ್ನೋದಕ್ಕೆ ಮೂಡಬಿದಿರೆಯ ಈ ಪೊಲೀಸ್ ಅಧಿಕಾರಿಯೇ ಸಾಕ್ಷಿ. ಪೊಲೀಸ್ ಅಧಿಕಾರಿಯಾಗಿ 39 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗಿದ್ದ ದಿವಾಕರ್ ರೈ ಅವರಿಗೆ ಸಹೋದ್ಯೋಗಿಗಳು ಪುಷ್ಪಾರ್ಚನೆಯ ಗೌರವ ಸಲ್ಲಿಸಿದ್ದಾರೆ. ದಿವಾಕರ ರೈ ಅವರು ಸೇವೆಯಿಂದ ಇಂದು ನಿವೃತ್ತರಾಗಿದ್ದರು. ಮೂಡಬಿದಿರೆಯ ಪೊಲೀಸ್ ಠಾಣೆಯಿಂದ ಅವರು ಸೇವೆಯನ್ನು ಮುಗಿಸಿ ಮನೆಗೆ ತೆರಳುವ ವೇಳೆಯಲ್ಲಿ ಅವರು ಠಾಣೆಯಿಂದ ಪೊಲೀಸ್ ಜೀಪ್ ಏರುವ ವರೆಗೂ ಮೂಡಬಿದಿರೆಯ […]
ಮೂಡುಬಿದಿರೆ: ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿರುವ ಪ್ರಶಾಂತ್ ಅಡ್ಡರ್ ಅವರು ಎ.ಎಸ್.ಐ ಆಗಿ ಪದೋನ್ನತಿ ಹೊಂದಿದ್ದಾರೆ. ಪುತ್ತೂರು, ಮೂಡುಬಿದಿರೆ, ಬಜ್ಪೆ, ಮಂಗಳೂರು ದಕ್ಷಿಣ (ಸಂಚಾರ) ಹೀಗೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿರುವ ಪ್ರಶಾಂತ್ ಅವರು ಮತ್ತೆ ಮೂಡುಬಿದಿರೆ ಠಾಣೆಗೆ ಹೆಡ್ ಕಾನ್ಸ್ಟೆಬಲ್ ಆಗಿ ಬಂದು, ಇದೀಗ ಮೂಡುಬಿದಿರೆ ಠಾಣೆಯಲ್ಲೇ ಎ.ಎಸ್.ಐ. ಆಗಿ ಪದೋನ್ನತಿ ಹೊಂದಿದ್ದಾರೆ. ಸುಮಾರು 28 ವರ್ಷಗಳ ಸೇವಾವಧಿಯಲ್ಲಿ, ತಮ್ಮ ನಿಷ್ಠೆಯ ಸೇವೆಯಿಂದಾಗಿ ಪ್ರಶಾಂತ್ ಅವರು ಸಾರ್ವಜನಿಕ ವಲಯದಿಂದ ಮೆಚ್ಚುಗೆ ಗಳಿಸಿದ್ದಾರೆ. […]
ಮೂಡುಬಿದಿರೆ: ಕಳೆದ 23 ವರ್ಷಗಳಿಂದ ಅಗ್ನಿಶಾಮಕ ದಳದಲ್ಲಿ ಚಾಲಕರಾಗಿದ್ದ ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಅಮನಬೆಟ್ಟುವಿನ ನಿವಾಸಿ ಚಂದ್ರಶೇಖರ ಅವರು ಶುಕ್ರವಾರ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಪದೋನ್ನತಿಯನ್ನು ಹೊಂದಿದ್ದಾರೆ. 2001ರಲ್ಲಿ ಅಗ್ನಿಶಾಮಕ ಇಲಾಖೆಯಲ್ಲಿ ಸೇವೆಯನ್ನು ಆರಂಭಿಸಿದ್ದ ಅವರು ಬೆಳ್ತಂಗಡಿ, ಮೂಡುಬಿದಿರೆ ಮತ್ತು ಕಾರ್ಕಳದಲ್ಲಿ ಸೇವೆಯನ್ನು ಸಲ್ಲಿಸಿದ್ದರು.ಇದೀಗ ಕಾರ್ಕಳದಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಅವರು ಕಾರ್ಕಳ ಅಗ್ನಿಶಾಮಕ ಠಾಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ.
ಮೂಡುಬಿದಿರೆ: ಬಸ್ ಏಜೆಂಟ್ ಮತ್ತು ನಿರ್ವಾಹಕರಾಗಿದ್ದ ಗಣೇಶ್ (45) ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪೇಟೆಗೆ ಹೂ ಮತ್ತು ಪತ್ರಿಕೆಗಳನ್ನು ತಂದ ಅವರು ಮನೆಗೆ ಹಿಂದಿರುಗುತ್ತಿದ್ದಾಗ ಎದೆನೋವು ಕಾಣಿಸಿಕೊಂಡು, ತಕ್ಷಣ ಅವರನ್ನು ಜಿ.ವಿ.ಪೈ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ದುರದೃಷ್ಟವಶಾತ್, ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಈ ಹಿಂದೂ ಒಂದು ಬಾರಿ ಹೃದಯಾಘಾತದಿಂದ ಬಳಲಿದ ಗಣೇಶ್, ಅಂದಿನ ಚಿಕಿತ್ಸೆಯಿಂದ ಬೇರೆಯಾದರೂ, ಈ ಬಾರಿ ಅದೃಷ್ಟ ಅವನ ಕೈಚೆಲ್ಲಿತು. ಮೂಡುಬಿದಿರೆಯಲ್ಲಿ ಹಲವು ವರ್ಷಗಳಿಂದ ಬಸ್ ಸಿಬ್ಬಂದಿಯಾಗಿ, ಬೇರೆ ವಾಹನಗಳ ಚಾಲಕನಾಗಿ […]
ಮೂಡುಬಿದಿರೆ: ಮರುಳು ಮಾತುಗಳನ್ನಾಡಿ ಜನರನ್ನು ತಮ್ಮತ್ತ ಸೆಳೆದು ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ಲಕ್ಷಾಂತರ ರೂಪಾಯಿ ಮೋಸ ಮಾಡಿದ ಪಂಚವಟಿ ಮಲ್ಟಿ ಸ್ಟೇಟ್ ಕೋ-ಆಪರೇಟಿವ್ ಸೊಸೈಟಿಯ ವಿರುದ್ಧ ಸಿಐಡಿ ಘಟಕದಲ್ಲಿ ತನಿಖೆ ನಡೆಯುತ್ತಿದ್ದು, ವಂಚನೆಗೆ ಒಳಗಾದವರು ತನಿಖಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸಿಐಡಿ ಘಟಕವು ಪ್ರಕಟಣೆ ನೀಡಿದೆ. ಹೆಚ್ಚಿನ ಲಾಭಾಂಶ ನೀಡುವುದಾಗಿ ಸಾರ್ವಜನಿಕರಿಂದ ಠೇವಣಿ ರೂಪದಲ್ಲಿ ಹಣ ಸಂಗ್ರಹಿಸಿ ಮೆಚ್ಯೂರಿಟಿ ಆದ ನಂತರವೂ ಸಹ ಹಲವಾರು ಬಾರಿ ಸೊಸೈಟಿಗೆ ಹೋಗಿ ಕೇಳಿದರೂ ದುಡ್ಡು ವಾಪಾಸ್ ಕೊಡದ ಬಗ್ಗೆ […]
ಮಂಗಳೂರು: ಭಾರೀ ಮಳೆ ಹಿನ್ನೆಲೆ ನಾಳೆ ( ಜೂ. 28)ರಂದು ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಆಧುನಿಕ ಸಮಾಜದ ಬಹುದೊಡ್ಡ ಸವಾಲು ಮಾದಕ ದ್ರವ್ಯ ಸೇವನೆಯಾಗಿದೆ. ವಿಶೇಷವಾಗಿ ಯುವಜನತೆ ದುರ್ವ್ಯಸನಗಳಿಗೆ ದಾಸರಾಗಿ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಶಾಪವಾಗಿ ಪರಿಣಮಿಸುತ್ತಿದ್ದಾರೆ. ತಾತ್ಕಾಲಿಕ ಮೋಜಿಗಾಗಿ ಆರಂಭವಾಗುವ ಮಾದಕ ವಸ್ತುಗಳ ಸೇವನೆಯಿಂದ ಅವರ ಭವಿಷ್ಯವನ್ನು ನಾಶಮಾಡುವ ಜೊತೆಗೆ ಸಮಾಜದ ನೆಮ್ಮದಿಯನ್ನು ಕೆಡಿಸುವರು. ಮನುಷ್ಯನ ನರಮಂಡಲದ ಮೇಲೆ ಪರಿಣಾಮ ಬೀರುವ ಇಂತಹ ದುಶ್ಚಟಗಳಿಂದ ದೂರವಿದ್ದು ವೈಯಕ್ತಿಕ ಮತ್ತು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಮೂಡುಬಿದಿರೆ ಪೊಲೀಸ್ ನಿರೀಕ್ಷಕರಾದ ಶ್ರೀ ಸಂದೇಶ ಪಿ ಜಿ ಅವರು ವಿದ್ಯಾರ್ಥಿಗಳಲ್ಲಿ ಮಾದಕ ವಸ್ತು ಸೇವನೆಯ […]
ದಕ್ಷಿಣ ಕನ್ನಡದಲ್ಲಿ ಕುಂಭದ್ರೋಣ ಮಳೆಜಿಲ್ಲಾದ್ಯಂತ ರೆಡ್ ಅಲರ್ಟ್ ಘೋಷಣೆತುಂಬಿ ಹರಿದ ನದಿಗಳು…ತಗ್ಗು ಪ್ರದೇಶದಲ್ಲಿ ಜಲಾವೃತಮುಂಜಾಗ್ರತಾ ಕ್ರಮವಾಗಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ
ಮೂಡಬಿದಿರೆ : ಇನ್ಮುಂದೆ ಕಂಡ ಕಂಡಲ್ಲಿ ತಮ್ಮ ವಾಹನಗಳನ್ನು ಸವಾರರು ನಿಲ್ಲಿಸುವಂತಿಲ್ಲ. ಒಂದೊಮ್ಮೆ ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಿದ್ರೆ ಪೊಲೀಸರು ವಾಹನಗಳನ್ನು ಲಾಕ್ ಮಾಡುವ ಮೂಲ ಬಿಸಿ ಮುಟ್ಟಿಸಲು ಮೂಡಬಿದಿರೆ ಪೊಲೀಸರು ಮುಂದಾಗಿದ್ದಾರೆ. ಇಂದು ಹಲವು ವಾಹನಗಳಿಗೆ ಪೊಲೀಸರ ಲಾಕ್ ಬಿದ್ದಿದೆ. ಮೂಡಬಿದಿರೆ ನಗರದಲ್ಲಿ ವಾಹನ ಸವಾರರು ತಮ್ಮ ವಾಹನಗಳನ್ನು ಸಿಕ್ಕ ಸಿಕ್ಕ ಸ್ಥಳದಲ್ಲಿ ನಿಲ್ಲಿಸುತ್ತಿದ್ದರು. ಇದರಿಂದಾಗಿ ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ತೊಡಕಾಗುತ್ತಿತ್ತು. ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ಖಡಕ್ ಪೊಲೀಸ್ ಅಧಿಕಾರಿ ಎಂದೇ ಖ್ಯಾತಿ ಪಡೆದಿರುವ […]