
ಮೂಡುಬಿದಿರೆ: ವೇದಗಳಲ್ಲಿ ಎಲ್ಲಿಯೂ ಜಾತಿ ವ್ಯವಸ್ಥೆಯೆಂಬುದಿರಲಿಲ್ಲ. ವೇದಗಳಲ್ಲಿ ಇದದ್ದು ವರ್ಣ ವ್ಯವಸ್ಥೆ ಮಾತ್ರ. ಹಾಗಾಗಿ ಜಾತಿ ವ್ಯವಸ್ಥೆ ನಮಗೆ ಬೇಡ. ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂಬ ಭಾವನೆ ನಮ್ಮಲ್ಲಿ ಮೂಡಬೇಕು. ಅಂತಹ ಭಾವನೆ ನಮ್ಮಲ್ಲಿ ಬಾರದೇ ಹೋದರೆ ದೇಶಕ್ಕೂ ಅಪಾಯ ಧರ್ಮಕ್ಕೂ ಅಪಾಯವಿದೆ ಎಂದು ಖ್ಯಾತ ಯುವ ವಕೀಲ ಶರತ್ ಶೆಟ್ಟಿ ತಿಳಿಸಿದರು.ಅವರು ಶನಿವಾರ ದರೆಗುಡ್ಡೆ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಕರಾವಳಿ ಕೇಸರಿ ಸೇವಾ ಟ್ರಸ್ಟ್ ರಿ. ಬೆದ್ರ ಕರಾವಳಿ ಕೇಸರಿ ಮಹಿಳಾ […]
ಮೂಡುಬಿದಿರೆ: ಬ್ರಹ್ಮನಿಗೆ ಎಲ್ಲಿಯೂ ದೇವಸ್ಥಾನವಿಲ್ಲ.ಆದರೆ ಇಲ್ಲಿ ಅಪರೂಪದ ಬ್ರಹ್ಮಸ್ಥಾನವನ್ನು ನಿಮಿ೯ಸಿ ಎಲ್ಲರಿಗೂ ಅನುಗ್ರಹ ಸಿಗುವಂತೆ ಮಾಡಿರುವುದು ಈ ಕ್ಷೇತ್ರದ ವಿಶೇಷ. ಸೃಷ್ಠಿ ಮಾಡುವುದು ಸುಲಭ ಆದರೆ ಅದನ್ನು ರಕ್ಷಣೆ ಮಾಡುವುದು ಕಷ್ಟ ಆದರೆ ಇಲ್ಲಿನ ದೇವಸ್ಥಾನವನ್ನು ಶ್ರದ್ಧೆ, ಏಕಾಗ್ರತೆ, ಭಕ್ತಿ ಮತ್ತು ಉತ್ಸಾಹದಿಂದ ಶಾಶ್ವತವಾಗಿ ನಿಮಿ೯ಸಲಾಗಿದೆ.ಎಂದು ಶ್ರೀ ಕ್ಷೇತ್ರ ಧಮ೯ಸ್ಥಳದ ಧಮಾ೯ಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಶ್ರೀ ಚತುಮು೯ಖ ಬ್ರಹ್ಮ ದೇವಸ್ಥಾನ (ನಾಗಬ್ರಹ್ಮ ಸ್ಥಾನ) ಲಾಡಿ ಮೂಡುಬಿದಿರೆ ಇದರ ನೂತನ ಶಿಲಾಮಯ ದೇವಳದ ಅನಾವರಣ […]
ಮೂಡುಬಿದಿರೆ: ಇಲ್ಲಿನ ಪಡುಮಾನಾ೯ಡು ಗ್ರಾ. ಪಂಚಾಯತ್ ವ್ಯಾಪ್ತಿಯ ಕಾಯರಕಟ್ಟ ಸರಕಾರಿ ಜಾಗದಲ್ಲಿ ಉರುಳಿಗೆ ಬಿದ್ದಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ ಘಟನೆ ಶನಿವಾರ ನಡೆದಿದೆ. ಚಿರತೆಯ ಬಾಲಕ್ಕೆ ತಂತಿ ಕಟ್ಟಿದ ಗೂಟದ ಸಮೇತ ಬಂದು ಮರಕ್ಕೆ ಹತ್ತುವ ಸಮಯದಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿತ್ತು. ಈ ಬಗ್ಗೆ ನಿಖರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ರಕ್ಷಿಸಿ ಕಛೇರಿಗೆ ತಂದು ಚುಚ್ಚುಮದ್ದು ನೀಡಿದ್ದಾರೆ. ಸಂಜೆ ವೇಳೆಗೆ ಅರಣ್ಯ ಪ್ರದೇಶಕ್ಕೆ ಬಿಡಲಿದ್ದಾರೆ.ಮೂಡುಬಿದಿರೆ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಜಿ. ಅರವಳಿಕೆ ತಜ್ಞರಾದ […]
ಮೂಡುಬಿದಿರೆ: ಯಾರೂ ಹರಿನಾಮ ಸಂಕೀರ್ತನೆಯನ್ನು ಭಕ್ತಿ, ಪ್ರೀತಿ, ಭಾವುಕತೆಯಿಂದ ಸಮರ್ಪಣಿಯನ್ನು ಮಾಡುತ್ತಾರೋ ಅವರಿಗೆ ಅರಿವಿಗೆ ಬರುತ್ತದೆ ಯಾವುದೂ ನಾ ಮಾಡುವುದಲ್ಲ. ಆಡಿಸುವವ ಮೇಲೊಬ್ಬನಿದ್ದಾನೆ ಎಂಬ ಸತ್ಯ ಅರಿಯುತ್ತಾನೆ. ಭಜನೆಯು ಎಷ್ಟು ಪ್ರಭಾವವನ್ನು ಹೊಂದಿದೆ ಎಂದು ತಿಳಿದಿದ್ದರೂ, ಅದನ್ನು ಅರಿತುಕೊಂಡಿರುವವರ ಸಂಖ್ಯೆ ತೀರಾ ಕಡಿಮೆ ಎಂದೆ ನಿಸುತ್ತದೆ. ಆದರೆ ಭಜನೆ ವ್ಯಾಪ್ತಿಗೆ ಅಂತ್ಯವೆಂಬುದಿಲ್ಲ. ಭಜನೆಯ ಪ್ರಭಾವ ಪ್ರಬಲವಾಗಿದೆ. ಅದನ್ನು ಕರಾವಳಿ ಭಜನಾ ಸಂಸ್ಕಾರ ವೇದಿಕೆಯು ಭಜನೆಗೆ ಇರುವ ಆಯಾಯ ಕಟ್ಟುಪಾಡುಗಳನ್ನು ಪ್ರತಿಯೊಂದು ಮನೆ ಮನೆಗೂ ತಲುಪಿಸಬೇಕು ಸುಸಂಸ್ಕೃತವಾದ ಭಜನೆಯನ್ನು […]
ಮೂಡುಬಿದಿರೆ: ಇಲ್ಲಿನ ಶ್ರೀ ಚತುರ್ಮುಖ ಬ್ರಹ್ಮ ದೇವಸ್ಥಾನ ಲಾಡಿ ಇದರ ಬ್ರಹ್ಮಕಲಶೋತ್ಸವಕ್ಕೆ ಮೂಡುಬಿದಿರೆ ಪುರಸಭಾ ಸದಸ್ಯ ಇಕ್ಬಾಲ್ ಕರೀಂ ಶುಭಕೋರಿ ಅಳವಡಿಸಿದ ಬ್ಯಾನರ್ ನ್ನು ಕಿಡಿಗೇಡಿಗಳು ಹರಿದು ಹಾಕಿದ್ದು, ಬ್ಯಾನರ್ ಹರಿದ ಕಿಡಿಗೇಡಿಗಳನ್ನು ದೂರು ಬಂದ ಒಂದು ಗಂಟೆಯಲ್ಲಿ ಮೂಡಬಿದ್ರಿ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಪಿಜಿ ಹಾಗೂ ತಂಡ ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಜಾರ್ಕಂಡ್ ರಾಜ್ಯದ ಮಹಮ್ಮದ್ ಸಿರಾಜ್ ಅನ್ಸಾರಿ(೨೬) ಹಾಗೂ ಬಿಹಾರ್ ರಾಜ್ಯದ ಮಹಮ್ಮದ್ ಕಾಮ್ಡು ಜಮನ್ ಎಂದು ತಿಳಿದು ಬಂದಿದೆಫ್ಲೆಕ್ಸ್ ಬ್ಯಾನರ್ ನ ಅಹಿತಕರ […]
ಮೂಡುಬಿದಿರೆ : ಕಳೆದ ಹಲವು ವಷ೯ಗಳಿಂದ ಉಸಿರಾಟದ ತೊಂದರೆ ಸಹಿತ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಹಾಡುಹಕ್ಕಿ, ಪದ್ಮಶ್ರೀ ಸುಕ್ರಿ ಬೊಮ್ಮ ಗೌಡ(88) ಗುರುವಾರ ನಸುಕಿನ ವೇಳೆ ಅಂಕೋಲಾದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಡಿಗೇರಿಯ ಸುಕ್ರಜ್ಜಿ ಕಳೆದ ಹಲವು ವರ್ಷದಿಂದ ಉಸಿರಾಟದ ಸಮಸ್ಯೆ ಸೇರಿದಂತೆ ಕೆಲ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಅವರು ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಕಳೆದ ಎರಡು ದಿನದ ಹಿಂದೆಯೂ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ವಾಪಸ್ಸಾಗಿದ್ದರು. […]
ಬಜ್ಪೆ: ಇಲ್ಲಿನ ಹೊಸದಾಗಿ ಪ್ರಾರಂಭಗೊAಡ ಅಶೋಕ್ ನಾಯ್ಕ್ ಕಳಸಬೈಲು ಇವರ ಮಾರ್ಗದರ್ಶನದಲ್ಲಿ ೫೦ನೇ ಭಜನಾ ತಂಡ ವಿಶ್ವಕರ್ಮ ಭಜನಾ ಮಂಡಳಿ ಬಜ್ಪೆ ತಂಡವು ಶನಿವಾರ ಶ್ರೀ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ,(ರಿ) ಬಜ್ಪೆ ಇಲ್ಲಿ ಉದ್ಘಾಟನೆಗೊಂಡಿತು.ಈ ಸಂದರ್ಭದಲ್ಲಿ ಚಿಕ್ಕ ವಯಸ್ಸಿನಲ್ಲಿ ಭಜನೆಯಲ್ಲಿ ಸಾಧನೆ ಮಾಡಿದ ಉತ್ತಮ ಭಜನಾ ತರಬೇತಿದಾರರಾದ ನವ್ಯ ಎಡಪದವು, ಕಂಜೂರವಾದಕ -ಕೀರ್ತನ್, ಉತ್ತಮ ಹಾಡುಗಾರ್ತಿ- ಪ್ರೀತಿಕ, ಇವರನ್ನು ಸಂಘದ ಪರವಾಗಿ ಗೌರವಿಸಲಾಯಿತುಮಂಡಳಿಯ ಅಧ್ಯಕ್ಷರಾದ ಬಿ ವೈ ರಮೇಶ ಆಚಾರ್ಯ ಹಾಗೂ ಉಪಾಧ್ಯಕ್ಷರಾದ ಎಸ್ […]
ಮೂಡುಬಿದಿರೆ : ಇಲ್ಲಿನ ಪುರಸಭೆಯ ಪೌರ ಕಾಮಿ೯ಕೆಯೋವ೯ರು ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುರಸಭಾ ವ್ಯಾಪ್ತಿಯ ಬಿರಾವಿನಲ್ಲಿ ಮಂಗಳವಾರ ನಡೆದಿದೆ. ಬಿರಾವು ಅರಂತ ಕಂಪೌಂಡ್ ನ ನಿವಾಸಿ ದಿ. ಚಂದ್ರಹಾಸ್ ಅವರ ಪತ್ನಿ ಯಶೋಧ (43ವ) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈಕೆ ಕಳೆದ ಕೆಲವು ವರುಷಗಳಿಂದ ಪೌರಕಾಮಿ೯ಕೆಯಾಗಿ ಪುರಸಭೆಯಲ್ಲಿ ದುಡಿಯುತ್ತಿದ್ದು ಎರಡು ವಷ೯ಗಳ ಹಿಂದೆ ಹುದ್ದೆ ಖಾಯಂ ಆಗಿತ್ತು.ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು ಓವ೯ ಕಾಲೇಜು ಶಿಕ್ಷಣ ಪಡೆಯುತ್ತಿದ್ದು ಮತ್ತೋವ೯ ಮಂಗಳೂರಿನಲ್ಲಿದ್ದಾನೆಂದು ತಿಳಿದು […]
ಮೂಡುಬಿದಿರೆ: ದನ ಸಾಕದೆ ಡೈರಿಗೆ ಹಾಲು ಹಾಕಿ ಕಳೆದ 30 ವಷ೯ಗಳಿಂದ ಅಧ್ಯಕ್ಷರಾಗುತ್ತಿರುವವರ ಖಂಡಿಸಿ ಮತ್ತು ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ನಿದೇ೯ಶಕರಿಗೆ ನೋಟೀಸ್ ನೀಡದಿರುವ ಸಿಬಂದಿ ವಿರುದ್ಧ ಧಿಕ್ಕಾರ ಹಾಕಿ ನಿದೇ೯ಶಕರೋವ೯ರು ಡೈರಿಯ ಮುಂಭಾಗ ಧರಣಿ ಕುಳಿತ ಪ್ರಸಂಗ ಸೋಮವಾರ ಬೆಳಗ್ಗೆ ಬನ್ನಡ್ಕದಲ್ಲಿ ನಡೆದಿದೆ.ಪಡುಮಾನಾ೯ಡು ಹಾಲು ಉತ್ಪಾದಕರ ಸಹಕಾರ ಸಂಘ ನಿ. ಇಲ್ಲಿಗೆ ಕಳೆದ 20 ವಷ೯ಗಳಿಂದ ಹಾಲು ಹಾಕುತ್ತಾ ಬರುತ್ತಿರುವ ನಮಿರಾಜ್ ಪಿ. ಬಲ್ಲಾಳ್ ಧರಣಿ ಕುಳಿತ ನಿದೇ೯ಶಕ. ಜನವರಿ 14ರಂದು ಪಡುಮಾನಾ೯ಡು ಹಾಲು ಉತ್ಪಾದಕರ […]
ಮೂಡುಬಿದಿರೆ: ಇಲ್ಲಿನ ಮಾರ್ಕೆಟ್ ನಲ್ಲಿ ನಿನ್ನೆ ರಾತ್ರಿಯಿಂದ ಅನಧಿಕೃತವಾಗಿ ವ್ಯಾಪಾರ ಮಾಡಲು ಸಿದ್ಧಗೊಂಡಿದ್ದ ಸೀಯಾಳದ ಅಂಗಡಿಯನ್ನು ಮಾಜಿ ಸಚಿವ ಕೆ. ಅಭಯಚಂದ್ರ ಅವರು ತೆರವುಗೊಳಿಸಲು ಸೂಚಿಸಿದ ಹಿನ್ನೆಲೆಯಲ್ಲಿ ಪುರಸಭೆಯ ಅಧಿಕಾರಿಗಳು ಸೋಮವಾರ ಬೆಳಿಗ್ಗೆ ತೆರವುಗೊಳಿಸಿದ ಘಟನೆ ನಡೆದಿದೆ.ಕಳೆದ ಹಲವು ವರ್ಷಗಳಿಂದ ದಿನೇಶ್ ಅವರು ಸೀಯಾಳದ ವ್ಯಾಪಾರ ಮಾಡುತ್ತಾ ಬಂದಿದ್ದು ದಿನಕ್ಕೆ 150 ರೂ ಬಾಡಿಗೆಯನ್ನು ಸುಂಕವಸೂಲಿ ಗುತ್ತಿಗೆದಾರರಿಗೆ ನೀಡುತ್ತಿದ್ದರು.ಇತ್ತೀಚೆಗೆ ಮಾರ್ಕೆಟ್ ನ ಸುಂಕ ವಸೂಲಿ ಗುತ್ತಿಗೆ ಬೇರೊಬ್ಬರ ಪಾಲಾಗಿದ್ದು ಹೊಸ ಗುತ್ತಿಗೆದಾರರು ದಿನಕ್ಕೆ ರೂ 600 ಸುಂಕ […]