
ಮೂಡುಬಿದಿರೆ : ಇಲ್ಲಿನ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಜ. 10ರಂದು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಪುತ್ತಿಗೆ ದೇವಸ್ಥಾನದ ಮೊಕ್ತೇಸರ ಚೌಟರ ಅರಮನೆ ಕುಲದೀಪ್ ಎಂ. ಅವರಿಗೆ ದೇಣಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳಾದ ಶ್ರೀಪತಿ ಭಟ್, ವಾದಿರಾಜ ಮಡುಮಣ್ಣಯಾ, ಪ್ರಧಾನ ಅರ್ಚಕ ಅಡಿಗಲ್ಲು ಅನಂತಕೃಷ್ಣ ಭಟ್, ಶಿವಪ್ರಸಾದ್ ಆಚಾರ್, ವಿದ್ಯಾರಮೇಶ್ ಭಟ್, ನಿಲೇಶ್ ಶೆಟ್ಟಿ, ವೆಂಕಟ್ರಮಣ ಕಾರಂತ್ , ರವಿಶಂಕರ ಪಳಕಳ,ರಮೇಶ್ […]
ಮೂಡುಬಿದಿರೆ: ವಿದ್ಯಾರ್ಥಿಗಳು ಪಠ್ಯದಷ್ಟೇ ಆಸಕ್ತಿ ಪಠ್ಯೇತರ ಚಟುವಟಿಕೆಯಲ್ಲಿ ವಹಿಸಬೇಕು. ಅದರಲ್ಲೂ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಮಾತ್ರವಲ್ಲದೆ ಅವರ ಮಾನಸಿಕ ವಿಕಸನಕ್ಕೂ ಪೂರಕವಾಗಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಸ್ಕೌಟ್ಸ್ ಮತ್ತು ಗೈಡ್‌ನ ದ.ಕ.ಜಿಲ್ಲಾ ಮುಖ್ಯ ಆಯುಕ್ತ ಡಾ. ಎಂ. ಮೋಹನ್ ಆಳ್ವ ಹೇಳಿದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಸ್ಕೌಟ್ಸ್ ಮತ್ತು ಗೈಡ್ ವಿದ್ಯಾರ್ಥಿಗಳಿಗಾಗಿ ಸ್ವರಾಜ್ ಮೈದಾನದಲ್ಲಿ ಆಯೋಜಿಸಿದ್ದ […]
ಮೂಡುಬಿದಿರೆ: ತಾಲೂಕಿನ ಕೆಲ್ಲಪುತ್ತಿಗೆಯ ವೀರಮಾರುತಿ ಕ್ರೀಡಾಂಗಣದಲ್ಲಿ ಶ್ರೀಮತಿ ಮತ್ತು ಶ್ರೀ ಸುರೇಂದ್ರ ಕೋಟ್ಯಾನ್ ಮತ್ತು ಮಕ್ಕಳು ಸೊಸೆಯಂದಿರು , ಮೊಮ್ಮಕ್ಕಳು, ಹಾಗೂ ದುರ್ಗಾ ಪ್ರಸಾದ್ ಕುಟುಂಬಸ್ಥರ ಹರಕೆಯ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಬಯಲಾಟವು ನಾಳೆ ಶುಕ್ರವಾರ ಸಂಜೆ 6.00 ಗಂಟೆಗೆ ನಡೆಯಲಿದೆ
ಮೂಡುಬಿದಿರೆ: ಮಹಿಳೆಯರು ಟೈಲರಿಂಗ್ ತರಬೇತಿಯನ್ನು ಪಡೆದು, ಸ್ವಂತ ಉದ್ಯಮವನ್ನು ಆರಂಭಿಸಿ. ಇದೀಗ ಟೈಲರಿಂಗ್ ಉದ್ಯಮಕ್ಕೆ ಸಾಕಷ್ಟು ಬೇಡಿಕೆಯಿದ್ದು, ನಿಮಗೆ ನೀಡುವ ಹೊಲಿಗೆ ಯಂತ್ರದಿಂದ ನೀವುಗಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಒಳ್ಳೆಯ ಉದ್ಯಮ. ಹಾಗಾಗಿ ಟೈಲರಿಂಗ್‌ನಲ್ಲಿ ತರಬೇತಿಯನ್ನು ಪಡೆದು ಸ್ವ ಉದ್ಯಮ ಆರಂಭಿಸಿ ಎಂದು ಮೂಲ್ಕಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿದರುಅವರು ಮಂಗಳವಾರ ತಾಲೂಕು ಆಡಳಿತ ಸೌಧದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ನಡೆದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ […]
ಮೂಡುಬಿದಿರೆ: ಇಲ್ಲಿನ ಎ.ಫ್ರೆಂಡ್ಸ್ ಹಮ್ಮಿಕೊಂಡಿದ್ದ ‘ಶಿವದೂತೆ ಗುಳಿಗೆ’ ನಾಟಕದ ಸಂದರ್ಭದಲ್ಲಿ ಕಂಬಳ ಕ್ಷೇತ್ರದ ಸಾಧಕ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸತೀಶ್ಚಂದ್ರ ಸಾಲ್ಯಾನ್ ಪಾಣಿಲ, ಪೆರಾಡಿ ಸೊಸೈಟಿ ಬ್ಯಾಂಕ್ ಗೆ ಅವಿರೋಧವಾಗಿ ಆಯ್ಕೆಯಾದ ಜಯಶ್ರೀ ಹೊಟೇಲ್ ಮಾಲಕ ಸುರೇಶ್ ಅಂಚನ್ ಹಾಗೂ ಕಲಾಸಂಗಮ ತಂಡದ ಮುಖ್ಯಸ್ಥರಾದ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಕ್ಸಲೆಂಟ್ ಕಾಲೇಜಿನ ಮುಖ್ಯಸ್ಥರಾದ ಯುವರಾಜ ಜೈನ್,ಬಿಜೆಪಿ ಮುಖಂಡ ಸುದರ್ಶನ ಎಂ, ಕೆ.ಪಿ.ಜಗದೀಶ್ ಅಧಿಕಾರಿ, ಉದ್ಯಮಿಗಳಾದ ಕೆ.ಶ್ರೀಪತಿ ಭಟ್,ನಾರಾಯಣ ಪಿ.ಎಂ,ಅರುಣ್ ಪ್ರಕಾಶ್ ಶೆಟ್ಟಿ,ತೋಡಾರು ದಿವಾಕರ […]
ಮೂಡುಬಿದಿರೆ: ಕಳೆದ 6 ತಿಂಗಳ ಹಿಂದೆ ನಾಪತ್ತೆ 25 ಬ್ಯಾಟರಿಗಳಲ್ಲಿ ನಾಲ್ಕು ಬ್ಯಾಟರಿ ಸಹಿತ ಇಬ್ಬರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಕಳೆದ ವರ್ಷ ಏ.24ರಂದು ಮೂಡುಬಿದಿರೆಯ ಮಚ್ಚಿ ಹೊಟೇಲ್ ಬಳಿ ಕೆಲಸ ಮಾಡಲೆಂದು ತೋಡಾರು ಪಂಚಶಕ್ತಿ ರಂಜಿತ್ ಪೂಜಾರಿ ಅವರಿಗೆ ಸೇರಿದ ಹಿಟಾಚಿಯನ್ನು ಕೆಲಸ ಮುಗಿಸಿ ಸಂಜೆ ಸುಮಾರು 7 ಗಂಟೆ ಸಮಯದಲ್ಲಿ ನಿಲ್ಲಿಸಿದ್ದು ಮರುದಿನ ಬೆಳಿಗ್ಗೆ 7 ಗಂಟೆಗೆ ಹಿಟಾಚಿಯ ಬಳಿ ಬಂದು ನೋಡಿದಾಗ ಎರಡೂ ಹಿಟಾಚಿಗಳ 4 ಬ್ಯಾಟರಿಗಳನ್ನು ಯಾರೋ ಕಳ್ಳರು ಕಳವು […]
ಮೂಡುಬಿದಿರೆ: ಮಹಿಷಮರ್ಧಿನಿ ಕಂಬಳ ಸಮಿತಿಯ ವತಿಯಿಂದ ನಡೆಯುವ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ ಶನಿವಾರ ಬೆಳಿಗ್ಗೆ ಆರಂಭಗೊಂಡಿತು. ಶ್ರೀ ಕ್ಷೇತ್ರ ಪೂಂಜದ ಅಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯ ಅವರು ಪರಿಸರದ ವಿವಿಧ ದೈವಸ್ಥಾನ, ದೇವಸ್ಥಾನಗಳ ಪ್ರಸಾದವನ್ನು ಕಂಬಳದ ಕೆರೆಗೆ ಸಂಪ್ರೋಕ್ಷಣೆಗೈದು ನಂತರ ದೀಪ ಬೆಳಗಿಸಿ ಕಂಬಳಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ವೀರ ವಿಕ್ರಮ ಕಂಬಳಕ್ಕೆ ಅದರದ್ದೇ ಆದ ಇತಿಹಾಸವಿದೆ. ತುಳುನಾಡಿನ ಸಂಸ್ಕೃತಿ ಮತ್ತು ಶ್ರೀಮಂತಿಕೆಯನ್ನು ಜಗಜ್ಜಾಹೀರುಗೊಳಿಸಿ ವಿಸ್ತಾರ ಮಾಡುವ ಕ್ರೀಡೆ. […]
ಮೂಡುಬಿದಿರೆ: 25 ವರ್ಷಗಳ ಕಂಬಳ ಕ್ಷೇತ್ರದ ಸಾಧನೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಇರುವೈಲು ಪಾಣಿಲ ಸತೀಶ್ಚಂದ್ರ ಸಾಲ್ಯಾನ್ ಅವರಿಗೆ ಇರುವೈಲು ಪಾಣಿಲ ಅಭಿಮಾನಿ ಬಳಗದ ವತಿಯಿಂದ ನಾಳೆ ಸಂಜೆ 7 ಗಂಟೆಗೆ ಮೂಡುಬಿದಿರೆಯ ಕನ್ನಡ ಭವನದಲ್ಲಿ ಸನ್ಮಾನ ನಡೆಯಲಿದೆ. ಸನ್ಮಾನದ ಬಳಿಕ ‘ ಶಿವದೂತೆ ಗುಳಿಗೆ’ ನಾಟಕ ಪ್ರದರ್ಶನಗೊಳ್ಳಲಿದೆ.
ಮೂಡುಬಿದಿರೆ: ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆಯಡಿ ಲೋಕೋಪಯೋಗಿ ಇಲಾಖೆಯಿಂದ ಐಕಳ ಪಂಚಾಯತ್ ವ್ಯಾಪ್ತಿಯ ದಾಮಸ್ಕಟ್ಟೆಯಿಂದ ಪಟ್ಟೆಕ್ರಾಸ್ ವರೆಗೆ ರಸ್ತೆ ಅಗಲೀಕರಣಕ್ಕೆ ಕ್ಷೇತ್ರದ ಶಾಸಕ ಉಮಾನಾಥ ಎ.ಕೋಟ್ಯಾನ್ ಬುಧವಾರ ಶಿಲಾನ್ಯಾಸ ನೆರವೇರಿಸಿದರು .ನಂತರ ಮಾತನಾಡಿದ ಕೋಟ್ಯಾನ್ ಅವರು ಮೂರುಕಾವೇರಿಯಿಂದ ದಾಮಸ್ಕಟ್ಟೆವರೆಗೆ ರಸ್ತೆ ಅಗಲೀಕರಣಗೊಂಡಿದ್ದು, ದಾಮಸ್ಕಟ್ಟೆಯಿಂದ ಪಟ್ಟೆ ಕ್ರಾಸ್ ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿತ್ತು ಈ ಕಾರಣದಿಂದ ಈ ಹಿಂದಿನ ಸರಕಾರವಿದ್ದ ಸಂದರ್ಭ ಈ ರಸ್ತೆಗೆ 10 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.ಗ್ರಾಮೀಣ ಭಾಗವಾದ ಈ ಪ್ರದೇಶದಲ್ಲಿ ಕಳೆದ ಸರಕಾರವಿದ್ದ […]
ಮೂಡುಬಿದಿರೆ: ಗೋ ಸೇವಾ ಗತಿನಿಧಿ ಕರ್ನಾಟಕ ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಪ್ರತಿಷ್ಠಾನವು ರಾಜ್ಯಾದ್ಯಂತ ನಂದಿ ರಥಯಾತ್ರೆ ಆಯೋಜಿಸಿದ್ದು ಬುಧವಾರ ಸಂಜೆ ಮೂಡುಬಿದಿರೆಗೆ ಆಗಮಿಸಿತು. ಸ್ವರಾಜ್ಯ ಮೈದಾನ ಬಳಿ ಶಾಸಕ ಉಮಾನಾಥ ಕೋಟ್ಯಾನ ರಥಕ್ಕೆ ಆರತಿ ಬೆಳಗಿ ಸ್ವಾಗತಿಸಿದರು. ಬಳಿಕ ಚೆಂಡುವಾದನ ಕುಣಿತ ಭಜನೆಯೊಂದಿಗೆ ಕೋಟೆಬಾಗಿಲು ವೀರಮಾರುತಿ ದೇವಸ್ಥಾನದವರೆಗೆ ಶೋಭಾಯಾತ್ರೆ ನಡೆಯಿತು.ರಾತ್ರಿ ನಂದಿಪೂಜೆ ವಿಷ್ಣು ಸಹಸ್ರನಾಮ ಪಠಣ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮ ದಲ್ಲಿ ಆಶೀರ್ವಚನ ನೀಡಿದ ಜೈನಮಠದ ಸ್ಚಸ್ತಿಶ್ರೀ ಭಟ್ಟಾರಕ […]