
ಮೂಡುಬಿದಿರೆ : ಎರಡು ಪ್ರಕರಣಗಳಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರೀವ೯ರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕ ಮತ್ತು ಮಧ್ಯ ವಯಸ್ಸಿನ ವ್ಯಕ್ತಿ ಸಹಿತ ಇಬ್ಬರನ್ನು ಮೂಡುಬಿದಿರೆ ಪೊಲೀಸರು ಮಂಗಳವಾರ ಬಂಧಿಸಿ ಪೊಕ್ಸೋ ಪ್ರಕರಣ ದಾಖಲಿಸಿದ್ದಾರೆ. ಪ್ರಾಂತ್ಯ ಗ್ರಾಮದ ಅಜಂಕಲ್ಲುವಿನ ನಿವಾಸಿ ಪ್ರಕಾಶ್ (57) ಹಾಗೂ ಆಲಂಗಾರು ಉಮಿಯದ ಪವನ್ (19) ಎಂಬವರು ಬಂಧಿತ ಆರೋಪಿಗಳು. ಪ್ರಾಂತ್ಯ ಅಜಂಕಲ್ಲುವಿನ ಪ್ರಕಾಶ್ ಎಂಬಾತ ತನ್ನ ಮನೆಯ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಬಾಲಕಿಯ ಮನೆಗೆ ಯಾರೂ ಇಲ್ಲದಾಗ ಕಳೆದ ಒಂದು ವಷ೯ದಿಂದ […]
ಮೂಡುಬಿದಿರೆ : ಇಲ್ಲಿನ ಪುರಸಭೆಯ ಪೌರ ಕಾಮಿ೯ಕೆಯೋವ೯ರು ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುರಸಭಾ ವ್ಯಾಪ್ತಿಯ ಬಿರಾವಿನಲ್ಲಿ ಮಂಗಳವಾರ ನಡೆದಿದೆ. ಬಿರಾವು ಅರಂತ ಕಂಪೌಂಡ್ ನ ನಿವಾಸಿ ದಿ. ಚಂದ್ರಹಾಸ್ ಅವರ ಪತ್ನಿ ಯಶೋಧ (43ವ) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈಕೆ ಕಳೆದ ಕೆಲವು ವರುಷಗಳಿಂದ ಪೌರಕಾಮಿ೯ಕೆಯಾಗಿ ಪುರಸಭೆಯಲ್ಲಿ ದುಡಿಯುತ್ತಿದ್ದು ಎರಡು ವಷ೯ಗಳ ಹಿಂದೆ ಹುದ್ದೆ ಖಾಯಂ ಆಗಿತ್ತು.ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು ಓವ೯ ಕಾಲೇಜು ಶಿಕ್ಷಣ ಪಡೆಯುತ್ತಿದ್ದು ಮತ್ತೋವ೯ ಮಂಗಳೂರಿನಲ್ಲಿದ್ದಾನೆಂದು ತಿಳಿದು […]
ಮೂಡುಬಿದಿರೆ: ದನ ಸಾಕದೆ ಡೈರಿಗೆ ಹಾಲು ಹಾಕಿ ಕಳೆದ 30 ವಷ೯ಗಳಿಂದ ಅಧ್ಯಕ್ಷರಾಗುತ್ತಿರುವವರ ಖಂಡಿಸಿ ಮತ್ತು ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ನಿದೇ೯ಶಕರಿಗೆ ನೋಟೀಸ್ ನೀಡದಿರುವ ಸಿಬಂದಿ ವಿರುದ್ಧ ಧಿಕ್ಕಾರ ಹಾಕಿ ನಿದೇ೯ಶಕರೋವ೯ರು ಡೈರಿಯ ಮುಂಭಾಗ ಧರಣಿ ಕುಳಿತ ಪ್ರಸಂಗ ಸೋಮವಾರ ಬೆಳಗ್ಗೆ ಬನ್ನಡ್ಕದಲ್ಲಿ ನಡೆದಿದೆ.ಪಡುಮಾನಾ೯ಡು ಹಾಲು ಉತ್ಪಾದಕರ ಸಹಕಾರ ಸಂಘ ನಿ. ಇಲ್ಲಿಗೆ ಕಳೆದ 20 ವಷ೯ಗಳಿಂದ ಹಾಲು ಹಾಕುತ್ತಾ ಬರುತ್ತಿರುವ ನಮಿರಾಜ್ ಪಿ. ಬಲ್ಲಾಳ್ ಧರಣಿ ಕುಳಿತ ನಿದೇ೯ಶಕ. ಜನವರಿ 14ರಂದು ಪಡುಮಾನಾ೯ಡು ಹಾಲು ಉತ್ಪಾದಕರ […]
ಮೂಡುಬಿದಿರೆ : ಬಸ್ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮೂಡುಬಿದಿರೆ ಸಮೀಪದ ನೀರುಡೆಯಲ್ಲಿ ಮಹಿಳೆಯೊಬ್ಬರ ಕಪಾಳಕ್ಕೆ ಹೊಡೆದ ಆರೋಪದ ಮೇರೆಗೆ ಬಸ್ ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದಾರೆ.ಶಾಲೋಮ್ ಬಸ್ ನ ನಿರ್ವಾಹಕ ಪ್ರಶಾಂತ್ ಪೂಜಾರಿ ಬಂಧಿತ ಆರೋಪಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಮುಚೂರಿನಿಂದ ಸುಮಾರು 15 ಮಂದಿ ಮಹಿಳೆಯರು ಪುತ್ತಿಗೆಯಲ್ಲಿರುವ ಆಳ್ವಾಸ್ ಹಾಸ್ಟೆಲ್ ಗೆ ಶಾಲೊಮ್ ಬಸ್ ನಲ್ಲಿ ನಿತ್ಯ ಕೆಲಸಕ್ಕೆ ಬರುತ್ತಿದ್ದರು. ಕೆಲವೊಮ್ಮೆ ಕೆಲಸ ಬೇಗ ಮುಗಿದರೆ ಬೇರೆ ಬಸ್ಸಿನಲ್ಲಿ ಊರಿಗೆ ವಾಪಾಸಾಗುತ್ತಿದ್ದರು. ಪ್ರತಿ ದಿನ ಇದೇ ಬಸ್ಸಿನಲ್ಲಿ […]
ಮೂಡುಬಿದಿರೆ: ಕಳೆದ 6 ತಿಂಗಳ ಹಿಂದೆ ನಾಪತ್ತೆ 25 ಬ್ಯಾಟರಿಗಳಲ್ಲಿ ನಾಲ್ಕು ಬ್ಯಾಟರಿ ಸಹಿತ ಇಬ್ಬರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಕಳೆದ ವರ್ಷ ಏ.24ರಂದು ಮೂಡುಬಿದಿರೆಯ ಮಚ್ಚಿ ಹೊಟೇಲ್ ಬಳಿ ಕೆಲಸ ಮಾಡಲೆಂದು ತೋಡಾರು ಪಂಚಶಕ್ತಿ ರಂಜಿತ್ ಪೂಜಾರಿ ಅವರಿಗೆ ಸೇರಿದ ಹಿಟಾಚಿಯನ್ನು ಕೆಲಸ ಮುಗಿಸಿ ಸಂಜೆ ಸುಮಾರು 7 ಗಂಟೆ ಸಮಯದಲ್ಲಿ ನಿಲ್ಲಿಸಿದ್ದು ಮರುದಿನ ಬೆಳಿಗ್ಗೆ 7 ಗಂಟೆಗೆ ಹಿಟಾಚಿಯ ಬಳಿ ಬಂದು ನೋಡಿದಾಗ ಎರಡೂ ಹಿಟಾಚಿಗಳ 4 ಬ್ಯಾಟರಿಗಳನ್ನು ಯಾರೋ ಕಳ್ಳರು ಕಳವು […]
ಮೂಡುಬಿದಿರೆ : ಇಲ್ಲಿಗೆ ಸಮೀಪದ ಮೂಡುಕೊಣಾಜೆ ಗ್ರಾಮದ ಕೈಕಂಜಿಪಡ್ಪು ಸೇತುವೆ ಬಳಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲೆತ್ನಿಸುತ್ತಿದ್ದ ಆರೋಪಿಯನ್ನು ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಮುಹಮ್ಮದ್ ರಫೀಕ್ ಬಂಧಿತ ಆರೋಪಿ. ಈತ ಗಾಂಜಾ ವ್ಯಸನಿಗಳಿಗೆ ಮಾರಾಟ ಮಾಡುವ ಬಗ್ಗೆ ನಿಖರ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಆರೋಪಿಯಿಂದ ರೂ 22,000 ಮೌಲ್ಯದ 900 ಗ್ರಾಂ.ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ನೇತೃತ್ವದ ತಂಡದಲ್ಲಿ ಎಸ್.ಐ.ಸಿದ್ದಪ್ಪ, ಎ.ಎಸ್.ಐ […]
ಮೂಡುಬಿದಿರೆ: ಇಲ್ಲಿನ ಬೆಳುವಾಯಿ ಪೇಟೆ ಪಕ್ಕದಲ್ಲೇ ರಾತ್ರಿ ಹಗಲೆನ್ನದೆ ಹೈಟೆಕ್ ಇಸ್ಪೀಟು ದಂಧೆ ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕೆಲ ದಿನಗಳ ಹಿಂದೆ ಪೊಲೀಸರು ಇಲ್ಲಿನ ಇಸ್ಪೀಟು ಅಡ್ಡೆಗೆ ದಾಳಿ ನಡೆಸಿ ಕೆಲವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದೀಗ ಮತ್ತೆ ದೊಡ್ಡ ಮಟ್ಟಿನಲ್ಲಿ ಅದೂ ಕೂಡಾ ಪೇಟೆಯ ಪಕ್ಕದಲ್ಲೇ ನಡೆಯುತ್ತಿದೆ ಎಂಬ ಸಾರ್ವಜನಿಕರಿಂದ ದೂರು ಕೇಳಿಬರುತ್ತಿದೆ.
ಮೂಡುಬಿದಿರೆ: ಬೆಳುವಾಯಿ ಗ್ರಾ.ಪಂ.ವ್ಯಾಪ್ತಿಯ ಶಾಂತಿನಗರದ ಸರಕಾರಿ ಬಾವಿಯ ಹತ್ತಿರದ ಗುಡ್ಡೆಯಲ್ಲಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆಗೆ ಮೂಡುಬಿದಿರೆ ಪೊಲೀಸರು ದಾಳಿ ನಡೆಸಿದ್ದಾರೆ.ಜುಗಾರಿ ದೊರೆತ ಮಾಹಿತಿಯಂತೆ ಮೂಡುಬಿದಿರೆ ಪೊಲೀಸರು ದಾಳಿ ನಡೆಸಿದ್ದಾರೆ.ಜುಗಾರಿ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ.ಜಿ. ಯವರು ತನ್ನ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದ ಸದಾಶಿವ, ಸುದರ್ಶನ್, ಪ್ರಕಾಶ್, ಪ್ರಶಾಂತ್, ಶಿವಕುಮಾರ್, ರೋಹಿತ್ ಎಂಬುವರನ್ನು ದಸ್ತಗಿರಿ ನಡೆಸಿದ್ದಾರೆ. ವಶದಲ್ಲಿದ್ದ ಇಸ್ಪೀಟ್ ಆಟಕ್ಕೆ ಉಪಯೋಗಿಸಿದ ನಗದು ಹಣ 3,560/- ರೂ, […]
ಮೂಡುಬಿದಿರೆ : ಬಿಲ್ಲವ ಮಹಿಳೆಯರನ್ನು ಅವಮಾನಿಸಿ ಕುಣಿತ ಭಜನೆ ಮಾಡುವ ಹೆಣ್ಣು ಮಕ್ಕಳ ವಿರುದ್ಧ ಅವಾಚ್ಯ ಪದಗಳಿಂದ ನಿಂದಿಸಿದ್ದ ಪುತ್ತೂರು ವಲಯ ಕಾಣಿಯೂರು ಅರಣ್ಯಾಧಿಕಾರಿ ಸಂಜೀವ ಕಾಣಿಯೂರು ವಿರುದ್ಧ ಭಜಕರು ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಯನ್ನು ಉದ್ಯೋಗದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಸೋಮವಾರ ಮೂಡುಬಿದಿರೆ ಪೊಲೀಸ್ ಠಾಣೆಗೆ ಭಜನೆಯ ಕಾರ್ಯಕರ್ತರು ಪ್ರತಿಭಟನಾ ರೂಪವಾಗಿ ದೂರನ್ನು ನೀಡಿದರು. ಮಹಿಳೆಯರ ಬಗ್ಗೆ ಮತ್ತು ಕುಣಿತ ಭಜನೆ ಮಾಡುವ ಮಕ್ಕಳ ಬಗ್ಗೆ ನಿಂದನಾತ್ಮಕವಾಗಿ ಮಾತನಾಡಿದ ಅರಣ್ಯ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಆತನ […]
ಮೂಡುಬಿದಿರೆ: ಮಾರ್ಪಾಡಿ ಗ್ರಾಮದ ವಿವೇಕಾನಂದ ನಗರದ ಬಳಿಯ ನಿರ್ಮಲಾ ಪಂಡಿತ್ ಮತ್ತು ಮೂಡುಮಾರ್ನಾಡು ಗ್ರಾಮದ ಪ್ರೇಮಾ ಅವರ ಕುತ್ತಿಗೆಯಿಂದ ಚಿನ್ನದ ಸರಗಳನ್ನು ಎಗರಿಸಿ ಪರಾರಿಯಾಗಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ ಯಶಸ್ವಿಯಾಗಿದೆ. ಬಂಧಿತರನ್ನು ಮಂಗಳೂರು ಚೆಂಬುಗುಡ್ಡೆಯ ಹಬೀಬ್ ಹಸನ್ (ಹಬ್ಬಿ) ಮತ್ತು ಬಂಟ್ವಾಳ ತಾಲೂಕು ಪರ್ಲಿಯಾ ಕ್ರಾಸ್‌ರೋಡ್‌ನ ಉಮ್ಮರ್ ಸಿಯಾಫ್ (ಚಿಯಾ) ಎಂದು ಗುರುತಿಸಲಾಗಿದೆ. ಹಬ್ಬಿ ವಿರುದ್ಧ ಉಭಯ ಜಿಲ್ಲೆಗಳ ವಿವಿಧ […]