
ಮೂಡುಬಿದಿರೆ: ತಾಲೂಕಿನಾದ್ಯಾಂತ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಬಡಜನರಿಗೆ ಇನ್ಮುಂದೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟವುಳ್ಳ ಊಟ, ತಿಂಡಿ ದೊರೆಯಲಿದೆ. ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ದಿನಂಪ್ರತಿ ವಿವಿಧ ಬಗೆಯ ತಿಂಡಿಗಳಿಗೆ ಕೇವಲ ೫ ರೂ ಮೊತ್ತದಲ್ಲಿ ಹಾಗೂ ಊಟವೂ ೧೦ ರೂ ದರದಲ್ಲಿ ಸಿಗಲಿದೆ. ಯಾವ್ಯಾವ ದಿನ ಯಾವೆಲ್ಲಾ ಬಗೆಯ ಊಟ ತಿಂಡಿಗಳು ಸಿಗುತ್ತದೆಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ನಮ್ಮ ಮೂಡುಬಿದಿರೆಯ ಬನ್ನಡ್ಕದ ಪ್ರತಿಷ್ಠಿತ SKF Elixer ಸಂಸ್ಥೆಯಲ್ಲಿ ಸ್ಥಾಪಿಸಲಾಗಿರುವ 250 ಕಿಲೋವಾಟ್ ಸಾಮರ್ಥ್ಯದ ಸೋಲಾರ್ ತಂತ್ರಜ್ಞಾನದ ಉದ್ಘಾಟನೆಯನ್ನು ಮಾನ್ಯ ಶಾಸಕರಾದ ಶ್ರೀ ಉಮಾನಾಥ್ ಕೋಟ್ಯಾನ್ ಅವರು ನೆರವೇರಿಸಿ ಶುಭಹಾರೈಸಿದರು.